ಯಾದಗಿರಿ | “ಬಸವಾದಿ ಶರಣೆಯರ ವಚನಗಳಲ್ಲಿ ಜೀವಪರ ಚಿಂತನೆ” ವಿಶೇಷ ಉಪನ್ಯಾಸ ಕಾರ್ಯಕ್ರಮ

Date:

ಶ್ರಾವಣ ಮಾಸದ ಸಂದರ್ಭದಲ್ಲಿ ಬಸವಾದಿ ಶರಣರು ಹಾಗೂ ಶರಣೆಯರ ಚಿಂತನೆಗಳನ್ನು ಇಂದಿನ ಬದುಕಿನೊಂದಿಗೆ ಅನುಸಂಧಾನಗೊಳಿಸುವ ಉದ್ದೇಶದಿಂದ ‘ಬಸವಾದಿ ಶರಣೆಯರ ವಚನಗಳಲ್ಲಿ ಜೀವಪರ ಚಿಂತನೆ’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಭಾನುವಾರ ಶಹಾಪುರದಲ್ಲಿ ಆಯೋಜಿಸಲಾಗಿತ್ತು.

- Advertisement -

ಕನ್ನಡ ಸಾಹಿತ್ಯ ಪರಿಷತ್ತು ಶಹಾಪುರ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ, ಯಾದಗಿರಿ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ, ಶಹಾಪುರ ಇವರ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಂಬಾರಿಯ ಮುಂದೆ ಪೊಲೀಸರು ಸೆಲ್ಫಿ ತೆಗೆದುಕೊಂಡರೆ ಭದ್ರತೆಗೆ ಹೇಗೆ...

ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಬಳಸಿಕೊಳ್ಳಲು ಸರ್ಕಾರ ಅರಸು ಮನೆತನದವರಿಂದ ಪಡೆಯುತ್ತದೆ. ಉಚಿತವಾಗಿ ಅಲ್ಲ; ನಿಗದಿಪಡಿಸಿರುವ ಹಣವನ್ನು ಸಂದಾಯ ಮಾಡಿ. ಅಂಬಾರಿಯ ಭದ್ರತೆಯ ಹೊಣೆ ಸರ್ಕಾರದ ಮೇಲೂ ಇರುತ್ತದೆ. ಪೊಲೀಸರು ಸೆಲ್ಫಿ ತೆಗೆದುಕೊಂಡರೆ...

ಜನತಂತ್ರಕ್ಕೆ ಕುತ್ತು: ‘ಖಾಸಗಿತನ’ದ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕಲು...

ಮೋದಿ ಸರ್ಕಾರವು ಈ ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸದೆ, ಹಂತ ಹಂತವಾಗಿ ಜಾರಿಗೊಳಿಸುತ್ತಾ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸುವ ತಿದ್ದುಪಡಿಯು ಈಗಾಗಲೇ ನವೆಂಬರ್ 2025ರಿಂದಲೇ ಜಾರಿಯಲ್ಲಿದ್ದರೆ, ಡೇಟಾ ಬಳಕೆಯ ಕಠಿಣ ನಿಯಮಗಳು...

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ...

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ರಾಜಕೀಯವಾಗಿ ಪರಿಣಾಮ ಬೀರಬಲ್ಲದು. ಡಿ.ಕೆ. ಶಿವಕುಮಾರ್‌ ಅವರ ನಾಯಕತ್ವವನ್ನು ಓರೆಗೆ ಹಚ್ಚಬಲ್ಲದು. ಒಕ್ಕಲಿಗ ಪ್ರಾಬಲ್ಯದ ಪ್ರದೇಶಗಳ ಒಲವು-ನಿಲುವುಗಳನ್ನು ತಿಳಿಸಬಲ್ಲದು. ಆದರೆ,...

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ, “12ನೇ ಶತಮಾನದ ಶರಣ ಚಳವಳಿ ಸಾಮಾಜಿಕ ಪರಿವರ್ತನೆಯ ದೃಷ್ಟಿಯಿಂದ ಮಹತ್ವದ ಘಟ್ಟವಾಗಿದೆ. ಜಾತಿ, ಲಿಂಗ ಸೇರಿದಂತೆ ವಿವಿಧ ತಾರತಮ್ಯಗಳನ್ನು ಪ್ರಶ್ನಿಸಿ ಸಮಾನತೆಯ ಸಂದೇಶ ಸಾರಿದ ಶರಣ ಪರಂಪರೆಯಲ್ಲಿ ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ, ಗಂಗಾಂಬಿಕೆ, ಸೊಳೆ ಸಂಕವ್ವ, ನೀಲಾಂಬಿಕೆ ಸೇರಿದಂತೆ ಹಲವು ಶರಣೆಯರ ಕೊಡುಗೆ ಮಹತ್ವದ್ದಾಗಿದೆ” ಎಂದರು.

3103192

ವಿಶೇಷ ಉಪನ್ಯಾಸ ನೀಡಿದ ಕಲಬುರಗಿ ಡಾ. ಅಂಬೇಡ್ಕರ್ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಅರುಣ ಜೋಳದಕೂಡ್ಲಿಗಿ, “12ನೇ ಶತಮಾನದಲ್ಲಿಯೇ ಮಹಿಳೆಯರಿಗೆ ತಮ್ಮ ವಿಚಾರ, ಅನುಭವ ಹಾಗೂ ಪ್ರಶ್ನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ಅವಕಾಶ ದೊರೆತಿತ್ತು. ಅನುಭವ ಮಂಟಪದಲ್ಲಿ ಮಹಿಳಾ ಶರಣೆಯರು ತಮ್ಮ ಚಿಂತನೆಗಳನ್ನು ಮಂಡಿಸಿರುವುದು ಅಂದಿನ ಪ್ರಗತಿಪರ ಸಾಮಾಜಿಕ ವ್ಯವಸ್ಥೆಗೆ ಸಾಕ್ಷಿಯಾಗಿದೆ” ಎಂದು ಹೇಳಿದರು.

“ಅಕ್ಕಮಹಾದೇವಿ ಸೇರಿದಂತೆ ಹಲವು ಶರಣೆಯರು ತಮ್ಮ ವಚನಗಳ ಮೂಲಕ ಹೆಣ್ಣು-ಗಂಡು ತಾರತಮ್ಯವನ್ನು ಪ್ರಶ್ನಿಸಿ ಲಿಂಗ ಸಮಾನತೆಯ ಸಂದೇಶ ಸಾರಿದರು. ಜಾತಿ ಪ್ರಾಬಲ್ಯ, ಸಾಮಾಜಿಕ ಅಸಮಾನತೆ ಹಾಗೂ ಅನ್ಯಾಯದ ವಿರುದ್ಧವೂ ದಿಟ್ಟ ಧ್ವನಿ ಎತ್ತಿದರು. ಅವರ ಚಿಂತನೆಗಳು ಇಂದಿಗೂ ಮಹಿಳಾ ಸ್ವಾಭಿಮಾನ ಮತ್ತು ಸಾಮಾಜಿಕ ನ್ಯಾಯದ ಹೋರಾಟಕ್ಕೆ ಪ್ರೇರಣೆಯಾಗಿವೆ” ಎಂದರು.

“ಸಾವಿತ್ರಿಬಾಯಿ ಫುಲೆ ಬಿತ್ತಿದ ಶಿಕ್ಷಣ ಮತ್ತು ಸಮಾನತೆಯ ಬೀಜ ಇಂದು ಚಿಗುರೊಡೆದಿದೆ. ಮಹಿಳೆಯರು ಶಿಕ್ಷಣ, ಉದ್ಯೋಗ, ಆಡಳಿತ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮುನ್ನೆಲೆಗೆ ಬರುತ್ತಿರುವುದು ಸಾಮಾಜಿಕ ಪರಿವರ್ತನೆಯ ಸಂಕೇತವಾಗಿದೆ” ಎಂದು ತಿಳಿಸಿದರು.

“ಮಹಿಳೆಯರಿಗೆ ನಿಸರ್ಗದೊಂದಿಗೆ ಅವಿನಾಭಾವ ಸಂಬಂಧವಿದ್ದು, ಪರಿಸರ ಸಂರಕ್ಷಣೆಯ ಹೋರಾಟಗಳಲ್ಲಿಯೂ ಅವರು ಮಹತ್ವದ ಪಾತ್ರ ವಹಿಸಿದ್ದಾರೆ. ಅಪ್ಪಿಕೋ ಚಳವಳಿಯಂತಹ ಪರಿಸರ ಹೋರಾಟಗಳಲ್ಲಿ ಮಹಿಳೆಯರ ಸಕ್ರಿಯ ಪಾಲ್ಗೊಳ್ಳುವಿಕೆ ಗಮನಾರ್ಹವಾಗಿದೆ” ಎಂದರು.

“ಮಹಿಳಾ ವಚನಕಾರರ ಕುರಿತು ಇನ್ನಷ್ಟು ಅಧ್ಯಯನಗಳು ನಡೆಯಬೇಕಿದೆ. ಅವರ ವಚನಗಳಲ್ಲಿರುವ ಸಮಾನತೆ, ಸ್ವಾಭಿಮಾನ ಹಾಗೂ ಸಾಮಾಜಿಕ ನ್ಯಾಯದ ಆಶಯಗಳನ್ನು ಇಂದಿನ ಮಹಿಳೆಯರು ಬದುಕಿನಲ್ಲಿ ಅಳವಡಿಸಿಕೊಂಡರೆ ಹೊಸ ಶಕ್ತಿ ಮತ್ತು ಚೈತನ್ಯ ದೊರೆಯಲಿದೆ” ಎಂದು ಹೇಳಿದರು.

ವಡಗೇರಾ ತಾಲೂಕು ತಹಶೀಲ್ದಾರ್ ಮಂಗಳಮ್ಮ ಮಾತನಾಡಿ, “ಮಹಿಳೆಯರು ದಿನನಿತ್ಯದ ಜವಾಬ್ದಾರಿಗಳ ಜತೆಗೆ ತಮ್ಮ ಭವಿಷ್ಯದ ಬಗ್ಗೆಯೂ ಚಿಂತಿಸಬೇಕು. ವಿಶೇಷ ಹವ್ಯಾಸಗಳನ್ನು ಬೆಳೆಸಿಕೊಂಡು ಸ್ವಾವಲಂಬಿ ಬದುಕಿನತ್ತ ಸಾಗಬೇಕು. ಶರಣೆಯರು ಎತ್ತಿದ ಪ್ರಶ್ನೆಗಳಿಗೆ ನಮ್ಮ ಬದುಕೇ ಉತ್ತರವಾಗಬೇಕು. ಸಮಾನತೆಯ ಆಶಯದೊಂದಿಗೆ ಒಗ್ಗಟ್ಟಾಗಿ ಸಮೃದ್ಧ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು” ಎಂದು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಸಿದ್ದಲಿಂಗಣ್ಣ ಆನೆಗುಂದಿ, ಗೀತಾಂಜಲಿ ಮುಗಳಿ, ಚಂದ್ರಕಲಾ ಗೂಗಲ್, ವಿಜಯಲಕ್ಷ್ಮಿ ಹಂಗರಗಿ ಹಾಗೂ ಚನ್ನಮ್ಮ ಮೇಟಿಗುಡ್ಡ ಮಾತನಾಡಿದರು.

3103193

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಮಕ್ಕಳು ಸೂಳೆ ಸಂಕವ್ವ, ಆಯ್ದಕ್ಕಿ ಲಕ್ಕಮ್ಮ, ಮುಕ್ತಾಯಕ್ಕ, ಹಡಪದ ಲಿಂಗಮ್ಮ, ಸತ್ಯಕ್ಕ, ಗಂಗಾಂಬಿಕೆ, ನೀಲಾಂಬಿಕೆ ಹಾಗೂ ಅಕ್ಕಮಹಾದೇವಿಯವರ ವೇಷ ಧರಿಸಿ ವಚನಗಳನ್ನು ಪ್ರಸ್ತುತಪಡಿಸಿದರು. ಮಕ್ಕಳ ಈ ವಿಶಿಷ್ಟ ವಚನ ಪ್ರಸ್ತುತಿ ನೆರೆದಿದ್ದವರ ಗಮನ ಸೆಳೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಡಾ. ರವೀಂದ್ರನಾಥ ಹೊಸಮನಿ ಮಾತನಾಡಿ, “ಸಂವಿಧಾನದ ಆಶಯಗಳನ್ನು ಗೌರವಿಸಿ ಅನುಷ್ಠಾನಗೊಳಿಸಿದಾಗ ಮಾತ್ರ ಸಮಾನತೆ ಹಾಗೂ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಶರಣ-ಶರಣೆಯರ ಮಾನವೀಯ ಮತ್ತು ಸಮಾನತೆಯ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಒಳಿತಿಗಾಗಿ ಮುನ್ನಡೆಯಬೇಕು” ಎಂದರು.

3103219

ಈ ಸಂದರ್ಭದಲ್ಲಿ ಉತ್ತಮ ಶಿಕ್ಷಕರಿಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಇದನ್ನು ಓದಿದ್ದೀರಾ? ಕಲಬುರಗಿ | ರಸ್ತೆ ಬದಿಯಲ್ಲಿ ಲಾರಿ ನಿಲುಗಡೆಗೆ ಕಡಿವಾಣ: ಪೊಲೀಸರ ಕಟ್ಟುನಿಟ್ಟಿನ ಸೂಚನೆ

ಜುಬೇದಾ ಬೇಗಂ ಸ್ವಾಗತಿಸಿದರು. ರಕ್ಷೀತಾ ಅರವಿಂದರೆಡ್ಡಿ ಕಾರ್ಯಕ್ರಮ ನಿರ್ವಹಿಸಿದರು. ಭಾಗ್ಯ ದೊರೆ ನಿರೂಪಿಸಿದರು. ಶಾರದಾ ಹಿರೇಮಠ ವಂದಿಸಿದರು.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಆಹಾರ ಕಲಬೆರಕೆಗೆ ಕಡಿವಾಣ, ಕ್ಯಾನ್ಸರ್ ಔಷಧ ದರ ಇಳಿಕೆಗೆ ಯತ್ನ: ಸಚಿವ ಖಾದರ್‌ಗೆ ಹೋಟೆಲ್ ಸಂಘದ ಶಹಬ್ಬಾಸ್!

ರಾಜ್ಯದಲ್ಲಿ ಆಹಾರ ಸುರಕ್ಷತೆ, ಹೋಟೆಲ್‌ಗಳ ಸ್ವಚ್ಛತೆ ಹಾಗೂ ಕ್ಯಾನ್ಸರ್ ಔಷಧಗಳ ಬೆಲೆ...

ಬಾಗಲಕೋಟೆ |ಕಬ್ಬಿಗೆ ₹5,500 ಬೆಲೆ ನಿಗದಿಪಡಿಸಲು ಭಾರತೀಯ ಕಿಸಾನ ಸಂಘ ಆಗ್ರಹ

ಬರಗಾಲ, ಅಂತರ್ಜಲ ಕುಸಿತ, ಸುಡುಬಿಸಿಲು ಹಾಗೂ ಕೃಷಿ ವೆಚ್ಚ ಹೆಚ್ಚಳದಿಂದ ಸಂಕಷ್ಟದಲ್ಲಿರುವ...

ಮಂಗಳೂರು | ಕಾಂತಪುರಂ ಶೇಖ್ ಅಬೂಬಕರ್ ಅಹ್ಮದ್ ಅವರಿಗೆ ಯೆನೆಪೋಯ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್

ಪ್ರಸಿದ್ದ ಮುಸ್ಲಿಂ ಧಾರ್ಮಿಕ ಪಂಡಿತ, ಕಲ್ಲಿಕೋಟೆಯ ಮರ್ಕಝ್ ಸಂಸ್ಥೆಗಳ ರೂವಾರಿ ಮುಸ್ಲಿಂ...

ಬಾಗಲಕೋಟೆ | ಪೋಲಿಯೋ ಮುಕ್ತ ಸಮಾಜದ ಸಂಕಲ್ಪ: ಬಾಗಲಕೋಟೆಯಿಂದ ವಿಜಯಪುರದವರೆಗೆ 190 ಕಿ.ಮೀ ಜಾಗೃತಿ ರ್ಯಾಲಿ

ಪೋಲಿಯೋ ಮುಕ್ತ ಸಮಾಜ ನಿರ್ಮಾಣದ ಸಂಕಲ್ಪದೊಂದಿಗೆ ರೋಟರಿ ಕ್ಲಬ್ ಬಾಗಲಕೋಟೆ ವತಿಯಿಂದ...