TMC ಬಂಡಾಯ ಸಂಸದರು ಬಿಜೆಪಿ ಸೇರಲಿದ್ದಾರೆ ಎಂದ ಬಸುನಿಯಾ; ಇಲ್ಲ ಎಂದ BJP

Date:

ತೃಣಮೂಲ ಕಾಂಗ್ರೆಸ್‌ (TMC) ತೊರೆದು ನ್ಯಾಷನಲಿಸ್ಟ್‌ ಸಿಟಿಜನ್ಸ್‌ ಪಾರ್ಟಿ ಆಫ್‌ ಇಂಡಿಯಾ (ಎನ್‌ಸಿಪಿಐ) ಸೇರಿರುವ 20 ಬಂಡಾಯ ಸಂಸದರ ಪೈಕಿ 17 ಮಂದಿ ಶೀಘ್ರದಲ್ಲೇ BJPಗೆ ಸೇರ್ಪಡೆಯಾಗಲಿದ್ದಾರೆ ಎಂದು ಎನ್‌ಸಿಪಿಐ ಸಂಸದ ಜಗದೀಶ್‌ ಚಂದ್ರ ಬರ್ಮಾ ಬಸುನಿಯಾ ಹೇಳಿರುವುದು ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಚರ್ಚೆಗೆ ಕಾರಣವಾಗಿದೆ.

- Advertisement -

ದುರ್ಗಾ ಪೂಜೆಯ ಮುನ್ನ ಅಥವಾ ನಂತರ ಈ ಸೇರ್ಪಡೆ ನಡೆಯಬಹುದು. ಈ ಸಂಬಂಧ ಯೋಜನೆ ಸಿದ್ಧವಾಗಿದೆ ಎಂದು ಬಸುನಿಯಾ ಸೋಮವಾರ ಕೂಚ್‌ಬೆಹಾರ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಚೀನಾದ ಅತಿಕ್ರಮಣಕ್ಕೆ ಅಡ್ಡ ಬಿದ್ದು, ಸಿಟ್ಟಿಗೆ ಅಣೆಕಟ್ಟು ಕಟ್ಟಲು...

ಕೇಂದ್ರದಲ್ಲಿ ಹಾಗೂ ಅರುಣಾಚಲ ಪ್ರದೇಶದಲ್ಲಿ- ಎರಡೂ ಕಡೆ ಬಿಜೆಪಿ ಸರ್ಕಾರವಿದೆ. ಡಬಲ್ ಎಂಜಿನ್ ಸರ್ಕಾರವಿದ್ದರೂ, ಅತ್ತ ಚೀನಾದ ಅತಿಕ್ರಮಣಕ್ಕೆ ಖಡಕ್ ಉತ್ತರವನ್ನೂ ನೀಡುತ್ತಿಲ್ಲ, ಇತ್ತ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿ ಸ್ಥಳೀಯ ಅಸ್ಮಿತೆಯನ್ನು ಗೌರವಿಸುತ್ತಲೂ...

ಬಾಗಲಕೋಟೆ | ಓದುಗರಿಲ್ಲದೆ ಧೂಳು ಹಿಡಿಯುತ್ತಿರುವ ಪುಸ್ತಕಗಳು; ಡಿಜಿಟಲ್...

ಸಾರ್ವಜನಿಕರ ತೆರಿಗೆ ಹಣದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಲಾದ ಆಧುನಿಕ ಡಿಜಿಟಲ್ ಗ್ರಂಥಾಲಯವೊಂದು ಸಾರ್ವಜನಿಕರ ಬಳಕೆಗೆ ಸಿಗದೆ ಮೂಲೆಗುಂಪಾಗಿರುವ ಘಟನೆ ಬಾಗಲಕೋಟೆಯಲ್ಲಿ ಬೆಳಕಿಗೆ ಬಂದಿದೆ. ಓದುಗರ ಹಾಗೂ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ನೆರವಾಗಬೇಕಿದ್ದ...

ಖಾಲಿ ಜೇಬಿನ ಸರ್ಕಾರ, ಪಟ್ಟು ಬಿಡದ ಕಬ್ಬು ಬೆಳೆಗಾರರು;...

ಚೂನಪ್ಪ ಪೂಜೇರಿ ಹಾಗೂ ಶಶಿಕಾಂತ ಗುರೂಜಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಕಬ್ಬಿಗೆ ಪ್ರತಿ ಟನ್‌ಗೆ ₹5,500 ಬೆಲೆ ನೀಡಬೇಕೆಂದು ಆಗ್ರಹಿಸಿ ಆರಂಭವಾದ ಹೋರಾಟ...

“ನಾವು ಈಗ 20 ಎನ್‌ಸಿಪಿಐ ಸಂಸದರು ಇದ್ದೇವೆ. ಅವರಲ್ಲಿ 17 ಮಂದಿ ಶೀಘ್ರದಲ್ಲೇ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ದುರ್ಗಾ ಪೂಜೆಯ ಮೊದಲು ಅಥವಾ ನಂತರ ಈ ಬೆಳವಣಿಗೆ ನಡೆಯಬಹುದು. ಮೂರನೇ ಎರಡರಷ್ಟು ಸದಸ್ಯರ ಸಂಖ್ಯೆ ಸುಮಾರು 14 ಆಗುತ್ತದೆ. ಆದರೆ, ನಾವು 17 ಮಂದಿ ಇರುವುದರಿಂದ ಪಕ್ಷಾಂತರ ನಿಷೇಧ ಕಾಯ್ದೆ ನಮಗೆ ಅನ್ವಯಿಸುವುದಿಲ್ಲ. ಬಿಜೆಪಿಗೆ ಸೇರಿದ ಬಳಿಕ ಅದರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇವೆ” ಎಂದು ಅವರು ಹೇಳಿದ್ದಾರೆ.

ಆದರೆ, ಬಸುನಿಯಾ ಹೇಳಿಕೆಯನ್ನು ಎನ್‌ಸಿಪಿಐನ ಇತರ ಸಂಸದರು ತಳ್ಳಿಹಾಕಿದ್ದಾರೆ. ಮುರ್ಷಿದಾಬಾದ್‌ ಸಂಸದ ಅಬು ತಾಹೇರ್‌ ಖಾನ್‌, ತಾವು ಬಿಜೆಪಿಗೆ ಸೇರುವುದಿಲ್ಲ ಅಥವಾ ಎನ್‌ಡಿಎಗೆ ಬೆಂಬಲ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

“ನಮ್ಮ ವಕ್ತಾರರಾಗುವಂತೆ ಬಸುನಿಯಾಗೆ ಯಾರು ಹೇಳಿದ್ದಾರೆ? ನಮ್ಮ ನಿಲುವನ್ನು ನಾವು ಈಗಾಗಲೇ ಸ್ಪಷ್ಟಪಡಿಸಿದ್ದೇವೆ. ನಮ್ಮ ಪರವಾಗಿ ಮಾತನಾಡುವ ಅಗತ್ಯ ಅವರಿಗಿಲ್ಲ. ಮುಂದಿನ ನಡೆ ಬಗ್ಗೆ ನಾವು ತೀರ್ಮಾನಿಸುತ್ತೇವೆ. ಅಲ್ಪಸಂಖ್ಯಾತ ಸಮುದಾಯದ ಮೂವರು ಸಂಸದರಾದ ನಾವು ಎನ್‌ಡಿಎಗೆ ಬೆಂಬಲ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದೇವೆ. ಬಿಜೆಪಿಗೆ ಸೇರುವ ಪ್ರಶ್ನೆಯೇ ಇಲ್ಲ. ಇಂತಹ ಯಾವುದೇ ಯೋಜನೆ ಅಥವಾ ಬೆಳವಣಿಗೆ ಬಗ್ಗೆ ನಮಗೆ ಮಾಹಿತಿ ಇಲ್ಲ” ಎಂದು ಖಾನ್‌ ಹೇಳಿದ್ದಾರೆ. ಎನ್‌ಸಿಪಿಐನಲ್ಲಿರುವ ಇತರ ಇಬ್ಬರು ಮುಸ್ಲಿಂ ಸಂಸದರೆಂದರೆ ಬಹರಂಪುರದ ಯೂಸುಫ್‌ ಪಠಾಣ್‌ ಮತ್ತು ಜಂಗೀಪುರದ ಖಲೀಲುರ್‌ ರೆಹಮಾನ್‌.

ಬಸುನಿಯಾ ಪ್ರಕಾರ, ಅಬು ತಾಹೇರ್‌ ಖಾನ್‌, ಯೂಸುಫ್‌ ಪಠಾಣ್‌ ಮತ್ತು ಖಲೀಲುರ್‌ ರೆಹಮಾನ್‌ ಅವರು ಎನ್‌ಸಿಪಿಐನಲ್ಲೇ ಉಳಿದು ಎನ್‌ಡಿಎಗೆ ಬೆಂಬಲ ನೀಡಲಿದ್ದಾರೆ. ಅವರಿಗೆ ಸಚಿವ ಸ್ಥಾನಗಳನ್ನೂ ನೀಡುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.

“ಅವರು ಅಲ್ಪಸಂಖ್ಯಾತರು ಹೆಚ್ಚಿರುವ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿರುವುದರಿಂದ ಬಿಜೆ ಗೆ ಸೇರ್ಪಡೆಯಾದರೆ ಸಮಸ್ಯೆ ಎದುರಾಗಬಹುದು. ಹೀಗಾಗಿ ಅವರು ಎನ್‌ಸಿಪಿಐನಲ್ಲೇ ಉಳಿದು ಎನ್‌ಡಿಎಗೆ ಬೆಂಬಲ ನೀಡಬಹುದು” ಎಂದು ಬಸುನಿಯಾ ತಿಳಿಸಿದ್ದಾರೆ. ಟಿಎಂಸಿ ತೊರೆಯಲು ನಿರ್ಧರಿಸಿದ ಬಳಿಕ ಎನ್‌ಸಿಪಿಐಗೆ ಸೇರುವ ಪ್ರಕ್ರಿಯೆಗೆ ಬಿಜೆಪಿ ನೆರವು ನೀಡಿತ್ತು ಎಂದೂ ಅವರು ಆರೋಪಿಸಿದ್ದಾರೆ.

“ಕೇಂದ್ರ ಸಚಿವ ಭೂಪೇಂದ್ರ ಯಾದವ್‌, ಮುಖ್ಯಮಂತ್ರಿ ಸುವೇಂದು ಅಧಿಕಾರಿ ಮತ್ತು ಕೇಂದ್ರ ಸಚಿವ ಅಮಿತ್‌ ಶಾ ಅವರ ನೇತೃತ್ವದಲ್ಲಿ ನಾವು ಎನ್‌ಸಿಪಿಐಗೆ ವಿಲೀನಗೊಂಡೆವು. ಭೂಪೇಂದ್ರ ಯಾದವ್‌ ಅವರ ನಿವಾಸದಲ್ಲಿ ಹಲವು ಬಾರಿ ಸಭೆ ನಡೆಸಿದ್ದೇವೆ. ಆರಂಭದಲ್ಲಿ ಬಿಜೆಪಿಗೆ ಸೇರುವುದಾಗಿ ಯೋಚಿಸಿದ್ದೆವು. ಆದರೆ, ಮೂವರು ಸಂಸದರು ಬಿಜೆಪಿಗೆ ಸೇರುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದರಿಂದ ಆ ಯೋಜನೆ ಕಾರ್ಯರೂಪಕ್ಕೆ ಬರಲಿಲ್ಲ. ಬಳಿಕ ಪಕ್ಷಾಂತರ ನಿಷೇಧ ಕಾಯ್ದೆಯ ವ್ಯಾಪ್ತಿಗೆ ಬಾರದಂತೆ ಎನ್‌ಸಿಪಿಐ ಸೇರಲು ಬಿಜೆಪಿ ನಾಯಕತ್ವ ಸೂಚಿಸಿತು. ಅದರಂತೆ ನಾವು ನಡೆದುಕೊಂಡೆವು” ಎಂದು ಬಸುನಿಯಾ ಹೇಳಿದ್ದಾರೆ.

ಬಸುನಿಯಾ ಹೇಳಿಕೆಯನ್ನು ಬಿಜೆಪಿ ಕೂಡ ತಕ್ಷಣವೇ ನಿರಾಕರಿಸಿದೆ. “ಇಂತಹ ಯಾವುದೇ ವಿಚಾರದ ಬಗ್ಗೆ ನಮಗೆ ಮಾಹಿತಿ ಇಲ್ಲ. ಬಸುನಿಯಾ ತಮ್ಮ ಹೇಳಿಕೆಗೆ ತಾವೇ ಹೊಣೆಗಾರರಾಗಬೇಕು” ಎಂದು ಬಿಜೆಪಿ ವಕ್ತಾರ ದೇಬ್ಜಿತ್‌ ಸರ್ಕಾರ್‌ ಹೇಳಿದ್ದಾರೆ. ಬಿಜೆಪಿಯ ಬರಾನಗರ ಶಾಸಕ ಸಜಲ್‌ ಘೋಷ್‌ ಕೂಡ ಬಂಡಾಯ ಸಂಸದರ ಸೇರ್ಪಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಪಕ್ಷವು ಯಾವುದೇ ನಿರ್ಧಾರ ಕೈಗೊಂಡರೆ ನಾವೆಲ್ಲರೂ ಅದನ್ನು ಪಾಲಿಸುತ್ತೇವೆ. ರಾಷ್ಟ್ರೀಯ ರಾಜಕೀಯ ಅನಿವಾರ್ಯತೆಗಳು ಮತ್ತು ನೀತಿಗಳಿರುತ್ತವೆ. ಆದರೆ, ನಮ್ಮ ಪ್ರದೇಶದ ಸಂಸದ ಸುದೀಪ್‌ ಬಂದೋಪಾಧ್ಯಾಯ ಬಿಜೆಪಿಗೆ ಸೇರಿದರೆ, ಅದನ್ನು ಮನಸ್ಸಿನಿಂದ ಒಪ್ಪಿಕೊಳ್ಳುವುದು ಕಷ್ಟ” ಎಂದು ಅವರು ಹೇಳಿದ್ದಾರೆ.

ಬಂಡಾಯ ಗುಂಪಿನ ಪ್ರಮುಖ ಮುಖವಾಗಿರುವ ಕಾಕೋಲಿ ಘೋಷ್‌ ದಸ್ತಿದಾರ್‌ ಈ ಹೇಳಿಕೆ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಬಂಕುರಾ ಸಂಸದ ಅರೂಪ್‌ ರಾಯ್‌ ಕೂಡ ಇಂತಹ ಯಾವುದೇ ನಿರ್ಧಾರದ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. ಜಾರ್‌ಗ್ರಾಮ್‌ ಸಂಸದ ಕಾಲಿಪದ ಸೊರೆನ್‌, “ವೈಯಕ್ತಿಕವಾಗಿ ಯಾವುದೇ ಅಭಿಪ್ರಾಯವಿಲ್ಲ. ಉಳಿದವರು ಏನು ಮಾಡುತ್ತಾರೋ ನಾನೂ ಅದನ್ನೇ ಮಾಡುತ್ತೇನೆ” ಎಂದು ತಿಳಿಸಿದ್ದಾರೆ.

ಎನ್‌ಸಿಪಿಐನ ಭವಿಷ್ಯದ ಬಗ್ಗೆ ಅನಿಶ್ಚಿತತೆ ಮುಂದುವರಿದಿರುವ ನಡುವೆಯೇ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸುವ ಸುಳಿವು ನೀಡಿದೆ. ಕೋಲ್ಕತ್ತಾ ಮತ್ತು ಹೌರಾ ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ಬಿಜೆಪಿ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಸಮಿಕ್‌ ಭಟ್ಟಾಚಾರ್ಯ ಹೇಳಿದ್ದಾರೆ. ದೆಹಲಿಯಲ್ಲಿ ಇರುವ ರಾಜಕೀಯ ಹೊಂದಾಣಿಕೆ ಪಶ್ಚಿಮ ಬಂಗಾಳದಲ್ಲೂ ಮೈತ್ರಿಯಾಗಿ ಮುಂದುವರಿಯುತ್ತದೆ ಎಂಬುದಿಲ್ಲ ಎಂದು ಅವರು ತಿಳಿಸಿದ್ದಾರೆ.

ದುರ್ಗಾ ಪೂಜೆಯ ಬಳಿಕ ಕೋಲ್ಕತ್ತಾ ಮತ್ತು ಹೌರಾ ಮಹಾನಗರ ಪಾಲಿಕೆ ಚುನಾವಣೆ ನಡೆಯುವ ನಿರೀಕ್ಷೆಯಿದೆ. ಕ್ಷೇತ್ರ ಪುನರ್‌ವಿಂಗಡಣೆ ಬಳಿಕ ಕೋಲ್ಕತ್ತಾ ಮಹಾನಗರ ಪಾಲಿಕೆಯ ವಾರ್ಡ್‌ಗಳ ಸಂಖ್ಯೆ 144ರಿಂದ 209ಕ್ಕೆ ಹಾಗೂ ಹೌರಾ ಮಹಾನಗರ ಪಾಲಿಕೆಯ ವಾರ್ಡ್‌ಗಳ ಸಂಖ್ಯೆ 50ರಿಂದ 68ಕ್ಕೆ ಏರಿಸುವ ಪ್ರಸ್ತಾವವಿದೆ.

ಇದನ್ನೂ ಓದಿ: ಇನ್ನೂ ಕಣ್ಣು ಬಿಡದ ಪಕ್ಷ ಸೇರಿದ TMC ಬಂಡಾಯ ಸಂಸದರು; ಯಾವುದೀ NCPI?

ಇನ್ನೊಂದೆಡೆ, ಎನ್‌ಸಿಪಿಐ ತನ್ನನ್ನು ಬಿಜೆಪಿ ನೇತೃತ್ವದ ಎನ್‌ಡಿಎ ಭಾಗವೆಂದು ಬಿಂಬಿಸಿಕೊಂಡಿದ್ದು, ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಚುನಾವಣಾ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದೆ. ಕಾಕೋಲಿ ಘೋಷ್‌ ದಸ್ತಿದಾರ್‌ ಕೂಡ ಬಿಜೆಪಿಯೊಂದಿಗೆ ಚುನಾವಣಾ ಒಪ್ಪಂದ ಸಾಧ್ಯವಿದೆ ಎಂದು ತಿಳಿಸಿದ್ದಾರೆ. 20 ಬಂಡಾಯ ಸಂಸದರ ಅನರ್ಹತೆ ಕೋರಿ ಟಿಎಂಸಿ ಕ್ರಮ ಕೈಗೊಂಡಿರುವ ಸಂದರ್ಭದಲ್ಲೇ ಬಸುನಿಯಾ ಈ ಹೇಳಿಕೆ ನೀಡಿದ್ದಾರೆ. ಮಮತಾ ಬ್ಯಾನರ್ಜಿ ಬೆಂಬಲಿತ ಬಣದ ಸಂಸದ ಅಭಿಷೇಕ್‌ ಬ್ಯಾನರ್ಜಿ ಅವರು 20 ಸಂಸದರ ಅನರ್ಹತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಈ ಕುರಿತು ಲೋಕಸಭಾ ಸಚಿವಾಲಯ ಆಗಸ್ಟ್‌ 26ರಂದು ಸಂಸದರಿಗೆ ನೋಟಿಸ್‌ ಜಾರಿ ಮಾಡಿ, ಏಳು ದಿನಗಳಲ್ಲಿ ಉತ್ತರಿಸುವಂತೆ ಸೂಚಿಸಿತ್ತು. ಹೆಚ್ಚಿನ ಕಾಲಾವಕಾಶ ಕೋರಿ ಸಂಸದರು ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಉತ್ತರಿಸಲು ನೀಡಿದ್ದ ಗಡುವನ್ನು ಸೆಪ್ಟೆಂಬರ್‌ 22ರವರೆಗೆ ವಿಸ್ತರಿಸಲಾಗಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಖಾಲಿ ಜೇಬಿನ ಸರ್ಕಾರ, ಪಟ್ಟು ಬಿಡದ ಕಬ್ಬು ಬೆಳೆಗಾರರು; ಹೋರಾಟದ ನಡುವೆ ಒಣಗುತ್ತಿದೆ ಕಬ್ಬು

ಚೂನಪ್ಪ ಪೂಜೇರಿ ಹಾಗೂ ಶಶಿಕಾಂತ ಗುರೂಜಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ...

ಬೆಂಗಳೂರಿನ ಪಂಚತಾರಾ ಹೋಟೆಲ್ ಈಜುಕೊಳದಲ್ಲಿ ವಿದ್ಯುತ್ ಸ್ಪರ್ಶ: ಇಬ್ಬರು ವಿದೇಶಿ ಪ್ರಜೆಗಳ ಸಾವು

ಬೆಂಗಳೂರಿನ ಹಲಸೂರಿನಲ್ಲಿರುವ ಪಂಚತಾರಾ ಹೋಟೆಲ್‌ನ ಈಜುಕೊಳದಲ್ಲಿ ಶುಕ್ರವಾರ ಸಂಜೆ ಈಜುತ್ತಿದ್ದ ವೇಳೆ...

ಗ್ಯಾನೇಶ್‌ ವಿರುದ್ಧ ‘ಇಂಡಿಯಾ’ ಪ್ರತಿಭಟನೆ; ಹೋರಾಟ ಹತ್ತಿಕ್ಕಲು ಮೋದಿ-ಶಾ ಸರ್ಕಸ್! 

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಮತ್ತು SIR ಪ್ರಕ್ರಿಯೆಯಲ್ಲಿ ನಡೆದಿರುವ...

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ: ರಾಜ್ಯದ 18 ಜಿಲ್ಲೆಗಳಲ್ಲಿ ಮುಂದಿನ 7 ದಿನ ಭಾರೀ ಮಳೆ

ಅರಬ್ಬಿ ಸುಮದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಪರಿಣಾಮ, ಕರಾವಳಿ, ಮಲೆನಾಡು ಹಾಗೂ...