ತುಮಕೂರು | ನಕಲಿ ಔಷಧ, ಕಲಬೆರಕೆ ಆಹಾರದ ಜಾಲದ ಬಗ್ಗೆ ಎಚ್ಚರಿಕೆ ಇರಲಿ : ಮುರುಳೀಧರ ಹಾಲಪ್ಪ

Date:

ಆಹಾರ ಮತ್ತು ಔಷಧ ಎರಡಕ್ಕೂ ನೇರ ಸಂಬಂಧವಿದೆ. ಕಲಬೆರಕೆ ಆಹಾರ ಸೇವಿಸಿ ಆಸ್ಪತ್ರೆ ಸೇರಿದರೆ, ಅಲ್ಲಿ ನಕಲಿ ಔಷಧ ಸಿಕ್ಕು ಮತ್ತಷ್ಟು ಹಾನಿಯಾಗುವ ಸಾಧ್ಯತೆ ಹೆಚ್ಚು ಎಂದು ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರುಳೀಧರ ಹಾಲಪ್ಪ ಎಚ್ಚರಿಸಿದರು.

- Advertisement -

ಹಾಲಪ್ಪ ಪ್ರತಿಷ್ಠಾನವು ಐಎಂಎ, ಬೀದಿ ಬದಿ ವ್ಯಾಪಾರಿಗಳ ಸಂಘ, ಔಷಧ ವ್ಯಾಪಾರಿಗಳ ಸಂಘ ಸೇರಿದಂತೆ ಇತರ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಐಎಂಎ ಸಭಾಂಗಣದಲ್ಲಿ ಆಯೋಜಿಸಿದ್ದ ನಕಲಿ, ಕಲಬೆರಕೆ ಆಹಾರ ಮತ್ತು ಔಷಧಗಳ ಕುರಿತ ಜನಜಾಗೃತಿ ಅಭಿಯಾನದಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಂಬಾರಿಯ ಮುಂದೆ ಪೊಲೀಸರು ಸೆಲ್ಫಿ ತೆಗೆದುಕೊಂಡರೆ ಭದ್ರತೆಗೆ ಹೇಗೆ...

ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಬಳಸಿಕೊಳ್ಳಲು ಸರ್ಕಾರ ಅರಸು ಮನೆತನದವರಿಂದ ಪಡೆಯುತ್ತದೆ. ಉಚಿತವಾಗಿ ಅಲ್ಲ; ನಿಗದಿಪಡಿಸಿರುವ ಹಣವನ್ನು ಸಂದಾಯ ಮಾಡಿ. ಅಂಬಾರಿಯ ಭದ್ರತೆಯ ಹೊಣೆ ಸರ್ಕಾರದ ಮೇಲೂ ಇರುತ್ತದೆ. ಪೊಲೀಸರು ಸೆಲ್ಫಿ ತೆಗೆದುಕೊಂಡರೆ...

ಜನತಂತ್ರಕ್ಕೆ ಕುತ್ತು: ‘ಖಾಸಗಿತನ’ದ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕಲು...

ಮೋದಿ ಸರ್ಕಾರವು ಈ ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸದೆ, ಹಂತ ಹಂತವಾಗಿ ಜಾರಿಗೊಳಿಸುತ್ತಾ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸುವ ತಿದ್ದುಪಡಿಯು ಈಗಾಗಲೇ ನವೆಂಬರ್ 2025ರಿಂದಲೇ ಜಾರಿಯಲ್ಲಿದ್ದರೆ, ಡೇಟಾ ಬಳಕೆಯ ಕಠಿಣ ನಿಯಮಗಳು...

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ...

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ರಾಜಕೀಯವಾಗಿ ಪರಿಣಾಮ ಬೀರಬಲ್ಲದು. ಡಿ.ಕೆ. ಶಿವಕುಮಾರ್‌ ಅವರ ನಾಯಕತ್ವವನ್ನು ಓರೆಗೆ ಹಚ್ಚಬಲ್ಲದು. ಒಕ್ಕಲಿಗ ಪ್ರಾಬಲ್ಯದ ಪ್ರದೇಶಗಳ ಒಲವು-ನಿಲುವುಗಳನ್ನು ತಿಳಿಸಬಲ್ಲದು. ಆದರೆ,...

“ಕಲಬೆರಕೆ ರಹಿತ, ರುಚಿಯ ಜೊತೆಗೆ ಶುಚಿಯಿಂದ ಕೂಡಿದ ಆಹಾರ ಸೇವಿಸಿದರೆ ಮನುಷ್ಯ ಔಷಧಗಳಿಂದ ದೂರವಿರಲು ಸಾಧ್ಯ. ಇದು ಯಾರ ವಿರುದ್ಧವೂ ನಡೆಸುತ್ತಿರುವ ಹೋರಾಟವಲ್ಲ, ಜನರಲ್ಲಿ ಜಾಗೃತಿ ಮೂಡಿಸುವ ಅಭಿಯಾನ” ಎಂದ ಅವರು, ಈ ಅಭಿಯಾನವನ್ನು ತಾಲ್ಲೂಕು ಮತ್ತು ಹೋಬಳಿ ಮಟ್ಟಕ್ಕೆ ಕೊಂಡೊಯ್ಯುವ ಗುರಿಯಿದೆ ಎಂದು ತಿಳಿಸಿದರು. ಔಷಧ ನಿಯಂತ್ರಣ, ಆಹಾರ ಸುರಕ್ಷತೆ ಮತ್ತು ಅಕ್ಷರದಾಸೋಹ ಅಧಿಕಾರಿಗಳೂ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ ಎಂದರು.

ಆಹಾರ ಸುರಕ್ಷತಾ ಅಧಿಕಾರಿ ಹರೀಶ್ ಮಾತನಾಡಿ, ಜಿಲ್ಲೆಯಲ್ಲಿ 8,000ಕ್ಕೂ ಅಧಿಕ ಹೋಟೆಲ್ ಮತ್ತು ಉಪಾಹಾರ ಮಂದಿರಗಳಿದ್ದು, ಇಲಾಖೆಯಲ್ಲಿ ನೋಂದಣಿಯಾಗಿರುವುದು ಕೇವಲ 1,700 ಮಾತ್ರ. ನೋಂದಣಿಯಾದರೆ ಮಾತ್ರ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದರು.

ಕೃತಕ ಬಣ್ಣ ಮತ್ತು ಕಚ್ಚಾವಸ್ತುಗಳ ಬಳಕೆಯಿಂದ ಕ್ಯಾನ್ಸರ್‌ನಂತಹ ರೋಗಗಳು ಬರುತ್ತವೆ. ಒಂದು ಸಮೀಕ್ಷೆಯ ಪ್ರಕಾರ 2067ರ ವೇಳೆಗೆ ಭಾರತದ ಪ್ರತಿ ಮನೆಯಲ್ಲೂ ಒಬ್ಬ ಕ್ಯಾನ್ಸರ್ ರೋಗಿ ಇರುತ್ತಾರೆ ಎನ್ನಲಾಗುತ್ತಿದೆ ಎಂದು ಹೇಳಿದರು. ಕಡಿಮೆ ಹಣಕ್ಕೆ ಸಿಗುತ್ತದೆಂದು ರಸ್ತೆ ಬದಿಯ ಸುರಕ್ಷತೆಯಿಲ್ಲದ ಆಹಾರ ಸೇವಿಸಬೇಡಿ, ಬೇಳೆ, ಬೆಲ್ಲದಂತಹ ಪದಾರ್ಥಗಳನ್ನು ಅಧಿಕೃತ ದಿನಸಿ ಅಂಗಡಿಗಳಲ್ಲೇ ಖರೀದಿಸಿ, ಜಂಕ್ ಫುಡ್‌ನಿಂದ ದೂರವಿರಿ ಎಂದು ಸಲಹೆ ನೀಡಿದರು. ಕಲಬೆರಕೆ, ಕಳಪೆ ಆಹಾರ ಮಾರಾಟ ಕಂಡುಬಂದರೆ ಇಲಾಖೆಯ ಕ್ಯೂಆರ್ ಕೋಡ್ ಬಳಸಿ ದೂರು ನೀಡಬಹುದು ಎಂದರು.

ಜಿಲ್ಲಾ ಔಷಧ ನಿಯಂತ್ರಣಾಧಿಕಾರಿ ಚಂದ್ರಕಲಾ ಶಿಲ್ಪ ಮಾತನಾಡಿ, ಕಳಪೆ ಗುಣಮಟ್ಟದ ಔಷಧದಿಂದ ಕಾಯಿಲೆ ಗುಣವಾಗುವುದು ತಡವಾದರೆ, ಕಲಬೆರಕೆ ಔಷಧದಿಂದ ಅಡ್ಡಪರಿಣಾಮ ಉಂಟಾಗುತ್ತದೆ ಎಂದರು. ಅಧಿಕೃತ ಏಜೆನ್ಸಿಗಳಿಂದ ಸರಬರಾಜಾದ ಔಷಧಗಳನ್ನು ವೈದ್ಯರ ಸಲಹೆಯಂತೆ ಖರೀದಿಸಬೇಕು. ರಿಯಾಯಿತಿಗೆ ಮರುಳಾಗಬಾರದು, ಸಾಧ್ಯವಾದಷ್ಟು ಆನ್‌ಲೈನ್‌ನಲ್ಲಿ ಔಷಧ ಖರೀದಿ ನಿಲ್ಲಿಸಬೇಕು ಎಂದು ಸಲಹೆ ನೀಡಿದರು.

ಔಷಧ ವ್ಯಾಪಾರಿಗಳ ಪರವಾಗಿ ಮಾತನಾಡಿದ ಪಂಡಿತ ಜವಹರ್, ನೀರು, ಆಹಾರ, ಔಷಧ ಎಲ್ಲವೂ ಕಲಬೆರಕೆಯಾಗಿ ಮನುಷ್ಯ ತೊಂದರೆಗೆ ಸಿಲುಕುತ್ತಿದ್ದಾನೆ. ಔಷಧದ ಉತ್ಪಾದನೆ ಮತ್ತು ಅವಧಿ ಮುಗಿಯುವ ದಿನಾಂಕವನ್ನು ಖಚಿತಪಡಿಸಿಕೊಳ್ಳಬೇಕು ಎಂದರು

ಐಎಂಎ ಅಧ್ಯಕ್ಷ ಡಾ. ಲೋಕೇಶ್ ಬಾಬು ಮಾತನಾಡಿ, ನಕಲಿ ವೈದ್ಯ ಮತ್ತು ನಕಲಿ ಔಷಧದ ನಡುವೆ ಸಂಬಂಧವಿದ್ದು, ಇದೊಂದು ದೊಡ್ಡ ಜಾಲ ಎಂದರು.

 ಸರ್ಕಾರದ ನಿಯಮದಂತೆ ಪ್ರತಿ ಆಸ್ಪತ್ರೆಯಲ್ಲಿ ವೈದ್ಯರ ಪ್ರಮಾಣಪತ್ರಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಬೇಕು. ನಂಬಿಕೆ, ಕೈಗುಣಕ್ಕಿಂತ ಪ್ರಮಾಣಪತ್ರಗಳು ಮುಖ್ಯ ಎಂದು ಹೇಳಿದರು.

ಅಕ್ಷರದಾಸೋಹ ಸಹಾಯಕ ನಿರ್ದೇಶಕ ಸುಧಾಕರ್ ಮಾತನಾಡಿ, ಜಿಲ್ಲೆಯ ಶಾಲೆಗಳಲ್ಲಿ ಬೆಳಿಗ್ಗೆ ಕ್ಷೀರಭಾಗ್ಯ, ಮಧ್ಯಾಹ್ನ ಬಿಸಿಯೂಟ ನೀಡಲಾಗುತ್ತಿದೆ. ಕೆಲವು ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ಸುರಕ್ಷಿತವಾಗಿ ವಿತರಣೆ ನಡೆಯುತ್ತಿದೆ. ಅಡುಗೆ ಸಿಬ್ಬಂದಿಗೆ ಕಾಲಕಾಲಕ್ಕೆ ತರಬೇತಿ ನೀಡಲಾಗುತ್ತಿದ್ದು, ಕೇಂದ್ರೀಕೃತ ಅಡುಗೆ ಮನೆ ವ್ಯವಸ್ಥೆಯ ಬಗ್ಗೆಯೂ ಆಲೋಚನೆಯಿದೆ ಎಂದರು

ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ವೇದಮೂರ್ತಿ ಮಾತನಾಡಿ, ಎರಡು ತಲೆಮಾರಿನಿಂದ ಹೋಟೆಲ್ ಉದ್ಯಮದಲ್ಲಿದ್ದು ಎಂದಿಗೂ ಕಳಪೆ, ನಕಲಿ ಆಹಾರ ಬಳಸಿಲ್ಲ ಎಂದರು. ಜಂಕ್ ಫುಡ್ ಹಾವಳಿಯಿಂದ ಕೊಂಚ ಏರುಪೇರಾಗಿದೆ ಎಂದು ಹೇಳಿದರು.

ಚಿ.ನಾ.ಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಚಂದ್ರಶೇಖರ್, ಸೇವಾದಳದ ಕೃಷ್ಣೇಗೌಡ, ಗೋವಿಂದರಾಜು, ತುರುವೇಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ಸಮಾಜಸೇವಕ ನಟರಾಜು ಶೆಟ್ಟಿ, ಕೊಂಡಜ್ಜಿ ಕುಮಾರ್, ಹೋಟೆಲ್ ಅಸೋಸಿಯೇಷನ್ ಹಾಗೂ ಬೀದಿ ಬದಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ಚಿರತೆ ಸೆರೆಗೆ ನಿರ್ಲಕ್ಷ್ಯ, ರೈತರ ಮೇಲೆ ಕೇಸ್‌ : ಅರಣ್ಯಾಧಿಕಾರಿಗಳ ಅಮಾನತಿಗೆ ಆಗ್ರಹ

ಚಿರತೆ ಸೆರೆಹಿಡಿಯುವಲ್ಲಿ ನಿರ್ಲಕ್ಷ್ಯ ತೋರಿದ ಹಾಗೂ ಗ್ರಾಮಸ್ಥರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ...

ಅಮಾನಿಕೆರೆಯಲ್ಲಿ ಜಲಕ್ರೀಡೆಯ ಹೊಸ ಅಲೆ: ಮಿನಿ ಒಲಿಂಪಿಕ್ಸ್‌ಗೆ ತುಮಕೂರು ಮಕ್ಕಳು ಸಜ್ಜು

ತುಮಕೂರು ನಗರದ ಅಮಾನಿಕೆರೆಯಲ್ಲಿ ಜಲಕ್ರೀಡೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮಹತ್ವದ...

ಮಧುಗಿರಿ | ಮಾನವೀಯ ಮೌಲ್ಯಗಳ ಪ್ರತಿಪಾದಕ ವಾಲ್ಮೀಕಿ ಸದಾ ಸ್ಮರಣೀಯರು: ಪ್ರೊ. ಕೆ.ಎಸ್. ಕುಮಾರ್

 ಜಗತ್ತಿಗೆ ಶ್ರೇಷ್ಠ ಮಹಾಕಾವ್ಯವಾದ ರಾಮಾಯಣವನ್ನು ನೀಡಿದ ಮಹರ್ಷಿ ವಾಲ್ಮೀಕಿ ಮಾನವೀಯ ಮೌಲ್ಯಗಳನ್ನು...

ಸಿರಾ | ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ವಾಲ್ಮೀಕಿ ಸಮಾಜದಿಂದ ಸಿಎಂಗೆ ಮನವಿ

ಕಳೆದ 30 ವರ್ಷಗಳಿಂದ ವಾಲ್ಮೀಕಿ ಸಮುದಾಯದ ಪ್ರಮುಖ ಬೇಡಿಕೆಯಾಗಿರುವ ಮೀಸಲಾತಿ ಹೆಚ್ಚಳಕ್ಕೆ...