ರಾಮ್‌ ಗೋಪಾಲ ವರ್ಮಾಗೆ ₹29.67 ಕೋಟಿ ರಿಕವರಿ ನೋಟಿಸ್!

Date:

ಚಲನಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾಗೆ ‘ಎಕ್ಲಟಾಂಟ್ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯು ₹29.67 ಕೋಟಿ ರೂ.ಗಳ ರಿಕವರಿ ನೋಟಿಸ್ ನೀಡಿದೆ. ಅಲ್ಲದೆ, ತಮ್ಮ ಪೂರ್ವ ಲಿಖಿತ ಅನುಮತಿಯಿಲ್ಲದೆ ವರ್ಮಾ ಅವರೊಂದಿಗೆ ಯಾವುದೇ ರೀತಿಯ ವ್ಯವಹಾರ ನಡೆಸದಂತೆ ಚಿತ್ರರಂಗದ ಪ್ರಮುಖ ಸಂಸ್ಥೆಗಳಿಗೆ ಕಂಪನಿಯು ಸಾರ್ವಜನಿಕ ಎಚ್ಚರಿಕೆ ನೀಡಿದೆ.

- Advertisement -

ಈ ನೋಟಿಸ್  ಚಿತ್ರರಂಗದ ಬ್ಯುಸಿನೆಸ್‌ ಪೇಪರ್‌ ‘ಕಂಪ್ಲೀಟ್ ಸಿನಿಮಾ’ದ ಅಕ್ಟೋಬರ್ 24 ಮತ್ತು ಅಕ್ಟೋಬರ್ 31ರ ಆವೃತ್ತಿಗಳಲ್ಲಿ ಪ್ರಕಟಗೊಂಡಿದೆ. 2010ರ ಏಪ್ರಿಲ್ 10ರಂದು ನಡೆದ 16 ವರ್ಷಗಳ ಹಳೆಯ ಒಪ್ಪಂದದ ಆಧಾರದ ಮೇಲೆ ಈ ಕಾನೂನು ಕ್ರಮ ಕೈಗೊಳ್ಳಲಾಗಿದ್ದು, ವರ್ಮಾಗೆ ಬಡ್ಡಿ ಸಮೇತ ಬಾಕಿ ಮೊತ್ತವನ್ನು ಪಾವತಿಸಲು ಅಕ್ಟೋಬರ್ 30ರ ಗಡುವು ನೀಡಲಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಾಗಲಕೋಟೆ | ಓದುಗರಿಲ್ಲದೆ ಧೂಳು ಹಿಡಿಯುತ್ತಿರುವ ಪುಸ್ತಕಗಳು; ಡಿಜಿಟಲ್...

ಸಾರ್ವಜನಿಕರ ತೆರಿಗೆ ಹಣದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಲಾದ ಆಧುನಿಕ ಡಿಜಿಟಲ್ ಗ್ರಂಥಾಲಯವೊಂದು ಸಾರ್ವಜನಿಕರ ಬಳಕೆಗೆ ಸಿಗದೆ ಮೂಲೆಗುಂಪಾಗಿರುವ ಘಟನೆ ಬಾಗಲಕೋಟೆಯಲ್ಲಿ ಬೆಳಕಿಗೆ ಬಂದಿದೆ. ಓದುಗರ ಹಾಗೂ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ನೆರವಾಗಬೇಕಿದ್ದ...

ಖಾಲಿ ಜೇಬಿನ ಸರ್ಕಾರ, ಪಟ್ಟು ಬಿಡದ ಕಬ್ಬು ಬೆಳೆಗಾರರು;...

ಚೂನಪ್ಪ ಪೂಜೇರಿ ಹಾಗೂ ಶಶಿಕಾಂತ ಗುರೂಜಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಕಬ್ಬಿಗೆ ಪ್ರತಿ ಟನ್‌ಗೆ ₹5,500 ಬೆಲೆ ನೀಡಬೇಕೆಂದು ಆಗ್ರಹಿಸಿ ಆರಂಭವಾದ ಹೋರಾಟ...

ಪದವೀಧರರ ಕ್ಷೇತ್ರ ಚುನಾವಣೆ; ಸೋಲು-ಗೆಲುವಿನಾಚೆ ತಿರಸ್ಕೃತ ಮತಗಳ ಚರ್ಚೆ

ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ. ಸಂಕನೂರ ಗೆಲುವು ಸಾಧಿಸಿದ್ದಾರೆ. ಆದರೆ ಈ ಚುನಾವಣೆಯ ಫಲಿತಾಂಶದ ನಡುವೆ 10,245 ಮತಗಳು ತಿರಸ್ಕೃತಗೊಂಡಿರುವುದು ಈಗ ಗಮನ ಸೆಳೆದಿದೆ. ಪದವೀಧರರ ಕ್ಷೇತ್ರವೆಂದರೆ...

ಎಕ್ಲಟಾಂಟ್ ಫಿಲ್ಮ್ಸ್ ನೀಡಿರುವ ಮಾಹಿತಿಯ ಪ್ರಕಾರ, ವರ್ಮಾಗೆ ಅಕ್ಟೋಬರ್ 15ರಂದೇ ಕಾನೂನು ನೋಟಿಸ್ ಕಳುಹಿಸಲಾಗಿತ್ತು. ಒಟ್ಟು ₹29.67 ಕೋಟಿ ರೂ. ಬಾಕಿ ಮೊತ್ತದಲ್ಲಿ ಬಡ್ಡಿಯೇ ₹11.38 ಕೋಟಿ ರೂ. ಆಗಿದೆ. ಈ ಹಿಂದೆ 2013ರ ಏಪ್ರಿಲ್ 17ರಂದು ಮುಂಬೈ ಹೈಕೋರ್ಟ್ ಈ ಒಪ್ಪಂದಕ್ಕೆ ಸಂಬಂಧಿಸಿದಂತೆ ನೀಡಿದ್ದ ಆದೇಶವನ್ನು ಸಹ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಎಕ್ಲಟಾಂಟ್ ಫಿಲ್ಮ್ಸ್ ಸಂಸ್ಥೆಯು ಕೇವಲ ವರ್ಮಾ ಅವರೊಂದಿಗೆ ಆರ್ಥಿಕ ವಿವಾದ ಮಾತ್ರವಲ್ಲದೆ, ಇಡೀ ಭಾರತೀಯ ಚಿತ್ರರಂಗದ ನಿರ್ಮಾಪಕರು, ವಿತರಕರು, ಪ್ರಸಾರಕರು ಮತ್ತು ಒಟಿಟಿ (OTT) ವೇದಿಕೆಗಳಿಗೆ ಎಚ್ಚರಿಕೆ ನೀಡಿದೆ. ಕಂಪನಿಯಿಂದ ಸೂಕ್ತ ‘ನಿರಾಕ್ಷೇಪಣಾ ಪತ್ರ’ (NOC) ಪಡೆಯದೆ ವರ್ಮಾ ಅವರೊಂದಿಗೆ ಯಾವುದೇ ಯೋಜನೆ ಅಥವಾ ಒಪ್ಪಂದಗಳನ್ನು ಮಾಡಿಕೊಳ್ಳಬಾರದು ಎಂದು ಸ್ಪಷ್ಟಪಡಿಸಲಾಗಿದೆ.

2010ರ ಒಪ್ಪಂದದ ಪ್ರಕಾರ, ಬಾಕಿ ಹಣ ಸಂಪೂರ್ಣವಾಗಿ ಚುಕ್ತಾಯವಾಗುವವರೆಗೆ ರಾಮ್ ಗೋಪಾಲ್ ವರ್ಮಾ ಅವರು ಚಿತ್ರ ನಿರ್ಮಾಣ, ಸಹ-ನಿರ್ಮಾಣ, ನಿರ್ದೇಶನ ಅಥವಾ ಬರಹಗಾರರಾಗಿ ಯಾವುದೇ ಮೂರನೇ ವ್ಯಕ್ತಿ ಅಥವಾ ಸಂಸ್ಥೆಯೊಂದಿಗೆ ಕೆಲಸ ಮಾಡುವ ಮುನ್ನ ಎಕ್ಲಟಾಂಟ್ ಫಿಲ್ಮ್ಸ್‌ನಿಂದ ಎನ್‌ಒಸಿ ಪಡೆಯುವುದು ಕಡ್ಡಾಯವಾಗಿದೆ. ಎನ್‌ಒಸಿ ಪಡೆಯದೆ ವರ್ಮಾ ಅವರ ಪ್ರಾಜೆಕ್ಟ್‌ಗಳ ಹಕ್ಕುಗಳನ್ನು ಪಡೆದರೆ ಅದಕ್ಕೆ ಆಯಾ ಸಂಸ್ಥೆಗಳೇ ಜವಾಬ್ದಾರರಾಗಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ. ವರ್ಮಾ ಹಣ ಪಾವತಿಸಲು ವಿಫಲವಾದರೆ, ಒಪ್ಪಂದಕ್ಕೆ ಒಳಪಡುವ ಸಿನಿಮಾಗಳಲ್ಲಿ ವರ್ಮಾ ಅವರ ಲಾಭದ ಪಾಲು, ಹಕ್ಕುಗಳು ಮತ್ತು ಆದಾಯದ ಮೇಲೆ ಸಂಪೂರ್ಣ ಹಕ್ಕು ಸ್ವಾಮ್ಯ ಸಾಧಿಸುವುದಾಗಿ ಎಕ್ಲಟಾಂಟ್ ಫಿಲ್ಮ್ಸ್ ತಿಳಿಸಿದೆ.

ರಾಮ್ ಗೋಪಾಲ್ ವರ್ಮಾ ಅವರಿಗೆ ಹಣಕಾಸಿನ ವಿವಾದಗಳು ಹೊಸದೇನಲ್ಲ. 2021ರಲ್ಲಿ ‘ಡಿ ಕಂಪನಿ’ ಸಿನಿಮಾ ಬಿಡುಗಡೆ ವೇಳೆ 12 ಕೋಟಿ ರೂ. ಬಾಕಿ ಪಾವತಿಸದ ಕಾರಣ ನೀಡಿ ‘ಎಫ್‌ಡಬ್ಲ್ಯೂಐಸಿಇ’ (FWICE) ಸಿನಿಮಾ ಬಿಡುಗಡೆಗೆ ತಡೆ ನೀಡಲು ಯತ್ನಿಸಿತ್ತು.

‘ಸತ್ಯ’ (1998), ‘ಕಂಪನಿ’ (2002) ಮತ್ತು ‘ಸರ್ಕಾರ್’ (2005) ನಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದ ವರ್ಮಾ, ಇತ್ತೀಚಿನ ವರ್ಷಗಳಲ್ಲಿ ಕಡಿಮೆ ಬಜೆಟ್‌ನ ಸ್ವತಂತ್ರ ಸಿನಿಮಾಗಳನ್ನು ನಿರ್ಮಿಸಿ ತಮ್ಮದೇ ಆದ ಡಿಜಿಟಲ್ ವೇದಿಕೆಗಳಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಪ್ರಸ್ತುತ ಅವರು ಹರ್ಷವರ್ಧನ್ ರಾಣೆ ಅಭಿನಯದ ‘ಪೋಲಿಸ್ ಕಂಪನಿ’ ಎಂಬ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹೊಸ ಯೋಜನೆಗೂ ಈ ಹಳೆಯ ಒಪ್ಪಂದಕ್ಕೂ ಲಿಂಕ್ ಇದೆಯೇ ಎಂಬುದು ಇನ್ನು ತಿಳಿದುಬಂದಿಲ್ಲ. ಈ ಸಾರ್ವಜನಿಕ ನೋಟಿಸ್‌ಗೆ ವರ್ಮಾ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊನೆ ಉಸಿರಿರೊವರೆಗೂ ದೇಶಸೇವೆ ನಿಲ್ಲಲ್ಲ: ʼಬಾಪ್‌ ಭೀ ಜಾಯೇಗಾʼ ಟ್ರೋಲ್‌ ಬಳಿಕ ಮೋದಿ ಮಾತು

ದೇಶದ ಜನರ ಸೇವೆ ಮಾಡುವುದೇ ನನ್ನ ಜೀವನದ ಗುರಿ. ಕೊನೆಯ ಉಸಿರಿರುವವರೆಗೂ...

ಕೊಪ್ಪಳ | ಕೊಪ್ಪಳ ಜಿಲ್ಲೆಯ ಇಬ್ಬರು ಜಾನಪದ ಕಲಾವಿದರಿಗೆ ರಾಜ್ಯೋತ್ಸವ ಪ್ರಶಸ್ತಿ ಗರಿ

ಕನ್ನಡ ನಾಡು, ನುಡಿ ಹಾಗೂ ಜಾನಪದ ಕಲೆಯ ಉಳಿವು ಮತ್ತು ಬೆಳವಣಿಗೆಗೆ...