ಆಶಾ ಕಾರ್ಯಕರ್ತೆಯರಿಗೆ ₹264.14 ಕೋಟಿ ಬಾಕಿ ಪ್ರೋತ್ಸಾಹ ಧನ ಬಿಡುಗಡೆ: ಬಗೆಹರಿಯದ ʼಆಶಾ ಸಾಫ್ಟ್ʼ ತಾಂತ್ರಿಕ ದೋಷ

Date:

ರಾಜ್ಯದ ಆಶಾ ಕಾರ್ಯಕರ್ತೆಯರಿಗೆ ಮುಖ್ಯಮಂತ್ರಿಗಳು ನೀಡಿದ್ದ ಭರವಸೆಗಳನ್ನು ಕೂಡಲೇ ಜಾರಿಗೊಳಿಸಿ, ಏಪ್ರಿಲ್ 2025ರಿಂದ ಪ್ರೋತ್ಸಾಹಧನ ಸೇರಿಸಿ ಕನಿಷ್ಠ ₹10,000 ರೂಪಾಯಿ ಮಾಸಿಕ ಗೌರವಧನ ನೀಡುವಂತೆ ಆಶಾ ಕಾರ್ಯಕರ್ತೆಯರ ಸಂಘ ರಾಜ್ಯ ಸರ್ಕಾರವನ್ನು ಒತ್ತಾಯಿಸಿತ್ತು. ಈ ಹಿನ್ನೆಯಲ್ಲಿ ರಾಜ್ಯ ಸರ್ಕಾರ ಬಾಕಿ ವೇತನ-ಪ್ರೋತ್ಸಾಹ ಧನ ₹264.14 ಕೋಟಿ ಅನುದಾನ ಬಿಡುಗಡೆ ಮಾಡಿದೆ.

- Advertisement -

2025ರ ಜನವರಿ 7ರಿಂದ 10ರವರೆಗೆ ರಾಜ್ಯದ ಆಶಾ ಕಾರ್ಯಕರ್ತೆಯರು ನಡೆಸಿದ್ದ ಅಹೋರಾತ್ರಿ ಹೋರಾಟದ ಬಳಿಕ, ಜನವರಿ 10ರಂದು ಮುಖ್ಯಮಂತ್ರಿಗಳು ಆಶಾ ಸಂಘದ ಪದಾಧಿಕಾರಿಗಳನ್ನು ಕರೆದು ಸುದೀರ್ಘ ಚರ್ಚೆ ನಡೆಸಿದ್ದರು. ಈ ಸಭೆಯಲ್ಲಿ ಆರೋಗ್ಯ ಸಚಿವರು ಹಾಗೂ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡು, ಸರ್ಕಾರದ ಪರವಾಗಿ ಆರೋಗ್ಯ ಇಲಾಖೆ ಆಯುಕ್ತರು ಫ್ರೀಡಂ ಪಾರ್ಕ್‌ನಲ್ಲಿ ಸುಮಾರು 20 ಸಾವಿರ ಮಂದಿ ಆಶಾ ಕಾರ್ಯಕರ್ತೆಯರು ಮತ್ತು ಮಾಧ್ಯಮಗಳ ಎದುರು ಘೋಷಣೆ ಮಾಡಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಈ ದಿನ ವಿಶೇಷ | ಗಾಂಧೀ ಎಂದರೆ ಏನು?

ಇಂದು ಮಹಾತ್ಮಾ ಗಾಂಧೀಜಿಯವರ ಜನ್ಮದಿನ. ಅವರ ವಿಚಾರ, ಚಿಂತನೆ, ನಡೆ-ನುಡಿ... ಅವರನ್ನು ಗ್ರಹಿಸಲು ಅವರ ದಿನಚರಿಯ ಭಾಗವೇ ಆಗಿದ್ದ ಕೆಲವು ತುಣುಕುಗಳು ನಿಮ್ಮ ಓದಿಗಾಗಿ... ಆರೆಸ್ಸೆಸ್‌ಗೊಂದು ಕಿವಿಮಾತುಅದು ದೇಶ ವಿಭಜನೆಯ ಕಾಲ. ಎಲ್ಲೆಲ್ಲೂ ಹಿಂದೂ-ಮುಸ್ಲಿಂ...

ಕಪ್ಪತಗುಡ್ಡದ ಮಡಿಲಲ್ಲಿ ಗಾಂಧಿ ತತ್ವಗಳ ಪ್ರೇರಣಾ ಕೇಂದ್ರ ‘ಸಬರಮತಿ...

ಗದಗ ನಗರದ ಕಪ್ಪತಗುಡ್ಡದ ಸೆರಗಿನಲ್ಲಿರುವ 'ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ'ದ ಆವರಣದಲ್ಲಿ ನಿರ್ಮಿಸಲಾಗಿರುವ ಸಬರಮತಿ ಆಶ್ರಮವು ಗಾಂಧೀಜಿಯವರ ತತ್ವ ಮತ್ತು ಆದರ್ಶಗಳನ್ನು ಇಂದಿನ ಪೀಳಿಗೆಗೆ ತಲುಪಿಸುವ ಪ್ರೇರಣಾ ಕೇಂದ್ರವಾಗಿ...

ಸ್ಮರಣೆ | ʼಗಾಂಧಿ ನೀ ನಮ್ಮೆಲ್ಲರೊಳಗೂ ಇರುವೆʼ

ನಿನ್ನ ಚಾಳೀಸಿನೊಳಗೆ ತೂರಿಕೊಂಡ ಸ್ವಚ್ಚ ಭಾರತವಿನ್ನೂ ಚರಂಡಿಯಲ್ಲಿ ಹೊರಳಾಡುತ್ತಿದೆ. ಕಪ್ಪು ಹಣದ ಕತ್ತಲೆ ಗಾಢವಾಗಿ, ಸೂತ್ರಧಾರಿಗಳು ಉಳ್ಳವರಾಗಿ ಕೈಲಾಸದಲ್ಲಿನ ಭವ್ಯ ಶಿವಾಲಯದಲ್ಲಿದ್ದಾರೆ. ಊರ ಹೊರಗಣ ಕೇರಿಯವರಿಗೆ ಕೊಳಕು ಬಳಿಯುವ ಕಾಯಕ ಮತ್ತು ಕೊಳಗೇರಿ...

ಮುಖ್ಯಮಂತ್ರಿಗಳು ನೀಡಿದ್ದ ಭರವಸೆಯಂತೆ, ಏಪ್ರಿಲ್ 2025ರಿಂದ ಎಲ್ಲ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಸೇರಿಸಿ ಕನಿಷ್ಠ ₹10,000 ರೂಪಾಯಿ ಗೌರವಧನ ನೀಡಲಾಗುವುದು ಎಂದು ತಿಳಿಸಲಾಗಿತ್ತು. ಕಾಂಪೋನೆಂಟ್ ಆಧಾರಿತ ಹೆಚ್ಚುವರಿ ಕೆಲಸಗಳಿಗೆ ಪ್ರತ್ಯೇಕ ಇನ್ಸೆಂಟಿವ್ ನೀಡುವುದಾಗಿ ಹಾಗೂ ಯಾರಿಗಾದರೂ ಕಡಿಮೆ ಮೊತ್ತದ ಪ್ರೋತ್ಸಾಹಧನ ಬಂದರೆ ಸರ್ಕಾರವೇ ವ್ಯತ್ಯಾಸದ ಹಣವನ್ನು ಪಾವತಿಸಿ ₹10,000 ಗ್ಯಾರಂಟಿ ನೀಡುವುದಾಗಿ ಭರವಸೆ ನೀಡಲಾಗಿತ್ತು.

ಇದೇ ವೇಳೆ 2025-26ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆಯನ್ನು ಆಶಾ ಸಂಘದೊಂದಿಗೆ ನಡೆಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದರು. ಆದರೆ ಬಜೆಟ್ ಬಳಿಕ ಆರೋಗ್ಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಸ್ಪಷ್ಟೀಕರಣ ಕೇಳಿದರೂ, ಭರವಸೆಗೆ ತಕ್ಕಂತೆ ಯಾವುದೇ ಉತ್ತರ ದೊರೆತಿಲ್ಲ ಎಂದು ಸಂಘ ಆರೋಪಿಸಿದೆ. ಎರಡು ತಿಂಗಳು ಕಳೆದರೂ ಈ ಸಂಬಂಧ ಯಾವುದೇ ಅಧಿಕೃತ ಆದೇಶ ಹೊರಡಿಸದಿರುವುದು ಆಶಾ ಕಾರ್ಯಕರ್ತೆಯರಲ್ಲಿ ನಿರಾಸೆ ಮೂಡಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

Advertisements

ಈ ಬಜೆಟ್‌ನಲ್ಲಿ ಅಂಗನವಾಡಿ ಹಾಗೂ ಬಿಸಿಯೂಟ ಕಾರ್ಯಕರ್ತೆಯರಿಗೆ ₹1000 ರೂಪಾಯಿ ಹೆಚ್ಚಳ ನೀಡಿರುವಂತೆ ರಾಜ್ಯದ 42 ಸಾವಿರ ಆಶಾ ಕಾರ್ಯಕರ್ತೆಯರಿಗೂ ₹1000 ರೂಪಾಯಿ ಹೆಚ್ಚಳವನ್ನು ಘೋಷಿಸಿ ಆದೇಶಿಸಬೇಕೆಂದು ಸಂಘ ಆಗ್ರಹಿಸಿದೆ. ಸರ್ಕಾರ ತಂಡ ಆಧಾರಿತವಾಗಿ ಕೇವಲ ಕೆಲವು ಆಶಾಗಳಿಗೆ ಮಾತ್ರ ಅನ್ವಯವಾಗುವಂತೆ ಬಜೆಟ್ ಮೀಸಲಿಟ್ಟಿದ್ದು, ಎಲ್ಲ ಆಶಾಗಳಿಗೂ ಸಮಾನ ಸೌಲಭ್ಯ ಕಲ್ಪಿಸಿಲ್ಲ ಎಂದು ಸಂಘ ಅಸಮಾಧಾನ ವ್ಯಕ್ತಪಡಿಸಿದೆ.

ಇದೇ ವೇಳೆ ಆರೋಗ್ಯ ಇಲಾಖೆಯಿಂದ ಆಶಾ ಕಾರ್ಯಕ್ರಮದಲ್ಲಿ ಮಾಡಲಾಗುತ್ತಿರುವ ಬದಲಾವಣೆಗಳ ವಿರುದ್ಧವೂ ಸಂಘ ಆಕ್ರೋಶ ವ್ಯಕ್ತಪಡಿಸಿತ್ತು. ಕಳೆದ 12 ವರ್ಷಗಳಿಂದ ಕೇವಲ ₹6000 ರೂಪಾಯಿ ಗೌರವಧನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಶಾ ಸುಗಮಕಾರರನ್ನು ಏಕಾಏಕಿ ಕೆಲಸದಿಂದ ಬಿಡುಗಡೆಗೊಳಿಸಿರುವುದು ಅನ್ಯಾಯಕರವಾಗಿದೆ. ಹಿಂದಿನ ಚರ್ಚೆಯಂತೆ ಹೆಚ್ಚಿನ ಗೌರವಧನ, ದಿನಭತ್ಯೆ ಹಾಗೂ ಪ್ರಯಾಣ ಭತ್ಯೆ ನೀಡಿ ಕೆಲಸ ಮುಂದುವರಿಸಲು ಅವಕಾಶ ನೀಡಬೇಕು” ಎಂದು ಒತ್ತಾಯಿಸಿತ್ತು.

ಅದೇ ರೀತಿ 60 ವರ್ಷ ಮೇಲ್ಪಟ್ಟ ಆಶಾ ಕಾರ್ಯಕರ್ತೆಯರನ್ನು ಸೇವೆಯಿಂದ ಬಿಡುಗಡೆಗೊಳಿಸಿರುವ ಕ್ರಮವನ್ನೂ ಸಂಘ ಖಂಡಿಸಿದೆ. ಹಲವು ರಾಜ್ಯಗಳಲ್ಲಿ ನಿವೃತ್ತಿ ವಯಸ್ಸು 62 ವರ್ಷಗಳಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿಯೂ ನಿವೃತ್ತಿ ವಯಸ್ಸನ್ನು 62ಕ್ಕೆ ಹೆಚ್ಚಿಸಿ, ನಿವೃತ್ತಿ ಸೌಲಭ್ಯಗಳನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿದೆ. ಒಟ್ಟಾರೆ ಮುಖ್ಯಮಂತ್ರಿಗಳು ಸಾರ್ವಜನಿಕವಾಗಿ ನೀಡಿದ್ದ ಭರವಸೆಗಳನ್ನು ಸರ್ಕಾರ ಕೂಡಲೇ ಜಾರಿಗೊಳಿಸಿ, ಆಶಾ ಕಾರ್ಯಕರ್ತೆಯರಿಗೆ ನ್ಯಾಯ ಒದಗಿಸಬೇಕೆಂದು ರಾಜ್ಯದ ಎಲ್ಲ ಆಶಾ ಕಾರ್ಯಕರ್ತೆಯರ ಪರವಾಗಿ ಸಂಘ ಮನವಿ ಮಾಡಿದೆ. ಜತೆಗೆ ಆರೋಗ್ಯ ಸಚಿವರ ಸಮ್ಮುಖದಲ್ಲಿ ಸಂಘದ ಪದಾಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ, ಬಾಕಿ ಉಳಿದಿರುವ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.

ರಾಜ್ಯಾದ್ಯಂತ ಆಶಾ ಕಾರ್ಯಕರ್ತೆಯರು ಕಳೆದ ಎಂಟು ವರ್ಷಗಳಿಂದ ಆರ್ ಸಿ ಹೆಚ್(ಆಶಾ ನಿಧಿ) ಪೋರ್ಟಲ್‌ನಿಂದ ಉಂಟಾಗುತ್ತಿರುವ ತಾಂತ್ರಿಕ ಸಮಸ್ಯೆಗಳ ಕಾರಣ ದುಡಿದಷ್ಟು ಪ್ರೋತ್ಸಾಹ ಧನ ಸಿಗದೇ ಭಾರೀ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆರ್ ಸಿ ಹೆಚ್ ಪೋರ್ಟಲ್ ರದ್ದುಗೊಳಿಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ಮಾಸಿಕ ₹15,000 ರೂಪಾಯಿ ಗೌರವಧನ ನಿಗದಿ ಮಾಡಬೇಕು ಎಂದು ಒತ್ತಾಯಿಸಲಾಗಿದೆ.

ಸಂಘದ ಹೇಳಿಕೆಯ ಪ್ರಕಾರ, ಆರೋಗ್ಯ ಇಲಾಖೆ ಕೇಂದ್ರದ ಪ್ರೋತ್ಸಾಹ ಧನವನ್ನು ಆರ್ ಸಿ ಹೆಚ್(ಆಶಾ ನಿಧಿ) ಪೋರ್ಟಲ್‌ಗೆ ಲಿಂಕ್ ಮಾಡಿದ ಬಳಿಕ ಸಾವಿರಾರು ಆಶಾ ಕಾರ್ಯಕರ್ತೆಯರಿಗೆ ಸಂಪೂರ್ಣ ಪ್ರೋತ್ಸಾಹಧನ ದೊರೆಯದೆ ಅನ್ಯಾಯವಾಗುತ್ತಿದೆ. ರಾಜ್ಯದ ಸುಮಾರು 42 ಸಾವಿರ ಆಶಾ ಕಾರ್ಯಕರ್ತೆಯರಲ್ಲಿ ಶೇ.25 ರಿಂದ 30ರಷ್ಟು ಮಹಿಳೆಯರು ಪ್ರತಿ ತಿಂಗಳು ವೇತನ ನಷ್ಟ ಅನುಭವಿಸುತ್ತಿದ್ದು, ಕೋಟ್ಯಂತರ ರೂಪಾಯಿ ಬಾಕಿಯಾಗಿರುವುದಾಗಿ ಸಂಘ ಆರೋಪಿಸಿದೆ.

ಈ ಕುರಿತು ಹಲವು ವರ್ಷಗಳಿಂದ ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಹೋರಾಟ, ಸಭೆಗಳು, ಮನವಿ ಸಲ್ಲಿಕೆಗಳು ನಡೆದಿದ್ದರೂ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲವೆಂದು ಸಂಘ ಅಸಮಾಧಾನ ವ್ಯಕ್ತಪಡಿಸಿದೆ. ಆರೋಗ್ಯ ಇಲಾಖೆಯೇ ರಚಿಸಿದ ‘ಕಮಿಟಿ ಆನ್ ಟೆಕ್ನಿಕಲ್ ಕಾಂಪ್ಲಿಕೇಶನ್ ಆಫ್ ಆಶಾ ನಿಧಿ ಸಾಫ್ಟ್‌ವೇರ್’ ವರದಿಯಲ್ಲೂ ಸಾವಿರಾರು ಆಶಾ ಕಾರ್ಯಕರ್ತೆಯರಿಗೆ ತಾಂತ್ರಿಕ ದೋಷಗಳಿಂದ ಪ್ರೋತ್ಸಾಹ ಧನ ನಷ್ಟವಾಗುತ್ತಿರುವುದು ಉಲ್ಲೇಖವಾಗಿದೆ ಎಂದು ಹೇಳಲಾಗಿದೆ.

ಆರ್.ಸಿ.ಹೆಚ್ ಪೋರ್ಟಲ್‌ಗೆ ಸಂಬಂಧಿಸಿದಂತೆ ರಾಜ್ಯ ಮಟ್ಟದ ಅಧಿಕಾರಿಗಳು ಹಾಗೂ ಸಂಘದ ಪದಾಧಿಕಾರಿಗಳು ಹಲವು ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರೋತ್ಸಾಹಧನ ಸಂಪೂರ್ಣವಾಗಿ ಬರದೇ ಇರುವುದಕ್ಕೆ 14 ಪ್ರಮುಖ ಕಾರಣಗಳನ್ನು ಗುರುತಿಸಲಾಗಿದೆ. ಆದರೂ ಸಮಸ್ಯೆಗೆ ಪರಿಹಾರ ದೊರೆತಿಲ್ಲ ಎಂದು ಸಂಘ ಟೀಕಿಸಿದೆ. ಆಶಾ ಕಾರ್ಯಕರ್ತೆಯರು ಪ್ರತಿ ತಿಂಗಳು ವಿವಿಧ ಆರೋಗ್ಯ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದರೂ, ಅವರಿಗೆ ಕೇಂದ್ರದಿಂದ ನಿಗದಿಯಾದ ಸುಮಾರು ₹7000 ಪ್ರೋತ್ಸಾಹಧನ ಸಂಪೂರ್ಣವಾಗಿ ಸಿಗುತ್ತಿಲ್ಲ. ಹಲವರಿಗೆ ಕೇವಲ ₹500 ರಿಂದ ₹3000 ಮಾತ್ರ ದೊರೆಯುತ್ತಿದ್ದು, ಉಳಿದ ಹಣ ಎಲ್ಲಿಗೆ ಹೋಗುತ್ತಿದೆ ಎಂಬ ಪ್ರಶ್ನೆ ಉದ್ಭವಿಸಿದೆ ಎಂದು ಸಂಘ ಪ್ರಶ್ನಿಸಿದೆ.

ಇದೇ ವೇಳೆ, ಆಶಾ ಕಾರ್ಯಕರ್ತೆಯರ ಮೇಲೆ ಮೊಬೈಲ್ ಆಧಾರಿತ ಹಾಗೂ ಪ್ರೋತ್ಸಾಹಧನವಿಲ್ಲದ ಹೆಚ್ಚುವರಿ ಕೆಲಸಗಳನ್ನು ಒತ್ತಾಯಪೂರ್ವಕವಾಗಿ ಹಾಕಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಮೊಬೈಲ್, ಡಾಟಾ ಸೌಲಭ್ಯ ನೀಡದೇ ವಿವಿಧ ಆ್ಯಪ್‌ಗಳ ಮೂಲಕ ಕೆಲಸ ಮಾಡಿಸಲು ಸಿಬ್ಬಂದಿ ಒತ್ತಡ ಹೇರುತ್ತಿದ್ದಾರೆ. ಕೆಲಸ ಮಾಡದಿದ್ದರೆ ಪ್ರೋತ್ಸಾಹಧನ ಕಡಿತ ಮಾಡುವುದಾಗಿ ಅಥವಾ ಕೆಲಸದಿಂದ ಹೊರಹಾಕುವ ಬೆದರಿಕೆ ನೀಡಲಾಗುತ್ತಿದೆ ಎಂದು ಸಂಘ ದೂರಿದೆ.

ಆರೋಗ್ಯ ಸಚಿವರು ಆಶಾ ಕಾರ್ಯಕರ್ತೆಯರು ತಿಂಗಳಿಗೆ ₹13 ಸಾವಿರದಿಂದ ₹15 ಸಾವಿರವರೆಗೆ ಗೌರವಧನ ಪಡೆಯುತ್ತಿದ್ದಾರೆ ಎಂಬ ಹೇಳಿಕೆ ನೀಡಿರುವುದನ್ನು ಸಂಘ ಖಂಡಿಸಿದೆ. ರಾಜ್ಯದ ಕೇವಲ ಶೇ.5ರಷ್ಟು ಆಶಾಗಳಿಗೆ ಮಾತ್ರ ಅಷ್ಟೊಂದು ಮೊತ್ತ ಸಿಗುತ್ತಿದ್ದು, ಬಹುತೇಕ ಮಹಿಳೆಯರು ಕನಿಷ್ಠ ವೇತನಕ್ಕೂ ವಂಚಿತರಾಗಿದ್ದಾರೆ ಎಂದು ಸ್ಪಷ್ಟಪಡಿಸಿದೆ. ಸರ್ಕಾರ ಹಾಗೂ ಆರೋಗ್ಯ ಇಲಾಖೆ ಹಲವು ಸಭೆಗಳಲ್ಲಿ ಭರವಸೆ ನೀಡಿದರೂ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದೆ ಕಾಲಹರಣ ಮಾಡುತ್ತಿದೆ ಎಂದು ಆರೋಪಿಸಿರುವ ಸಂಘ, ದುಡಿದ ಕಾಸಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದೆ.

ಈ ದಿನ.ಕಾಮ್ ಜೊತೆ ಮಾತನಾಡಿದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಉಪಾಧ್ಯಕ್ಷೆ ಎಂ. ಉಮಾದೇವಿ, “ಸುಮಾರು ಹತ್ತು ವರ್ಷಗಳ ಹಿಂದೆ ಆಶಾ ಕಾರ್ಯಕರ್ತೆಯರ ಕೆಲಸದ ಮಾಹಿತಿಯನ್ನು ಸಂಪೂರ್ಣವಾಗಿ ಮ್ಯಾನ್ಯುವಲ್ ಪದ್ಧತಿಯಲ್ಲಿ ದಾಖಲಿಸಲಾಗುತ್ತಿತ್ತು. ಪ್ರೋತ್ಸಾಹ ಧನದ ಮಾಡ್ಯೂಲ್ ಪ್ರಕಾರ ಕಾರ್ಯಕರ್ತೆಯರು ಮಾಡಿದ ಕೆಲಸವನ್ನು ದಾಖಲಿಸಿ, ನರ್ಸ್ ಪರಿಶೀಲನೆ ನಡೆಸಿದ ಬಳಿಕ ವೈದ್ಯರು ಸಹಿ ಮಾಡುತ್ತಿದ್ದರು. ಅದರ ಆಧಾರದ ಮೇಲೆ ಚೆಕ್ ಮೂಲಕ ಹಣ ಪಾವತಿಸಲಾಗುತ್ತಿತ್ತು” ಎಂದು ವಿವರಿಸಿದರು.

ನಂತರ “ಹೊಸ ಮಾದರಿಯೆಂದು ‘ಆಶಾ ಸಾಫ್ಟ್’ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಡೇಟಾ ಎಂಟ್ರಿ ಮೂಲಕ ನೇರವಾಗಿ ಆಶಾ ಕಾರ್ಯಕರ್ತೆಯರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವ ಉದ್ದೇಶ ಇದಾಗಿತ್ತು. ಆದರೆ, ಡೇಟಾ ಆಪರೇಟರ್‌ಗಳ ಕೊರತೆ, ಅವರಿಗೆ ಸಮರ್ಪಕ ಸಂಬಳ ನೀಡದಿರುವುದು, ಕಂಪ್ಯೂಟರ್ ಸೌಲಭ್ಯಗಳ ಅಭಾವ, ಸರ್ವರ್ ಸಮಸ್ಯೆಗಳು ಸೇರಿದಂತೆ ಹಲವು ತಾಂತ್ರಿಕ ನ್ಯೂನ್ಯತೆಗಳಿಂದ ಯೋಜನೆ ಸರಿಯಾಗಿ ಕಾರ್ಯನಿರ್ವಹಿಸಲಿಲ್ಲ. ತಿಂಗಳ ಸಭೆಗಳಲ್ಲಿ ಆಶಾ ಕಾರ್ಯಕರ್ತೆಯರು ಅಪ್ಡೇಟ್ ಮಾಡಿದ ಮಾಹಿತಿ ಸರಿಯಾಗಿ ರಿಫ್ಲೆಕ್ಟ್ ಆಗದ ಕಾರಣ, ಅವರಿಗೆ ಬರಬೇಕಾದ ಪ್ರೋತ್ಸಾಹ ಧನ ಸಂಪೂರ್ಣವಾಗಿ ಸಿಗುತ್ತಿಲ್ಲ. ಕೆಲವರಿಗೆ ತಿಂಗಳ ಮೊತ್ತಕ್ಕಿಂತ ಕಡಿಮೆ ಹಣ ಬರುತ್ತಿದ್ದು, ಇನ್ನೂ ಕೆಲವರಿಗೆ ಯಾವುದೇ ಹಣವೇ ಜಮೆಯಾಗದ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಹೇಳಿದರು.

ಇದೇ ವೇಳೆ, “ಯಾವ ತಿಂಗಳಲ್ಲಿ ಎಷ್ಟು ಪ್ರೋತ್ಸಾಹ ಧನ ಬಂದಿದೆ ಎಂಬುದರ ಸ್ಪಷ್ಟ ಮಾಹಿತಿ ಆಶಾ ಕಾರ್ಯಕರ್ತೆಯರಿಗೆ ಲಭ್ಯವಾಗುತ್ತಿಲ್ಲ. ಇದರಿಂದ ಕಾರ್ಯಕರ್ತೆಯರು ತೀವ್ರ ಗೊಂದಲ ಮತ್ತು ಆತಂಕದಲ್ಲಿದ್ದಾರೆ. ಈ ಎಲ್ಲ ಸಮಸ್ಯೆಗಳ ಕುರಿತು ಎನ್‌ಆರ್‌ಎಚ್ ಉಪ ನಿರ್ದೇಶಕರಾಗಿದ್ದ ಪ್ರಭುಗೌಡ ಅವರೊಂದಿಗೆ ಯೂನಿಯನ್ ಪ್ರಮುಖರು ಸಮಗ್ರ ಸರ್ವೇ ನಡೆಸಿ ವರದಿ ಸಿದ್ಧಪಡಿಸಿದ್ದರು. ಆದರೆ ದುರ್ದೈವವಶಾತ್ ಆ ವರದಿ ಇಂದಿಗೂ ಅನುಷ್ಠಾನಗೊಂಡಿಲ್ಲ. ಸರ್ಕಾರ ಮತ್ತು ಆರೋಗ್ಯ ಇಲಾಖೆ ಈ ಗಂಭೀರ ಸಮಸ್ಯೆಯನ್ನು ಸರಿಪಡಿಸಲು ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ. ಹತ್ತಾರು ವರ್ಷಗಳು ಕಳೆದರೂ ಆಶಾ ಕಾರ್ಯಕರ್ತೆಯರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರಕಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ಮಾತನಾಡಿ, “ರಾಜ್ಯದಲ್ಲಿ ಆರೋಗ್ಯ ವ್ಯವಸ್ಥೆಗೆ ‘ಅನಾರೋಗ್ಯ’ ಕಾಡುತ್ತಿದ್ದು, ಸರಿಯಾದ ಸಿಬ್ಬಂದಿ ಹಾಗೂ ವೈದ್ಯರ ಕೊರತೆ ಆಶಾ ಕಾರ್ಯಕರ್ತೆಯರ ಮೇಲಿನ ಹೊರೆ ಹೆಚ್ಚುವಂತೆ ಮಾಡಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಮಯಕ್ಕೆ ತಕ್ಕ ಚಿಕಿತ್ಸೆ ಸಿಗದೇ ಗ್ರಾಮೀಣ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ಹೋಬಳಿವಾರು ಹಾಗೂ ತಾಲೂಕು ಸಮುದಾಯ ಆರೋಗ್ಯ ಕೇಂದ್ರಗಳತ್ತ ಹೆಚ್ಚಿನ ಒತ್ತು ನೀಡಿ ವೈದ್ಯರು, ನರ್ಸ್‌ಗಳು ಹಾಗೂ ಸಿಬ್ಬಂದಿಯನ್ನು ವರ್ಗಾವಣೆ ಮಾಡುತ್ತಿರುವುದರಿಂದ ಗ್ರಾಮೀಣ ಭಾಗದ ಆರೋಗ್ಯ ಸೇವೆ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ” ಎಂದು ಹೇಳಿದರು.

“ಈ ಎಲ್ಲ ಸಮಸ್ಯೆಗಳ ನಿರ್ವಹಣೆಯ ಜವಾಬ್ದಾರಿ ಆಶಾ ಕಾರ್ಯಕರ್ತೆಯರ ಹೆಗಲ ಮೇಲೆ ಬೀಳುತ್ತಿದ್ದು, ದಿನದಿಂದ ದಿನಕ್ಕೆ ಅವರ ಕೆಲಸದ ಒತ್ತಡ ಹೆಚ್ಚುತ್ತಿದೆ. ಆದರೆ, ಅದಕ್ಕೆ ತಕ್ಕ ಗೌರವ ಹಾಗೂ ಸೌಲಭ್ಯಗಳು ದೊರೆಯುತ್ತಿಲ್ಲ. ಹೆಣ್ಣುಮಕ್ಕಳ ಪರ ಸರ್ಕಾರವೆಂದು ಹೇಳಿಕೊಳ್ಳುವ ಆಡಳಿತ ವರ್ಗ ದುಡಿಯುವ ಮಹಿಳೆಯರ ಶ್ರಮಕ್ಕೆ ಸರಿಯಾದ ಪ್ರತಿಫಲ ನೀಡುತ್ತಿಲ್ಲ. ಸರ್ಕಾರವೇ ಆಶಾ ಕಾರ್ಯಕರ್ತೆಯರ ಮೇಲೆ ನೇರ ಅನ್ಯಾಯ ಮಾಡುತ್ತಿದ್ದು, ಬಡವರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿದೆ” ಎಂದು ಟೀಕಿಸಿದರು.

“ಸರ್ಕಾರ ಆಶಾ ಕಾರ್ಯಕರ್ತೆಯರನ್ನು ‘ಸ್ವಯಂಸೇವಕರು’ ಎಂದು ಪರಿಗಣಿಸುತ್ತಿದ್ದು, ಉದ್ಯೋಗಿಗಳ ಹಕ್ಕುಗಳನ್ನು ನೀಡದೇ ಇದೀಗ ಜಿಪಿಎಸ್ ಅಳವಡಿಕೆ ಮೂಲಕ ಪ್ರತಿದಿನದ ಕೆಲಸವನ್ನು ಮಾನಿಟರ್ ಮಾಡಲು ಮುಂದಾಗಿದೆ. ನಾವು ಕೆಲಸ ಮಾಡುತ್ತಿದ್ದೇವೆ, ಕೆಲಸದ ಮೇಲ್ವಿಚಾರಣೆಗೆ ಅಭ್ಯಂತರವಿಲ್ಲ. ಆದರೆ, ಉದ್ಯೋಗಿಗಳೆಂದು ಪರಿಗಣಿಸದೆ ಈ ರೀತಿಯ ಹೇರಿಕೆಗಳನ್ನು ಮಾಡುವುದು ಸರಿಯಲ್ಲ. ಆಶಾ ಕಾರ್ಯಕರ್ತೆಯರ ಸೇವೆಯ ಮಹತ್ವವನ್ನು ಸರ್ಕಾರ ಅರಿತು, ಅವರ ಬೇಡಿಕೆಗಳನ್ನು ಶೀಘ್ರ ಈಡೇರಿಸಬೇಕು” ಎಂದು ಆಗ್ರಹಿಸಿದರು.

ತುಮಕೂರಿನಿಂದ ಮಂಜುಳ ಮಾತನಾಡಿ, “ಗ್ಯಾರೆಂಟಿ ಸರ್ಕಾರವೆಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆಶಾ ಕಾರ್ಯಕರ್ತೆಯರ ವಿಚಾರದಲ್ಲಿ ನುಡಿದಂತೆ ನಡೆದುಕೊಂಡಿಲ್ಲ. ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರು ನಡೆಸಿದ ಹೋರಾಟಕ್ಕೆ ಒಂದು ವರ್ಷ ನಾಲ್ಕು ತಿಂಗಳು ಕಳೆದರೂ ಈವರೆಗೆ ₹10 ಸಾವಿರ ಪ್ರೋತ್ಸಾಹ ಧನ ಘೋಷಣೆ ಮಾಡಿಲ್ಲ” ಎಂದು ಆರೋಪಿಸಿದರು.

“ಗ್ಯಾರೆಂಟಿ ಸರ್ಕಾರ ಎಂದು ಹೇಳಿಕೊಳ್ಳುವವರು ಆಶಾ ಕಾರ್ಯಕರ್ತೆಯರ ಜೀವನ ಭದ್ರತೆ ಮತ್ತು ಗೌರವದ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ. ಹಲವು ಭರವಸೆಗಳನ್ನು ನೀಡಿದರೂ ಅವು ಕಾಗದದಲ್ಲೇ ಉಳಿದಿವೆ. ಇನ್ನೆಲ್ಲಿಯ ಗ್ಯಾರೆಂಟಿ? ಆಶಾ ಕಾರ್ಯಕರ್ತೆಯರು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಆರೋಗ್ಯ ಸೇವೆಗಳನ್ನು ಜನರಿಗೆ ತಲುಪಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ ಅವರಿಗೆ ಸರಿಯಾದ ಸವಲತ್ತುಗಳು, ಭದ್ರತೆ ಹಾಗೂ ಸಮಯಕ್ಕೆ ಸರಿಯಾದ ಪ್ರೋತ್ಸಾಹ ಧನ ಸಿಗುತ್ತಿಲ್ಲ. ಸರ್ಕಾರದಿಂದಲೇ ಆಶಾ ಕಾರ್ಯಕರ್ತೆಯರ ಶೋಷಣೆ ನಡೆಯುತ್ತಿರುವಂತಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಧಾರವಾಡದಿಂದ ಮಾತನಾಡಿದ ಭುವನ, “ಸರ್ಕಾರ ದಿನೇ ದಿನೆ ಆಶಾ ಕಾರ್ಯಕರ್ತೆಯರ ಮೇಲೆ ಅತಿಯಾದ ಕೆಲಸದ ಹೊರೆ ಹಾಕುತ್ತಿದೆ. ಸರ್ಕಾರದ ಪ್ರಕಾರ ನಾವು ಸ್ವಯಂಸೇವಕರು. ಆದರೆ, ನಡೆದುಕೊಳ್ಳುವ ರೀತಿ ಮಾತ್ರ ಉದ್ಯೋಗಿಗಳಂತಿದೆ. ನಾವು ಎಷ್ಟು ಸಹಿಸಬೇಕು? ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ಹಾಗೂ ಗೌರವಧನ ಸಮರ್ಪಕವಾಗಿ ಸಿಗುತ್ತಿಲ್ಲ. ಅಲ್ಪ ಸಂಬಳಕ್ಕೆ ನಿರಂತರವಾಗಿ ದುಡಿಸಿಕೊಳ್ಳಲಾಗುತ್ತಿದೆ, ಮೊಬೈಲ್ ನೀಡುವುದಿಲ್ಲ. ಆದರೆ ಜಿಪಿಎಸ್ ಅಳವಡಿಕೆ ಮಾಡುತ್ತಾರೆ. ಕರೆನ್ಸಿ ಮೂಲಕ ನೀಡುತ್ತಿದ್ದ ಹಣವನ್ನು ನಿಲ್ಲಿಸಿದ್ದಾರೆ. ಎಲ್ಲ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಅಪ್‌ಡೇಟ್ ಮಾಡಬೇಕು ಎನ್ನುತ್ತಾರೆ. ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಆಶಾ ಕಾರ್ಯಕರ್ತೆಯರು ಕೆಲಸ ನಿರ್ವಹಿಸುತ್ತಿದ್ದಾರೆ” ಎಂದು ಹೇಳಿದರು.

“ಸರ್ಕಾರದ ವಿವಿಧ ಆರೋಗ್ಯ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಆಶಾ ಕಾರ್ಯಕರ್ತೆಯರು ಮಾಡುತ್ತಿದ್ದರೂ, ಸರ್ಕಾರ ಮತ್ತು ಆರೋಗ್ಯ ಇಲಾಖೆ ಅವರ ಸಮಸ್ಯೆಗಳನ್ನು ಅರಿಯುತ್ತಿಲ್ಲ. ಕಳೆದ ಏಪ್ರಿಲ್ 1ರಂದು ಧಾರವಾಡದಲ್ಲಿ ನಡೆದ ಪ್ರತಿಭಟನೆ ವೇಳೆ ಸ್ಥಳಕ್ಕೆ ಭೇಟಿ ನೀಡಿದ್ದ ಸಚಿವ ಸಂತೋಷ್ ಲಾಡ್ ಅವರು ಸರ್ಕಾರದ ಗಮನಕ್ಕೆ ವಿಚಾರ ತರುವುದಾಗಿ ಭರವಸೆ ನೀಡಿದ್ದರು. ಆದರೆ ಇದುವರೆಗೆ ಯಾವುದೇ ಸ್ಪಷ್ಟ ಮಾಹಿತಿ ಅಥವಾ ಕ್ರಮ ಕೈಗೊಳ್ಳಲಾಗಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ವಿಶೇಷ ಸುದ್ದಿ ಓದಿದ್ದೀರಾ?ಆರೋಗ್ಯ ಕ್ಷೇತ್ರದ ಆಧಾರ ಸ್ತಂಭ ಆಶಾ ಕಾರ್ಯಕರ್ತೆಯರಿಗೆಆಧಾರವಾಗಲಿಲ್ಲ ಸರ್ಕಾರ

ಆಶಾ ಕಾರ್ಯಕರ್ತೆಯರನ್ನು ಕೈಬಿಡುವ ಪ್ರಸ್ತಾವನೆ ವಿರುದ್ಧ ಹೋರಾಟ ನಡೆಸಿದ ಪರಿಣಾಮವಾಗಿ ಆ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ತಡೆಹಿಡಿದಿದ್ದಾರೆ. ಆದರೆ ಯಾವಾಗ ಬೇಕಾದರೂ ಅದನ್ನು ಜಾರಿಗೆ ತರಬಹುದು ಎಂಬ ಆತಂಕ ಆಶಾ ಕಾರ್ಯಕರ್ತೆಯರಲ್ಲಿ ಮನೆಮಾಡಿದೆ ಎಂದು ಹೇಳಿದರು.

ಈ ಹಿನ್ನಲೆಯಲ್ಲಿ ದುಡಿದಷ್ಟು ಪ್ರೋತ್ಸಾಹಧನ, ಕನಿಷ್ಠ ಗೌರವಧನ ಹಾಗೂ ಸಾಮಾಜಿಕ ಭದ್ರತಾ ಸೌಲಭ್ಯಗಳಿಗಾಗಿ ರಾಜ್ಯ ಮಟ್ಟದಲ್ಲಿ ‘ವಿಧಾನಸೌಧ ಚಲೋ’ ಹೋರಾಟವನ್ನು ಸಂಘಟಿಸಲಾಗಿದ್ದು, ರಾಜ್ಯದ ಎಲ್ಲ ಆಶಾ ಕಾರ್ಯಕರ್ತೆಯರು ಒಗ್ಗಟ್ಟಿನಿಂದ ಹೋರಾಟದಲ್ಲಿ ಭಾಗವಹಿಸಬೇಕೆಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಕರೆ ನೀಡಿದೆ.

WhatsApp Image 2025 02 05 at 18.09.20
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

KPSC ನೇಮಕಾತಿ ಹಗರಣ: SIT ರಚನೆಗೆ ಸುಪ್ರೀಂ ತಡೆ

KPSC (ಕರ್ನಾಟಕ ಲೋಕಸೇವಾ ಆಯೋಗ) ನಡೆಸಿದ್ದ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ತನಿಖೆಗೆ...

ನಾಳೆ ‘ಕೊಂದವರು ಯಾರು?’ ರಾಷ್ಟ್ರೀಯ ವಿಚಾರ ಸಂಕಿರಣ: ಪಿತೃಪ್ರಧಾನತೆ, ಹೊಣೆಗಾರಿಕೆ ಕುರಿತು ಚರ್ಚೆಗೆ ವೇದಿಕೆ

ಕರ್ನಾಟಕದ ‘ನಾವೆದ್ದು ನಿಲ್ಲದಿದ್ದರೆ' ಸಂಘಟನೆಯು ಆರಂಭಿಸಿರುವ 'ಕೊಂದವರು ಯಾರು? Who Killed...

ಫಾರ್ಮ್-7 ಸಲ್ಲಿಸಿದವರ ವಿರುದ್ಧ ಪ್ರಕರಣ ದಾಖಲಿಸಿ: ಚುನಾವಣಾ ಆಯೋಗದ ಕಚೇರಿಯಲ್ಲಿ ಪಟ್ಟು ಕುಳಿತ ಸಿಎಂ

ರಾಜ್ಯದಲ್ಲಿ ಅರ್ಹ ಮತದಾರರ ಹೆಸರುಗಳನ್ನು ಅಕ್ರಮವಾಗಿ ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ ಎಂದು ಆರೋಪಿಸಿ,...

ಎಲ್ ನಿನೋ ತಾಪಮಾನ: ಹೊರಾಂಗಣ ಕಾರ್ಮಿಕರ ರಕ್ಷಣೆಗೆ ತುರ್ತು ಕ್ರಮಕ್ಕೆ ಸಂಘಟನೆಗಳ ಆಗ್ರಹ

ಎಲ್ ನಿನೋ ಹವಾಮಾನ ಬದಲಾವಣೆಯ ತೀವ್ರ ಪರಿಣಾಮಗಳಿಂದ ಹೊರಾಂಗಣ ಹಾಗೂ ದಿನಗೂಲಿ...