ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಮತ್ತು ದೇಶಪ್ರೇಮವನ್ನು ಈ ಪವಿತ್ರ ದಿನದಂದು ಗೌರವದಿಂದ ಸ್ಮರಿಸೋಣ. ಅವರ ಆದರ್ಶಗಳು ಹಾಗೂ ದೇಶಭಕ್ತಿಯ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು, ದೇಶದ ಏಕತೆ ಮತ್ತು ಅಖಂಡತೆಯನ್ನು ಮತ್ತಷ್ಟು ಬಲಪಡಿಸೋಣ.
ಭಾರತದ ಪ್ರಗತಿ, ಶಾಂತಿ, ಸೌಹಾರ್ದತೆ ಮತ್ತು ಸಮೃದ್ಧಿಗಾಗಿ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡುವ ಸಂಕಲ್ಪ ಮಾಡೋಣ. ಜಾತಿ, ಧರ್ಮ, ಭಾಷೆ ಮತ್ತು ಭೇದಭಾವಗಳನ್ನು ಮೀರಿ ನಾವೆಲ್ಲರೂ ಒಂದಾಗಿ ಬಲಿಷ್ಠ ಹಾಗೂ ಅಭಿವೃದ್ಧಿಶೀಲ ಭಾರತವನ್ನು ನಿರ್ಮಿಸೋಣ. ನಾಡಿನ ಸಮಸ್ತ ಜನತೆಗೆ 80ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

ಕೋಟ ನಾಗೇಂದ್ರ ಪುತ್ರನ್
ಕರ್ನಾಟಕ ಸೇವಾ ಶ್ರೇಷ್ಠ ರತ್ನ ಪುರಸ್ಕೃತರು,
ಸಾಮಾಜಿಕ ಹೋರಾಟಗಾರರು ಮತ್ತು ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರು






