ಪಣಜಿ ಟೌನ್‌ಶಿಪ್: ಸಿಡಿದೆದ್ದ ಗ್ರಾಮಸ್ಥರ ಪ್ರತಿಭಟನೆಗೆ 100 ದಿನ; ದೆಹಲಿ ತಲುಪಿದ ಆಕ್ರೋಶ

Date:

ಗೋವಾದ ಪಣಜಿಯಲ್ಲಿ ವಿಲಾಸಿ ಟೌನ್‌ಶಿಪ್‌ ನಿರ್ಮಿಸಲು ಅಲ್ಲಿನ ಬಿಜೆಪಿ ಸರ್ಕಾರ ಮುಂದಾಗಿದೆ. ಆ ಯೋಜನೆಯ ವಿರುದ್ಧದ ಮತ್ತು ಗೋವಾದ ಪ್ರಾಕೃತಿಕ ಸೌಂದರ್ಯ, ಹಳ್ಳಿಗಳ ಪರಿಸರ ವ್ಯವಸ್ಥೆಯನ್ನು ರಕ್ಷಿಸಲು ಸ್ಥಳೀಯ ಗ್ರಾಮಸ್ಥರು ಬೃಹತ್ ಹೋರಾಟ ನಡೆಸುತ್ತಿದ್ದಾರೆ. ಇದೀಗ, ಅವರ ಹೋರಾಟ ನೂರು ದಿನಗಳನ್ನು ಪೂರೈಸಿದೆ. ಪ್ರತಿಭಟನೆಯ ಕಾವು ದೆಹಲಿಯ ಜಂತರ್‌ಮಂತರ್‌ಅನ್ನೂ ತಲುಪಿಸಿದೆ.

- Advertisement -

ಉತ್ತರ ಗೋವಾದ ಬಿಚೋಲಿಮ್ ತಾಲೂಕಿನ ಕಾರಾಪುರ-ಸರ್ವನ್ ಗ್ರಾಮದಲ್ಲಿ ‘ಒನ್ ಗೋವಾ’ ಎಂಬ ಬೃಹತ್ ವಿಲಾಸಿ ಟೌನ್‌ಶಿಪ್ ನಿರ್ಮಿಸಲು ಗೋವಾ ಸರ್ಕಾರ ಯೋಜನೆ ರೂಪಿಸಿದೆ. ಈ ಟೌನ್‌ಶಿಪ್‌ ನಿರ್ಮಾಣದ ಗುತ್ತಿಗೆಯನ್ನು ‘ಹೌಸ್ ಆಫ್ ಅಭಿನಂದನ್ ಲೋಧಾ’ (HoABL) ಸಂಸ್ಥೆಗೆ ನೀಡಲಾಗಿದೆ. ಸುಮಾರು 53.5 ಹೆಕ್ಟೇರ್ (ಅಂದಾಜು 5.74 ಲಕ್ಷ ಚದರ ಮೀಟರ್) ಹರಡಿರುವ ಈ ಬೃಹತ್ ಯೋಜನೆಯ ಮೊದಲ ಹಂತದಲ್ಲಿ 1,388 ಪ್ರೀಮಿಯಂ ವಿಲ್ಲಾ ಪ್ಲಾಟ್‌ಗಳು, ಪಂಚತಾರಾ ಹೋಟೆಲ್, ಆಧುನಿಕ ಕ್ಲಬ್ ಹೌಸ್, ಜಿಮ್ ಹಾಗೂ ಒಂದು ಕೃತಕ ಬೀಚ್ ಸೇರಿದಂತೆ ಹತ್ತು ಹಲವು ಐಷಾರಾಮಿ ಸೌಲಭ್ಯಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಈ ಯೋಜನೆಯು ಗೋವಾದ ಪ್ರಾಕೃತಿಕ ಸಂದರ್ಯವನ್ನು ಮಾತ್ರವಲ್ಲದೆ, ಹಳ್ಳಿಗರ ಬದುಕನ್ನೇ ನಾಶ ಮಾಡಲಿದೆ ಎಂದು ಕಾರಾಪುರ ಮತ್ತು ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು ಆತಂಕ-ಆಕ್ರೋಶಗೊಂಡಿದ್ದಾರೆ. ಯೋಜನೆಯ ವಿರುದ್ಧ ಕಳೆದ ಮೂರು ತಿಂಗಳುಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದಾರೆ.

“ಈ ಯೋಜನೆಗಾಗಿ ಕೃಷಿ ಭೂಮಿ, ಕಾಡುಗಳು ಹಾಗೂ ಗುಡ್ಡಗಾಡು ಪ್ರದೇಶಗಳನ್ನು ನಾಶ ಮಾಡಿ, ಕಾಂಕ್ರೀಟ್ ಕಾಡನ್ನಾಗಿ ಪರಿವರ್ತಿಸಲಾಗುತ್ತಿದೆ. ಈಗಾಗಲೇ ಯೋಜನಾ ಸ್ಥಳದಲ್ಲಿ ಅಗೆಯಲಾಗಿರುವ ಬೋರ್‌ವೆಲ್‌ಗಳಿಂದಾಗಿ ಹಳ್ಳಿಯ ನೈಸರ್ಗಿಕ ನೀರಿನ ಕಾರಂಜಿಗಳು ಒಣಗಿ ಹೋಗಿವೆ. ಕೃಷಿ ಮತ್ತು ಜಾನುವಾರುಗಳಿಗೆ ತೇವಾಂಶದ ಕೊರತೆ ಉಂಟಾಗಿದೆ” ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

“ಕೇವಲ ಕೆಲವು ನೂರು ಕುಟುಂಬಗಳಿರುವ ಪುಟ್ಟ ಹಳ್ಳಿಯೊಳಗೆ ಸಾವಿರಕ್ಕೂ ಹೆಚ್ಚು ವಿಲಾಸಿ ಬಂಗಲೆಗಳನ್ನು ನಿರ್ಮಿಸಲಾಗುತ್ತಿದೆ. ಪರಿಣಾಮ, ಹೊರಗಿನ ಜನರು ಬಂದು ನೆಲೆಸುತ್ತಾರೆ. ಇದರಿಂದ ಸ್ಥಳೀಯ ಸಂಸ್ಕೃತಿ, ಭಾಷೆ ಹಾಗೂ ಭೌಗೋಳಿಕ ಅಸ್ಮಿತೆಗೆ ಧಕ್ಕೆಯಾಗುತ್ತದೆ” ಎಂದು ಪ್ರತಿಭಟನಾಕಾರರು ಕಳವಳ ವ್ಯಕ್ತಪಡಿಸಿದ್ದಾರೆ.

“ಸದ್ಯಕ್ಕೆ ಹಳ್ಳಿಯಲ್ಲಿ ಕುಡಿಯುವ ನೀರು, ವಿದ್ಯುತ್ ಮತ್ತು ಘನತ್ಯಾಜ್ಯ ನಿರ್ವಹಣೆಗೆ ಸೂಕ್ತ ಸೌಲಭ್ಯಗಳಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಇಷ್ಟು ದೊಡ್ಡ ಟೌನ್‌ಶಿಪ್ ತಲೆ ಎತ್ತಿದರೆ ಮೂಲಸೌಕರ್ಯಗಳ ಮೇಲೆ ಭಾರೀ ಒತ್ತಡ ಬೀಳಲಿದೆ” ಎಂಬ ಆತಂಕಯೂ ಅವರಲ್ಲಿ ಸೃಷ್ಟಿಯಾಗಿದೆ.

“ಯೋಜನಾ ಸಂಸ್ಥೆಯು ಯಾವುದೇ ಪರಿಸರ ಅನುಮತಿ ಪಡೆಯದೆ ಕಾಮಗಾರಿ ಆರಂಭಿಸಿದೆ. ವಿವಾದಾತ್ಮಕ ‘ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ’ಯ (TCP Act) ಸೆಕ್ಷನ್ 17(2) ಮತ್ತು 39A ಅಡಿಯಲ್ಲಿ ನಿಯಮಬಾಹಿರವಾಗಿ ಈ ಯೋಜನೆಗೆ ಅನುಮತಿ ಪಡೆಯಲಾಗಿದೆ” ಎಂದು ಪರಿಸರ ಕಾರ್ಯಕರ್ತರು ಆರೋಪಿಸಿದ್ದಾರೆ.

ಕಳೆದ 100 ದಿನಗಳಿಂದ ಕಾರಾಪುರದಲ್ಲಿ ಸತತವಾಗಿ ಧರಣಿ ನಡೆಸುತ್ತಿದ್ದರೂ ಗೋವಾ ಸರ್ಕಾರ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ, ಪ್ರತಿಭಟನಾಕಾರರು ತಮ್ಮ ಹೋರಾಟದ ಹಾದಿಯನ್ನು ಬದಲಿಸಿದ್ದಾರೆ. 100ನೇ ದಿನದ ಮೈಲಿಗಲ್ಲನ್ನು ಗುರುತಿಸಲು ಕಾರಾಪುರದ ಗ್ರಾಮಸ್ಥರು, ಪರಿಸರವಾದಿಗಳು ಹಾಗೂ ಸಾಮಾಜಿಕ ಹೋರಾಟಗಾರರ ನಿಯೋಗವು ನೇರವಾಗಿ ನವದೆಹಲಿಯ ಜಂತರ್ ಮಂತರ್‌ಗೆ ತೆರಳಿ ಅಲ್ಲಿ ಬೃಹತ್ ಪ್ರತಿಭಟನೆ ನಡೆಸಿದೆ. ಅಲ್ಲದೆ, ಗೋವಾದ ಪಣಜಿಯ ಆಜಾದ್ ಮೈದಾನದಲ್ಲೂ ನೂರಾರು ಜನ ಜಮಾಯಿಸಿ ಕಾರಾಪುರ ನಿವಾಸಿಗಳಿಗೆ ಬೆಂಬಲ ಘೋಷಿಸಿದ್ದಾರೆ. ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷ ಸೇರಿದಂತೆ ಗೋವಾದ ವಿರೋಧ ಪಕ್ಷಗಳು ಈ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಿವೆ.

ಮತ್ತೊಂದೆಡೆ, ಯೋಜನೆಯನ್ನು ಕೈಗೆತ್ತಿಕೊಂಡಿರುವ ‘ಹೌಸ್ ಆಫ್ ಅಭಿನಂದನ್ ಲೋಧಾ’ ಸಂಸ್ಥೆಯು ತನ್ನ ಮೇಲಿನ ಆರೋಪಗಳನ್ನು ತಳ್ಳಿಹಾಕಿದೆ. ತಾವು ಸರ್ಕಾರದಿಂದ ಅಗತ್ಯವಿರುವ ಎಲ್ಲ ಕಾನೂನಾತ್ಮಕ ಪರವಾನಗಿಗಳನ್ನು ಪಡೆದುಕೊಂಡೇ ಈ ಯೋಜನೆಯನ್ನು ಆರಂಭಿಸಿರುವುದಾಗಿ ಹೇಳಿಕೊಂಡಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಡಿಬಿಐ ಬ್ಯಾಂಕ್ ಮಾರಾಟಕ್ಕೆ ಕೇಂದ್ರ ಸಂಪುಟ ಅಸ್ತು: ₹52,878 ಕೋಟಿಗೆ ಫೇರ್‌ಫ್ಯಾಕ್ಸ್ ತೆಕ್ಕೆಗೆ

ಐಡಿಬಿಐ (IDBI) ಬ್ಯಾಂಕ್‌ನ ‘ಕಾರ್ಯತಂತ್ರದ ಪುನರ್‌ರಚನೆ’ಗೆ (Strategic Restructuring) ಕೇಂದ್ರ ಸಚಿವ...

ಬೀದರ್‌ | ಜಿಪಂ, ತಾಪಂ ಚುನಾವಣೆ: ಸಾಮಾಜಿಕ ಜಾಲತಾಣದಲ್ಲಿ ಆಕಾಂಕ್ಷಿಗಳ ಪ್ರಚಾರ ಜೋರು!

ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರವಾರು ಮೀಸಲಾತಿ ಪ್ರಕಟವಾಗುತ್ತಿದ್ದಂತೆ, ಬೀದರ್‌...

ಸಿಜೆಪಿ ನಾಯಕರ ಬಂಧನಕ್ಕೆ ತೀವ್ರ ಖಂಡನೆ: ತಕ್ಷಣ ರಾಂಕಾ, ಸೌರವ್ ಬಿಡುಗಡೆಗೆ ವಿಪಕ್ಷಗಳ ಆಗ್ರಹ

ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್...

ಪತಿಯನ್ನು ಕೊಂದು ಕಾಂಕ್ರೀಟ್ ಡ್ರಮ್‌ನಲ್ಲಿ ಹೂತಿಟ್ಟ ಪ್ರಕರಣ: ಪತ್ನಿ, ಪ್ರಿಯಕರನಿಗೆ ಗಲ್ಲು ಶಿಕ್ಷೆ

ಮರ್ಚೆಂಟ್ ನೇವಿ ಅಧಿಕಾರಿ ಸೌರಭ್ ರಜಪೂತ್ ಅವರನ್ನು ಬರ್ಬರವಾಗಿ ಹತ್ಯೆಗೈದು, ಮೃತದೇಹವನ್ನು...