ಪ್ರಜಾಪ್ರಭುತ್ವದ ಬಲಿಷ್ಠ ವ್ಯವಸ್ಥೆಗೆ ಶುದ್ಧ ಮತ್ತು ನಿಖರವಾದ ಮತದಾರರ ಪಟ್ಟಿ ಅತ್ಯಗತ್ಯ. ಈ ನಿಟ್ಟಿನಲ್ಲಿ ನಡೆಯುವ ಎಸ್‌ಐಆರ್ (Special Intensive Revision) ಪ್ರಕ್ರಿಯೆ ಪ್ರತಿಯೊಬ್ಬ ನಾಗರಿಕನಿಗೂ ಮಹತ್ವದ್ದಾಗಿದೆ.
ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸರಿಯಾಗಿದೆಯೇ ಎಂದು ಪರಿಶೀಲಿಸುವುದು, ಹೊಸ ಹೆಸರು ಸೇರ್ಪಡೆ ಮಾಡುವುದು, ತಪ್ಪುಗಳನ್ನು ತಿದ್ದಿಸುವುದು ಹಾಗೂ ಅಗತ್ಯ ದಾಖಲೆಗಳನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.
ಈ ಬಗ್ಗೆ ಎಸ್‌ವೈಎಸ್‌ನ ಸರ್ವ ಕಾರ್ಯಕರ್ತರು ಹಾಗೂ ಮೊಹಲ್ಲಾಗಳಲ್ಲಿ ಜಾಗೃತಿ ಮೂಡಿಸಿ, ಜನರಿಗೆ ಅಗತ್ಯ ಮಾಹಿತಿಗಳನ್ನು ತಲುಪಿಸಿ, ಪ್ರಜಾಪ್ರಭುತ್ವದ ಬಲವರ್ಧನೆಗಾಗಿ ಕಾರ್ಯ ಪ್ರವರ್ತಕರಾಗುವಂತೆ ವಿನಂತಿಸಿಕೊಳ್ಳಲಾಗುತ್ತದೆ.
ಮೇ 24 ಆದಿತ್ಯವಾರ ಉಡುಪಿ ಮಣಿಪಾಲ ಇನ್ ಹೋಟೆಲ್ ನಲ್ಲಿ ನಡೆದ ಎಸ್ ವೈ ಎಸ್ ರಾಜ್ಯ ಕೌನ್ಸಿಲ್ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು
ರಾಜ್ಯಾಧ್ಯಕ್ಷ ಬಶೀರ್ ಸಅದಿ ಬೆಂಗಳೂರು ಅಧ್ಯಕ್ಷತೆ ವಹಿಸಿದ್ದ ಕೌನ್ಸಿಲನ್ನು ಅಸ್ಸಯ್ಯಿದ್ ಜಾಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ ಉದ್ಘಾಟಿಸಿದರು, ಕೇರಳ ರಾಜ್ಯ ಕಾರ್ಯದರ್ಶಿ ಅಬ್ದುರ್ರಶೀದ್ ಮಾಸ್ಟರ್ ಅರಿಕ್ಕೋಡು ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ ಎಮ್ ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ ವಿಷಯ ಮಂಡಿಸಿದರು
ರಾಜ್ಯ ಮಾಜಿ ಅಧ್ಯಕ್ಷ ಎಮ್ ವೈ ಅಬ್ದುಲ್ ಹಫೀಳ್ ಸಅದಿ ಕೊಡಗು ಉಪಾಧ್ಯಕ್ಷರುಗಳಾದ ಸಯ್ಯಿದ್ ಇಲ್ಯಾಸ್ ತಂಙಳ್ ಕೊಡಗು, ಶಾಫಿ ನಯೀಮಿ ತಂಙಳ್ ಹಾಸನ, ಅಬೂಬಕ್ಕರ್ ಸಿದ್ದೀಕ್ ತಂಙಳ್ ಶಿವಮೊಗ್ಗ, ಅನಸ್ ಸಿದ್ದೀಖಿ ಬೆಂಗಳೂರು, ಅಶ್ರಫ್ ಸಖಾಫಿ ಪುತ್ತೂರು, ಮಹ್ಬೂಬ್ ಸಖಾಫಿ ಮಂಗಳೂರು, ಉಸ್ಮಾನ್ ಚಿಕ್ಕಮಗಳೂರು ಮಾತನಾಡಿದರು
ಮುಹಮ್ಮದ್ ಅಲಿ ಸಖಾಫಿ ಅಶ್ಅರಿಯ್ಯ , ಹಸೈನಾರ್ ಆನೆಮಹಳ್, ಶಾಹುಲ್ ಹಮೀದ್ ಮದದಿ, ಆಸಿಫ್ ಕ್ರಷ್ಣಾಪುರ, ಹಂಝ ಮದನಿ ಬೆಳ್ತಂಗಡಿ , ಅಬ್ದುಲ್ ಲತೀಫ್ ಫಾಳಿಲಿ ನಾವುಂದ ಅಡ್ವೋಕೇಟ್ ಹಂಝತ್, ಅಡ್ವೋಕೇಟ್ ಇಲ್ಯಾಸ್ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ ನೂರಾರು ಕೌನ್ಸಿಲರ್ ಗಳು ಭಾಗವಹಿಸಿದ್ದರು
ರಾಜ್ಯ ಕೋಶಾಧಿಕಾರಿ ಮುಹಮ್ಮದ್ ಮನ್ಸೂರು ಶಿವಮೊಗ್ಗ ಸ್ವಾಗತಿಸಿದರು ಸಂಘಟನಾ ಮುಖ್ಯಸ್ಥ ಕೆ ಎ ಅಬ್ದುರ್ರಹ್ಮಾನ್ ರಝ್ವಿ ಅಲ್ ಫುರ್ಖಾನಿ ಕಲ್ಕಟ್ಟ ಕಾರ್ಯಕ್ರಮ ನಿರೂಪಿಸಿದರು,ಸಾಂತ್ವನ ವಿಭಾಗದ ನಾಯಕ ಖಲೀಲ್ ಮಾಲಿಕಿ ಧನ್ಯವಾದವಿತ್ತರು.





