ವಿಜಯಪುರ | ಮುಳುಗಡೆ ಪ್ರದೇಶದ ಜಮೀನಿನಲ್ಲಿ ಘನತ್ಯಾಜ್ಯ ಘಟಕ ನಿರ್ಮಾಣಕ್ಕೆ ರೈತರ ಆಕ್ಷೇಪ

Date:

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಸಮೀಪದ ಮುಳುಗಡೆ ಪ್ರದೇಶ ಹಳೇ ಸಿದ್ದಾಪುರ ಭಾಗದಲ್ಲಿ ರೈತರ ಮಾಲ್ಕಿ ಜಮೀನು ಅತಿಕ್ರಮಿಸಿ ನಾಲತವಾಡ ಪಟ್ಟಣ ಪಂಚಾಯತಿಯವರು ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ರೈತರು ಸ್ಥಳಕ್ಕೆ ತೆರಳಿ ವಿವಾದ ಇತ್ಯರ್ಥಗೊಳ್ಳುವವರೆಗೂ ಘಟಕ ನಿರ್ಮಾಣ ಕಾಮಗಾರಿ ನಿಲ್ಲಿಸುವಂತೆ ಒತ್ತಾಯಿಸಿದರು.

- Advertisement -

“ನಮಗೆ ಇರುವುದೇ ಸ್ವಲ್ಪ ಜಮೀನು. ಅದರಲ್ಲೇ ಬೇಸಾಯ ಮಾಡಿ ಬದುಕು ಕಟ್ಟಿಕೊಂಡಿದ್ದೇವೆ. ಈಗ ಅದರಲ್ಲಿಯೂ ಕಾಲು ಭಾಗ ಸರ್ಕಾರದ ಹೆಸರಿನಲ್ಲಿ ನಮ್ಮಿಂದ ಕಸಿದುಕೊಂಡರೆ ಬದುಕಿಗೆ ಏನು ಮಾಡಬೇಕು. ನಮಗೆ ನ್ಯಾಯ ಬೇಕು. ಇದಕ್ಕಾಗಿ ನಾವು ಯಾವ ಹಂತಕ್ಕೆ ಹೋಗಲು ಸಿದ್ದರಿದ್ದೇವೆ. ಸರ್ವೆಯ ಅಂತಿಮ ವರದಿ ಬರುವವರೆಗೂ ಘಟಕದ ಕೆಲಸ ನಿಲ್ಲಿಸಿ” ಎಂದು ಆಗ್ರಹಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

“ಮುದ್ದೇಬಿಹಾಳದಿಂದ ಸರ್ವೇಯರುಗಳು ಆಗಮಿಸಿ ಸರ್ವೇ ಕಾರ್ಯ ನಡೆಸುತ್ತಿದ್ದುದನ್ನು ಗಮನಿಸಿದ ರೈತರು ಈಗಾಗಲೇ ಸರ್ವೇಯರುಗಳು ನಮ್ಮ ಮಾಲ್ಕಿ ಜಮೀನಿನ ಹದ್ದುಬಸ್ತು ಗುರ್ತಿಸಿ ಕಲ್ಲುಗಳನ್ನು ನೆಟ್ಟಿದ್ದಾರೆ. ನಮ್ಮ ಜಮೀನನ್ನು ಘಟಕ ನಿರ್ಮಾಣಕ್ಕೆ ಪಪಂನವರು ಅತಿಕ್ರಮಿಸಿರುವುದು ಖಚಿತವಾಗಿದೆ. ಹೀಗಿರುವಾಗ ಮತ್ತೊಮ್ಮೆ ಏಕೆ ಸರ್ವೆ ನಡೆಸುತ್ತಿದ್ದೀರಿ” ಎಂದು ಆಕ್ಷೇಪಿಸಿದರು.

“ಪಪಂ ಮುಖ್ಯಾಧಿಕಾರಿ ರೈತರ ಸರ್ವೆ ಅರ್ಜಿಗೆ ತಕರಾರು ದಾಖಲಿಸಿ ಮತ್ತೊಮ್ಮೆ ಸರ್ವೆ ನಡೆಸುವಂತೆ ಕೋರಿ ಪತ್ರ ಬರೆದಿದ್ದರಿಂದ ಈ ಕಾರ್ಯ ನಡೆಸಲಾಗುತ್ತಿದೆ. ಮೊದಲಿನ ಸರ್ವೇಯರ್ ಕೂಡ ನಮ್ಮ ಜೊತೆ ಬಂದಿದ್ದಾರೆ. ಸರ್ವೆ ನಂಬರ್ 92ರಲ್ಲಿ ಸರ್ಕಾರದ ಜಮೀನು ಇದೆ. ಸರ್ವೆ ನಂಬರ್ 93ರಲ್ಲಿ ಖಾಸಗಿ ಮಾಲೀಕತ್ವದ ರೈತರ ಜಮೀನು ಇದೆ. ಇವೆರಡನ್ನೂ ಸರ್ವೆ ಮಾಡಿದ್ದೇವೆ. ವರದಿಯನ್ನು ಮೇಲಧಿಕಾರಿಗೆ ಸಲ್ಲಿಸುತ್ತೇವೆ. ಅವರು ಅಂತಿಮ ತೀರ್ಮಾನ ಪ್ರಕಟಿಸುತ್ತಾರೆ” ಎಂದು ಸರ್ವೇ ಸುಪರ್ವೈಸರ್‌ ಹಜೇರಿ ಸ್ಪಷ್ಟಪಡಿಸಿದರು.‌

ಇದನ್ನೂ ಓದಿ: ವಿಜಯಪುರ | ಸಕ್ಕರೆ ದರ ನಿಗದಿಗೆ ವಿಳಂಬ ಬೇಡ: ಡಿಸಿ ಆನಂದ

ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿಯವರು ತಹಶೀಲ್ದಾ‌ರ್, ಕಂದಾಯ ನಿರೀಕ್ಷಕರು ಸರ್ವೇ ನಡೆಸಿ ಕೊಟ್ಟ ನಕ್ಷೆ ಸಹಿತ ದಾಖಲೆ ಪರಿಗಣಿಸಿ ಘಟಕ ನಿರ್ಮಾಣ ಕಾರ್ಯ ಆರಂಭಿಸಿದ್ದೇವೆ. ಇದರಲ್ಲಿ ನಮ್ಮದೇನೂ ತಪ್ಪಿಲ್ಲ ಎಂದು ಜಾರಿಕೊಳ್ಳಲು ಯತ್ನಿಸಿದರು.

ಗ್ರಾಮಸ್ಥರಾದ ಶಿವರುದ್ರಯ್ಯ ಹಿರೇಮಠ, ಸಂಗಪ್ಪ ಹವಲ್ದಾರ, ಪರಸಪ್ಪ ಸುಲ್ತಾನಪುರ, ಈರಪ್ಪ ಸುಲ್ತಾನಪುರ, ಬಸವರಾಜ ಲೋಟಗೇರಿ, ಅಂಬ್ರಪ್ಪ ಕರೀಭಾವಿ, ಶಿವಾನಂದ ಉಂಡಿ, ಯಮನಪ್ಪ ಕೋಟಿ, ಮಹಾಂತಪ್ಪ ಹಾವರಗಿ, ಬಸವರಾಜ ಅಂಗಡಿ, ಶಿವು ಅಂಗಡಿ, ಈರಪ್ಪ ಪತ್ತೆಪುರ, ಬಸಪ್ಪ ಪತೇಪುರ, ಪ್ರಭು ಪತ್ತೇಪುರ, ಮಹಾಂತೇಶ ಪಟ್ಟಣದ, ಈರಪ್ಪ ಕೋಟಿ, ಚಂದ್ರಶೇಖರ ಪಾಟೀಲ, ಜಗದೇವಪ್ಪ ಕೋಟಿ, ಮಲ್ಲಪ್ಪ ಪತ್ತೆಪುರ, ಅಮರೇಗೌಡ ಪಾಟೀಲ, ಅಂಬರೀಷ್ ಚಿತ್ತಾಪುರ, ಚನ್ನಪ್ಪ ಲೊಟಗೇರಿ, ಸಂಗಪ್ಪ ಪತ್ತೆಪುರ ಇನ್ನಿತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆಡಳಿತದಲ್ಲಿ ಪಾರದರ್ಶಕತೆಗೆ ಮಾಹಿತಿ ಹಕ್ಕು ಕಾಯ್ದೆ ಪ್ರಮುಖ ಅಸ್ತ್ರ: ಹಣಮಂತ ಶಿಂದೆ

ಮಾಹಿತಿ ಹಕ್ಕು ಕಾಯ್ದೆಯ ಪರಿಣಾಮಕಾರಿ ಬಳಕೆ, ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಸಾಮಾಜಿಕ...

ಯತ್ನಾಳ್ ವಿರುದ್ಧ ಹೊರ್ತಿ ವಾಗ್ದಾಳಿ; ಅರ್ಜಿ ವಾಪಸ್ ಪಡೆದ ಹಿಂದಿನ ಸತ್ಯ ಬಹಿರಂಗಪಡಿಸಲು ಸವಾಲು

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬರೆದಿರುವ...

ಆರೋಗ್ಯ ಸುರಕ್ಷತೆಗೆ ಆದ್ಯತೆ ನೀಡಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

ಕೊಡಗು ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಅಗತ್ಯ...

ಉಡುಪಿ | ಯುವಜನರೇ, ನಿರಂತರ ಪರಿಶ್ರಮದಿಂದ ಯಶಸ್ಸಿನ ಮೆಟ್ಟಿಲೇರಿ: ಪ್ರಕಾಶ್ ಶೆಟ್ಟಿ

ಯುವಜನರು ನಿರಂತರ ಪ್ರಯತ್ನದ ಮೂಲಕ ಜೀವನದಲ್ಲಿ ಒಂದೊಂದೇ ಮೆಟ್ಟಿಲು ಏರುತ್ತಾ ಸಾಗಿದರೆ...