ಕಾಪು ಸಮೀಪದ ಮೂಳೂರಿನ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸೇವಾ ಸಂಘದ ವಾರ್ಷಿಕ ಮಹಾಸಭೆಯು ಜುಲೈ 26ರಂದು ಸಂಘದ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಸಂಘದ ಅಧ್ಯಕ್ಷರಾಗಿ ಶ್ರೀ ಪ್ರಕಾಶ್ ವಿ. ಅಂಚನ್ ಅವರು ಸರ್ವಾನುಮತದಿಂದ ಪುನರಾಯ್ಕೆಯಾದರು.
ಗೌರವಾಧ್ಯಕ್ಷರಾಗಿ ಭಾಸ್ಕರ್ ಎಂ. ಪೂಜಾರಿ, ಉಪಾಧ್ಯಕ್ಷರಾಗಿ ಹೇಮನಾಥ್ ಎಂ. ಅಂಚನ್, ಪ್ರಧಾನ ಕಾರ್ಯದರ್ಶಿಯಾಗಿ ಜಗದೀಶ್ ಕೆ. ಅಮಿನ್, ಉಪ ಕಾರ್ಯದರ್ಶಿಯಾಗಿ ಸುಧೀರ್ ಎಂ., ಕೋಶಾಧಿಕಾರಿಯಾಗಿ ರಮೇಶ್ ಡಿ. ಪೂಜಾರಿ, ಉಪ ಕೋಶಾಧಿಕಾರಿಯಾಗಿ ವಿಜಯ್ ಆರ್. ಕೋಟ್ಯಾನ್ ಹಾಗೂ ಆಂತರಿಕ ಲೆಕ್ಕ ಪರಿಶೋಧಕರಾಗಿ ಶ್ರೀಧರ್ ಉಚ್ಚಿಲ್ ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಗೋಪಾಲ ಮಾಸ್ತರ್, ಚೇತನ್ ಕುಮಾರ್, ಉಮೇಶ್ ಎಲ್. ಪೂಜಾರಿ, ಸುಕೇಶ್ ಕೆ. ಅಮಿನ್, ಭೋಜರಾಜ್, ಸದಾನಂದ ಪೂಜಾರಿ, ಸಂತೋಷ್ ಕುಮಾರ್, ಕಿಶೋರ್ ಚೌಕಿಮನೆ, ಸತೀಶ್ ಕರ್ಕೆರ, ಕಿಶೋರ್ ಪೂಜಾರಿ, ಕಿರಣ್, ಮಹೇಶ್ ಸಾಲ್ಯಾನ್, ಶ್ರೀಮತಿ ಸತ್ಯವತಿ ಹಾಗೂ ಶ್ರೀಮತಿ ಸವಿತಾ ವೈ. ಅಮಿನ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಅರ್ಥಿಕವಾಗಿ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಸುಕೇಶ್ ಅಮಿನ್ ಸ್ವಾಗತಿಸಿದರು. ಜಗದೀಶ್ ಕೆ. ಅಮಿನ್ ಕಾರ್ಯಕ್ರಮ ನಿರೂಪಿಸಿ, ಸಂಘದ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಅಂತಿಮವಾಗಿ ಚೇತನ್ ಕುಮಾರ್ ವಂದಿಸಿದರು.






