ಲೋಕಸಭಾ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯನವರ ಗರ್ವಭಂಗ ಮಾಡುತ್ತೇನೆ ಎಂದಿದ್ದ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರಿಗೆ ತುಮಕೂರಿನಲ್ಲಿ ಮುಖಭಂಗವಾಗಿದೆ.
ತುಮಕೂರಿನಲ್ಲಿ ದೇವೇಗೌಡರ ನೇತೃತ್ವದಲ್ಲಿ ಜೆಡಿಎಸ್‌ನ ಜಿಲ್ಲಾ ಮಟ್ಟದ ಪ್ರಮುಖ ನಾಯಕರ ಸಭೆಯನ್ನು ಶನಿವಾರ ಕರೆಯಲಾಗಿತ್ತು. ಈ ಸಭೆಯಲ್ಲಿ ಭಾಗವಹಿಸಲು ಜೆಡಿಎಸ್ ಕಾರ್ಯಕರ್ತರು ನಿರಾಸಕ್ತಿ ತೋರಿದ್ದರಿಂದ ಚೇರುಗಳೆಲ್ಲವೂ ಖಾಲಿ-ಖಾಲಿಯಾಗಿತ್ತು.
ತುಮಕೂರು ಲೋಕಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿರುವ ವಿ. ಸೋಮಣ್ಣ ಪರ ಚುನಾವಣಾ ಪ್ರಚಾರ ನಡೆಸುವ ವಿಚಾರವಾಗಿ ಜಿಲ್ಲಾಮಟ್ಟದ ಸಭೆಯನ್ನು ತುಮಕೂರು ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಕರೆಯಲಾಗಿತ್ತು. ಆದರೆ, ಈ ಸಭೆಯು ಕಾರ್ಯಕರ್ತರಿಲ್ಲದೆ ಬಣ-ಬಣ ಎನ್ನುತ್ತಿತ್ತು. ಕುರ್ಚಿಗಳೆಲ್ಲವೂ ಖಾಲಿಖಾಲಿಯಾಗಿ ಎದ್ದು ಕಾಣುತ್ತಿತ್ತು.
ಈ ನಡುವೆ ಅಭ್ಯರ್ಥಿ ಸೋಮಣ್ಣ ಭಾಷಣ ಮಾಡುತ್ತಿದ್ದಾಗ, ಸಭೆಗೆ ಬಂದಿದ್ದ ಕೆಲವು ಕಾರ್ಯಕರ್ತರು ಎದ್ದು ಹೋಗುತ್ತಿದ್ದರು. ಈ ವೇಳೆ ಎದ್ದು ಹೋಗದಂತೆ ವಿ ಸೋಮಣ್ಣ ಮನವಿ ಮಾಡಿದರು. ಸೋಮಣ್ಣ ಮನವಿಗೂ ಕಿವಿಗೊಡದ ಜೆಡಿಎಸ್ ಕಾರ್ಯಕರ್ತರು, ಎದ್ದು ಹೋಗುತ್ತಲೇ ಇದ್ದರು. ಮಾಜಿ ಪ್ರಧಾನಿ ದೇವೇಗೌಡರು ಇದ್ದಂತಹ ಸಭೆಯಲ್ಲೇ ಕಾರ್ಯಕರ್ತರಿಲ್ಲದ್ದರಿಂದ ಮುಖಭಂಗ ಅನುಭವಿಸಿದರು.
ಈ ಸಭೆಯಲ್ಲಿ ಗೋಪಾಲಯ್ಯ, ಎಂ.ಟಿ ಕೃಷ್ಣಪ್ಪ, ಟಿ. ನಾಗರಾಜಯ್ಯ, ತಿಮ್ಮರಾಯಪ್ಪ, ವೀರಭದ್ರಯ್ಯ, ಹುಲಿನಾಯ್ಕರ್, ವೈ.ಎ ನಾರಾಯಣಸ್ವಾಮಿ ಸೇರಿ ಹಲವರು ಸಭೆಯಲ್ಲಿದ್ದರು.

ಕರ್ನಾಟಕದ jds-bjp ಮೈತ್ರಿಯ jds ಪಕ್ಷದ 3 ಕ್ಷೇತ್ರಗಳಲ್ಲಿ ಗೆಲ್ಲುವುದು ಒಂದೇ ಒಂದು ಕ್ಷೇತ್ರ ಮಾತ್ರ,, ಮಾಜಿ ಪ್ರಧಾನಿ
H ದೇವೆಗೌಡರು ಸ್ವತ 3 ಕ್ಷೇತ್ರಗಳಲ್ಲಿ ನಿಂತು ಕೊಂಡ್ರು ಗೆಲ್ಲಲು ಸಾಧ್ಯವಿಲ್ಲ. ಕಾರಣ ಭ್ರಷ್ಟರ ಪರ ಕೈ ಜೋಡಿಸಿದ್ದಾರೆ ಮಾಜಿ ಪ್ರಧಾನಿ ಅವರು.