ಅಧಿವೇಶನದಲ್ಲಿ ಆಶಾ ಕಾರ್ಯಕರ್ತೆಯರ, ರೈತರ ಬೇಡಿಕೆ ಚರ್ಚೆಗೆ ಬರಲಿವೆ: ಸಲೀಂ ಅಹ್ಮದ್

Date:

ಆಶಾ ಕಾರ್ಯಕರ್ತೆಯರ ಬೇಡಿಕೆಗಳು, ಕಬ್ಬು ಬೆಳೆಗಾರರ ಸಮಸ್ಯೆಗಳು, ವಿಕಲಚೇತನರ ಸವಾಲುಗಳು ಹಾಗೂ ಕಾರ್ಮಿಕರ ಸಂಕಷ್ಟದ ಕುರಿತು ಬೆಳಗಾವಿಯಲ್ಲಿ ನಡೆಯಲಿರುವ ಕರ್ನಾಟಕ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಪ್ರಮುಖವಾಗಿ ಚರ್ಚೆಗೆ ಬರಲಿವೆ ಎಂದು ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್ ತಿಳಿಸಿದ್ದಾರೆ.

- Advertisement -

ಮಂಗಳೂರಿನ ಸರ್ಕ್ಯೂಟ್ ಹೌಸ್‌ನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಡಿಸೆಂಬರ್ 2ರಿಂದ 11ರವರೆಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಒಂಬತ್ತು ದಿನಗಳ ಕಾಲ ಅಧಿವೇಶನ ನಡೆಯಲಿದೆ. ಸಾರ್ವಜನಿಕರ ಸಮಸ್ಯೆಗಳು ಹಾಗೂ ಪ್ರಾದೇಶಿಕ ಅಭಿವೃದ್ಧಿ ವಿಚಾರಗಳಿಗೆ ಅಧಿವೇಶನದಲ್ಲಿ ಆದ್ಯತೆ ನೀಡಲಾಗುವುದು” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಿಜ್ಜಳನ ಆಸ್ಥಾನದಲ್ಲಿದ್ದ ಕೊಂಡಿ ಮಂಚಣ್ಣ ಯಾರು? ಆತ ‘ಬಸವ’...

ಬಸವಣ್ಣನವರ ವಿರೋಧಿಯಾಗಿ ಇತಿಹಾಸದಲ್ಲಿ ಗುರುತಿಸಿಕೊಂಡಿರುವ ‘ಕೊಂಡಿ ಮಂಚಣ್ಣ’ ಈಗ ಮತ್ತೆ ಕರ್ನಾಟಕದ ಸಾರ್ವಜನಿಕ ಚರ್ಚೆಯ ಕೇಂದ್ರಕ್ಕೆ ಬಂದಿದ್ದಾನೆ. ಸಚಿವ ಎಂ.ಬಿ. ಪಾಟೀಲ್ ಅವರು ಶಂಕರ್ ಬಿದರಿ ಮತ್ತು ಮನು ಬಳಿಗಾರ್ ಅವರನ್ನು ‘21ನೇ...

ರಾಹುಲ್ ವಿರುದ್ಧ ಮೊಕದ್ದಮೆ, ಸೋನಿಯಾಗೆ ಕಾನೂನು ನೋಟಿಸ್: ಸಾವರ್ಕರ್–ಗೋಡ್ಸೆ...

ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆಯ ಮೂಲಕ ವಿವಾದ ಸೃಷ್ಟಿಸಿದ್ದ ಪುಣೆಯ ಸಾತ್ಯಕಿ ಸಾವರ್ಕರ್, ಇದೀಗ ಸೋನಿಯಾ ಗಾಂಧಿ ಅವರ ಪುಸ್ತಕದ ಐತಿಹಾಸಿಕ ಉಲ್ಲೇಖಗಳನ್ನು ಸಹಿಸದೆ ಕಾನೂನು ನೋಟಿಸ್ ನೀಡಿ ಮತ್ತೆ ಪ್ರಚಾರಕ್ಕಿಳಿದಿದ್ದಾನೆ....

ಉತ್ತರ ಕನ್ನಡ: ಬೇಡ್ತಿ ಹೋರಾಟ ಮತ್ತು ಸಂಸದ-ಶಾಸಕರ ಸೋಗಲಾಡಿತನ

ಬೇಡ್ತಿ ಸತ್ಯಾಗ್ರಹ ಎಷ್ಟು ಯೋಜನಾ ಬದ್ದವಾಗಿರುತ್ತದೆಂದರೆ, ಬೇಡ್ತಿ ನದಿ ಬಳಸುವ ಯಾವ ಯೋಜನೆಯೂ ಕಾರ್ಯಗತವಾಗದಂತೆ ಹಿಮ್ಮೆಟ್ಟಿಸಲಾಗುತ್ತಿದೆ. ಆದರೆ ಜಿಲ್ಲೆಯ ಹಿಂದುಳಿದವರು-ದುರ್ಬಲರು ಬಾಧಿತವಾಗುವ ಹಲವು ಯೋಜನೆಗಳನ್ನು ಪ್ರಭುತ್ವ ಹಠದಿಂದ ಅನುಷ್ಠಾನಗೊಳಿಸಿದೆ. ಸುಪಾ, ತಟ್ಟಿಹಳ್ಳ, ಕೊಡಸಳ್ಳಿ,...

“ಅಧಿವೇಶನದಲ್ಲಿ ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆಗೆ ಸಾಕಷ್ಟು ಸಮಯ ಮೀಸಲಿಡಲಾಗುವುದು. ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ಯೆಗಳ ಕುರಿತು ಚರ್ಚಿಸಲು ವಿಧಾನ ಪರಿಷತ್ ಸದಸ್ಯರಾದ ಐವನ್ ಡಿ’ಸೋಜಾ, ಮಂಜುನಾಥ ಭಂಡಾರಿ ಹಾಗೂ ಪಿ.ವಿ. ಮೋಹನ್ ಮನವಿ ಸಲ್ಲಿಸಿದ್ದು, ಈ ವಿಚಾರಗಳ ಚರ್ಚೆಗೂ ಅವಕಾಶ ಕಲ್ಪಿಸಲಾಗುವುದು” ಎಂದರು.

ವಿಕಲಚೇತನರ ಸಮಸ್ಯೆಗಳಿಗೂ ವಿಶೇಷ ಆದ್ಯತೆ ನೀಡಲಾಗುವುದು. ಸಾನಿಧ್ಯ ಟ್ರಸ್ಟ್‌ನ ನಿಯೋಗ ಸಲ್ಲಿಸಿರುವ ಮನವಿಯ ಹಿನ್ನೆಲೆಯಲ್ಲಿ ವಿಕಲಚೇತನರಿಗೆ ಎದುರಾಗಿರುವ ಸಮಸ್ಯೆಗಳು, ಶಿಕ್ಷಕರ ಕೊರತೆ ಹಾಗೂ ಅಗತ್ಯ ಸೌಲಭ್ಯಗಳ ಲಭ್ಯತೆ ಕುರಿತು ಚರ್ಚೆ ನಡೆಯಲಿದೆ. ಆಶಾ ಕಾರ್ಯಕರ್ತೆಯರ ಬೇಡಿಕೆಗಳು, ಕಬ್ಬು ಬೆಳೆಗಾರರ ಸಂಕಷ್ಟ, ಬರಗಾಲದ ಸಮಸ್ಯೆಗಳು ಮತ್ತು ಕಾರ್ಮಿಕರ ವಿಚಾರಗಳೂ ಅಧಿವೇಶನದಲ್ಲಿ ಪ್ರಸ್ತಾಪವಾಗಲಿವೆ ಎಂದು ತಿಳಿಸಿದರು.

ಅಗತ್ಯವಿದ್ದರೆ ರಾತ್ರಿ ತಡವಾಗುವವರೆಗೂ ಕಲಾಪ ಮುಂದುವರಿಸಲಾಗುವುದು. ಕಲಾಪದ ಅವಧಿಯನ್ನು ವಿಸ್ತರಿಸುವ ಕುರಿತು ಅಂತಿಮ ನಿರ್ಧಾರವನ್ನು ಕಾರ್ಯಕಲಾಪ ಸಲಹಾ ಸಮಿತಿ ಸಭೆಯಲ್ಲಿ ಕೈಗೊಳ್ಳಲಾಗುವುದು ಎಂದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆಗೆ ಬರದ ಛಾಯೆ: ಬರಿದಾದ ಹಿಪ್ಪರಗಿ ಬ್ಯಾರೇಜ್‌, ಕುಡಿವ ನೀರಿಗೂ ಪರದಾಟ!

ಒಂದು ಕಾಲದಲ್ಲಿ ಅತಿವೃಷ್ಟಿಯ ಆರ್ಭಟಕ್ಕೆ ತತ್ತರಿಸಿದ್ದ ಬಾಗಲಕೋಟೆ ಜಿಲ್ಲೆ, ಈಗ ಮಳೆಯ...

ವಿಜಯಪುರ | ಆಶಾ ಕಾರ್ಯಕರ್ತೆಯರಿಗೆ 15,000 ಗೌರವಧನ ನೀಡಿ: ಪ್ರಗತಿಪರ ಸಂಘಟನೆಗಳ ಆಗ್ರಹ

ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರದಿಂದ ಕನಿಷ್ಠ ₹15 ಸಾವಿರ ಮಾಸಿಕ ಗೌರವಧನ...

ಬೀದರ್‌ | ಭೀಕರ ಅಪಘಾತ: ಬೈಕ್‌ಗೆ ಎರ್ಟಿಗಾ ಡಿಕ್ಕಿ, ಮೂವರ ಸಾವು

ಬೀದರ್‌ ಜಿಲ್ಲೆ ಹುಲಸೂರು ತಾಲ್ಲೂಕಿನ ಮುಚಳಂಬ ಗ್ರಾಮದ ಬಳಿ ಭೀಕರ ರಸ್ತೆ...

ಮಂಗಳೂರು | ಮಣ್ಣಿನ ಸವಕಳಿ ತಡೆಗೆ ನಂದಿನಿ ತೀರದಲಿ ಲಾವಂಚ ನಾಟಿ

ಮಳೆಗಾಲದಲ್ಲಿ ಉಂಟಾಗುವ ತೀವ್ರ ಮಣ್ಣಿನ ಸವಕಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ, ನವಮಂಗಳೂರು ಬಂದರು...