ಕಳೆದ 18 ವರ್ಷಗಳಿಂದ ದಂತ ಆರೈಕೆ ಹಾಗೂ ಚಿಕಿತ್ಸಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಮೂಲಕ ಜನರ ವಿಶ್ವಾಸ ಗಳಿಸಿರುವ ಆನಂದ್ ಡೆಂಟಲ್ ಆ್ಯಂಡ್ ಆರ್ಥೋಅಲೈನರ್ಸ್ ಸಂಸ್ಥೆಯ ನೂತನ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್ ಉಡುಪಿಯ ಜಿಲ್ಲಾ ನ್ಯಾಯಾಲಯದ ಹಿಂಬದಿ ರಸ್ತೆಯಲ್ಲಿರುವ ಶ್ರೀ ಪಟ್ಟಾಭಿರಾಮ ಟವರ್ಸ್ ನಲ್ಲಿ ಭಾನುವಾರ ಭವ್ಯವಾಗಿ ಉದ್ಘಾಟನೆಗೊಂಡಿತು.
ಆಧುನಿಕ ಸೌಲಭ್ಯಗಳು ಹಾಗೂ ಸಮಗ್ರ ದಂತ ಚಿಕಿತ್ಸಾ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ನೂತನ ಕ್ಲಿನಿಕ್ ಆರಂಭಿಸಲಾಗಿದ್ದು, ದಂತ ಆರೋಗ್ಯ ಕ್ಷೇತ್ರದಲ್ಲಿ ಇನ್ನಷ್ಟು ಗುಣಮಟ್ಟದ ಸೇವೆ ನೀಡಲು ಇದು ಸಹಕಾರಿಯಾಗಲಿದೆ ಎಂದು ಸಂಸ್ಥೆಯ ಮುಖ್ಯಸ್ಥರಾದ ಡಾ. ಪ್ರವೀಣ್ ಶೆಟ್ಟಿ ಕೊಡ್ಲಾಡಿ ತಿಳಿಸಿದರು.

ಕ್ಲಿನಿಕ್‌ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಾರ್ಕೂರಿನ ಹಿರಿಯ ದಂತ ಶಸ್ತ್ರಚಿಕಿತ್ಸಕ ಡಾ. ಯು. ವೆಂಕಟರಾಜ್, ಉಡುಪಿಯ ನೋಟರಿ ಹಾಗೂ ಹಿರಿಯ ವಕೀಲ ದಿವಾಕರ್ ಎಂ. ಶೆಟ್ಟಿ, ಉಡುಪಿಯ ನ್ಯೂ ಸಿಟಿ ಆಸ್ಪತ್ರೆಯ ಜನರಲ್ ಸರ್ಜನ್ ಹಾಗೂ ವೈದ್ಯಕೀಯ ನಿರ್ದೇಶಕ ಡಾ. ರಮೇಶ್ ನಾಯಕ್, ಉಡುಪಿಯ ಹಿರಿಯ ದಂತ ಶಸ್ತ್ರಚಿಕಿತ್ಸಕ ಹಾಗೂ ಶಿರ್ವ ಕಾಶಿಮಠ ಮಹಾಲಸನಾರಾಯಣಿ ದೇವಸ್ಥಾನದ ಅಧ್ಯಕ್ಷ ಡಾ. ಡಿ. ದಾಮೋದರ ಪೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು, ಕಳೆದ 18 ವರ್ಷಗಳಿಂದ ದಂತ ಚಿಕಿತ್ಸಾ ಕ್ಷೇತ್ರದಲ್ಲಿ ಜನರ ವಿಶ್ವಾಸ ಗಳಿಸಿರುವ ಆನಂದ್ ಡೆಂಟಲ್ ಆ್ಯಂಡ್ ಆರ್ಥೋಅಲೈನರ್ಸ್ ಸಂಸ್ಥೆಯ ಸೇವೆಯನ್ನು ಶ್ಲಾಘಿಸಿದರು. ಆಧುನಿಕ ತಂತ್ರಜ್ಞಾನ ಹಾಗೂ ಪರಿಣತ ವೈದ್ಯಕೀಯ ಸೇವೆಗಳ ಮೂಲಕ ನೂತನ ಕ್ಲಿನಿಕ್ ಸಾರ್ವಜನಿಕರಿಗೆ ಇನ್ನಷ್ಟು ಅನುಕೂಲ ಕಲ್ಪಿಸಲಿ ಎಂದು ಶುಭ ಹಾರೈಸಿದರು.

ನೂತನ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್‌ನಲ್ಲಿ ದಂತ ಆರೋಗ್ಯಕ್ಕೆ ಸಂಬಂಧಿಸಿದ ವಿವಿಧ ರೀತಿಯ ಚಿಕಿತ್ಸೆಗಳು ಹಾಗೂ ಆರ್ಥೋಡಾಂಟಿಕ್ ಮತ್ತು ಆರ್ಥೋಅಲೈನರ್ ಸೇವೆಗಳನ್ನು ಆಧುನಿಕ ಸೌಲಭ್ಯಗಳೊಂದಿಗೆ ಒದಗಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.

ಕಾರ್ಯಕ್ರಮದಲ್ಲಿ ವೈದ್ಯರು, ವಕೀಲರು, ಗಣ್ಯರು, ಸಂಸ್ಥೆಯ ಸಿಬ್ಬಂದಿ, ರೋಗಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ‘18 Years of Trust – Smile Care & Cure’ ಎಂಬ ಧ್ಯೇಯದೊಂದಿಗೆ ಸಂಸ್ಥೆಯು ಮುಂದಿನ ದಿನಗಳಲ್ಲಿಯೂ ಜನರಿಗೆ ಗುಣಮಟ್ಟದ ದಂತ ಆರೈಕೆ ಮತ್ತು ಚಿಕಿತ್ಸಾ ಸೇವೆ ನೀಡುವ ಬದ್ಧತೆಯನ್ನು ವ್ಯಕ್ತಪಡಿಸಿತು.





