ಯಾದಗಿರಿ | ಭೂಮಿ, ನಿವೇಶನಕ್ಕಾಗಿ ತಮಟೆ ಘರ್ಜನೆ: ಬೇಡಿಕೆ ಈಡೇರಿಸದಿದ್ದರೆ ನಿರಂತರ ಸಂಘರ್ಷದ ಖಡಕ್ ಎಚ್ಚರಿಕೆ!

Date:

ಭೂಮಿ, ವಸತಿ ನಿವೇಶನ, ಸ್ಮಶಾನ ಭೂಮಿ ಹಾಗೂ ಭೂ ಒಡೆತನ ಯೋಜನೆಗಳನ್ನು ತಕ್ಷಣ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಸೋಮವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಸಂಯೋಜಕ) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಶಹಾಪುರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ನೂರಾರು ಮಹಿಳೆಯರು ತಮಟೆ ಬಾರಿಸಿ ಪ್ರತಿಭಟನೆ ನಡೆಸಿದರು.

- Advertisement -

ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ಸಭೆ ಕರೆಯಬೇಕು ಹಾಗೂ ಭೂಮಿ ಇಲ್ಲದ ದಲಿತ ಬಡ ಕುಟುಂಬಗಳಿಗೆ ತಕ್ಷಣ ನಿವೇಶನ, ಭೂ ಹಂಚಿಕೆ ಮತ್ತು ಸ್ಮಶಾನ ಭೂಮಿ ಮೀಸಲು ಮಾಡಬೇಕು ಎಂದು ಒತ್ತಾಯಿಸಿದರು. ಬಳಿಕ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ ಕೈಗಾರಿಕಾ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರಾದ ಶರಣಬಸಪ್ಪ ಗೌಡ ದರ್ಶನಾಪೂರ ಅವರಿಗೆ ಮನವಿ ಸಲ್ಲಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಮುಸ್ಲಿಯಾರ್ ಹೇಳಿಕೆ ಎಬ್ಬಿಸಿದ ಪ್ರಶ್ನೆ— ಧಾರ್ಮಿಕ ಮೌಲ್ಯಗಳ ನಡುವೆ...

ಮಹಿಳೆಯ ಗೌರವವನ್ನು ರಕ್ಷಿಸುವ ಹೆಸರಿನಲ್ಲಿ ಆಕೆಯ ಶಿಕ್ಷಣ, ಪ್ರತಿಭೆ, ವೃತ್ತಿ ಅಥವಾ ಸಾಮಾಜಿಕ ಸೇವೆಯ ಬಾಗಿಲುಗಳನ್ನು ಮುಚ್ಚುವುದು ಒಂದು ವಿಷಯ; ಧಾರ್ಮಿಕ ಹಯಾ ಮತ್ತು ಮೌಲ್ಯಗಳನ್ನು ಕಾಪಾಡಿಕೊಂಡೇ ಸಮಾಜದಲ್ಲಿ ಜವಾಬ್ದಾರಿಯುತವಾಗಿ ಪಾಲ್ಗೊಳ್ಳಲು ಅವಕಾಶ...

ಧಾರವಾಡ | ಹುಲಕೊಪ್ಪ‌ ಶಾಲೆ ಶೌಚಾಲಯ ಕಾಮಗಾರಿ ಅಪೂರ್ಣ;...

ಧಾರವಾಡ ಜಿಲ್ಲೆಯ ಕಲಘಟಗಿ ಪ್ರಾಥಮಿಕ ಶಾಲೆಯಲ್ಲಿ‌ ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಹೈಟೆಕ್ ಶೌಚಾಲಯ ಆರಂಭವಾಗಿ ಸುಮಾರು ವರ್ಷಗಳೇ ಕಳೆದರೂ ಇನ್ನೂ ಕಾಮಗಾರಿ ಮುಗಿದಿಲ್ಲ. ಶಾಲೆಯ...

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಮತ್ತು ಸದ್ಯದ ಬಿಕ್ಕಟ್ಟುಗಳು

ಇಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ. ಜಾಗತಿಕವಾಗಿ ಕುಸಿಯುತ್ತಿರುವ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು ಸೆಪ್ಟಂಬರ್ 15ನ್ನು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸುವ ಘೋಷಣೆ ಮಾಡಿತು. ಪರಿಣಾಮ ಇಂಟರ್ ಪಾರ್ಲಿಮೆಂಟರಿ ಯೂನಿಯನ್...
1552183

ಮನವಿ ಸಲ್ಲಿಸಿ ಜಿಲ್ಲಾಧ್ಯಕ್ಷ ಶರಣ ರೆಡ್ಡಿ ಮಾತನಾಡಿ, ‘ನಿವೇಶನ ವಂಚಿತರಿಗೆ ವಸತಿ ಸೌಲಭ್ಯ ಒದಗಿಸಬೇಕು. ಭೂಮಿ ಇಲ್ಲದವರಿಗೆ ಭೂ ಹಂಚಿಕೆ ಮಾಡಬೇಕು ಹಾಗೂ ಗ್ರಾಮಗಳಲ್ಲಿ ಸ್ಮಶಾನ ಭೂಮಿ ಮಂಜೂರು ಮಾಡಬೇಕು’ ಎಂದು ಆಗ್ರಹಿಸಿದರು.

ಮುಂದುವರೆದು ಅವರು ‘ಹತ್ತಿಗುಡೂರ, ಕೊಂಗೊಂಡಿ, ಯಕ್ಷಿಂತಿ, ಅನವಾರ, ಹಯ್ಯಾಳ ಕೆ, ಮಾಲಹಳ್ಳಿ, ತುಮಕೂರು, ಬೊಮ್ಮನಹಳ್ಳಿ, ಐಕೂರ, ಸಲದಪೂರ ಸೇರಿದಂತೆ ವಿವಿಧ ಗ್ರಾಮಗಳ ದಲಿತ ಬಡ ಕುಟುಂಬಗಳಿಗೆ ತಕ್ಷಣ ಸೌಲಭ್ಯ ಒದಗಿಸಬೇಕು,’ ಎಂದು ಆಗ್ರಹಿಸಿದರು. ಒಂದು ವೇಳೆ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮೂಲಭೂತ ಹಕ್ಕುಗಳಿಗಾಗಿ ಹೋರಾಟವನ್ನು ನಿರಂತರವಾಗಿ ಮುಂದುವರಿಸುತ್ತೇವೆ,’ ಎಂದು ಎಚ್ಚರಿಕೆ ನೀಡಿದರು.

1552181 1

ಮನವಿ ಸ್ವೀಕರಿಸಿದ ಸಚಿವರು, ಸಂಘಟನೆಯ ಬೇಡಿಕೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಇದನ್ನು ಓದಿದ್ದೀರಾ? ಕಲಬುರಗಿ | ‘ಪ್ರಬುದ್ಧ ಅಕಾಡೆಮಿ’: ಉದ್ಘಾಟನೆಗೊಂಡು ಎರಡು ತಿಂಗಳಲ್ಲೇ ಉದುರಿ ಬಿದ್ದ ಚಾವಣಿಯ ಸಿಮೆಂಟ್ ಪದರು

ಪ್ರತಿಭಟನೆಯಲ್ಲಿ ಶರಣಪ್ಪ ಚಲುವಾದಿ, ನಿಂಗಣ್ಣ ಕರಡಿ, ಸಿದ್ದಪ್ಪ ಚಲುವಾದಿ, ಮಲ್ಲಣ್ಣ ರೆಡ್ಡಿ, ಸಿದ್ದಪ್ಪ ಹೊಸಮನಿ, ರಾಮಪ್ಪ ಮಾಲಹಳ್ಳಿ, ಸಾಬಣ್ಣ ಮಾಲಹಳ್ಳಿ, ಯಲ್ಲಮ್ಮ ರಸ್ತಾಪೂರ, ಶಿವಮ್ಮ ಹತ್ತಿಗುಡೂರ, ಮಲ್ಲಮ್ಮ ಹತ್ತಿಗುಡೂರ, ತಂಗಮ್ಮ ಹತ್ತಿಗುಡೂರ, ಜೇಜಮ್ಮ ಚಲುವಾದಿ, ಮಲ್ಲಮ್ಮ ಕೊಂಗೊಂಡಿ, ಲಕ್ಷ್ಮಿ ಹೊಸಮನಿ, ಮರೆಮ್ಮ ಹೊಸಮನಿ, ಮಲ್ಲಮ್ಮ ಸತ್ಯಂಪೇಟೆ, ಮಲ್ಲಮ್ಮ ಕರಡಿ, ಲಕ್ಷ್ಮಿ ತಳವಾರ, ನಿಂಗಮ್ಮ ಗುರಸಣಗಿ, ಮಹಾದೇವಮ್ಮ ಅನಸೂರ, ದ್ಯಾವಮ್ಮ ಚಲುವಾದಿ ಸೇರಿದಂತೆ ನೂರಾರು ಮಹಿಳೆಯರು, ಸಂಘಟನೆ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | “ಬಸವಾದಿ ಶರಣೆಯರ ವಚನಗಳಲ್ಲಿ ಜೀವಪರ ಚಿಂತನೆ” ವಿಶೇಷ ಉಪನ್ಯಾಸ ಕಾರ್ಯಕ್ರಮ

ಶ್ರಾವಣ ಮಾಸದ ಸಂದರ್ಭದಲ್ಲಿ ಬಸವಾದಿ ಶರಣರು ಹಾಗೂ ಶರಣೆಯರ ಚಿಂತನೆಗಳನ್ನು ಇಂದಿನ...

ಯಾದಗಿರಿ | ನವಿಲು ಬೇಟೆ ಆರೋಪ: ಏಳು ಮಂದಿ ಬಂಧನ; 6 ನಾಡ ಬಂದೂಕು, 12 ಆಮೆ ಸೇರಿ ಸಾಮಗ್ರಿ ವಶ

ತಾಲ್ಲೂಕಿನ ಮೋಟ್ನಳ್ಳಿ ಗ್ರಾಮದ ಸಮೀಪ ನವಿಲುಗಳನ್ನು ಬೇಟೆಯಾಡಿದ ಆರೋಪದಡಿ ಏಳು ಮಂದಿಯನ್ನು...

ಯಾದಗಿರಿ | ವಂದೇ ಭಾರತ ಸ್ಲೀಪರ್ ರೈಲು ಯಾದಗಿರಿ ಮಾರ್ಗವಾಗಿ ಚಲಿಸುವಂತೆ ಆಗ್ರಹಿಸಿ ಕರವೇ ಮನವಿ

ಬೆಂಗಳೂರು-ಮುಂಬೈ ನಡುವೆ ಶೀಘ್ರದಲ್ಲೇ ಆರಂಭವಾಗಲಿರುವ ವಂದೇ ಭಾರತ ಸ್ಲೀಪರ್ ರೈಲಿನ ಸಂಚಾರವನ್ನು...

ಯಾದಗಿರಿ | ರೈತರ ಕಲ್ಯಾಣಕ್ಕಾಗಿ ಸೆ.11ರಂದು ಪಾದಯಾತ್ರೆ

ಶ್ರಾವಣ ಮಾಸದ ಬೆನಕನ ಅಮಾವಾಸ್ಯೆ ಅಂಗವಾಗಿ ರೈತರ ಕಲ್ಯಾಣಕ್ಕಾಗಿ ಡಾ. ಭೀಮಣ್ಣ...