ʼನನ್ನ ಮತʼ ಅಂಕಣದಲ್ಲಿ ಚುನಾವಣೆ ಮುಗಿಯುವವರೆಗೆ ವಿವಿಧ ಕ್ಷೇತ್ರಗಳ ಪ್ರಮುಖರ ಅಭಿಪ್ರಾಯ ಪ್ರಕಟವಾಗಲಿದೆ. ಇಲ್ಲಿದೆ ಲೇಖಕಿ - ಸಾಮಾಜಿಕ ಕಾರ್ಯಕರ್ತೆ ರೂಪ ಹಾಸನ ಅವರ ಮಾತುಗಳು
ಮತ ಚಲಾವಣೆ ಎಷ್ಟು ಮುಖ್ಯ?
ನೈಜ ಪ್ರಜಾಪ್ರಭುತ್ವದ ಉಳಿವಿಗಾಗಿ, ಅರ್ಹರಿಗೆ ಮತ ನೀಡುವುದು ಪ್ರಜೆಗಳಿಗಿರುವ ಪ್ರಬಲ ಅಸ್ತ್ರ.
ಈ ಬಾರಿಯ ಚುನಾವಣೆ ಏಕೆ ಮುಖ್ಯ?
ಜನರ ಹಕ್ಕುಗಳನ್ನು ದಮನಿಸುತ್ತಿರುವ, ಪ್ರತಿಕ್ಷಣ ಭೀತಿಯುಂಟುಮಾಡುತ್ತಿರುವ, ಸರ್ವಾಧಿಕಾರಿ ಧೋರಣೆಯ- ಸದ್ಯದ ಬಿಜೆಪಿ ಸರ್ಕಾರವನ್ನು ಮನೆಗಟ್ಟಲಿಕ್ಕಿರುವ ಸಶಕ್ತ ಅವಕಾಶ ಈ ಚುನಾವಣೆ.
ಬರಲಿರುವ ಸರ್ಕಾರ ಹೇಗಿರಬೇಕೆಂದು ಬಯಸುವಿರಿ?
ಪ್ರತಿ ಪ್ರಜೆಯೂ ನಿರ್ಭೀತಿಯಿಂದ, ಸುರಕ್ಷಿತವಾಗಿ ಬದುಕುವಂಥ, ಪ್ರಕೃತಿ ಮತ್ತು ಹೆಣ್ಣಿನ ಮೇಲಿನ ದೌರ್ಜನ್ಯಕ್ಕೆ ಶಾಶ್ವತ ಕಡಿವಾಣ ಹಾಕುವಂಥ ಹಾಗೂ ಪ್ರತಿ ಸಮಸ್ಯೆಗೆ ಮೂಲದಲ್ಲಿ ಪರಿಹಾರ ಕ್ರಮ ಕೈಗೊಳ್ಳುವ ಸರ್ಕಾರ ಇಂದಿನ ಅಗತ್ಯ.