ತುಮಕೂರಿನಲ್ಲಿ ನಾಳೆ 71ನೇ ಕನ್ನಡ ರಾಜ್ಯೋತ್ಸವ: 71 ಸಾಧಕರಿಗೆ ಸನ್ಮಾನ

Date:

ತುಮಕೂರು ಜಿಲ್ಲಾಡಳಿತದ ವತಿಯಿಂದ ನವೆಂಬರ್ 1ರಂದು ಬೆಳಗ್ಗೆ 9 ಗಂಟೆಗೆ ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ‘71ನೇ ಕನ್ನಡ ರಾಜ್ಯೋತ್ಸವ-2026’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

- Advertisement -

ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಅವರ ಘನ ಉಪಸ್ಥಿತಿಯಲ್ಲಿ, ಗ್ರೇಟರ್ ಬೆಂಗಳೂರು ಅಭಿವೃದ್ಧಿ (ಬಿಡಬ್ಲ್ಯೂಎಸ್‌ಎಸ್‌ಬಿ, ಬಿಎಂಆರ್‌ಸಿಎಲ್ ಸೇರಿದಂತೆ) ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಭೈರೇಗೌಡ ಅವರು ಬೆಳಗ್ಗೆ 9 ಗಂಟೆಗೆ ಧ್ವಜಾರೋಹಣ ನೆರವೇರಿಸಿ, ಗೌರವರಕ್ಷೆ ಸ್ವೀಕರಿಸಿ ಸಂದೇಶ ನೀಡಲಿದ್ದಾರೆ. ತುಮಕೂರು ನಗರ ವಿಧಾನಸಭಾ ಶಾಸಕ ಜಿ.ಬಿ. ಜ್ಯೋತಿಗಣೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕರಸ್ಥಲದ ಲಿಂಗ ಮತ್ತು ಬೆರಳಿನ ಮಸಿ: ಸ್ಥಾವರ ಪ್ರಭುತ್ವದ...

ಭಾರತೀಯ ಸಮಾಜದ ಹಳ್ಳಿಯ ಭೌತಿಕ ವಿನ್ಯಾಸವನ್ನು ಗಮನಿಸಿದರೆ ಅದೊಂದು ಅಪ್ಪಟ ಘನೀಕೃತ ‘ಸ್ಥಾವರ’ ಮಾದರಿ. ಹಳ್ಳಿಯ ಹೃದಯಭಾಗದಲ್ಲಿ ಕೇವಲ ಪೂಜೆಯ ತಾಣವಲ್ಲ, ಇಡೀ ನೆಲದ ಮೇಲೆ ಅಧಿಪತ್ಯ ಸಾಧಿಸುವ ಕ್ಷೇತ್ರಾಧಿಪತಿಯ ‘ದೇವಸ್ಥಾನ’ ವಿರಾಜಮಾನವಾಗಿರುತ್ತದೆ....

ಅತಿದೊಡ್ಡ ಕ್ರಿಪ್ಟೋ ದರೋಡೆ; ₹60 ಸಾವಿರ ಕೋಟಿ ಏನಿದು,...

ದೋಚಿದ ಇಷ್ಟೊಂದು ಅಗಾಧ ಪ್ರಮಾಣದ ಹಣವನ್ನು ಮರೆಮಾಚಲು ಹ್ಯಾಕರ್‌ಗಳು ಅತ್ಯಂತ ಸಂಕೀರ್ಣವಾದ ಜಾಲವನ್ನು ಹಾಗೂ ತಂತ್ರಗಾರಿಕೆಯನ್ನು ಬಳಸಿದ್ದಾರೆ. ಬಿಡುಗಡೆಯಾಗಿರುವ ತಾಂತ್ರಿಕ ವಿಶ್ಲೇಷಣೆಯ ಪ್ರಕಾರ, ಬೈನಾನ್ಸ್‌ನಿಂದ ಕದ್ದ ಈ ಹಣವನ್ನು ಹ್ಯಾಕರ್‌ಗಳು ಈ ಹಿಂದೆ...

ಚೀನಾದ ಅತಿಕ್ರಮಣಕ್ಕೆ ಅಡ್ಡ ಬಿದ್ದು, ಸಿಟ್ಟಿಗೆ ಅಣೆಕಟ್ಟು ಕಟ್ಟಲು...

ಕೇಂದ್ರದಲ್ಲಿ ಹಾಗೂ ಅರುಣಾಚಲ ಪ್ರದೇಶದಲ್ಲಿ- ಎರಡೂ ಕಡೆ ಬಿಜೆಪಿ ಸರ್ಕಾರವಿದೆ. ಡಬಲ್ ಎಂಜಿನ್ ಸರ್ಕಾರವಿದ್ದರೂ, ಅತ್ತ ಚೀನಾದ ಅತಿಕ್ರಮಣಕ್ಕೆ ಖಡಕ್ ಉತ್ತರವನ್ನೂ ನೀಡುತ್ತಿಲ್ಲ, ಇತ್ತ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿ ಸ್ಥಳೀಯ ಅಸ್ಮಿತೆಯನ್ನು ಗೌರವಿಸುತ್ತಲೂ...

ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣಕ್ಕೂ ಮುನ್ನ ಅಂದು ಬೆಳಿಗ್ಗೆ 7.45ಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಿಂದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದವರೆಗೆ ವಿವಿಧ ಸ್ತಬ್ದಚಿತ್ರ ಹಾಗೂ ಜನಪದ ಕಲಾತಂಡಗಳೊಂದಿಗೆ ತಾಯಿ ಭುವನೇಶ್ವರಿ ಭಾವಚಿತ್ರವನ್ನು ಅಲಂಕೃತ ಬೆಳ್ಳಿ ರಥದಲ್ಲಿ ಮೆರವಣಿಗೆ ಏರ್ಪಡಿಸಲಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ ಅಧಿಕಾರಿಗಳು, ನೌಕರರು, ಆಹ್ವಾನಿತರು ಮತ್ತು ಸಾರ್ವಜನಿಕರು ಬೆಳಗ್ಗೆ 8.30ಕ್ಕೆ ಸಮಾರಂಭದ ಸ್ಥಳದಲ್ಲಿ ಸೇರಲಿದ್ದಾರೆ.

ಬೆಳಗ್ಗೆ 9 ಗಂಟೆಗೆ ಧ್ವಜಾರೋಹಣದ ನಂತರ, 10.05ಕ್ಕೆ ಸಾಧಕರಿಗೆ ಸನ್ಮಾನ ಹಾಗೂ ಬಹುಮಾನ ವಿತರಣೆ ನಡೆಯಲಿದೆ. 10.15ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಸಂಜೆ 4.30ರಿಂದ 7.30ರವರೆಗೆ ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿ/ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

71 ಸಾಧಕರಿಗೆ ಸನ್ಮಾನ

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ 71 ಸಾಧಕರನ್ನು ಗೌರವಿಸಿ ಸನ್ಮಾನಿಸಲಾಗುವುದು. ಆಯ್ಕೆಯಾದವರ ಕ್ಷೇತ್ರವಾರು ವಿವರ ಇಂತಿದೆ:

1004305307 1

ರಂಗಭೂಮಿ: ತುಮಕೂರು ತಾಲ್ಲೂಕಿನ ಕೆ. ರಂಗರಾಜು, ಹ್ಯಾರಿಡೇವಿಡ್, ಹೆತ್ತೇನಹಳ್ಳಿಯ ರಂಗಸ್ವಾಮಿ ಹೆಚ್.ಟಿ., ಬಿ.ಎ. ಗುಡಿಪಾಳ್ಯದ ಭೀಮಯ್ಯ (ಭೀಮರಾಜು), ಗೂಳಹರಿವೆಯ ಜಿ.ಟಿ. ಪೆರಮಯ್ಯ; ಚಿಕ್ಕನಾಯಕನಹಳ್ಳಿ ತಾಲ್ಲೂಕು ಯಳ್ಳೇನಹಳ್ಳಿಯ ಆರ್. ಮೂರ್ತಿ, ಹುಳಿಯಾರಿನ ಗೌರಮ್ಮ; ಕೊರಟಗೆರೆ ತಾಲ್ಲೂಕು ಹುಲಿಕುಂಟೆಯ ಸಿ. ರಂಗಶಾಮಯ್ಯ, ಮಣುವಿನಕುರಿಕೆ ಎಂ.ಪಿ. ಪುಟ್ಟಶಾಮಯ್ಯ, ಇರಕಸಂದ್ರ ಕಾಲೋನಿಯ ಬಿ. ರುದ್ರೇಶ್, ಹಂಚಿಹಳ್ಳಿಯ ಹೆಚ್.ಎಸ್. ಮಾರುತಿ; ಮಧುಗಿರಿ ತಾಲ್ಲೂಕು ಕೊಡಿಗೇನಹಳ್ಳಿ ಡಾ. ಅಶ್ವತ್ಥನಾರಾಯಣ ಕೆ.ಪಿ.; ಗುಬ್ಬಿ ತಾಲ್ಲೂಕು ಕೊಡಿಯಾಲದ ಎನ್. ದಲಿತ ರವಿಕುಮಾರ್.

ಜಾನಪದ/ಯಕ್ಷಗಾನ:  ಕೊರಟಗೆರೆ ತಾಲ್ಲೂಕು ಬಿದಲೋಟಿಯ ಮರಿರಂಗಯ್ಯ; ಮಧುಗಿರಿ ತಾಲ್ಲೂಕು ಹನುಮಂತಪುರದ ಡಾ. ಹೆಚ್.ಡಿ. ನರಸೇಗೌಡ, ಅರಳಾಪುರದ ಎಸ್. ಶಿವಣ್ಣ; ಚಿಕ್ಕನಾಯಕನಹಳ್ಳಿ ತಾಲ್ಲೂಕು ಕೆ.ಜಿ. ಹಟ್ಟಿಯ ಎನ್. ಜಯಣ್ಣ (ಕೋಲಾಟ ಜಯಣ್ಣ), ಹೊಸಪಾಳ್ಯದ ಭಾಗವತ್ ಈ. ಶಿವಣ್ಣ; ತುಮಕೂರಿನ ಸಿ.ಬಿ. ವಿಶ್ವನಾಥ ಚಿಕ್ಕಹಳ್ಳಿ; ಪಾವಗಡ ತಾಲ್ಲೂಕು ಸಿದ್ದಾಪುರದ ಎನ್. ಮರಿಸ್ವಾಮಿ; ಶಿರಾ ತಾಲ್ಲೂಕು ಚಿಕ್ಕನಹಳ್ಳಿಯ ಸಿ.ವಿ. ವಿನಯ್ ಕುಮಾರ್.

ಸಾಹಿತ್ಯ: ತುಮಕೂರಿನ ಕುವೆಂಪು ನಗರದ ಕೆ.ಹೆಚ್. ವೆಂಕಟೇಶ, ಹೊದೇಕಲ್‌ನ ರಂಗಮ್ಮ ಹೊದೇಕಲ್; ಮಧುಗಿರಿ ತಿಮ್ಲಾಪುರದ ಡಾ. ಶಿವಣ್ಣ ಟಿ.ಎಸ್.; ಕೊರಟಗೆರೆ ತಾಲ್ಲೂಕು ಎಲೆರಾಂಪುರದ ರುದ್ರಮೂರ್ತಿ ಎಲೆರಾಂಪುರ; ತಿಪಟೂರು ತಾಲ್ಲೂಕು ಬಳ್ಳೇಕಟ್ಟೆಯ ಡಾ. ಪಿ. ಶಂಕರಪ್ಪ ಬಳ್ಳೇಕಟ್ಟೆ; ಪಾವಗಡ ತಾಲ್ಲೂಕು ವೈ.ಎನ್. ಹೊಸಕೋಟೆಯ ಹೊ.ಮ. ನಾಗರಾಜು.

ಸಮಾಜಸೇವೆ:  ಕುಣಿಗಲ್ ತಾಲ್ಲೂಕಿನ ನಾರಾಯಣ ಕೆ.ವಿ.; ಗುಬ್ಬಿ ತಾಲ್ಲೂಕು ಬೆಣಚಿಗೆರೆಯ ಸುಬೇದಾರ್ ರಾಜಶೇಖರಯ್ಯ; ತುಮಕೂರು ತಾಲ್ಲೂಕು ದೇವರಾಯಪಟ್ಟಣದ ಯಶೋಧ ಆರ್.ಪಿ. (ದೇವಯಾನಿ), ಕುಪ್ಪೂರಿನ ಶ್ರೀಧರ್ ಕುಪ್ಪೂರು, ಬಂಡೇಪಾಳ್ಯದ ಶಿವಕುಮಾರ್ ಕೆ.ಎಂ., ನಾಗವೇಣಿ ಜಿ., ಪಿ. ಗೊಲ್ಲಹಳ್ಳಿಯ ರಾಮತೀರ್ಥನ್ ವಿ.; ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸಿ.ಎಸ್. ಲಿಂಗದೇವರು; ಮಧುಗಿರಿ ತಾಲ್ಲೂಕಿನ ವೆಂಕಟರಮಣಪ್ಪ.

ಸಂಗೀತ/ನೃತ್ಯ:  ತುಮಕೂರು ತಾಲ್ಲೂಕಿನ ಲಕ್ಷ್ಮೀ ಜೈಪ್ರಕಾಶ್, ಬತ್ಸಂದ್ರದ ಬಿ.ವಿ. ನಾಗಭೂಷಣ, ದೊಡ್ಡೇಗೌಡನಪಾಳ್ಯದ ಟಿ. ನಿರಂಜನ್ ಮೂರ್ತಿ, ಬನಶಂಕರಿ ನಗರದ ಜಯರಾಮಯ್ಯ; ಚಿಕ್ಕನಾಯಕನಹಳ್ಳಿ ತಾಲ್ಲೂಕು ತೀರ್ಥಪುರದ ಟಿ.ಎನ್. ರೇಣುಕಯ್ಯ.

ಶಿಕ್ಷಣ: ತುಮಕೂರು ತಾಲ್ಲೂಕು ಗೋಕುಲ ಬಡಾವಣೆಯ ಡಾ. ಹಾಲನೂರು ಲೇಪಾಕ್ಷ, ಶಿರಾಗೇಟ್‌ನ ರಮೇಶ್ ಎಸ್.ವಿ.; ಗುಬ್ಬಿ ತಾಲ್ಲೂಕು ಬಾಗೂರಿನ ಜೀವಂಧರ ಕುಮಾರ್ ಬಿ.

ಚಿತ್ರಕಲೆ/ಶಿಲ್ಪಕಲೆ/ಕರಕುಶಲ: ಕುಣಿಗಲ್ ತಾಲ್ಲೂಕು ಹುಲಿಯೂರು ದುರ್ಗದ ಆನಂದ ಎಸ್.ವಿ.; ತುಮಕೂರು ತಾಲ್ಲೂಕು ಬೊಮ್ಮನಹಳ್ಳಿಯ ದೇವರಾಜು ಸಿ.ಎಸ್.; ಮಧುಗಿರಿ ತಾಲ್ಲೂಕಿನ ಎಂ.ಎನ್. ಅರುಣ್ ಕುಮಾರ್.

ಪತ್ರಿಕೋದ್ಯಮ: ಮಧುಗಿರಿ ತಾಲ್ಲೂಕಿನ ಜಿ. ನಾರಾಯಣರಾಜು; ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸಿ.ಬಿ. ಲೋಕೇಶ್; ತುಮಕೂರು ತಾಲ್ಲೂಕು ಹನುಮಂತಪುರದ ಯೋಗೀಶ್ ಟಿ., ದಾದಾಪೀರ್ ಎನ್., ದೇವರಾಯಪಟ್ಟಣದ ಕುಮಾರಸ್ವಾಮಿ ಹೆಚ್.ಬಿ., ಎಸ್.ಎಸ್. ಪುರಂನ ಟಿ.ಎಲ್. ನರಸಿಂಹಯ್ಯ; ಕುಣಿಗಲ್ ತಾಲ್ಲೂಕಿನ ಸಿದ್ದಲಿಂಗಸ್ವಾಮಿ.

1004305332

ಕ್ರೀಡೆ: ತುಮಕೂರಿನ ವೀರಸಾಗರದ ಶಶಿಕುಮಾರ ಕೆ. ಹಾಗೂ ಶ್ರೀನಿವಾಸ ಬಿ.

ವೈದ್ಯಕೀಯ/ಪಾರಂಪರಿಕ ವೈದ್ಯ: ಶಿರಾ ತಾಲ್ಲೂಕು ಮಾದೇನಹಳ್ಳಿ ಚರಕ ಆಸ್ಪತ್ರೆಯ ಡಾ. ಬಸವರಾಜು.

ಕನ್ನಡಪರ ಸಂಘಟನೆ: ಕೊರಟಗೆರೆಯ ನಟರಾಜ್ ಕೆ.ಎನ್.; ಶಿರಾದ ಕೊಟ್ಟರಂಗಯ್ಯ; ತುಮಕೂರು ಕುವೆಂಪು ನಗರದ ಡಾ. ಎಂ. ಸುದೀಪ್ ಕುಮಾರ್, ದೇವರಾಯಪಟ್ಟಣದ ಚಂದನ್ ಪಟೇಲ್ ಡಿ.ಎಸ್., ಶಾಂತಿನಗರದ ಸತೀಶ್ ಜಿ.ಡಿ., ಉಪ್ಪಾರಹಳ್ಳಿಯ ಆಯಿಷಾ ಹಾಗೂ ಬಿ.ಎಂ. ಪ್ರವೀಣ್.

ಗಡಿನಾಡು ಸೇವೆ: ಮಧುಗಿರಿ ತಾಲ್ಲೂಕು ಸಿಡದರಗಲ್ಲಿನ ಶ್ರೀನಿವಾಸ್; ಪಾವಗಡ ತಾಲ್ಲೂಕು ಪಿ. ರೊಪ್ಪದ ನಾಗೇಂದ್ರಪ್ಪ ರೊಪ್ಪ; ಶಿರಾ ತಾಲ್ಲೂಕು ದೇವರಹಳ್ಳಿಯ ನಾಗರಾಜು ಎಸ್.ಕೆ. (ಸಕ್ಕರ ನಾಗರಾಜು).

ಯೋಗ: ಮಧುಗಿರಿ ಬಿದರಕೆರೆಯ ಕೃಷ್ಣಮೂರ್ತಿ ಬಿ.ಎಲ್.

ಸಂಕೀರ್ಣ: ತುಮಕೂರು ಎಂ.ಜಿ. ರಸ್ತೆಯ ಜೆ. ಮಹೇಂದ್ರ ಕುಮಾರ್.

ಸಂಶೋಧನೆ: ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಹೆಚ್. ನಾಗಭೂಷಣ್.

ಪರಿಸರ/ಸಾಮಾಜಿಕ ಸೇವೆ: ತಿಪಟೂರು ತಾಲ್ಲೂಕು ಮಡೆನೂರಿನ ಸಂತೋಷ್ ಕುಮಾರ್ ಎಂ. (ಸಂತೋಷ್ ಮಡೆನೂರು).

ಆಯ್ಕೆಯಾಗಿರುವ ಸಾಧಕರಿಗೆ ನವೆಂಬರ್ 1ರಂದು ಬೆಳಗ್ಗೆ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ ಕು. ಮಿರ್ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಧುಗಿರಿ | ಪತ್ನಿಯನ್ನು ರಕ್ಷಿಸಲು ಹೋದ ಪತಿಯೂ ಸಾವು; ಕೃಷಿ ಹೊಂಡದಲ್ಲಿ ದುರಂತ

ಜಮೀನಿನ ಕೃಷಿ ಹೊಂಡದಲ್ಲಿ ಕಾಲು ಜಾರಿ ಬಿದ್ದ ಪತ್ನಿಯನ್ನು ರಕ್ಷಿಸಲು ಹೋದ...

ತುಮಕೂರು ಜಿಲ್ಲೆಯಲ್ಲಿ ಅಂತಿಮ ಮತದಾರರ ಪಟ್ಟಿ ಪ್ರಕಟ : 20.94 ಲಕ್ಷ ಮತದಾರರು

 ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ–2026ರ...

ಬೆಂಗಳೂರು | ಡಿಸಿಎಂ ಡಾ. ಜಿ.ಪರಮೇಶ್ವರ ಆರೋಗ್ಯ ಸ್ಥಿರ; ನಾಯಕರ ಭೇಟಿ

ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್‌ನಲ್ಲಿ ನಡೆದ ಕಾರ್ಯಕ್ರಮದ ವೇಳೆ ಉಸಿರಾಟದ ತೊಂದರೆ ಕಾಣಿಸಿಕೊಂಡ...

ಗುಬ್ಬಿ | ರೈತನ ಜಮೀನು ಹರಾಜಿಗೆ ವಿರೋಧ: ನ. 2ರಂದು ರೈತಸಂಘದ ಪ್ರತಿಭಟನೆ

 ಬರಗಾಲದಿಂದ ಬೆಳೆ ನಷ್ಟ ಹಾಗೂ ಕೊಳವೆಬಾವಿಗಳು ಬತ್ತಿರುವ ಸಂಕಷ್ಟದ ನಡುವೆಯೇ ಸಾಲ...