ಲಯನ್ಸ್ ಇಂಟರ್‌ನ್ಯಾಷನಲ್ ಡಿಸ್ಟ್ರಿಕ್ಟ್ 317C ಹಾಗೂ ಲಯನ್ಸ್ ಕ್ಲಬ್ ಉಡುಪಿ ಇಂದ್ರಾಳಿ ಮತ್ತು ಲಯನ್ಸ್ ಕ್ಲಬ್ ಉಡುಪಿ ಅಮೃತ ಇವರ ಸಂಯುಕ್ತ ಆಶ್ರಯದಲ್ಲಿ ಈದ್ ಸ್ನೇಹ ಸಮಾರಂಭವು ನಗರದ ಅಮೃತ ಗಾರ್ಡನ್‌ನಲ್ಲಿ ಮಂಗಳವಾರ ಸಂಜೆ ಸೌಹಾರ್ದತೆಯ ವಾತಾವರಣದಲ್ಲಿ ನೆರವೇರಿತು.

ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿದ್ದ ಡಿಸ್ಟ್ರಿಕ್ಟ್ ಗವರ್ನರ್ ಲಯನ್ ಸಪ್ನಾ ಸುರೇಶ್ ಅವರು ಮಾತನಾಡಿ, ಈದ್ ಹಬ್ಬವು ಸಹಾನುಭೂತಿ, ಸಹಬಾಳ್ವೆ ಮತ್ತು ಹಂಚಿಕೆಯ ಸಂದೇಶವನ್ನು ನೀಡುತ್ತದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಅಬಿದ್ ಗದ್ಯಾಲ್ ಮಾತನಾಡಿ, “ವಿವಿಧತೆಯಲ್ಲಿ ಏಕತೆಯನ್ನು ತೋರಿಸುವುದು ನಮ್ಮ ದೇಶದ ಶಕ್ತಿ. ಈ ಏಕತೆಯನ್ನು ಕಾಪಾಡಿಕೊಂಡು ಹೋಗುವುದೇ ದೇಶದ ಅಭಿವೃದ್ಧಿಗೆ ಮೂಲಾಧಾರ. ಪ್ರತಿಯೊಬ್ಬರೂ ಸಮಾಜ ಹಾಗೂ ದೇಶಕ್ಕೆ ಕೊಡುಗೆ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು” ಎಂದು ಹೇಳಿದರು.

ಈದ್ ಸಂದೇಶ ನೀಡಿದ ಮಲ್ಪೆಯ ಅಬುಬಕರ್ ಸಿದ್ದಿಕ್ ಮಸೀದಿಯ ಇಮಾಮರಾದ ಮೌಲಾನಾ ಇಮ್ರಾನುಲ್ಲಾ ಖಾನ್ ಮನ್ಸೂರಿ ಅವರು, ಈದುಲ್ ಫಿತರ್ ಹಬ್ಬದ ಹಿನ್ನಲೆ, ಅದರ ಧಾರ್ಮಿಕ ಮಹತ್ವ ಹಾಗೂ ಮಾನವೀಯ ಮೌಲ್ಯಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಕರಣಾಕರ ಎಂ. ಶೆಟ್ಟಿ (ವಿ.ಕೆ. ಡೆವಲಪರ್ಸ್) ಹಾಗೂ ಉದ್ಯಾವರದ ಡಾ. ಶೈಖ್ ವಹಿದ್ ದಾವೂದ್ (ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು 2025-26) ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪ್ರಥಮ ಉಪ ಜಿಲ್ಲಾ ಗವರ್ನರ್ ಲಯನ್ ರಾಜೀವ್ ಕೋಟಿಯನ್ ಹಾಗೂ ದ್ವಿತೀಯ ಉಪ ಜಿಲ್ಲಾ ಗವರ್ನರ್ ಲಯನ್ ಹರಿಪ್ರಸಾದ್ ರೈ ಅವರನ್ನು ಗೌರವಿಸಲಾಯಿತು.
ಜಿಲ್ಲಾ ಕ್ಯಾಬಿನೆಟ್ ಕಾರ್ಯದರ್ಶಿ ಲಯನ್ ಶಾಲಿನಿ ಬಂಗೇರಾ, ಖಜಾಂಚಿ ಲಯನ್ ವೈ. ಶಶಿಧರ್ ಶೆಟ್ಟಿ, ಅಧ್ಯಕ್ಷರಾದ ಲಯನ್ ದಿವಾಕರ್ ಸನಿಲ್ (ಉಡುಪಿ ಇಂದ್ರಾಳಿ) ಹಾಗೂ ಲಯನ್ ಗೋಪಾಲ್ ಅಂಚನ್ (ಉಡುಪಿ ಅಮೃತ) ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಲಯನ್ಸ್ ಕ್ಲಬ್ ಜಿಲ್ಲಾ ಈದ್ ಮುಖ್ಯ ಸಂಯೋಜಕರಾದ ಲಯನ್ ಮಹಮ್ಮದ್ ಮೌಲಾ, ಲಯನ್ ಇಕ್ಬಾಲ್ ಶಂಶುದ್ದೀನ್, ಸಂಯೋಜಕರಾದ ಲಯನ್ ಕೋಟಾ ಇಬ್ರಾಹಿಂ ಸಾಹೇಬ್, ಲಯನ್ ನಾಸಿರ್ ಹುಸ್ಸೇನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲಯನ್ ರವಿರಾಜ್ ಕಾರ್ಯಕ್ರಮ ನಿರೂಪಿಸಿದರು.
ಸೌಹಾರ್ದ ಗೀತೆಯೊಂದಿಗೆ ಬಶೀರ್ ಉಸ್ತಾದ್ ನೇತೃತ್ವದ ಮಜೂರ್ ದಫ್ ತಂಡದ ಸಾಂಸ್ಕೃತಿಕ ಕಾರ್ಯಕ್ರಮ ವಿಶೇಷ ಆಕರ್ಷಣೆಯವಾಗಿತ್ತು.





