ರಾಜ್ಯದ ಉತ್ತರ ಒಳನಾಡಿನ ಹಲವೆಡೆ ನಿನ್ನೆ ಭಾರಿ ಮಳೆಯಾಗಿದೆ. ಧಾರವಾಡ, ವಿಜಯಪುರ, ಬಳ್ಳಾರಿ, ಬೆಳಗಾವಿ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆಯಿಂದ ವಿದ್ಯುತ್ ಕಂಬಗಳು, ಮರಗಳು ನೆಲಕ್ಕುರುಳಿದೆ. ಮನೆಯ ಮೇಲ್ಛಾವಣಿಗಳು ಹಾರಿ ಹೋಗಿದ್ದು, ಗಂಟೆಗಳ ಕಾಲ ಸುರಿದ ಮಳೆಯಿಂದ ಕೆಲವೆಡೆ ಅನಾಹುತ ಸಂಭವಿಸಿದೆ.
ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲ್ಲೂಕಿ ಮಸೂತಿ ಮತ್ತು ಕುಬಕಡ್ಡಿ ಗ್ರಾಮದಲ್ಲಿ ಬಿರುಗಾಳಿ ಮಳೆಗೆ ಬಾಳೆ ಗಿಡಗಳು ನೆಲಸಮವಾಗಿದೆ. ಹಳೇರೊಳ್ಳಿ ಗ್ರಾಮದಲ್ಲಿ ಬೃಹತ್ ಮರ ನೆಲಕ್ಕುರುಳಿ 2 ಎಮ್ಮೆಗಳು ಮೃತಪಟ್ಟರೆ, ಕೊಲ್ಹಾರ ಪಟ್ಟಣ ವ್ಯಾಪ್ತಿಯಲ್ಲಿ ಸಿಡಿಲು ಬಡಿದು ಎಮ್ಮೆ ಸಾವಿಗೀಡಾಗಿದೆ.
ಸೇಡಂ ತಾಲ್ಲೂಕಿನಲ್ಲಿ ಗುರುವಾರ ಸಂಜೆ ಓರ್ವ ವ್ಯಕ್ತಿ ಮತ್ತು ಎತ್ತು ಸಿಡಿಲಿಗೆ ಬಲಿಯಾದ ದುರ್ಘಟನೆ ನಡೆದಿದೆ. ಮೃತರಾದವರು 60 ವರ್ಷ ವಯಸ್ಸಿನ ಆಶಪ್ಪ ಕಂಪಿನ್ ಎಂಬ ಜಾಕನಪಲ್ಲಿ ಗ್ರಾಮದ ರೈತ ಎಂದು ಹೇಳಲಾಗಿದೆ. ಸತ್ತ ಎತ್ತು ಚಂದ್ರಪ್ಪ ಪೊಲವಾರ್ ಎಂಬವರಿಗೆ ಸೇರಿದ್ದು ಎಂಬ ಮಾಹಿತಿ ತಿಳಿದು ಬಂದಿದೆ.
ವಿಜಯಪುರ | ಗಾಳಿ ಮಳೆಗೆ ನೆಲಸಮವಾದ ಬಾಳೆ, ಸಿಡಿಲಿಗೆ ಬಲಿಯಾದ ರೈತ
ಪೋಸ್ಟ್ ಹಂಚಿಕೊಳ್ಳಿ:





