ವಿಜಯಪುರ | ವಿದ್ಯಾರ್ಥಿಗಳ ಹಾಜರಾತಿ ರಾಜಕೀಯಗೊಳಿಸದಿರಿ: ಎಂ.ಸಿ ಮುಲ್ಲಾ

Date:

ವಿದ್ಯಾರ್ಥಿಗಳ ಹಾಜರಾತಿಯಲ್ಲಿ ಜೈ ಭೀಮ, ಅಲ್ಲಾಹು ಅಕ್ಬರ್‌, ಜೈ ಸಂಗೊಳ್ಳಿ ರಾಯಣ್ಣ ಎನ್ನಬೇಕು ಎಂದು ಕರೆಕೊಟ್ಟರೆ ಈ ವಿಚಾರ ಎಲ್ಲಿಗೆ ತಲುಪಲಿದೆ ಎಂಬುದನ್ನು ಯತ್ನಾಳ ಯೋಚಿಸಬೇಕು. ವಿದ್ಯಾರ್ಥಿಗಳ ಹಾಜರಾತಿಯನ್ನು ರಾಜಕೀಯಗೊಳಿಸದಿರಿ ಎಂದು ಕಾಂಗ್ರೆಸ್ ಮುಖಂಡ ಎಂ ಸಿ ಮುಲ್ಲಾ ಹೇಳಿದರು.

- Advertisement -

ವಿಜಯಪುರ ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕೇಸರಿ ಶಾಲು ಹೊದಿಸಿ, ಜೈ ಶ್ರೀರಾಮ ಎಂದು ಹೇಳಿಸುವುದಾದರೆ ಯತ್ನಾಳರು ಮೊದಲು ತಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಅದನ್ನು ಆರಂಭಿಸಲಿ. ಸದಾ ಮುಸ್ಲಿಂ ಜನಾಂಗವನ್ನು ಟೀಕೆ ಮಾಡುವ ಯತ್ನಾಳ್‌, ಧರ್ಮದ ಕುರಿತು ಅಷ್ಟು ಅಭಿಮಾನವಿದ್ದರೆ ತಮ್ಮ ಬ್ಯಾಂಕಿಗೆ, ಆಸ್ಪತ್ರೆಗೆ, ಹೈಪರ್ ಮಾರ್ಟ್‌ಗಳಿಗೆ ಹಿಜಾಬ್ ಮತ್ತು ಟೋಪಿ ಧರಿಸಿದವರು, ದಾಡಿ ಬಿಟ್ಟವರಿಗೆ ಅನುಮತಿ ಇಲ್ಲ ಎಂದು ಬೋರ್ಡ್ ಹಾಕಲಿ ” ಎಂದು ಸವಾಲೆಸೆದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಭದ್ರಾವತಿ | ಕಲುಷಿತ ಕುಡಿಯುವ ನೀರು ಸರಬರಾಜು; ರೋಗಭೀತಿಯಲ್ಲಿ...

ಭದ್ರಾವತಿ ತಾಲೂಕಿನ ಶಿವರಾಮನಗರ ಗ್ರಾಮದಲ್ಲಿ ನಗರಸಭೆ ಕಲುಷಿತ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿರುವುದು ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಷಯದಲ್ಲಿ ನಗರಸಭೆ ಆಡಳಿತ ಮತ್ತು ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತಿರುವುದಾಗಿ ಸ್ಥಳೀಯರು...

15 ವರ್ಷಗಳಿಂದ ಪ್ಲಾಸ್ಟಿಕ್‌ ದೂರವಿಟ್ಟ ಗ್ರಾಮ; ನಮ್ಮೂರಿಗೂ ಇದು...

ಒಂದು ಗ್ರಾಮವೆಂದರೆ, ಇಂದಿಗೂ ಮಣ್ಣಿನ ರಸ್ತೆಗಳು, ಕಚ್ಚಾ ಮನೆಗಳು, ಹೊಲ-ಗದ್ದೆಗಳು ಮಾತ್ರ ನೆನಪಾಗುತ್ತವೆ. ಅಲ್ಲಿನ ಜನರ ಬದುಕಿನ ಶಿಸ್ತು, ಸಾರ್ವಜನಿಕ ಸ್ಥಳಗಳ ಮೇಲಿನ ಅವರ ಹೊಣೆಗಾರಿಕೆ ಮತ್ತು ಮುಂದಿನ ಪೀಳಿಗೆಯ ಬಗ್ಗೆ ಇರುವ...

ʼಹಿಂದೆ ಸರಿಯುವ ಮಾತೇ ಇಲ್ಲʼ; ದೆಹಲಿ ಬೀದಿಗಳಲ್ಲಿ ಅಬ್ಬರಿಸುತ್ತಿರುವ...

ಚುನಾವಣಾ ಆಯೋಗದ (ECI) ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಮತ್ತು CEC ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ INDIA ಬ್ಲಾಕ್ ಸಂಸತ್ ಸದಸ್ಯರು ದೆಹಲಿ ಬೀದಿಗಳಲ್ಲಿ ಬೃಹತ್‌ ಪ್ರತಿಭಟನೆ ನಡೆಸುತ್ತಿದ್ದಾರೆ. ಯುವಕರು...

“ಶಾಲಾ ಸಮವಸ್ತ್ರದ ವಿಚಾರದಲ್ಲಿ ಸಾಂಪ್ರದಾಯಿಕ ಉಡುಗೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ರಾಜ್ಯ ಸರ್ಕಾರ ಈಗಾಗಲೇ ಸ್ಪಷ್ಟನೆ ನೀಡಿದೆ. ಆದರೆ, ಯತ್ನಾಳ್‌ ಒಬ್ಬ ಜನಪ್ರತಿನಿಧಿಯಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಹಂಚುತ್ತೇನೆ ಎಂದು ಹೇಳುವುದು, ಹಾಜರಾತಿ ಕರೆಯುವ ವೇಳೆ ವಿದ್ಯಾರ್ಥಿಗಳೆಲ್ಲ ಜೈ ಶ್ರೀರಾಮ್ ಎನ್ನಬೇಕು ಎಂದು ಕರೆಗೊಡುವುದು ಬೇಜವಬ್ದಾರಿತನದ ಲಕ್ಷಣ” ಎಂದು ಖಂಡಿಸಿದರು.

“ಹಣ ಬರುವ ಕಡೆಗಳಲ್ಲಿ ಇವರಿಗೆ ವ್ಯಾಪಾರ, ವಹಿವಾಟಿಗಾಗಿ ಮುಸಲ್ಮಾನರ ಅಗತ್ಯವಿದೆ ಹಾಗಾಗಿ ಸುಮ್ಮನಿರುತ್ತಾರೆ. ವ್ಯವಹಾರ ವ್ಯಾಪಾರದ ಸಲ್ಲಾಪವಿರದೆಡೆ ಕೇವಲ ಚಪ್ಪಾಳೆ ಗಿಟ್ಟಿಸಿಕೊಳ್ಳುವ ಸಲುವಾಗಿ ಒಬ್ಬರಿಗೊಬ್ಬರನ್ನು ಎತ್ತಿಕಟ್ಟುತ್ತಾರೆ. ಯತ್ನಾಳರ ಈ ರಾಜಕೀಯ ಲಾಭದ ಭಾಷಣದ ಕುರಿತು ಜನತೆ ಹಾಗೂ ವಿಧ್ಯಾರ್ಥಿಗಳು ಕಿವಿಗೊಡಬಾರದು” ಎಂದರು.

ಇನ್ನು ನಗರದಲ್ಲಿ ಮತದಾರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ನಡೆಯಲಿದ್ದು, ಎಸ್.ಐ.ಆರ್ ಪ್ರಕಾರ ವಾರ್ಡ್‌ಗಳಲ್ಲಿ ಅನಧಿಕೃತವಾಗಿ ಸಿದ್ದಸಿರಿ ಸೌಹಾರ್ದದ ನೌಕರರನ್ನು ನೇಮಕ ಮಾಡಲಾಗಿದ್ದು, 35 ವಾರ್ಡ್‌ಗಳಲ್ಲಿ ಮತದಾರರ ಪಟ್ಟಿ ಮ್ಯಾಪಿಂಗ್ ಕೆಲಸಕ್ಕೆ ಸಿದ್ಧಸಿರಿಯ 15ಕ್ಕೂ ಅಧಿಕ ನೌಕರರನ್ನು ನೇಮಿಸಿದ್ದಾರೆ ಅವರು ಬಿ.ಎಲ್.ಒ ಗಳಿಗೆ ತೊಂದರೆ ಕೊಡುತ್ತಿದ್ದಾರೆ ಎಂಬ ಆರೋಪವಿದ್ದು ಜಿಲ್ಲಾಧಿಕಾರಿಗಳು, ಚುನಾವಣಾಧಿಕಾರಿಗಳು, ತಹಶಿಈಲ್ದಾರರು ಇಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಹಾದೇವ ರಾವಜಿ, ಫಯಾಜ್ ಕಲದಗಿ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭದ್ರಾವತಿ | ಕಲುಷಿತ ಕುಡಿಯುವ ನೀರು ಸರಬರಾಜು; ರೋಗಭೀತಿಯಲ್ಲಿ ಗ್ರಾಮಸ್ಥರು

ಭದ್ರಾವತಿ ತಾಲೂಕಿನ ಶಿವರಾಮನಗರ ಗ್ರಾಮದಲ್ಲಿ ನಗರಸಭೆ ಕಲುಷಿತ ಕುಡಿಯುವ ನೀರನ್ನು ಸರಬರಾಜು...

ವಿಜಯಪುರ | ಕೆ-ಸೆಟ್ ಪರೀಕ್ಷೆ ಪಾರದರ್ಶಕತೆಗೆ ಕಟ್ಟುನಿಟ್ಟಿನ ಕ್ರಮ: ಡಾ. ಔದ್ರಾಮ

ಅ. 11ರಂದು ನಡೆಯಲಿರುವ ಕೆ-ಸೆಟ್ ಪರೀಕ್ಷೆಯನ್ನು ಪಾರದರ್ಶಕ ಹಾಗೂ ಅಚ್ಚುಕಟ್ಟಾಗಿ ನಡೆಸಲು...

15 ವರ್ಷಗಳಿಂದ ಪ್ಲಾಸ್ಟಿಕ್‌ ದೂರವಿಟ್ಟ ಗ್ರಾಮ; ನಮ್ಮೂರಿಗೂ ಇದು ಸಾಧ್ಯವಲ್ಲವೇ?

ಒಂದು ಗ್ರಾಮವೆಂದರೆ, ಇಂದಿಗೂ ಮಣ್ಣಿನ ರಸ್ತೆಗಳು, ಕಚ್ಚಾ ಮನೆಗಳು, ಹೊಲ-ಗದ್ದೆಗಳು ಮಾತ್ರ...

ಕ್ಯಾನ್ಸರ್ ರೋಗಿಗಳಿಗೆ ಗುಡ್‌ನ್ಯೂಸ್‌; ದುಬಾರಿ ಔಷಧಗಳ ಬೆಲೆ ಶೇ.70ರವರೆಗೆ ಇಳಿಕೆ?

ದೇಶದಲ್ಲಿ ದುಬಾರಿಯಾಗಿರುವ ಕೆಲವು ಕ್ಯಾನ್ಸರ್ ಔಷಧಗಳ ಬೆಲೆ ಶೀಘ್ರದಲ್ಲೇ ಭಾರಿ ಪ್ರಮಾಣದಲ್ಲಿ...