ರಾಜ್ಯದಲ್ಲಿನ ಮಾಂಟೇಸರಿಗಳಿಗೆ ಸರ್ಕಾರದ ಅಂಕುಶ ಬೇಕೇ ಬೇಕು : ಮೋಹನ್ ದಾಸರಿ

Date:

  • ಹಣ ಮಾಡುವ ದಂಧೆಗೆ ಇಳಿದಿರುವುದರಿಂದಾಗಿ ಈ ರೀತಿಯ ನೂರಾರು ಅಚಾತುರ್ಯ
  • ಸರ್ಕಾರವು ಈ ವಿಚಾರದಲ್ಲಿ ತಾಯ್ತನ ಹಾಗೂ ಮಾನವೀಯತೆಯನ್ನು ಮೆರೆಯಬೇಕು

ರಾಜ್ಯ ರಾಜಧಾನಿ ಬೆಂಗಳೂರಿನ ಮಾಂಟೆಸರಿವೊಂದರಲ್ಲಿ ಚಿಕ್ಕ ಮಗುವನ್ನು ದೊಡ್ಡ ಮಗು ಹೊಡೆದ ವಿಚಾರಕ್ಕೆ ಸಂಬಂಧಿಸಿದಂತೆ, ಮಾಂಟೇಸರಿ ಮಾಲೀಕರು ಮಕ್ಕಳನ್ನು ನೋಡಿಕೊಳ್ಳಲು ಸೂಕ್ತ ತರಬೇತಿ ಹೊಂದಿದ ಸಿಬ್ಬಂದಿ ನೇಮಿಸದೆ ಕೇವಲ ವ್ಯಾಪಾರಿ ದೃಷ್ಟಿಯಿಂದ ಹಣ ಮಾಡುವ ದಂದೆಗೆ ಇಳಿದಿರುವುದರಿಂದಾಗಿ ಈ ರೀತಿಯ ನೂರಾರು ಅಚಾತುರ್ಯಗಳು ನಡೆಯುತ್ತಿದೆ ಎಂದು ಆಪ್‌ನ ರಾಜ್ಯ ಕಾರ್ಯಧ್ಯಕ್ಷ ಮೋಹನ್ ದಾಸರಿ ಹೇಳಿದರು.

ಪಕ್ಷದ ಮಾಧ್ಯಮ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಂತಹ ವಾಣಿಜ್ಯ ನಗರಿಯಲ್ಲಿ ಬೆಲೆ ಏರಿಕೆಯಂತಹ ಜ್ವಲಂತ ಸಮಸ್ಯೆಗಳನ್ನು ಎದುರಿಸಲು, ಸಂಸಾರಗಳನ್ನು ಸರಿದೂಗಿಸಿಕೊಂಡು ಹೋಗಲು ದಂಪತಿ ಕೆಲಸಕ್ಕೆ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ತಮ್ಮ ಮಕ್ಕಳನ್ನು ಮಾಂಟೇಸರಿಗಳಲ್ಲಿ ಅಥವಾ ಡೇ ಕೇರ್ ಸೆಂಟರ್‌ಗಳಲ್ಲಿ ಬಿಟ್ಟು ಹೋಗುವಂತಹ ಅನಿವಾರ್ಯತೆ ಇದೆ ಎಂದರು.

ಕೂಡಲೇ ರಾಜ್ಯ ಸರ್ಕಾರವು ಇವುಗಳ ಮೇಲೆ ನಿಗಾವಹಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಸರ್ಕಾರದ ಮಾರ್ಗಸೂಚಿಗಳನ್ನು ಹಾಗೂ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡುವ ಮೂಲಕ ಅವುಗಳ ಮೇಲೆ ಅಂಕುಶ ಹಾಕಬೇಕು. ಮಕ್ಕಳ ಹಾಗೂ ಪೋಷಕರ ಹಿತದೃಷ್ಟಿಯಿಂದ ಸರ್ಕಾರ ಈ ಕೂಡಲೇ ಕ್ರಮಕ್ಕೆ ಮುಂದಾಗಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಬೆಂಗಳೂರು ನಗರ ಉಪಾಧ್ಯಕ್ಷ ಅಶೋಕ್ ಮೃತ್ಯುಂಜಯ ಮಾತನಾಡಿ, ಎನ್ ಸಿ ಇ ಆರ್ ಟಿ ಈಗಾಗಲೇ 2013ರಲ್ಲಿ ವರದಿಯನ್ನು ನೀಡಿ 2016ರ ಒಳಗೆ ಅನುಷ್ಠಾನಗೊಳಿಸಬೇಕೆಂದು ಹೇಳಿದೆ. ಆದರೆ, ಇದುವರೆಗೂ ರಾಜ್ಯ ಸರ್ಕಾರ ವರದಿಯ ಮಾರ್ಗಸೂಚಿಯ ಅನುಷ್ಠಾನವನ್ನು ಮಾಡದಿರುವುದು ಸರ್ಕಾರದ ಬೇಜವಾಬ್ದಾರಿಯನ್ನು ತೋರಿಸುತ್ತದೆ. ಸಮಿತಿಯ ಯಾವುದೇ ಮಾನದಂಡಗಳನ್ನು ಮಾಂಟೇಸರಿಗಳು ಪಾಲಿಸದೆ ಹಣ ಮಾಡುವ ದಂದೆಯಲ್ಲಿ ನಿರತರಾಗಿದ್ದಾರೆ. ಕೂಡಲೇ ಶಿಕ್ಷಣ ಸಚಿವರು ಇತ್ತ ಕಡೆ ಗಮನಹರಿಸಬೇಕು ಹಾಗೂ ಕಮಿಷನ್ ನೇಮಕ ಆಗಬೇಕು ಎಂದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ದಿನದ 24 ಗಂಟೆಯೂ ಹೋಟೆಲ್ ತೆರೆಯಲು ಅನುಮತಿ ನೀಡಿ ಎಂದ ಬಿಬಿಎಚ್ಎ

ಪಕ್ಷದ ಕಾರ್ಯದರ್ಶಿ ಸುಷ್ಮಾ ವೀರ್ ಮಾತನಾಡಿ, ಸರ್ಕಾರವು ಈ ವಿಚಾರದಲ್ಲಿ ತಾಯ್ತನ ಹಾಗೂ ಮಾನವೀಯತೆಯನ್ನು ಮೆರೆಯಬೇಕು. ದೇಶದ ಭವಿಷ್ಯದ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿಸುವಲ್ಲಿ ಸರ್ಕಾರವು ಕೂಡಲೇ ಈ ಖಾಸಗಿ ಮಾಂಟೆಸರಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ದೆಹಲಿಯ ಆಪ್ ಸರ್ಕಾರವು ನಡೆಸುತ್ತಿರುವ ಮಾಂಟೆಸರಿಗಳನ್ನು ಅಲ್ಲಿಗೆ ಹೋಗಿ ವೀಕ್ಷಿಸಿ ಅದೇ ರೀತಿಯ ಶಾಲೆಗಳನ್ನು ರಾಜ್ಯದಲ್ಲಿಯೂ ಸಹ ತೆರೆಯಬೇಕು” ಎಂದು ಒತ್ತಾಯಿಸಿದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಖಾಸಗಿ ಮೀಸಲು: ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎನ್ನುವುದು ಬರೀ ಘೋಷಣೆಯೇ?

ರಾಜ್ಯದ ಖಾಸಗಿ ಕೈಗಾರಿಕೆಗಳು ಹಾಗೂ ಇತರೆ ಸಂಸ್ಥೆಗಳಲ್ಲಿ ಆಡಳಿತಾತ್ಮಕ ಹುದ್ದೆಗಳಲ್ಲಿ ಶೇ.50ರಷ್ಟು...

ಜನರಲ್ಲಿ ಡೆಂಘೀ ಜಾಗೃತಿ: ರಾಜಧಾನಿಯಲ್ಲಿ ಸ್ವತಃ ಫೀಲ್ಡಿಗಿಳಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ರಾಜ್ಯದಲ್ಲಿ ಡೆಂಘೀ ರೋಗ ಹೆಚ್ಚಳವಾಗುತ್ತಿದೆ. ಎಲ್ಲ ಜಿಲ್ಲೆಗಳಲ್ಲಿ ಈ ಬಗ್ಗೆ ಜನರಲ್ಲಿ...

ಬೀದರ್-ಬೆಂಗಳೂರು ವಿಮಾನ ಸೇವೆ: 2 ವಾರದಲ್ಲಿ ವರದಿ ಸಲ್ಲಿಸಲು ಸಚಿವ ಎಂ.ಬಿ.ಪಾಟೀಲ್ ಸೂಚನೆ

ಬೀದರ್–ಬೆಂಗಳೂರು ನಡುವೆ ನಾಗರಿಕ ವಿಮಾನಯಾನ ಸೇವೆ ಪುನ: ಆರಂಭಿಸುವ ಕುರಿತಂತೆ ವಿವಿಧ...

ಜು. 19: ಬ್ಯಾರಿ ಅಕಾಡೆಮಿ ಅಧ್ಯಕ್ಷ-ಸದಸ್ಯರ ಪದಗ್ರಹಣ; ‘ಪಿರ್ಸಪ್ಪಾಡ್‌’ ಬ್ಯಾರಿ ಸಾಂಸ್ಕೃತಿಕ ಸಂಭ್ರಮ

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಪಿರ್ಸಪ್ಪಾಡ್‌ (ಬ್ಯಾರಿ ಸಾಂಸ್ಕೃತಿಕ ಸಂಭ್ರಮ)...