ಯಾದಗಿರಿ | ಕೋಮುವಾದಿ, ಜಾತಿವಾದಿ ಶಕ್ತಿಗಳನ್ನು ತಡೆಯಲು ಐಕ್ಯ ಹೋರಾಟ ಅಗತ್ಯ; ಮಲ್ಲಿಕಾರ್ಜುನ ಸತ್ಯಂಪೇಟೆ

Date:

ಕೋಮುವಾದಿ ಹಾಗೂ ಜಾತಿವಾದಿ ಶಕ್ತಿಗಳನ್ನು ತಡೆಯಲು ಎಲ್ಲರೂ ಒಂದಾಗಿ ನಿಲ್ಲಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ಕರೆ ನೀಡಿದರು.

- Advertisement -

ವಡಗೇರಿ ತಾಲೂಕಿನ ಮಾಲಹಳ್ಳಿ ಗ್ರಾಮದಲ್ಲಿ ಶನಿವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಸಂಯೋಜಕ) ವತಿಯಿಂದ ನೂತನ ಗ್ರಾಮ ಘಟಕ ಶಾಖೆ ರಚನೆ ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಗ್ಯಾನೇಶ್ ಕುಮಾರ್ ವಿರುದ್ಧದ 20 ವರ್ಷಗಳ ಪ್ರಕರಣಕ್ಕೆ ಮರುಜೀವ;...

ಭಾರತದ ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್‌ ಕುಮಾರ್ ವಿರುದ್ಧ 2006ರಲ್ಲಿ ದಾಖಲಾಗಿದ್ದ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣಕ್ಕೆ ಕೇರಳ ಸರ್ಕಾರ ಈಗ ಮರುಜೀವ ನೀಡಿದೆ. ಪ್ರಕರಣವನ್ನು ವಿಜಿಲೆನ್ಸ್ ತನಿಖೆಗೆ ಆದೇಶ ಹೊರಡಿಸಿದೆ....

ನೊಬೆಲ್‌ ಪ್ರಶಸ್ತಿ ಸರಣಿ | ಶಾಸ್ತ್ರೀಯ ಪರಂಪರೆಗೆ ಸಮಕಾಲೀನ...

ಈ ಬಾರಿಯ ಸಾಹಿತ್ಯದ ನೊಬೆಲ್‌ ಪುರಸ್ಕಾರ ಕೆನಡಾದ ಆನ್‌ ಕಾರ್ಸನ್‌ ಅವರ ಮುಡಿಗೇರಿದೆ. ಇವರು ಕವಯತ್ರಿ, ಪ್ರಬಂಧಗಾರ್ತಿ ಹಾಗೂ ಅನುವಾದಕಿ. ಕ್ಲಾಸಿಕಲ್‌ ಗ್ರೀಕ್‌ ಸಾಹಿತ್ಯದ ಪ್ರೇಮಿಯಾದ ಕಾರ್‌ಸನ್‌ ಶಾಸ್ತ್ರೀಯ ಮಾದರಿಯನ್ನು ಸಮಕಾಲೀನ ಸಂದರ್ಭಗಳಲ್ಲಿ...

‘ರೈತರು ಹಾಗೂ ದಲಿತರು ಸಂವಿಧಾನಾತ್ಮಕ ಹಕ್ಕುಗಳನ್ನು ಪಡೆಯಲು ಗ್ರಾಮೀಣ ಮಟ್ಟದಲ್ಲಿ ಸಂಘಟನೆ ಬಲಪಡಿಸುವುದು ಅತ್ಯವಶ್ಯಕವಾಗಿದೆ ಎಂದು ಅವರು ಹೇಳಿದರು. “ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಹೋರಾಟ ಅನಿವಾರ್ಯ. ಕೋಮುವಾದಿ ಮತ್ತು ಜಾತಿವಾದಿ ಶಕ್ತಿಗಳನ್ನು ತಡೆಯಲು ಸಮಾಜದ ಎಲ್ಲಾ ವರ್ಗದವರು ಒಂದಾಗಿ ನಿಲ್ಲಬೇಕು” ಎಂದು ಅವರು ಅಭಿಪ್ರಾಯಪಟ್ಟರು.

‘ಮಹಿಳೆಯರು ಮೌಢ್ಯತೆಯಿಂದ ಹೊರಬಂದು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಸದುಪಯೋಗಪಡಿಸಿಕೊಂಡು ಆರ್ಥಿಕ ಹಾಗೂ ಸಾಮಾಜಿಕವಾಗಿ ಮುನ್ನಡೆಯಬೇಕು ಎಂದು ಸಲಹೆ ನೀಡಿದರು. ಹಾಗೆಯೇ ಗೌತಮ ಬುದ್ಧ, ಬಸವೇಶ್ವರ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ತಿಳಿಸಿದರು.

ದಲಿತ ಮುಖಂಡ ಹತ್ತೀಗೂಡೂರು ಶರಣರೆಡ್ಡಿ ಮಾತನಾಡಿ, ’12ನೇ ಶತಮಾನದಲ್ಲಿ ಬಸವೇಶ್ವರರು ಅನುಭವ ಮಂಟಪದ ಮೂಲಕ ಸಮಾನತೆಯ ಸಂದೇಶ ಸಾರಿದ ವಿಚಾರವನ್ನು ಉಲ್ಲೇಖಿಸಿದರು. ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನದ ಆಶ್ರಯದಲ್ಲೇ ದೇಶ ಇಂದು ಸಾಗುತ್ತಿದೆ. ಸಮಾನತೆ, ಸಮಬಾಳು ಹಾಗೂ ಸಾಮಾಜಿಕ ನ್ಯಾಯ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು. ಗ್ರಾಮೀಣ ಪ್ರದೇಶಗಳಲ್ಲಿ ಶೋಷಿತ ವರ್ಗಗಳ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಗಟ್ಟಲು ಸಂಘಟಿತ ಹೋರಾಟ ಅಗತ್ಯವಿದೆ’ ಎಂದು ತಿಳಿಸಿದರು.

1448419

ರಾಜ್ಯಾಧ್ಯಕ್ಷ ಡಾ. ಆರ್. ಅಶ್ವತ್ ಅಂತೇಜ್ ಅವರ ಆದೇಶದ ಮೇರೆಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗ್ರಾಮದ ಅಧ್ಯಕ್ಷರಾಗಿ ರಾಮಪ್ಪ ಹಲಕಲ್, ಉಪಾಧ್ಯಕ್ಷರಾಗಿ ಅಮಾತ್ಯಪ್ಪ ಕುರುಕುಂದಿ, ಕಾರ್ಯದರ್ಶಿಯಾಗಿ ಬಾಲಪ್ಪ ಲಿಂಗೇರಿ, ಸಂಘಟನೆ ಕಾರ್ಯದರ್ಶಿಯಾಗಿ ಹಣಮಂತ ಶಾಖ ಹಾಗೂ ಖಜಾಂಚಿಯಾಗಿ ಮಲ್ಲಿಕಾರ್ಜುನ ದೊಡ್ಮನಿ ಆಯ್ಕೆಯಾದರು.

ಇದೆ ಸಂದರ್ಭದಲ್ಲಿ ಸಂಘಟನೆ ಸದಸ್ಯರಾಗಿ ಮಲ್ಲಾರೆಡ್ಡಿ ಕುರುಕುಂದಿ, ಮರಿಯಪ್ಪ ಶಾಖ, ಸಾಬಣ್ಣ ಲಿಂಗೇರಿ, ಹನುಮಂತ ಕಾಡಿನಗೇರಾ, ಬಸಲಿಂಗಪ್ಪ ಹೊಸ್ಮನಿ, ಹುಲಿಯಪ್ಪ ಹೊಸ್ಮನಿ, ಬಸಲಿಂಗಪ್ಪ ಶಾಖ, ಮೋನಪ್ಪ ತಲೆಗೇರ್, ಮಾನ್ಯಪ್ಪ ನರೇಗಾರ್, ಸಾಬಣ್ಣ ಗುರುಷಣಗಿ, ಮಂಜಪ್ಪ ಹೊಸ್ಮನಿ, ರಂಗಪ್ಪ ತೆಲುಗು, ಶರಣಪ್ಪ ಹೊಸ್ಮನಿ ಸೇರಿದಂತೆ ಹಲವರು ಆಯ್ಕೆಯಾದರು.

ಇದನ್ನು ಓದಿದ್ದೀರಾ? ಕಲಬುರಗಿ | ಜೂಜಾಟದಲ್ಲಿ ತೊಡಗಿದ್ದ ಇಬ್ಬರು ಪೊಲೀಸರ ಅಮಾನತು

ಕಾರ್ಯಕ್ರಮದಲ್ಲಿ ಭೀಮನಗೌಡ ಮಾಲಿಪಾಟೀಲ್, ಹನುಮಂತ ಕೊಂಗಂಡಿ, ಸಿದ್ದಪ್ಪ ಹೊಸ್ಮನಿ ಸೇರಿದಂತೆ ವಿವಿಧ ಸಮಾಜದ ಮುಖಂಡರು, ಯುವಕರು ಹಾಗೂ ಮಹಿಳೆಯರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಕಾಂಗ್ರೆಸ್‌ ತೆಕ್ಕೆಗೆ ಯುವ ನಾಯಕ ವೀರಾರಡ್ಡಿ ಮುನ್ನಾಳ

ಗುರುಮಿಠಕಲ್, ಯಾದಗಿರಿ ಮತಕ್ಷೇತ್ರದ ಯುವ ನಾಯಕ ಬಿ.ಎಸ್. ವೀರಾರಡ್ಡಿ ಮುನ್ನಾಳ ಅವರು...

ಯಾದಗಿರಿ | ಮಾಜಿ ತಾ.ಪಂ ಸದಸ್ಯನ ಮೇಲೆ ಹಲ್ಲೆ ಆರೋಪ; ಆರು ಮಂದಿ ವಿರುದ್ಧ ಪ್ರಕರಣ ದಾಖಲು

ಸಾಲದ ಬಡ್ಡಿ ಪಾವತಿ ವಿಚಾರಕ್ಕೆ ಸಂಬಂಧಿಸಿದಂತೆ ಶಹಾಪುರ ತಾಲ್ಲೂಕು ಪಂಚಾಯಿತಿ ಮಾಜಿ...

ಯಾದಗಿರಿ | ಲಾರಿ ಡಿಕ್ಕಿಗೆ ಬೈಕ್ ಸವಾರ ಗಂಭೀರ ಗಾಯ

ಲಾರಿ ಹಾಗೂ ಬೈಕ್‌ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಬೈಕ್‌ ಸವಾರ...

ಯಾದಗಿರಿ | ಜಿಲ್ಲಾ ಮಟ್ಟದ ಕಬಡ್ಡಿಯಲ್ಲಿ ಮೊರಾರ್ಜಿ ಶಾಲಾ ವಿದ್ಯಾರ್ಥಿಗಳ ಗೆಲುವು

ಜಿಲ್ಲಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಪ್ರೌಢಶಾಲಾ ವಿಭಾಗದ ಬಾಲಕರ ಜಿಲ್ಲಾ ಮಟ್ಟದ...