22 ನಿಮಿಷದ ಜಾಹೀರಾತು, 75 ಸಾವಿರ ದಂಡ! ಸಿನಿಪ್ಲೆಕ್ಸ್‌ ಕಿವಿಹಿಂಡಿದ ಗ್ರಾಹಕ ವೇದಿಕೆ

Date:

ಸಿನಿಮಾ ಶುರುವಾಗುವ ಮುನ್ನ 22 ನಿಮಿಷಗಳ ಕಾಲ ವಾಣಿಜ್ಯ ಜಾಹೀರಾತುಗಳು ಮತ್ತು ಪ್ರಚಾರದ ವಿಷಯಗಳನ್ನು ಪ್ರದರ್ಶಿಸಿ ಚಲನಚಿತ್ರದ ಆರಂಭವನ್ನು ವಿಳಂಬಗೊಳಿಸಿದ ಸಿನಿಪ್ಲೆಕ್ಸ್‌ಗೆ ಹೈದರಾಬಾದ್ ಜಿಲ್ಲಾ ಗ್ರಾಹಕ ವಿವಾದ ಪರಿಹಾರ ಆಯೋಗ 75,000 ರೂಪಾಯಿ ಪಾವತಿಸಲು ಆದೇಶಿಸಿದೆ.

- Advertisement -

ಈ ಪ್ರಕರಣವು 2025ರ ಜೂನ್ 20ರಂದು ನಡೆದಿದ್ದು, ಧನುಷ್ ಮತ್ತು ನಾಗಾರ್ಜುನ ಅಭಿನಯದ, ಶೇಖರ್ ಕಮ್ಮುಲ ನಿರ್ದೇಶನದ ‘ಕುಬೇರಾ’ ಚಿತ್ರದ ರಾತ್ರಿ 10:35 ಗಂಟೆಯ ಪ್ರದರ್ಶನಕ್ಕೆ ವ್ಯಕ್ತಿಯೊಬ್ಬರು ಎರಡು ಟಿಕೆಟ್‌ಗಳನ್ನು ಖರೀದಿಸಿದ್ದರು. ಅವರು ಮತ್ತು ಅವರ ಸ್ನೇಹಿತ 10:30ಕ್ಕೆ ಥಿಯೇಟರ್‌ನಲ್ಲಿ ಕುಳಿತುಕೊಂಡಿದ್ದರು. ಆದರೆ ಜಾಹೀರಾತುಗಳು ಮತ್ತು ಟ್ರೈಲರ್‌ಗಳು 10:52 ರವರೆಗೂ ಮುಂದುವರೆದು, ಚಿತ್ರವು ಸುಮಾರು 22 ನಿಮಿಷಗಳಷ್ಟು ತಡವಾಗಿ ಆರಂಭವಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಡತನದ ಮಾಪನ ಮತ್ತು ವಾಸ್ತವ ಚಿತ್ರಣ: ಆಳ ಅಗಲ

ವಿಶ್ವಬ್ಯಾಂಕ್‌ನ ಬಡತನ ಮತ್ತು ಸಮಾನತೆಯ ಇತ್ತೀಚಿನ ವರದಿಯ ಪ್ರಕಾರ 2011ರಿಂದ 2023ರ ಅವಧಿಯಲ್ಲಿ ಭಾರತದಲ್ಲಿ ಅಂದಾಜು 49.6 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಈ ವರದಿಯನ್ನು ಆಧರಿಸಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ...

ಗಾಂಧೀಯ ‘ರಾಮ’-ಮನುವಾದಿಗಳ ‘ಶ್ರೀರಾಮ’ನಲ್ಲ

ಸಮಾನತೆಯ ರಾಮರಾಜ್ಯಕ್ಕೂ, ವರ್ಣಾಶ್ರಮದ ರಾಜಕಾರಣಕ್ಕೂ ಇರುವ ವ್ಯತ್ಯಾಸವೇನು? ಗಾಂಧೀಜಿಯವರ ಪಾಲಿಗೆ ರಾಮ ಎಂದರೆ ಸತ್ಯ, ಅಹಿಂಸೆ, ಪ್ರೀತಿ ಮತ್ತು ಸರ್ವಧರ್ಮ ಸಮಭಾವದ ಸಂಕೇತ; ಅಂಬೇಡ್ಕರ್ ಅವರ ವಿಮರ್ಶೆಯಲ್ಲಿ ಪುರಾಣದ ರಾಮನ ಆಡಳಿತದಲ್ಲಿ ಜಾತಿ...

ಮಂಡೇಲ ನೇತೃತ್ವದಲ್ಲಿ ಗುಲಾಮಗಿರಿ – ವರ್ಣಭೇದ ನೀತಿ ವಿರುದ್ಧ...

ನೆಲ್ಸನ್ ಮಂಡೇಲಾ ಅವರಂತಹ ಮಹಾನ್ ನಾಯಕರು ಕಟ್ಟಿದ್ದ ಈ ಪಕ್ಷ ದಾರಿ ತಪ್ಪಿದ್ದಾದರೂ ಹೇಗೆ ಎಂಬ ಪ್ರಶ್ನೆಗೆ ರಾಜಕೀಯ ತಜ್ಞರು ಸ್ಪಷ್ಟ ಕಾರಣಗಳನ್ನು ನೀಡಿದ್ದಾರೆ. ಆಡಳಿತಶಾಹಿಯ ಭ್ರಷ್ಟಾಚಾರ, ಮಿತಿಮೀರಿದ ಬಡತನ, ನಿರುದ್ಯೋಗ, ಮತ್ತು...

ಈ ವಿಳಂಬದಿಂದಾಗಿ ಗ್ರಾಹಕ ತನ್ನ ಮನೆಗೆ ಸುಮಾರು ರಾತ್ರಿ 3 ಗಂಟೆಗೆ ತಲುಪಿದ್ದು, ಅವರ ಮರುದಿನದ ಕೆಲಸಗಳಿಗೆ ಅಡ್ಡಿಯುಂಟಾಗಿದೆ ಎಂದು ದೂರುದಾರರು ಆಯೋಗಕ್ಕೆ ತಿಳಿಸಿದರು.

ಸಿನಿಪ್ಲೆಕ್ಸ್ ಮಾಲೀಕರು ಜಾಹೀರಾತುಗಳು, ಸಾರ್ವಜನಿಕ ಸೇವಾ ಜಾಗೃತಿ ವಿಷಯಗಳು (PSA) ಮತ್ತು ಟ್ರೈಲರ್‌ಗಳು ತಮ್ಮ ವ್ಯಾಪಾರದ ಭಾಗವಾಗಿದೆ ಮತ್ತು ಸಾರ್ವಜನಿಕ ಹಿತಾಸಕ್ತಿಗಾಗಿ ಪ್ರದರ್ಶಿಸಲಾಗುತ್ತಿದೆ ಎಂದು ವಾದಿಸಿದರು. ಆದರೆ ಆಯೋಗ ಈ ಪ್ರತಿವಾದವನ್ನು ತಿರಸ್ಕರಿಸಿತು.

ಆಯೋಗದ ಅಧ್ಯಕ್ಷ ವಕ್ಕಂಟಿ ನರಸಿಂಹ ರಾವ್ ಮತ್ತು ಸದಸ್ಯ ಸುಮಾ ವಾಲ ಅವರು 2026ರ ಸೆಪ್ಟೆಂಬರ್ 11ರಂದು ಅಂತಿಮ ಆದೇಶ ನೀಡಿದರು. ಸರ್ಕಾರಿ ಮಾರ್ಗಸೂಚಿಗಳ ಪ್ರಕಾರ ಅನುಮೋದಿತ ಸಾರ್ವಜನಿಕ ಸೇವಾ ಚಲನಚಿತ್ರಗಳ ಅವಧಿಯನ್ನು ‘ಎರಡು ನಿಮಿಷಗಳವರೆಗೆ’ ಮಾತ್ರ ನಿರ್ಬಂಧಿಸಲಾಗಿದೆ. ಆದರೆ ಥಿಯೇಟರ್ ವಾಣಿಜ್ಯ ಜಾಹೀರಾತು ಪ್ರದರ್ಶಿಸಿ ಅನಗತ್ಯ ವಾಣಿಜ್ಯ ಲಾಭ ಪಡೆಯಲು ಪ್ರಯತ್ನಿಸಿದೆ ಎಂದು ಆಯೋಗ ಚಾಟಿ ಬೀಸಿದೆ.

ಆಯೋಗದ ಆದೇಶದ ಪ್ರಕಾರ; ದೂರುದಾರರಿಗೆ ಅನಾನುಕೂಲತೆಗಾಗಿ 20,000 ರೂ. ಪರಿಹಾರ ಕಾನೂನು ವೆಚ್ಚಕ್ಕಾಗಿ 5,000 ರೂ. ಘಟನೆ ಪುನರಾವರ್ತನೆಯಾಗದಂತೆ ಜಿಲ್ಲಾ ಗ್ರಾಹಕ ಕಲ್ಯಾಣ ನಿಧಿಗೆ ದಂಡವಾಗಿ 50,000 ರೂ. ಒಟ್ಟು 75,000 ರೂಪಾಯಿ ಪಾವತಿಸಬೇಕು.

ಈ ತೀರ್ಪು ಸಿನಿಮಾ ಹಾಲ್‌ಗಳು ಟಿಕೆಟ್‌ನಲ್ಲಿ ನಮೂದಿಸಿದ ಸಮಯಕ್ಕೆ ಚಿತ್ರ ಪ್ರದರ್ಶನ ಆರಂಭಿಸಬೇಕು ಮತ್ತು ವಾಣಿಜ್ಯ ಜಾಹೀರಾತುಗಳಿಂದ ಅನಗತ್ಯ ವಿಳಂಬ ಮಾಡಬಾರದು ಎಂಬುದನ್ನು ಒತ್ತಿ ಹೇಳುತ್ತದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯುಪಿ ಚುನಾವಣೆಗೆ ಹೊಸ ತಿರುವು: ಓವೈಸಿ- ಚಂದ್ರಶೇಖರ್ ಮೈತ್ರಿ ಘೋಷಣೆ; ಆಜಾದ್ ಸಿಎಂ ಅಭ್ಯರ್ಥಿ

ಮುಂಬರುವ 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ರಾಜ್ಯ ರಾಜಕಾರಣದಲ್ಲಿ...

ಬೀದರ್‌ | ಕಬ್ಬಿನ ದರ ನಿಗದಿಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ‌ ಆರಂಭ

ಪ್ರಸಕ್ತ ವರ್ಷದ ಹಂಗಾಮಿನ ಪ್ರತಿ ಟನ್ ಕಬ್ಬಿಗೆ ₹5,500 ಬೆಲೆ ನಿಗದಿಪಡಿಸಿ,...

‘ಬುಲ್ಡೋಜರ್’ ಈಗ ಬ್ರ್ಯಾಂಡ್ ಎಂದ ಸಿಎಂ ಯೋಗಿ; ಪರ-ವಿರೋಧದ ಚರ್ಚೆ!

ಬುಲ್ಡೋಜರ್‌ಗಳು ಇಂದು ಉತ್ತರ ಪ್ರದೇಶದೊಂದಿಗೆ ತಳುಕು ಹಾಕಿಕೊಂಡಿರುವ ಒಂದು ಬ್ರ್ಯಾಂಡ್ ಆಗಿ...

2 ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿದ ಹಣದುಬ್ಬರ: RBI ನಿಗದಿತ 6%ರ ಗಡಿ ದಾಟಿದ ಬೆಲೆ ಏರಿಕೆ ಬಿಸಿ!

ತರಕಾರಿ ಸೇರಿದಂತೆ ಅಗತ್ಯ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿರುವ ಹಿನ್ನೆಲೆಯಲ್ಲಿ, ದೇಶದ...