‘ಮಗೂ, ನಿನ್ನ ನೋವು ಅಳಿಸಲಾಗದು’: ಅತ್ಯಾಚಾರಿಗೆ ಆಜೀವ ಶಿಕ್ಷೆ ನೀಡಿ ಸಂತ್ರಸ್ತೆಗೆ ಪತ್ರ ಬರೆದ ನ್ಯಾಯಾಧೀಶರು

Date:

ನ್ಯಾಯಾಂಗ ವ್ಯವಸ್ಥೆಯ ಇತಿಹಾಸದಲ್ಲೇ ಅತ್ಯಂತ ಭಾವನಾತ್ಮಕ ಮತ್ತು ಚಾರಿತ್ರಿಕ ತೀರ್ಪೊಂದಕ್ಕೆ ರಾಜಸ್ಥಾನದ ಬಾಢಮೇರ್ ಪೋಕ್ಸೋ ಕೋರ್ಟ್ ಸಾಕ್ಷಿಯಾಗಿದೆ. 7 ವರ್ಷದ ಕಂದಮ್ಮನ ಮೇಲಿನ ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಸಿ ತೀರ್ಪು ನೀಡಿದ ವಿಶೇಷ ನ್ಯಾಯಾಧೀಶರು, ಅತ್ಯಾಚಾರಿ ಅಪರಾಧಿಗೆ ಆಜೀವ ಜೈಲು ಶಿಕ್ಷೆ ವಿಧಿಸಿದ್ದಾರೆ. ತೀರ್ಪು ನೀಡುವಾಗ ಅತ್ಯಂತ ಭಾವಪರವಶರಾದ ನ್ಯಾಯಾಧೀಶರು, ಸಂತ್ರಸ್ತ ಮಗುವಿನ ತಾಯಿ ಮತ್ತು ಪೋಷಕರ ಮುಂದೆ ಕೈಮುಗಿದು ಕ್ಷಮೆ ಕೇಳಿದ್ದಾರೆ.

- Advertisement -

2026ರ ಜುಲೈ ತಿಂಗಳಿನಲ್ಲಿ ಬಾಢಮೇರ್‌ನ 7 ವರ್ಷದ ಅಪ್ರಾಪ್ತ ಬಾಲಕಿಯನ್ನು ಆಕೆಯ ಮನೆಯ ಬಳಿಯಿಂದ ನೆರೆಹೊರೆಯ ಯುವಕನೊಬ್ಬ ಅಪಹರಿಸಿ ಅತ್ಯಾಚಾರ ಎಸಗಿದ್ದ. ಘಟನೆ ನಡೆದ ಕೇವಲ 15 ದಿನಗಳಲ್ಲಿ ಬಾಢಮೇರ್ ಪೊಲೀಸರು ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ರಾಮಲೀಲಾ ಮೈದಾನ ಮತ್ತೆ ಎಚ್ಚರಿಸಿದೆ- ಅಧಿಕಾರ ಶಾಶ್ವತವಲ್ಲ, ಜನರೇ...

ಪ್ರತಿಭಟನೆ ಎಂದರೆ ಸರ್ಕಾರವನ್ನು ಉರುಳಿಸುವ ಸಂಚು ಎಂದೇ ಅರ್ಥವಲ್ಲ. ಸರ್ಕಾರವನ್ನು ಪ್ರಶ್ನಿಸುವುದು ನಾಗರಿಕರ ಹಕ್ಕು. ಪ್ರತಿಭಟನೆ ಶಾಂತಿಯುತವಾಗಿರಬೇಕು; ಕಾನೂನು ಪಾಲನೆಯಾಗಬೇಕು. ಅದೇ ರೀತಿ, ಪ್ರತಿಭಟನಾಕಾರರ ಹಕ್ಕುಗಳನ್ನು ರಕ್ಷಿಸುವುದು ಸರ್ಕಾರ ಮತ್ತು ಪೊಲೀಸರ ಜವಾಬ್ದಾರಿ. ಪ್ರಜಾಪ್ರಭುತ್ವದಲ್ಲಿ...

ಶಿವಮೊಗ್ಗ | ಸಹ್ಯಾದ್ರಿ ಕಾಲೇಜಿನ ಹಳೆಯ ಕೀರ್ತಿಗೆ ಮಸಿ!...

ಒಂದು ಕಾಲದಲ್ಲಿ ಶಿವಮೊಗ್ಗದ ಶೈಕ್ಷಣಿಕ ವಲಯದಲ್ಲಿ ಸಹ್ಯಾದ್ರಿ ಕಾಲೇಜಿನ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿತ್ತು. ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಈ ಪ್ರದೇಶ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ...

ಗಾಂಧಿ ಹತ್ಯೆಯನ್ನು ಸಮರ್ಥಿಸುವ ದುರುಳರಿಗೆ ಸರ್ದಾರ್ ಪಟೇಲರ ಪತ್ರಗಳೇ...

ಗಾಂಧಿ ಹತ್ಯೆಯ ಕುರಿತು ಅಡ್ಡಂಡ ಕಾರ್ಯಪ್ಪ ರಚಿಸಿರುವ ನಾಟಕ ಬೆಂಗಳೂರಿನಲ್ಲಿ ತೀವ್ರ ವಿವಾದ ಸೃಷ್ಟಿಸಿದೆ. ನಾಟಕದಲ್ಲಿ ಗಾಂಧೀಜಿಯನ್ನು ದೇಶವಿರೋಧಿಯಂತೆ ಬಿಂಬಿಸಿ, ಅವರ ಹಂತಕ ನಾಥುರಾಮ್ ಗೋಡ್ಸೆಯನ್ನು ಸಮರ್ಥಿಸುವ ಪ್ರಯತ್ನ ನಡೆದಿದೆ. ಗಾಂಧಿ ಹತ್ಯೆಯ...

ವಿಚಾರಣೆ ವೇಳೆ 20 ಸಾಕ್ಷಿಗಳನ್ನು ಮತ್ತು 44 ದಾಖಲೆಗಳನ್ನು ಹಾಜರುಪಡಿಸಲಾಗಿತ್ತು. ಪ್ರಕರಣದ ಸಂಪೂರ್ಣ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಧೀಶ ಅಜಿತಾಭ್ ಆಚಾರ್ಯ ಅವರು, ಅಪರಾಧಿಗೆ ಆತನ ಕೊನೆಯುಸಿರಿರುವವರೆಗೂ ಆಜೀವ ಶಿಕ್ಷೆ ವಿಧಿಸಿ ಆದೇಶಿಸಿದರು. ಜೊತೆಗೆ ಅಪರಾಧಿಗೆ ₹1.75 ಲಕ್ಷ ದಂಡ ಮತ್ತು ಸಂತ್ರಸ್ತ ಮಗುವಿಗೆ ₹7 ಲಕ್ಷ ಪರಿಹಾರ ನೀಡುವಂತೆ ಸರ್ಕಾರಕ್ಕೆ ಸೂಚಿಸಿದರು.

ಇದನ್ನೂ ಓದಿ: ಈ ದಿನ ಸಂಪಾದಕೀಯ | ಪೊಲೀಸರ ಬಂದೂಕಿನ ನ್ಯಾಯ ಸಮಾಜಕ್ಕೆ ಮಾರಕ

ತೀರ್ಪು ಪ್ರಕಟಿಸುವ ವೇಳೆ ನ್ಯಾಯಾಧೀಶರು ಸಂತ್ರಸ್ತ ಮಗುವಿನ ತಾಯಿಯ ಮುಂದೆ ಕೈಮುಗಿದು, “ಭಾವನೆಗಳಿಗೆ ಕಾನೂನು ಕುರುಡಾಗಿರುತ್ತದೆ. ಕಾನೂನಿನ ಚೌಕಟ್ಟಿನಲ್ಲಿ ನಾನು ಅಪರಾಧಿಗೆ ಗರಿಷ್ಠ ಶಿಕ್ಷೆ ನೀಡಿದ್ದೇನೆ. ಆದರೆ, ಈ ಪುಟ್ಟ ಮಗು ಅನುಭವಿಸಿದ ದೈಹಿಕ ಮತ್ತು ಮಾನಸಿಕ ನೋವನ್ನು ನಿವಾರಿಸಲು ನನ್ನಿಂದ ಅಥವಾ ಈ ನ್ಯಾಯಾಲಯದಿಂದ ಸಾಧ್ಯವಿಲ್ಲ. ನಿಮ್ಮ ಮಗುವಿಗಾದ ಈ ನೋವಿಗೆ ನ್ಯಾಯಾಂಗ ವ್ಯವಸ್ಥೆಯ ಪರವಾಗಿ ನಾನು ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ” ಎಂದು ನುಡಿದರು.

ಅಷ್ಟೇ ಅಲ್ಲದೆ, ನ್ಯಾಯಾಧೀಶರು ಮಗುವನ್ನು ಉದ್ದೇಶಿಸಿ, “ನಿನ್ನ ಅಪರಾಧಿಗೆ ಕೊನೆಯುಸಿರಿರುವವರೆಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಆದರೆ ನಿನ್ನ ಮನಸ್ಸಿನ ಗಾಯ ಮಾಯಿಸಲು ನನ್ನ ಬಳಿ ಔಷಧಿಯಿಲ್ಲ” ಎಂದು ಬರೆದಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ನೆಹರು ಜನ್ಮದಿನ : ನ.13 ರಿಂದ 30ರವರೆಗೆ ʼಮಕ್ಕಳ ಗ್ರಾಮಸಭೆʼ ಆಯೋಜಿಸಿ

ದೇಶದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನವಾದ ನವೆಂಬರ್...

ಚೆನ್ನೈನಲ್ಲಿ ಟಾಸ್ಮಾಕ್ ಮುಷ್ಕರ | ಮಳೆಯನ್ನೂ ಲೆಕ್ಕಿಸದೆ ಮದ್ಯ ಖರೀದಿಗೆ ಮುಗಿಬಿದ್ದ ಜನ

ಚಂಡಮಾರುತದಿಂದ ಸುರಿಯುತ್ತಿರುವ ಭಾರೀ ಮಳೆಯನ್ನೂ ಲೆಕ್ಕಿಸದೆ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಮದ್ಯ...

ಗುವಾಹಟಿ ಹೋಟೆಲ್ ಶೂಟೌಟ್ ಪ್ರಕರಣ: ಪೊಲೀಸ್ ಎನ್‌ಕೌಂಟರ್‌ನಲ್ಲಿ ಪ್ರಮುಖ ಆರೋಪಿ ಹತ್ಯೆ!

ಗುವಾಹಟಿ ಹೋಟೆಲ್‌ನಲ್ಲಿ ನಡೆದ ಐವರ ಸರಣಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ...

ತೀರ್ಥಹಳ್ಳಿ | ಈಜಲು ಹೋಗಿ ತುಂಗೆ ಪಾಲಾದ ಕೂಲಿ ಕಾರ್ಮಿಕರು!

ತೀರ್ಥಹಳ್ಳಿ ತಾಲೂಕಿನ ಬಾಳೆಬೈಲು ಹೊಸ ಸೇತುವೆ ಸಮೀಪ ತುಂಗಾ ನದಿಯಲ್ಲಿ ಈಜಲು...