ಉಡುಪಿ | ‘ಕಬ್ಬದುಳುಮೆ’ ಕಾವ್ಯಲೋಕದ ಓದಿನ ಹೊಸಪರಿ

Date:

ಹಳಗನ್ನಡ ಪಠ್ಯಗಳ ಸಂಧಿಬಂಧಗಳನ್ನು ಒಡೆದು ಒಳಗಿನ ತಿಳಿವನ್ನು ಅರಗಿಸಿಕೊಳ್ಳುವ ನಿರಂತರ ಬೇಸಾಯವಾದ ‘ಕಬ್ಬದುಳುಮೆ’ ಕನ್ನಡ ಕಾವ್ಯಲೋಕದ ಓದಿನ ಹೊಸಪರಿಯ ಪ್ರಾಯೋಗಿಕತೆಯನ್ನು ಪರಿಚಯಿಸುವ ಅನನ್ಯ ಪ್ರಯತ್ನವಾಗಿದೆ ಎಂದು ಕರಾವಳಿ ರಂಗಾಯಣದ ನಿರ್ದೇಶಕ ಬಿ.ಆರ್. ವೆಂಕಟರಮಣ ಐತಾಳ ಹೇಳಿದರು.

- Advertisement -

ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಕನ್ನಡ ವಿಭಾಗ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚಕೋರ ಸಾಹಿತ್ಯ ವಿಚಾರ ವೇದಿಕೆ, ಉಡುಪಿ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಪ್ರಾಚೀನ ಕನ್ನಡ ಕಾವ್ಯ ಓದು ನಿರಂತರ ಕಮ್ಮಟ ‘ಕಬ್ಬದುಳುಮೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಳಗನ್ನಡ ಕಾವ್ಯಗಳ ಮೇಲಿರಿಸಿದ ಉಳುಮೆಯ ಸಾಧನವಾದ ನೇಗಿಲಿಗೆ ಮಾವು–ಹಲಸಿನ ಗೊಂಚಲನ್ನು ಕಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನಂಬಿಕೆಯ ಪ್ರಾರ್ಥನೆಗೆ ‘ಸಮ್ಮತಿ ಪತ್ರ’ದ ಕಾವಲು: ಮಹಾರಾಷ್ಟ್ರದ ಚರ್ಚ್...

ಸಾಮಾನ್ಯವಾಗಿ ಈ ಹಿಂದಿನಿಂದಲೂ ಚರ್ಚ್‌ಗಳ ಮೂಲಕ ಉಚಿತ ವೈದ್ಯಕೀಯ ಶಿಬಿರ, ರಕ್ತದಾನ, ಇತರೆ ಸಾಮಾಜಿಕ ಸೇವೆಗಳನ್ನು ಮಾಡಿಕೊಂಡು ಬರಲಾಗಿದೆ. ಆದರೆ ಮಹಾರಾಷ್ಟ್ರದಲ್ಲಿ ಜಾರಿಗೆ ಬಂದಿರುವ ಮತಾಂತರ ವಿರೋಧ ಕಾಯ್ದೆ ಈ ಸಾಮಾಜಿಕ ಕಾರ್ಯಗಳಿಗೂ...

ಮೋದಿ ಸರ್ಕಾರ ಗೆದ್ದದ್ದೇ ಅಥವಾ ಕದ್ದದ್ದೇ? ಸಿಇಸಿ ವಿವಾದ...

2024ರ ಲೋಕಸಭಾ ಚುನಾವಣೆಯ ಮತದಾನ ಅಂಕಿಅಂಶಗಳಲ್ಲಿ ಕಂಡುಬಂದ 4.65 ಕೋಟಿ ಮತಗಳ ವ್ಯತ್ಯಾಸ ಮತ್ತು 79 ಕ್ಷೇತ್ರಗಳ ಫಲಿತಾಂಶಗಳ ಕುರಿತು VFD ವರದಿ ಗಂಭೀರ ಪ್ರಶ್ನೆಗಳನ್ನು ಎತ್ತಿತ್ತು. ಇದೇ ವೇಳೆ ಚುನಾವಣಾ ಆಯೋಗದ...

ಮೈತ್ರಿ ಮತ್ತು ಸ್ವೀಕೃತಿಗೆ ಹೆಣ್ತನ ಮುಖ್ಯ ಎನ್ನುವ ‘ಡೋರೊಥಿ’

ಲಿಂಗತ್ವ ಅಲ್ಪಸಂಖ್ಯಾತ ಭಾವನೆಗಳನ್ನು 'ಅಸ್ಪೃಶ್ಯತೆ'ಗೆ ಸಮನಾಗಿ ಈ ಗಂಡಾಳ್ವಿಕೆ ನೋಡುತ್ತದೆ; 'ಲಿಂಗ ಸಂಕರ' ಸ್ಥಿತಿಯನ್ನು, ಜಾತಿ ಸಂಕರದಷ್ಟೇ 'ಮರ್ಯಾದಾಗೇಡು' ಎಂಬಂತೆ ಭಾವಿಸುತ್ತದೆ. ಹೀಗೆ ನೋಡುವ 'ಸನಾತನ' (ಜಡ್ಡುಗಟ್ಟಿದ ಗಂಡು ಮನಸ್ಥಿತಿ ಅಥವಾ ಮುದಿಯಾದ...

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೋಟಪಡುಕೆರೆ ಸರ್ಕಾರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ರಮೇಶ್ ಆಚಾರ್ ಮಾತನಾಡಿ, “ಕಾವ್ಯಗಳ ಓದು ವರ್ಣನಾ ಜಗತ್ತಿಗಷ್ಟೇ ಸೀಮಿತವಾಗದೆ, ವಾಸ್ತವಿಕ ಬದುಕಿನ ನಿತ್ಯಸತ್ಯಗಳನ್ನು ಹುಡುಕುವ ದಾರಿಯಾಗಬೇಕು” ಎಂದರು. ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಸೌಮ್ಯಲತಾ ಪಿ. ಪ್ರಾಸ್ತಾವಿಕವಾಗಿ ಮಾತನಾಡಿ ‘ಕಬ್ಬದುಳುಮೆ’ ಪರಿಕಲ್ಪನೆ ರೂಪಿತವಾದ ಹಿನ್ನೆಲೆ ಹಾಗೂ ಅದರ ಪ್ರಯೋಗದ ವಿಸ್ತರಣೆಯನ್ನು ಪರಿಚಯಿಸಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಹಾಗೂ ಪ್ರಾಂಶುಪಾಲ ಡಾ. ಜಯಪ್ರಕಾಶ್ ಶೆಟ್ಟಿ ಹೆಚ್. ಮಾತನಾಡಿ, “ಹಳಗನ್ನಡ ಪಠ್ಯಗಳ ಓದೆಂದರೆ ಕೇವಲ ಸದ್ದು ಮಾಡುವುದಲ್ಲ. ಸೈದ್ಧಾಂತಿಕ ಹಾಗೂ ತಾತ್ವಿಕ ನೆಲೆಗಟ್ಟಿನಲ್ಲಿ ಪಠ್ಯದ ಒಳಗಿರುವ ರಾಜಕೀಯ ನಡೆಯನ್ನು ಗ್ರಹಿಸುವ ಮೂಲಕ ನಮ್ಮ ಕಾಲವನ್ನು ನಾವು ಸರಿಯಾಗಿ ಓದಿಕೊಳ್ಳುವ ಬಗೆಯಾಗಿದೆ” ಎಂದರು.

ಐಕ್ಯುಎಸಿ ಸಂಚಾಲಕ ಡಾ. ಲಿತಿನ್ ಬಿ.ಎಂ. ಹಾಗೂ ಉಡುಪಿ ಜಿಲ್ಲಾ ಚಕೋರ ಸಾಹಿತ್ಯ ವಿಚಾರ ವೇದಿಕೆಯ ಜಿಲ್ಲಾಸಂಚಾಲಕಿ ಶಾಲಿನಿ ಯು.ಬಿ. ಉಪಸ್ಥಿತರಿದ್ದರು. ಭೀಮಾಂಬಿಕ ಸ್ವಾಗತಿಸಿದರು. ಅನುಶ್ರೀ ವಂದಿಸಿದರು. ಶ್ರಾವ್ಯ ಕಾರ್ಯಕ್ರಮ ನಿರೂಪಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಜನಗಣತಿಯಲ್ಲಿ 21 ವಿಧದ ಅಂಗವೈಕಲ್ಯ ದಾಖಲಿಸಲು ಆಗ್ರಹ

2027ರ ಜನಗಣತಿಯಲ್ಲಿ ಅಂಗವಿಕಲರ ನಿಖರ ಸಂಖ್ಯೆ ಮಾತ್ರವಲ್ಲದೆ, ಅಂಗವಿಕಲರ ಹಕ್ಕುಗಳ ಕಾಯ್ದೆ-2016ರಡಿ...

ಎಂಆರ್‌ಪಿಎಲ್ ಸ್ಫೋಟದ ಹಾನಿಯು ಕಂಪೆನಿ ಹೇಳುತ್ತಿರುವುದಕ್ಕಿಂತ ಹಲವು ಪಟ್ಟು ಗಂಭೀರವಾಗಿದೆ: ಸಿಪಿಐಎಂ

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸುರತ್ಕಲ್ ಹತ್ತಿರದ ಜೋಕಟ್ಟೆ ಪ್ರದೇಶದಲ್ಲಿರುವ ಎಂಆರ್‌ಪಿಎಲ್‌ನಲ್ಲಿ...

ವಿಜಯಪುರ | ಸಣ್ಣಪುಟ್ಟ ವಿವಾದಗಳನ್ನು ಸೌಹಾರ್ದದಿಂದ ಬಗೆಹರಿಸಿ: ಎಸ್. ಹಾಗರಗಿ

ಪರಸ್ಪರ ಮಾತುಕತೆ, ಸಮುದಾಯ ಮಧ್ಯಸ್ಥಿಕೆಯ ಮೂಲಕ ಸಣ್ಣಪುಟ್ಟ ಸಮಸ್ಯೆಗಳನ್ನು ಗ್ರಾಮದಲ್ಲೇ ಸೌಹಾರ್ದಯುತವಾಗಿ...