ಆರೋಪಿಗಳ ಖುಲಾಸೆ ನಮಗೆ ಮಾಡಿದ ಕಪಾಳಮೋಕ್ಷ: ಬುಡಕಟ್ಟು ಮಹಿಳೆಯರು

Date:

  • ಬುಡಕಟ್ಟು ಮಹಿಳೆಯರು ಸಂತ್ರಸ್ತರೆಂದು ಪರಿಗಣಿಸಿ ಪರಿಹಾರಕ್ಕೆ ಆದೇಶಿಸಿದ ನ್ಯಾಯಾಲಯ
  • 2007ರಲ್ಲಿ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಗ್ರಾಮದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ

ಆಂಧ್ರ ಪ್ರದೇಶದ 21 ಮಂದಿ ಅತ್ಯಾಚಾರ ಆರೋಪಿ ಪೊಲೀಸರನ್ನು ಖುಲಾಸೆಗೊಳಿಸಿರುವ ನ್ಯಾಯಾಲಯದ ತೀರ್ಪು ತಮಗೆ ಮಾಡಿದ ಕಪಾಳಮೋಕ್ಷ ಎಂದು ಸಂತ್ರಸ್ತ 11 ಬುಡಕಟ್ಟು ಮಹಿಳೆಯರು ನೋವು ತೋಡಿಕೊಂಡಿದ್ದಾರೆ.

ಕೋಂಧ್ ಬುಡಕಟ್ಟಿಗೆ ಸೇರಿದ 11 ಮಂದಿ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಆರೋಪಿಗಳಾದ 21 ಮಂದಿ ಪೊಲೀಸರನ್ನು ಆಂಧ್ರ ಪ್ರದೇಶದ ವಿಶಾಖಪಟ್ಟಣದ ವಿಶೇಷ ನ್ಯಾಯಾಲಯ ಗುರುವಾರ (ಏಪ್ರಿಲ್ 7) ಖುಲಾಸೆಗೊಳಿಸಿದೆ.

ಈ ಕುರಿತು ಬುಡಕಟ್ಟು ಮಹಿಳೆಯರು ಪ್ರತಿಕ್ರಿಯೆ ನೀಡಿದ್ದು, ಪ್ರಬಲರನ್ನು ರಕ್ಷಿಸುವ ವ್ಯವಸ್ಥೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

“ಒಬ್ಬ ಪೊಲೀಸ್‌ ಮತ್ತೊಬ್ಬ ಪೊಲೀಸ್ ವಿರುದ್ಧದ ಅಪರಾಧ ಪ್ರಕರಣವನ್ನು ತನಿಖೆ ಮಾಡುವುದಿಲ್ಲ. ನಮ್ಮ ಪ್ರಕರಣದಲ್ಲಿ ನ್ಯಾಯವು ನಮ್ಮ ತೆಕ್ಕೆಯಿಂದ ಜಾರಿಕೊಂಡಿದೆ. ನಮ್ಮನ್ನು ಸಂತ್ರಸ್ತರು ಎಂದು ನ್ಯಾಯಾಲಯ ಪರಿಗಣಿಸಿದೆ. ಅದಕ್ಕಾಗಿ ನಮಗೆ ಪರಿಹಾರ ನೀಡಿರುವ ಆದೇಶವೊಂದೇ ಪ್ರಕರಣದಲ್ಲಿ ನಮಗೆ ದೊರೆತಿರುವ ಆಶಾಕಿರಣ” ಎಂದು ಸಂತ್ರಸ್ತ ಬುಡಕಟ್ಟು ಮಹಿಳೆಯೊಬ್ಬರು ಹೇಳಿದರು.

“ಅತ್ಯಾಚಾರದ ನಂತರ ನನ್ನ ಗಂಡ ಎರಡು ತಿಂಗಳ ಹಿಂದೆ ನನ್ನನ್ನು ತೊರೆದು ಹೊರಟು ಹೋದ. ಈಗ ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದೇನೆ” ಎಂದು ಮತ್ತೊಬ್ಬ ಬುಡಕಟ್ಟು ಮಹಿಳೆ ಮಾಧ್ಯಮಗಳ ಮುಂದೆ ಕಂಬನಿ ಮಿಡಿದಿದ್ದಾರೆ.

“ನಮ್ಮ ಗಂಡಂದಿರು ಮತ್ತು ಗ್ರಾಮಸ್ಥರು ಹಿಂಸಾತ್ಮಕ ಮತ್ತು ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ. ಬಹಳ ದಿನಗಳ ಕಾಲ ನಮ್ಮ ಕುಟುಂಬ ನಮ್ಮಿಂದ ದೂರ ಉಳಿದಿದೆ. ಮಕ್ಕಳನ್ನೂ ನಮ್ಮ ಬಳಿ ಬಿಡುತ್ತಿರಲಿಲ್ಲ” ಎಂದು ಇನ್ನೊಬ್ಬ ಸಂತ್ರಸ್ತ ಬುಡಕಟ್ಟು ಮಹಿಳೆ ಬೇಸರ ವ್ಯಕ್ತಪಡಿಸಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿಯ ವಿಶೇಷ ನ್ಯಾಯಾಲಯ ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶಿಸಿದೆ. ಅತ್ಯಾಚಾರ ಸಂತ್ರಸ್ತೆಯರಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಪರಿಹಾರ ನೀಡಬೇಕು ಎಂದೂ ನ್ಯಾಯಾಲಯ ಸೂಚಿಸಿದೆ.

ಪ್ರಕರಣದ ಯಾವುದೇ ಆರೋಪಿಗಳನ್ನು ಬಂಧಿಸಲಾಗಿಲ್ಲ. ಅವರಲ್ಲಿ ಕೆಲವರು ಈಗಾಗಲೇ ನಿವೃತ್ತರಾಗಿದ್ದಾರೆ, ಇನ್ನು ಕೆಲವರು ನಿಧನರಾಗಿದ್ದಾರೆ ಎಂದು ಮಾನವ ಹಕ್ಕುಗಳ ವೇದಿಕೆಯ (ಎಚ್ಆರ್ಎಫ್) ಆಂಧ್ರ ಪ್ರದೇಶ ರಾಜ್ಯ ಸಮಿತಿಯ ಉಪಾಧ್ಯಕ್ಷ ಎಂ ಶರತ್ ಹೇಳಿದ್ದಾರೆ.

ವಕಪಲ್ಲಿ ಗ್ರಾಮಕ್ಕೆ ಶೋಧ ಕಾರ್ಯಾಚರಣೆಗೆ ತೆರಳಿದ್ದ 21 ಮಂದಿ ಪೊಲೀಸರು ರಸ್ತೆಯಲ್ಲಿ ಸಾಗುತ್ತಿದ್ದ 11 ಮಂದಿ ಬುಡಕಟ್ಟು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಹೊತ್ತಿದ್ದಾರೆ.

ಈ ಸುದ್ದಿ ಓದಿದ್ದೀರಾ? ಜಾಗತಿಕವಾಗಿ ಅಮಿತ್‌ ಶಾ ಟ್ವೀಟ್‌ ತಡೆ ಹಿಡಿದ ಟ್ವಿಟರ್ !

ನಿಷ್ಪಕ್ಷಪಾತ ಮತ್ತು ನ್ಯಾಯಯುತವಾದ ತನಿಖೆ ನಡೆಸಲು ಇಬ್ಬರು ಅಧಿಕಾರಿಗಳನ್ನು ನೇಮಿಸುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿತ್ತು. ಅಧಿಕಾರಿಗಳು ತನಿಖೆಯಲ್ಲಿ ವಿಫಲರಾದ ಕಾರಣ ಆರೋಪಿಗಳನ್ನು ಪ್ರಾಥಮಿಕವಾಗಿ ಖುಲಾಸೆಗೊಳಿಸಲಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

ಗ್ರೇಹೌಂಡ್ಸ್ ವಿಶೇಷ ತಂಡದ ಪೊಲೀಸರು 2007ರ ಆಗಸ್ಟ್‌ನಲ್ಲಿ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಗ್ರಾಮವೊಂದರಲ್ಲಿ ಬುಡಕಟ್ಟು ಮಹಿಳೆಯರು ಸಾಗುತ್ತಿದ್ದಾಗ ಅವರ ಮೇಲೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು ಎಂದು ಆರೋಪಿಸಲಾಗಿತ್ತು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಿಚಾಂಗ್ ಚಂಡಮಾರುತ | ತಮಿಳುನಾಡಿನಲ್ಲಿ ಹೈ ಅಲರ್ಟ್‌; ಶಾಲಾ-ಕಾಲೇಜು ರಜೆ ಘೋಷಣೆ

ಬಂಗಾಳಕೊಲ್ಲಿಯಲ್ಲಿ ಮಿಚಾಂಗ್ ಚಂಡಮಾರುತ ರೂಪುಗೊಂಡಿದೆ. ಈ ಹಿನ್ನೆಲೆ, ಆಂಧ್ರಪ್ರದೇಶ ಮತ್ತು ತಮಿಳುನಾಡಿನತ್ತ...

ಮಿಚಾಂಗ್ ಚಂಡಮಾರುತಕ್ಕೆ ಆಂಧ್ರ – ತಮಿಳುನಾಡು ತತ್ತರ; 120 ರೈಲುಗಳ ಸಂಚಾರ ರದ್ದು

ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಮಿಚಾಂಗ್ ಚಂಡಮಾರುತ ಅಬ್ಬರ ಹೆಚ್ಚಾಗಿದೆ. ದಕ್ಷಿಣ ಆಂಧ್ರ...

ಅಧಿಕೃತ ಚುನಾವಣಾ ಫಲಿತಾಂಶ ಪ್ರಕಟಿಸಿದ ಆಯೋಗ: ಯಾವ ರಾಜ್ಯಗಳಲ್ಲಿ ಯಾರಿಗೆ ಎಷ್ಟು ಸ್ಥಾನ?

ಇಂದು ಪ್ರಕಟಗೊಂಡ ಚುನಾವಣಾ ಫಲಿತಾಂಶಗಳ ಬಗ್ಗೆ ಚುನಾವಣಾ ಆಯೋಗ ಎಲ್ಲ ರಾಜ್ಯಗಳ...

ಈ ಫಲಿತಾಂಶ ಲೋಕಸಭೆ ಚುನಾವಣೆಯ ಹ್ಯಾಟ್ರಿಕ್‌ ಗೆಲುವಿನ ಮುನ್ಸೂಚನೆ: ಪ್ರಧಾನಿ ನರೇಂದ್ರ ಮೋದಿ

'ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ವಿಧಾನಸಭೆ ಚುನಾವಣೆಯ ಹ್ಯಾಟ್ರಿಕ್‌ ಗೆಲುವು 2024ರ...