ತುಮಕೂರು | ಎಸ್ಐಆರ್ ವಿರೋಧಿಸಿ ಏಕಕಾಲದಲ್ಲಿ ರಾಜ್ಯದ 18 ಜಿಲ್ಲೆಯಲ್ಲಿ ಪ್ರತಿಭಟನೆ : ಪೋಸ್ಟರ್ ಬಿಡುಗಡೆ

Date:

 ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಚುನಾವಣಾ ಆಯೋಗ ರಾಜ್ಯದಲ್ಲಿ ಕೈಗೊಂಡಿರುವ ಎಸ್ಐಆರ್ ಅನ್ನು ವಿರೋಧಿಸಿ ರಾಜ್ಯ ಸರ್ಕಾರ ವಿಶೇಷ ಮತದಾರ ತೀವ್ರ ಪರಿಸ್ಕರಣೆ ವಿರುದ್ಧ ನಿರ್ಣಯ ಕೈಗೊಳ್ಳಲು ಅಗ್ರಹಿಸಿ ಸ್ಲಂ ಜನಾಂದೋಲನ ಕರ್ನಾಟಕದಿಂದ ಫೆಬ್ರವರಿ 11 ರಂದು ರಾಜ್ಯದ 20 ಜಿಲ್ಲಾ ಕೇಂದ್ರದಲ್ಲಿ ಏಕ ಕಾಲದಲ್ಲಿ ಪ್ರತಿಭಟನೆಯ ಪೋಸ್ಟರ್ ಅನ್ನು  ತುಮಕೂರು ಸ್ಲಂ ಭವನದಲ್ಲಿ  ಬಿಡುಗಡೆ ಮಾಡಲಾಯಿತು.

- Advertisement -

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶದ ಪೌರತ್ವ ಮತ್ತು ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ಕಸಿಯುವ  ಎಸ್ಐಆರ್ ವಿಶೇಷ ಮತ ಪರಿಷ್ಕರಣೆ ಮಾಡುತ್ತಿರುವುದು ಸಂವಿಧಾನ ವಿರೋಧಿ ನಿಲುವು ಎಂದು ಸ್ಲಂ ಜನಾಂದೋಲನ ಸಂಚಾಲಕ ಎ. ನರಸಿಂಹಮೂರ್ತಿ ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಮ್ ಔರತೇನ್ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ಭಾರತೀಯ ಚುನಾವಣಾ ಆಯೋಗ ಎಸ್ಐಆರ್ ನಡೆಸುತ್ತಿರುವುದೇ ನಗರದ ಹಾಗೂ ಗ್ರಾಮೀಣ ಭಾರತದ ಕೋಟ್ಯಂತರ ಬಡ ಹಿಂದೂಗಳಿಗೆ , ದಲಿತ-ಆದಿವಾಸಿಗಳಿಗೆ ಮತ್ತು ವಿಶೇಷವಾಗಿ ಮುಸ್ಲಿಮರಿಗೆ , ಭಾರತೀಯರ ನಾಗರಿಕತ್ವ ರದ್ದು ಮಾಡಲೆಂದು. ಇದು ಈ ಪ್ರಕ್ರಿಯೆ ಜಾರಿಯಲ್ಲಿರುವ ಪ. ಬಂಗಾಳ ಮತ್ತು ಉ.ಪ್ರದೇಶಗಳಲ್ಲಿ ಚುನಾವಣಾ ಆಯೋಗ ಜಾರಿ ಮಾಡುತ್ತಿರುವ ಹೊಸ ನಿಯಮ, ಹೊಸ ಪ್ರಕ್ರಿಯೆಗಳನ್ನು ಗಮನಿಸಿದರೆ ಸ್ಪಷ್ಟವಾಗುತ್ತದೆ ಎಂದು ಹೇಳಿದರು

ಈಗಾಗಲೇ ಮೊದಲ ಹಂತದ ಪ್ರಕ್ರಿಯೆ ಮುಗಿದಿರುವ ಉತ್ತರ ಪ್ರದೇಶ ಮತ್ತು ಪ. ಬಂಗಾಳದಲ್ಲಿ 2003 ರ ಮತಪಟ್ಟಿಯೊಂದಿಗೆ ಮ್ಯಾಚಿಂಗ್ ಆಗದವರನ್ನು ಹಾಗೂ ಸ್ಥಳೀಯ ಬಿಎಲ್ಒ ಗಳು Absent , Shifted , Dead, Duplicate ಎಂದು ವರ್ಗೀಕರಿಸಿದವರನ್ನು ಮೊದಲ ಕರಡು ಪಟ್ಟಿಯಿಂದ ಹೊರಗಿಡಲಾಗಿದೆ.

 ಹೀಗೆ ಹೊರಗಾದವರ ಸಂಖ್ಯೆ ಪ. ಬಂಗಾಳದಲ್ಲಿ 58 ಲಕ್ಷವಾದರೆ , ಉ. ಪ್ರದೇಶದಲ್ಲಿ 2.9 ಕೋಟಿ, ಈಗ ಅವರೆಲ್ಲರೂ ಮತ್ತೊಮೆ Form 6 ಅನ್ನು ಭರ್ತಿ ಮಾಡಿ, ಚುನಾವಣಾ ಆಯೋಗ ನಿಗದಿಪಡಿಸಿರುವ 11 ದಾಖಲೆಗಳಲ್ಲಿ ಒಂದನ್ನು ತೋರಿಸಿ ತಮ್ಮ ನಾಗರಿಕತ್ವ ಸಾಬೀತುಪಡಿಸಬೇಕು ಎಂದರು.

1002799643

ಕರಡು ಪಟ್ಟಿಯಲ್ಲಿರುವವಾರ ದಾಖಲೆಗಳ ಬಗ್ಗೆ ಯೂ ಹೊಸ ಹೊಸ ತಕರಾರುಗಳನ್ನು ಚು. ಆಯೋಗ ರೂಪಿಸಿ ಕರಡು ಪಟ್ಟಿಯಲ್ಲಿ ಹೆಸರಿರುವವರಿಗೂ ನೋಟೀಸು ಕಳಿಸಿದೆ. ಈ ರೀತಿಯಲ್ಲಿ ಪ. ಬಂಗಾಳದಲ್ಲಿ ಮ್ಯಾಪಿಂಗ್ ಆದರೂ 1.3 ಕೋಟಿ ಜನರಿಗೆ ಮತ್ತು ಉ.ಪ್ರದೇಶದಲ್ಲಿ 3.6 ಕೋಟಿ ಜನರಿಗೆ ಹೊಸ ಶರತ್ತುಗಳನ್ವಯ ನೋಟೀಸು ಕಳಿಸಲಾಗಿದೆ.ಆ ಹೊಸ ನಿಯಮಗಳ ಪ್ರಕಾರ  ಈ ಹೊಸ ತಕರಾರುಗಳ ಅನ್ವಯ

 ಪ. ಬಂಗಾಳದಲ್ಲಿ 23.6 ಲಕ್ಷ ಜನರಿಗೆ ಆರಕ್ಕಿಂತ ಹೆಚ್ಚು ಮಕ್ಕಳಿರುವ ಕಾರಣಕ್ಕೆ ನೋಟೀಸು ಕೊಡಲಾಗಿದೆ. 11 ಲಕ್ಷ ಜನರಿಗೆ ತಾಯಿ ಮತ್ತು ಮಕ್ಕಳ ಅಂತರ 15 ವರ್ಷಕ್ಕಿಂತ ಕಡಿಮೆ ಇದೆ ಎನ್ನುವ ಕಾರಣಕ್ಕೆ ನೋಟೀಸು ನೀಡಲಾಗಿದೆ. 85 ಲಕ್ಷ ಜನರಿಗೆ ತಂದೆಯ ಹೆಸರಿನ ಸ್ಪೆಲ್ಲಿಂಗ್ ಸರಿಯಿಲ್ಲ ಎನ್ನುವ ಕಾರಣಕ್ಕೆ ಅನುಮಾನಿಸಿ ನೋಟೀಸು ಕೊಡಲಾಗಿದೆ. ಉ.ಪ್ರದೇಶದಲ್ಲಿ 

1.04 ಕೋಟಿ ಜನರಿಗೆ ಮ್ಯಾಪಿಂಗ್ ಆಗಲಿಲ್ಲವೆನ್ನುವ ಕಾರಣ ಪಟ್ಟಿಯಿಂದ ಕೈಬಿಡಲಾಗಿದೆ ಎಂದರು ಈ ಪ್ರಕ್ರಿಯೆ ಕರ್ನಾಟಕದಲ್ಲೂ ನಡೆಯಲಿದೆ ಪಕ್ಕದ ರಾಜ್ಯ ಗಳಾದ ತಮಿಳುನಾಡು, ಕೇರಳ, ಸರಕಾರಗಳು  ಎಸ್ಐಆರ್ ಖಂಡಿಸಿದರೂ,  ಕರ್ನಾಟಕ ಸರ್ಕಾರದ ಮೌನವೇಕೆ?,  ಮುಖ್ಯ ಮಂತ್ರಿ ಸಿದ್ದರಾಮಯ್ಯ  ಎಸ್ಐಆರ್ ಬಗ್ಗೆ ನಮ್ಮ ತಕರಾರು ಇಲ್ಲ ಎಂದಿದ್ದಾರೆ. ಅಹಿಂದ ನಾಯಕ ಬಡವರ ಬಂಧು ಪ್ರಗತಿಪರ ಆಲೋಚನೆ ಇರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಬಡವರನ್ನು ಕೈಬಿಟ್ಟರೆ ಕಾಂಗ್ರೆಸ್ ಕೈ ಹಿಡಿಯುವವರು ಯಾರು … ? ಹಾಗಾಗಿ ರಾಜ್ಯ ಸರ್ಕಾರ ಎಸ್ಐಆರ್ ವಿರುದ್ಧ ನಿರ್ಣಯ ಕೈಗೊಳ್ಳಬೇಕು ಎಂದು ಅಗ್ರಹಿಸಿ ಮತ್ತೆ ಎಸ್ಐಆರ್ ವಿರೋಧಿಸಿ ಸ್ಲಂ ಜನಾಂದೋಲನ ಕರ್ನಾಟಕ ಸ್ಲಂ ವಾರು ಜಾಗೃತಿ ಮೂಡಿಸಿ, ಇದೇ ಪೆಬ್ರವರಿ 11ರಂದು ರಾಜ್ಯದ 20 ಜಿಲ್ಲಾ ಕೇಂದ್ರಗಳ ಜಿಲ್ಲಾಧಿಕಾರಿ ಕಚೇರಿಗಳ ಎದುರು ಏಕಕಾಲದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ನಮ್ಮ ಸಂವಿಧಾನ ಬದ್ದ ಮತದ ಹಕ್ಕು ರಕ್ಷಣೆಗೆ ಸ್ಲಂ ನಿವಾಸಿಗಳು ಸ್ವಯಂ ಪ್ರೇರಣೆಯಿಂದ ಹೋರಾಟದಲ್ಲಿ ಭಾಗವಹಿಸಬೇಕು ಎಂದು ರಾಜ್ಯ ಸಂಚಾಲಕ ಎ ನರಸಿಂಹಮೂರ್ತಿ ಕರೆ ನೀಡಿದರು.

ಇದೇ ಸಂಧರ್ಭದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ ನರಸಿಂಹಮೂರ್ತಿ. ಪದಾಧಿಕಾರಿಗಳಾದ ಅರುಣ್. ಜಾಬಿರ್ ಖಾನ್. ಮುಬಾರಕ್. ಪುಟ್ಟರಾಜು. ಶಾರದಮ್ಮ. ಗಂಗಾ. ರಂಗನಾಥ್. ಧನಂಜಯ. ಸಾವಿತ್ರಿ ಬಾಪುಲೆ ಮಹಿಳಾ ಸಂಘಟನೆಯ ಸಂಚಾಲಕಾರದ ಅನುಪಮಾ. ಆದಾದಿಕಾರಿಗಳಾದ ಹನುಮಕ್ಕ. ಕಿರಣ್. ಮುಂತಾದವರು ಪಾಲ್ಗೊಂಡಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ಸಿಂಹಾದ್ರಿ ಹತ್ಯೆ: ಆರೋಪಿಗಳ ಬಂಧನಕ್ಕೆ ಒಳಮೀಸಲಾತಿ ಹೋರಾಟ ಸಮಿತಿ ಆಗ್ರಹ

ಮಧುಗಿರಿ ತಾಲ್ಲೂಕಿನ ಕಸಾಪುರ ಗ್ರಾಮದ ದಲಿತ ಯುವಕ ಸಿಂಹಾದ್ರಿ ಹತ್ಯೆಯನ್ನು ಖಂಡಿಸಿರುವ...

ತುಮಕೂರು | ಹೊಸ ಪಿಎಫ್ ನೀತಿಯ ವಿರುದ್ಧ ಗಾರ್ಮೆಂಟ್ಸ್ ಕಾರ್ಮಿಕರ ಬೃಹತ್ ಪ್ರತಿಭಟನೆ

ಕೇಂದ್ರ ಸರ್ಕಾರದ ಹೊಸ ಭವಿಷ್ಯ ನಿಧಿ (ಪಿಎಫ್) ನೀತಿಯಲ್ಲಿನ ಕಾರ್ಮಿಕ ವಿರೋಧಿ...

ಗುಬ್ಬಿ | ಬರಗಾಲ ಕಾಮಗಾರಿ ಆರಂಭಕ್ಕೆ ಒತ್ತಾಯ: ಸೆ.28ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ರೈತಸಂಘ ಪ್ರತಿಭಟನೆ

ಬರಪೀಡಿತ ಪ್ರದೇಶಗಳನ್ನು ಘೋಷಿಸಿದ್ದರೂ ಸರ್ಕಾರ ಈವರೆಗೆ ಯಾವುದೇ ಬರಗಾಲ ಪರಿಹಾರ ಕಾಮಗಾರಿಗಳನ್ನು...