ವಿಜಯಪುರ |ವಿದ್ಯುತ್ ಕಿಡಿಗೆ ಸುಟ್ಟುಕರಕಲಾದ 10 ಎಕರೆ ಕಬ್ಬು

Date:

ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ತಿಂಗಳುಗಟ್ಟಲೆ ಬೆವರು ಸುರಿಸಿ ಬೆಳೆದಿದ್ದ ಕಬ್ಬು ಕಟಾವಿಗೆ ಸಿದ್ಧವಾಗಿದ್ದ ಹೊತ್ತಿನಲ್ಲೇ ವಿದ್ಯುತ್ ಅವಘಡ ರೈತರ ಬದುಕಿಗೆ ಬೆಂಕಿಯಿಟ್ಟಿದೆ. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ದಾಸೂರ ಗ್ರಾಮದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 10 ಎಕರೆಗೂ ಅಧಿಕ ಪ್ರದೇಶದ ಕಬ್ಬಿನ ಬೆಳೆ ಸುಟ್ಟು ಭಸ್ಮವಾಗಿದ್ದು, ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ.

- Advertisement -

ಶನಿವಾರ ಸಂಜೆ ರೈತರ ಜಮೀನಿನಲ್ಲಿ ವಿದ್ಯುತ್ ಸ್ಪರ್ಶದಿಂದ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲೇ ಒಣಗಿದ ಕಬ್ಬಿನ ಎಲೆಗಳಿಗೆ ವ್ಯಾಪಿಸಿದ ಬೆಂಕಿ ಇಡೀ ಕಬ್ಬಿನ ಗದ್ದೆಯನ್ನು ಆವರಿಸಿದೆ. ಮಹೇಶ ರೇವಪ್ಪ ಅಂಕಲಗಿ, ಸತೀಶ ನಾರಾಯಣ ಸೀತೋಳೆ ಹಾಗೂ ಮನೋಜ್ ಕುಮಾರ್ ಸೀತೋಳೆ ಅವರಿಗೆ ಸೇರಿದ ಜಮೀನಿನ ಕಟಾವಿಗೆ ಬಂದಿದ್ದ ಕಬ್ಬು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಂಪೂರ್ಣ ನಾಶವಾಗಿದೆ.ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಸ್ಥಳೀಯರು ಅದನ್ನು ನಿಯಂತ್ರಿಸಲು ಹರಸಾಹಸಪಟ್ಟಿದ್ದಾರೆ. ಬೆಂಕಿ ನಂದಿಸುವ ಪ್ರಯತ್ನದ ನಡುವೆಯೇ ಟ್ರ್ಯಾಕ್ಟರ್ ಕೂಡ ಬೆಂಕಿಗೆ ಆಹುತಿಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಒಬಿಸಿ ಮೀಸಲಾತಿ ಮತ್ತು ಕೆನೆಪದರ: ಸುಪ್ರೀಂನ ಮಾರ್ಚ್ ತೀರ್ಪಿನ...

ಒಬಿಸಿ ಮೀಸಲಾತಿ ಸೌಲಭ್ಯ ಪಡೆಯಲು 'ಕೆನೆಪದರ' ನಿರ್ಧರಿಸುವಾಗ ಕೇವಲ ಪೋಷಕರ ವಾರ್ಷಿಕ ವೇತನವನ್ನೇ ಏಕೈಕ ಮಾನದಂಡವಾಗಿ ಪರಿಗಣಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ಮಾರ್ಚ್ ತೀರ್ಪನ್ನು ಪುನರುಚ್ಚರಿಸಿದೆ. 1993ರ ಮೂಲ ನಿಯಮಗಳೇನು? ಕೆಳಹಂತದ...

ಮೈಕ್ರೋಸಾಫ್ಟ್‌ ಸರ್ವರ್ ಕ್ರಾಶ್; ತಲ್ಲಣಗೊಂಡ ಆನ್‌ ಲೈನ್‌ ಜಗತ್ತು!

ಆಧುನಿಕ ಕಚೇರಿ ವ್ಯವಹಾರ ಮತ್ತು ಡಿಜಿಟಲ್ ಸಂವಹನದ ಬೆನ್ನೆಲುಬಂತಿರುವ ತಂತ್ರಜ್ಞಾನ ದೈತ್ಯ ಮೈಕ್ರೋಸಾಫ್ಟ್‌ನ ಸರ್ವರ್‌ಗಳಲ್ಲಿ ಕಾಣಿಸಿಕೊಂಡ ಅನಿರೀಕ್ಷಿತ ತಾಂತ್ರಿಕ ದೋಷವು ಜಾಗತಿಕ ಮಟ್ಟದಲ್ಲಿ ಭಾರಿ ಅಲ್ಲೋಲಕಲ್ಲೋಲ ಸೃಷ್ಟಿಸಿದೆ. ಗುರುವಾರ (ನವೆಂಬರ್ 12) ಸಂಜೆಯಿಂದ...

ಸ್ಮರಣೆ | ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೇ ಜೈಲುಶಿಕ್ಷೆ ವಿಧಿಸಿ,...

ನ್ಯಾಯಮೂರ್ತಿಗಳ ವಿರುದ್ಧ ಜಾತಿ ತಾರತಮ್ಯದ ಆರೋಪ ಮಾಡಿ, ನ್ಯಾಯಾಂಗದೊಂದಿಗಿನ ಸಂಘರ್ಷ ನಡೆಸಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗೇ ಐದು ವರ್ಷಗಳ ಶಿಕ್ಷೆಯ ಆದೇಶ ಹೊರಡಿಸಿ, ಕೊನೆಗೆ ತಾವೇ ಆರು ತಿಂಗಳ ಜೈಲುವಾಸ ಅನುಭವಿಸಿದ್ದವರು,...

ಬೆಂಕಿಯ ತೀವ್ರತೆಗೆ ಅಪಾರ ಪ್ರಮಾಣದ ಕೃಷಿ ಉತ್ಪನ್ನಗಳು ಹಾಗೂ ಕೃಷಿ ಪರಿಕರಗಳು ಸುಟ್ಟು ಕರಕಲಾಗಿವೆ.ಒಂದೆಡೆ ಬೆಳೆ ಬೆಳೆಯಲು ಮಾಡಿದ ಸಾಲ, ಮತ್ತೊಂದೆಡೆ ಕಟಾವಿನ ನಿರೀಕ್ಷೆಯಲ್ಲಿದ್ದ ಫಸಲು ಕಣ್ಣೆದುರೇ ಭಸ್ಮವಾಗಿರುವುದು ರೈತರನ್ನು ತೀವ್ರ ಸಂಕಷ್ಟಕ್ಕೆ ದೂಡಿದೆ.

ವಿದ್ಯುತ್ ಅವಘಡದಿಂದ ಸಂಭವಿಸಿದ ಈ ನಷ್ಟಕ್ಕೆ ಪರಿಹಾರ ಕಲ್ಪಿಸುವ ಹೊಣೆ ಸರ್ಕಾರದ ಮೇಲಿದೆ ಎಂಬ ಒತ್ತಾಯ ರೈತ ವಲಯದಿಂದ ಕೇಳಿಬಂದಿದೆ.ಘಟನೆಗೆ ಸಂಬಂಧಿಸಿದಂತೆ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳೆ ನಷ್ಟದ ಸಮಗ್ರ ಸಮೀಕ್ಷೆ ನಡೆಸಿ ಸಂತ್ರಸ್ತ ರೈತರಿಗೆ ತಕ್ಷಣ ಸೂಕ್ತ ಪರಿಹಾರ ನೀಡಬೇಕು. ಕೃಷಿ ಪರಿಕರ ಹಾಗೂ ಟ್ರ್ಯಾಕ್ಟರ್‌ಗೆ ಉಂಟಾದ ನಷ್ಟವನ್ನೂ ಪರಿಗಣಿಸಿ ನೆರವು ಒದಗಿಸಬೇಕು ಎಂದು ರೈತರು ಹಾಗೂ ಹೋರಾಟಗಾರರು ಸರ್ಕಾರವನ್ನು ಆಗ್ರಹಿಸಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು | ಕಾಣೆಯಾಗಿದ್ದ ವಿದ್ಯಾರ್ಥಿ: ಮೃತದೇಹ ಪತ್ತೆ 

ಬಿಎಸ್‌ಸಿ ನರ್ಸಿಂಗ್ ವಿದ್ಯಾರ್ಥಿಯ ಮೃತದೇಹ ನಗರದ ಹೊರವಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ...

ಶಿರಸಿ | ಸಂಚಾರ ಪೊಲೀಸ್ ಠಾಣೆಯ ಮೂವರು ಹೆಡ್ ಕಾನ್ಸ್‌ಟೇಬಲ್‌ಗಳು ಅಮಾನತು

ಶಿರಸಿ: ಕರ್ತವ್ಯದ ವೇಳೆ ಮೇಲಧಿಕಾರಿಯೊಂದಿಗೆ ಅನುಚಿತವಾಗಿ ವರ್ತಿಸಿ, ಬೆದರಿಕೆ ಹಾಕಿದ ಆರೋಪದ...

ಚಿಕ್ಕಮಗಳೂರು | ಜೇನುನೋಣ ದಾಳಿಗೆ ಕಾರ್ಮಿಕ ಸಾವು 

ತರೀಕೆರೆ ತಾಲೂಕಿನ ಕೋರನಹಳ್ಳಿ ಗ್ರಾಮದಲ್ಲಿ ಹೊಲದಲ್ಲಿ ಬಾಳೆ ಗಿಡಗಳನ್ನು ನೆಡುವ ವೇಳೆ ಏಕಾಏಕಿ...

ಚಿಕ್ಕಮಗಳೂರು | ಕಾಡಾನೆ ಸಂಚಾರ: ಎಚ್ಚರಿಕೆವಹಿಸಲು ಅರಣ್ಯ ಇಲಾಖೆ ಸೂಚನೆ 

ನರಸಿಂಹರಾಜಪುರ ತಾಲೂಕಿನ ಮೆಣಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಕಾಡಾನೆ...