ಖಿನ್ನತೆ-ವಿಚ್ಛೇದನ ತಡೆಗೆ, ವೈವಾಹಿಕ ಜೀವನದ ಯಶಸ್ಸಿಗೆ ಸರ್ಟಿಫಿಕೇಟ್ ಕೋರ್ಸ್ ಆರಂಭಿಸಿದ ಗೋವಾ ಕಾಲೇಜು

Date:

ಉದ್ಯೋಗ ಅಥವಾ ವೃತ್ತಿಪರ ಜೀವನ ರೂಪಿಸಿಕೊಳ್ಳಲು ವರ್ಷಗಟ್ಟಲೆ ಶಿಕ್ಷಣ ಪಡೆಯುವ ನಾವು, ಜೀವನದ ಅತ್ಯಂತ ಪ್ರಮುಖ ನಿರ್ಧಾರವಾದ ‘ಮದುವೆ’ಯ ವಿಷಯದಲ್ಲಿ ಎಷ್ಟು ಪೂರ್ವಸಜ್ಜಿತರಾಗಿರುತ್ತೇವೆ? ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಗೋವಾದ ಕಾಲೇಜೊಂದು ಯುವಜನರಿಗಾಗಿ ‘ಮದುವೆಗೆ ಸಿದ್ಧತೆ’ ವಿಷಯದ ಮೇಲೆ ವಿಶೇಷ ಸರ್ಟಿಫಿಕೇಟ್ ಕೋರ್ಸ್‌ ಅನ್ನು ಪರಿಚಯಿಸಿದೆ.

- Advertisement -

ಗೋವಾ ಕಾಲೇಜ್ ಆಫ್ ಹೋಮ್ ಸೈನ್ಸ್‌ನ ‘ಮಾನವ ಅಭಿವೃದ್ಧಿ ಮತ್ತು ಕುಟುಂಬ ಅಧ್ಯಯನ ವಿಭಾಗ’ವು “ಮ್ಯಾರೇಜ್ ರೆಡಿನೆಸ್: ಪ್ರಿಪೇರಿಂಗ್ ಫಾರ್ ಹೆಲ್ದಿ ಅಂಡ್ ಲಾಸ್ಟಿಂಗ್ ರಿಲೇಶನ್‌ಶಿಪ್ಸ್” – (Marriage Readiness: Preparing for Healthy and Lasting Relationships) ಹೆಸರಿನ 15 ದಿನಗಳ ಪ್ರಮಾಣಪತ್ರ ಕೋರ್ಸ್‌ ಒಂದನ್ನು ಸಿದ್ಧಪಡಿಸಿದೆ. ಈ ಕೋರ್ಸ್ 2026ರ ಡಿಸೆಂಬರ್ 2ರಿಂದ 17ರವರೆಗೆ ನಡೆಯಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಮೆರಿಕದಲ್ಲಿ ಟ್ರಂಪ್ ಬೇಡ – ಭಾರತದಲ್ಲಿ ಮೋದಿ ಬೇಕು;...

ಅಮೆರಿಕದಲ್ಲಿ 2026ರ ನವೆಂಬರ್ ಮಧ್ಯಂತರ ಚುನಾವಣೆ ನಡೆದು, ಫಲಿತಾಂಶ ಪ್ರಕಟಗೊಳ್ಳುತ್ತಿದೆ. ಈ ಚುನಾವಣೆಗೂ ಮುನ್ನ ‘ಕಾರ್ನೆಗಿ ಎಂಡೋಮೆಂಟ್ ಫಾರ್ ಇಂಟರ್‌ನ್ಯಾಷನಲ್ ಪೀಸ್ ಮತ್ತು ಯೂಗವ್’ ಸಂಸ್ಥೆ ರಾಜಕೀಯ ಸಮೀಕ್ಷೆಯೊಂದನ್ನು ನಡೆಸಿದೆ. ಮಹತ್ವದ ರಾಜಕೀಯ...

ರಾಜಧಾನಿಯಲ್ಲಿ ಖಾಕಿ-ಕರಿ ಕೋಟ್ ಸಮರ; ಒಳಗಿನ ಹುಳುಕನ್ನು ಬೀದಿಗೆ...

ಒಂದು ಸಣ್ಣ ಪಾರ್ಕಿಂಗ್ ವಿವಾದದಿಂದ ಆರಂಭವಾದ ಈ ಜಗಳ, ಪೊಲೀಸ್ ಠಾಣೆಯೊಳಗೇ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿ, ಅಂತಿಮವಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ಅಮಾನತು ಮತ್ತು ವರ್ಗಾವಣೆಯಲ್ಲಿ ಅಂತ್ಯಗೊಂಡಿದೆ. ಈ ಹೊತ್ತಿನಲ್ಲಿ ಈ...

ರಾಮಲೀಲಾ ಮೈದಾನ ಮತ್ತೆ ಎಚ್ಚರಿಸಿದೆ- ಅಧಿಕಾರ ಶಾಶ್ವತವಲ್ಲ, ಜನರೇ...

ಪ್ರತಿಭಟನೆ ಎಂದರೆ ಸರ್ಕಾರವನ್ನು ಉರುಳಿಸುವ ಸಂಚು ಎಂದೇ ಅರ್ಥವಲ್ಲ. ಸರ್ಕಾರವನ್ನು ಪ್ರಶ್ನಿಸುವುದು ನಾಗರಿಕರ ಹಕ್ಕು. ಪ್ರತಿಭಟನೆ ಶಾಂತಿಯುತವಾಗಿರಬೇಕು; ಕಾನೂನು ಪಾಲನೆಯಾಗಬೇಕು. ಅದೇ ರೀತಿ, ಪ್ರತಿಭಟನಾಕಾರರ ಹಕ್ಕುಗಳನ್ನು ರಕ್ಷಿಸುವುದು ಸರ್ಕಾರ ಮತ್ತು ಪೊಲೀಸರ ಜವಾಬ್ದಾರಿ. ಪ್ರಜಾಪ್ರಭುತ್ವದಲ್ಲಿ...

ಇದನ್ನೂ ಓದಿ: ಬೆಳಗಾವಿ | ಮಳೆಗಾಗಿ ಕತ್ತೆಗಳ ಮದುವೆ

Advertisements

ಮದುವೆ ಎಂದರೆ ಕೇವಲ ಮದುವೆ ಸಮಾರಂಭ ಅಥವಾ ಮಂಟಪದ ಆಚರಣೆಯಲ್ಲ. ಅದನ್ನೂ ಮೀರಿದ ಜವಾಬ್ದಾರಿಗಳು, ಪರಸ್ಪರ ಅರ್ಥಮಾಡಿಕೊಳ್ಳುವಿಕೆ ಮತ್ತು ಬದ್ಧತೆ ಅಗತ್ಯವಾಗಿರುತ್ತದೆ ಎಂಬುದನ್ನು ಈ ಕೋರ್ಸ್‌ ಮೂಲಕ ತಿಳಿಸಿಕೊಡಲಾಗುತ್ತದೆ. ಡೇಟಿಂಗ್‌ನ ಉದ್ದೇಶ ಮತ್ತು ಸ್ವರೂಪ, ಆತ್ಮಜಾಗೃತಿ ಮತ್ತು ಭಾವುಕ ಅಗತ್ಯಗಳು, ಪುರುಷತ್ವ ಮತ್ತು ಸ್ತ್ರೀತ್ವದ ಕಲ್ಪನೆಗಳು ಬಾಂಧವ್ಯದ ಮೇಲ ಬೀರುವ ಪ್ರಭಾವ, ಮದುವೆ ಸಮಾರಂಭ ಮತ್ತು ದಾಂಪತ್ಯ ಜೀವನದ ನಡುವಿನ ವ್ಯತ್ಯಾಸದ ಬಗ್ಗೆ ಈ ಕೋರ್ಸ್‌ನಲ್ಲಿ ತಿಳಿಸಲಾಗುತ್ತದೆ. ಸ್ವಯಂ ಮೌಲ್ಯಮಾಪನ, ವ್ಯಕ್ತಿತ್ವ ಪರೀಕ್ಷೆ, ಸಂವಹನ ಕೌಶಲ ಮತ್ತು ಕ್ಷಮಿಸುವ ಗುಣಗಳನ್ನು ಬೆಳೆಸಿಕೊಳ್ಳಲು ಈ ತರಬೇತಿಯಲ್ಲಿ ಆದ್ಯತೆ ನೀಡಲಾಗುತ್ತದೆ.

ಗೋವಾದಲ್ಲಿ ಹೆಚ್ಚುತ್ತಿರುವ ದಾಂಪತ್ಯ ಕಲಹಗಳು ಮತ್ತು ವಿಚ್ಛೇದನ ಅರ್ಜಿಗಳೇ ಪ್ರಮುಖ ಕಾರಣವಾಗಿದೆ ಎಂದು ಹೇಳಲಾಗಿದೆ. ಗೋವಾದ ಕೌಟುಂಬಿಕ ನ್ಯಾಯಾಲಯಗಳಲ್ಲಿ 2022ರಿಂದ 2025ರ ಅವಧಿಯಲ್ಲಿ 3,000ಕ್ಕೂ ಹೆಚ್ಚು ಮದುವೆ ಮತ್ತು ವಿಚ್ಛೇದನ ಸಂಬಂಧಿತ ಅರ್ಜಿಗಳು ಸಲ್ಲಿಕೆಯಾಗಿವೆ. 2024 ಒಂದರಲ್ಲೇ 947 ಅರ್ಜಿಗಳು ಸಲ್ಲಿಕೆಯಾಗಿವೆ.

ಇತ್ತೀಚೆಗಷ್ಟೇ ಪಣಜಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು, “ವಿಚ್ಛೇದನಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸರ್ಕಾರವು ಶೀಘ್ರದಲ್ಲೇ ರಾಜ್ಯಾದ್ಯಂತ ‘ವಿವಾಹ ಪೂರ್ವ ಕೌನ್ಸೆಲಿಂಗ್’ ವ್ಯವಸ್ಥೆಯನ್ನು ಜಾರಿಗೆ ತರಲಿದೆ” ಎಂದು ಪ್ರಕಟಿಸಿದ್ದರು. ಮುಖ್ಯಮಂತ್ರಿಗಳ ಈ ಪ್ರಕಟಣೆಯ ಬೆನ್ನಲ್ಲೇ ಕಾಲೇಜು ಈ ಪಠ್ಯಕ್ರಮವನ್ನು ಆರಂಭಿಸಿದೆ.

ಇದನ್ನೂ ಓದಿ: ಪರಸ್ಪರ ಒಪ್ಪಿಗೆಯ ಮೂಲಕ ವಿವಾಹ ವಿಚ್ಛೇದನ ಪಡೆದ ಕ್ರಿಕೆಟಿಗ ಚಹಾಲ್

ಈ ಶಿಕ್ಷಣಕ್ರಮವು ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ, ಮದುವೆಯಾಗದ ಯುವಜನರಿಗೆ ಮತ್ತು ಆರೋಗ್ಯಕರ ಬಾಂಧವ್ಯವನ್ನು ಬೆಳೆಸಿಕೊಳ್ಳಲು ಆಸಕ್ತಿಯಿರುವ ಪ್ರತಿಯೊಬ್ಬರಿಗೂ ಮುಕ್ತವಾಗಿದೆ.

ಕಾಲೇಜು ಪ್ರಾಂಶುಪಾಲ ಮಹೇಶ್ ಪೈ ಹೇಳುವಂತೆ, “ಸಾಮಾನ್ಯವಾಗಿ ಮದುವೆಯ ದಿನಾಂಕ ನಿಗದಿಯಾದ ಮೇಲೆ ಸಂಭ್ರಮದ ಗಡಿಬಿಡಿಯಲ್ಲಿ ನಿಜವಾದ ವೈವಾಹಿಕ ಚರ್ಚೆಗಳು ಮರೆತುಹೋಗುತ್ತವೆ. ಆದರೆ, ವೈಯಕ್ತಿಕ ಭಾವನೆಗಳನ್ನು ಅರ್ಥೈಸಿಕೊಂಡು ದಾಂಪತ್ಯಕ್ಕೆ ಸಿದ್ಧರಾಗುವುದು ದೀರ್ಘಾವಧಿಯ ನೆಮ್ಮದಿಯ ಜೀವನಕ್ಕೆ ತೀರಾ ಅಗತ್ಯ” ಎಂಬುದೇ ಈ ಯೋಜನೆಯ ಮೂಲ ಉದ್ದೇಶವಾಗಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಂತಾನೋತ್ಪತ್ತಿ ದರ ಕುಸಿತ: ಮಕ್ಕಳ ಸಂಖ್ಯೆ ಆಧರಿಸಿ ಚುನಾವಣೆಗೆ ನಿಷೇಧವೇಕೆ; ಸುಪ್ರೀಂ ಪ್ರಶ್ನೆ

ಎರಡಕ್ಕಿಂತ ಹೆಚ್ಚು ಮಕ್ಕಳಿರುವ ವ್ಯಕ್ತಿಗಳನ್ನು ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ಚುನಾವಣೆಗಳಲ್ಲಿ...

ಸೊರಬ | ಕುರಿ ಶೆಡ್‌ ಬೆಂಕಿಗಾಹುತಿ; 150ಕ್ಕೂ ಹೆಚ್ಚು ಕೋಳಿ, ಕುರಿಗಳು ಸುಟ್ಟು ಕರಕಲು!

ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಸೂರಣಗಿ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್...

‘ಮಗೂ, ನಿನ್ನ ನೋವು ಅಳಿಸಲಾಗದು’: ಅತ್ಯಾಚಾರಿಗೆ ಆಜೀವ ಶಿಕ್ಷೆ ನೀಡಿ ಸಂತ್ರಸ್ತೆಗೆ ಪತ್ರ ಬರೆದ ನ್ಯಾಯಾಧೀಶರು

ನ್ಯಾಯಾಂಗ ವ್ಯವಸ್ಥೆಯ ಇತಿಹಾಸದಲ್ಲೇ ಅತ್ಯಂತ ಭಾವನಾತ್ಮಕ ಮತ್ತು ಚಾರಿತ್ರಿಕ ತೀರ್ಪೊಂದಕ್ಕೆ ರಾಜಸ್ಥಾನದ...

ಮಧ್ಯಪ್ರದೇಶ ಡಬಲ್ ಎಂಜಿನ್ ಸರ್ಕಾರದ ಮಾದರಿ: ರಸ್ತೆಯೇ ಇಲ್ಲದೆ ಸೇತುವೆ ಮಾತ್ರ ಕಟ್ಟಿದ ಸೋಜಿಗ!

ಡಬಲ್ ಎಂಜಿನ್ ಸರ್ಕಾರವಿದ್ದರೆ ಅಭಿವೃದ್ಧಿ ವೇಗವಾಗಿ ಸಾಗುತ್ತದೆ ಎಂಬುದು ಬಿಜೆಪಿ ನಾಯಕರು...