ಭಾರತದಲ್ಲಿ ತೀವ್ರ ಬಡತನ ಶೇ 2.6ಕ್ಕೆ ಇಳಿಕೆ: ವಿಶ್ವಬ್ಯಾಂಕ್ ವರದಿ

Date:

ಕಳೆದ ಒಂದು ದಶಕದಲ್ಲಿ ಬಡತನ ನಿರ್ಮೂಲನೆಯಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿಯೇ ಅತಿ ವೇಗದ ಹಾಗೂ ಮಹತ್ವದ ಸಾಧನೆ ಮಾಡಿದ್ದು, 2023ರ ವೇಳೆಗೆ ದೇಶದಲ್ಲಿ ತೀವ್ರ ಬಡತನದ ಪ್ರಮಾಣವು ಕೇವಲ ಶೇ 2.6ಕ್ಕೆ ಇಳಿಕೆಯಾಗಿದೆ ಎಂದು ವಿಶ್ವಬ್ಯಾಂಕ್‌ನ ಇತ್ತೀಚಿನ ವರದಿ ತಿಳಿಸಿದೆ.

- Advertisement -

​ವಿಶ್ವಬ್ಯಾಂಕ್ ಶುಕ್ರವಾರ ಬಿಡುಗಡೆ ಮಾಡಿರುವ ‘ಬಡತನ ಮತ್ತು ಸಮಾನತೆ’ (Poverty & Equity Brief) ವರದಿಯ ಪ್ರಕಾರ, ದಿನಕ್ಕೆ 3 ಡಾಲರ್‌ಗಿಂತ (ಕೊಳ್ಳುವ ಸಾಮರ್ಥ್ಯದ ಲೆಕ್ಕಾಚಾರದಲ್ಲಿ ಸುಮಾರು 170-175 ರೂ.) ಕಡಿಮೆ ಆದಾಯದಲ್ಲಿ ಬದುಕುವವರನ್ನು ‘ತೀವ್ರ ಬಡವರು’ ಎಂದು ಪರಿಗಣಿಸಲಾಗುತ್ತದೆ. 2011ರಲ್ಲಿ ಭಾರತದಲ್ಲಿ ಈ ಪ್ರಮಾಣವು ಶೇ 27.1ರಷ್ಟಿತ್ತು. 2022-23ರ ಸಾಲಿನಲ್ಲಿ ಶೇ 5.3ರಷ್ಟಿದ್ದ ಈ ಪ್ರಮಾಣ ಕೇವಲ ಒಂದೇ ವರ್ಷದಲ್ಲಿ (2023ರಲ್ಲಿ) ಶೇ 2.6ಕ್ಕೆ ಕುಸಿದಿದೆ. ಅಂದರೆ, ಹತ್ತು ವರ್ಷಗಳಿಗೆ ಹೋಲಿಸಿದರೆ ತೀವ್ರ ಬಡತನದ ಪ್ರಮಾಣ ಹತ್ತು ಪಟ್ಟು ಕಡಿಮೆಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಖಾಲಿ ಜೇಬಿನ ಸರ್ಕಾರ, ಪಟ್ಟು ಬಿಡದ ಕಬ್ಬು ಬೆಳೆಗಾರರು;...

ಚೂನಪ್ಪ ಪೂಜೇರಿ ಹಾಗೂ ಶಶಿಕಾಂತ ಗುರೂಜಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಕಬ್ಬಿಗೆ ಪ್ರತಿ ಟನ್‌ಗೆ ₹5,500 ಬೆಲೆ ನೀಡಬೇಕೆಂದು ಆಗ್ರಹಿಸಿ ಆರಂಭವಾದ ಹೋರಾಟ...

ಜಾಗತಿಕ ಪೈಪೋಟಿಗೆ ಕನ್ನಡಿಗರನ್ನು ಸಜ್ಜುಗೊಳಿಸುವ ಬೃಹತ್ ವೇದಿಕೆ ‘ಬೆಂಗಳೂರು...

ರಾಜ್ಯದ ಯುವಜನತೆಯನ್ನು ಭವಿಷ್ಯದ ಜಾಗತಿಕ ಉದ್ಯೋಗ ಮಾರುಕಟ್ಟೆಯ ತೀವ್ರ ಪೈಪೋಟಿ ಮತ್ತು ಸವಾಲುಗಳಿಗೆ ಸುಸಜ್ಜಿತವಾಗಿ ಸಿದ್ಧಪಡಿಸುವ ಮಹತ್ವಾಕಾಂಕ್ಷೆಯೊಂದಿಗೆ ರಾಜ್ಯ ಸರ್ಕಾರವು ಬೃಹತ್ ಹೆಜ್ಜೆಯನ್ನಿಟ್ಟಿದೆ. ಇದರ ಅಂಗವಾಗಿ ಮುಂಬರುವ ನವೆಂಬರ್ 3, 4 ಹಾಗೂ...

ಇಸ್ರೇಲ್‌ ಚುನಾವಣೆ | ಅರಬ್ಬರ ಭರ್ಜರಿ ವೋಟಿಂಗ್, 19...

ಇಸ್ರೇಲ್‌ ಪ್ರಧಾನಿ ನೆತನ್ಯಾಹುವಿನ ದ್ವೇಷದ ರಾಜಕೀಯಕ್ಕೆ ಬೇಸತ್ತ ಇಸ್ರೇಲ್‌ ಅರಬ್ಬರು ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ದಾಖಲೆಮಟ್ಟದಲ್ಲಿ ಮತಗಟ್ಟೆಗೆ ಧಾವಿಸಿ ಭರ್ಜರಿ ಓಟಿಂಗ್‌ ಮಾಡಿದ್ದಾರೆ. 19 ಸೀಟುಗಳನ್ನು ಗೆಲ್ಲುವ ಮೂಲಕ ನೆತನ್ಯಾಹು ಭವಿಷ್ಯವನ್ನು...

ಮಧ್ಯಮ ಆದಾಯದ ದೇಶಗಳ ಮಾನದಂಡವಾದ ‘ದಿನಕ್ಕೆ 4.2 ಡಾಲರ್’ (ಸುಮಾರು ರೂ. 240) ಬಡತನ ರೇಖೆಯನ್ನು ಪರಿಗಣಿಸಿದರೆ, 2011ರಲ್ಲಿ ಶೇ 57.7 ರಷ್ಟಿದ್ದ ಬಡವರ ಪ್ರಮಾಣ 2023ರ ವೇಳೆಗೆ ಶೇ 16.1ಕ್ಕೆ ಇಳಿದಿದೆ. ಇದರ ಪರಿಣಾಮವಾಗಿ ಒಟ್ಟು 49.6 ಕೋಟಿ ಜನರನ್ನು ಬಡತನ ರೇಖೆಗಿಂತ ಮೇಲಕ್ಕೆತ್ತುವಲ್ಲಿ ಭಾರತ ಯಶಸ್ವಿಯಾಗಿದೆ ಎಂದು ವರದಿ ಶ್ಲಾಘಿಸಿದೆ. ಈ ಮಾನದಂಡದ ಪ್ರಕಾರ, ನಗರ ಪ್ರದೇಶಗಳಲ್ಲಿ ಬಡತನ ಶೇ 8.6ರಷ್ಟಿದ್ದರೆ, ಗ್ರಾಮೀಣ ಭಾಗದಲ್ಲಿ ಶೇ 19.3ರಷ್ಟಿದೆ.

ಬಡತನ ಗಣನೀಯವಾಗಿ ಇಳಿಕೆಯಾಗಿದ್ದರೂ, ಆದಾಯದ ಅಸಮಾನತೆ ಇನ್ನೂ ದೊಡ್ಡ ಸವಾಲಾಗಿ ಉಳಿದಿದೆ. ದೇಶದ ಶೇ 10ರಷ್ಟು ಅತಿ ಶ್ರೀಮಂತರ ಸರಾಸರಿ ಆದಾಯವು, ಶೇ 10ರಷ್ಟು ಅತಿ ಬಡವರ ಆದಾಯಕ್ಕಿಂತ 13 ಪಟ್ಟು ಹೆಚ್ಚಾಗಿದೆ ಎಂದು ವರದಿ ಎಚ್ಚರಿಸಿದೆ.

​ಜೊತೆಗೆ, ಬಡತನವು ಕೆಲವು ನಿರ್ದಿಷ್ಟ ಭೌಗೋಳಿಕ ಪ್ರದೇಶಗಳಲ್ಲಿ ಮಾತ್ರ ಕೇಂದ್ರೀಕೃತವಾಗುತ್ತಿದೆ. ಭಾರತದ ಒಟ್ಟು ಬಡವರ ಪೈಕಿ ಶೇ 57ರಷ್ಟು ಜನರು ಉತ್ತರ ಪ್ರದೇಶದಿಂದ ಪಶ್ಚಿಮ ಬಂಗಾಳದವರೆಗಿನ ವ್ಯಾಪ್ತಿಯಲ್ಲಿಯೇ ವಾಸಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬಡತನ ಮತ್ತಷ್ಟು ತಗ್ಗಬೇಕಾದರೆ ಈ ರಾಜ್ಯಗಳಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯಾಗುವುದು ಅನಿವಾರ್ಯವಾಗಿದೆ.

2017 ಮತ್ತು 2023ರ ನಡುವೆ ದೇಶದಲ್ಲಿ 13.4 ಕೋಟಿ ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ. ದುಡಿಯುವ ವಯಸ್ಸಿನ ಜನಸಂಖ್ಯೆಯ ಹೆಚ್ಚಳಕ್ಕಿಂತ ಇದು ದುಪ್ಪಟ್ಟಾಗಿದೆ. ಗ್ರಾಮೀಣ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ವೇತನ ಸಹಿತ ಉದ್ಯೋಗಗಳಿಗೆ ಪ್ರವೇಶಿಸಿರುವುದು ಈ ಏರಿಕೆಗೆ ಪ್ರಮುಖ ಕಾರಣ. ಆದರೆ, ಸೃಷ್ಟಿಯಾದ ಬಹುಪಾಲು ಉದ್ಯೋಗಗಳು ಕಡಿಮೆ ಆದಾಯದ ಹಾಗೂ ಕಡಿಮೆ ಉತ್ಪಾದಕತೆಯ ವಲಯಗಳಲ್ಲಿಯೇ ಹೆಚ್ಚಾಗಿವೆ. ಮತ್ತೊಂದೆಡೆ, ಯುವಜನರ ನಿರುದ್ಯೋಗ ದರವು ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ 14.6 ರಿಂದ ಶೇ 15.9ಕ್ಕೆ ಏರಿಕೆಯಾಗಿದೆ ಎಂದು ವರದಿ ಬೊಟ್ಟು ಮಾಡಿದೆ.

ದೇಶದಲ್ಲಿ ಸಂಪತ್ತಿನ ಅಸಮಾನತೆಯನ್ನು ಅಳೆಯುವ ‘ಗಿನಿ ಸೂಚ್ಯಂಕ’ದಲ್ಲಿ (Gini Index) ಸುಧಾರಣೆಯಾಗಿದೆ. 2011-12ರಲ್ಲಿ 28.8ರಷ್ಟಿದ್ದ ಈ ಸೂಚ್ಯಂಕ 2023ರಲ್ಲಿ 23.0ಕ್ಕೆ ಇಳಿಕೆಯಾಗಿದೆ (ಈ ಸಂಖ್ಯೆ ಶೂನ್ಯಕ್ಕೆ ಹತ್ತಿರವಾದಷ್ಟು ಸಮಾನತೆ ಹೆಚ್ಚು). ಆದರೆ, ಈ ಸಮೀಕ್ಷೆಗಳು ಶ್ರೀಮಂತರ ನೈಜ ಆದಾಯವನ್ನು ಸಂಪೂರ್ಣವಾಗಿ ಸೆರೆಹಿಡಿಯದಿರುವ ಸಾಧ್ಯತೆಯಿರುವುದರಿಂದ, ಅಸಮಾನತೆಯ ನೈಜ ಪ್ರಮಾಣ ಇನ್ನೂ ಹೆಚ್ಚಿರಬಹುದು ಎಂದು ವರದಿ ಅಭಿಪ್ರಾಯಪಟ್ಟಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊಪ್ಪಳ | ಕೊಪ್ಪಳ ಜಿಲ್ಲೆಯ ಇಬ್ಬರು ಜಾನಪದ ಕಲಾವಿದರಿಗೆ ರಾಜ್ಯೋತ್ಸವ ಪ್ರಶಸ್ತಿ ಗರಿ

ಕನ್ನಡ ನಾಡು, ನುಡಿ ಹಾಗೂ ಜಾನಪದ ಕಲೆಯ ಉಳಿವು ಮತ್ತು ಬೆಳವಣಿಗೆಗೆ...

ಚಿಟಗುಪ್ಪ | ಆರೋಗ್ಯವಂತ ಬದುಕಿಗೆ ಯೋಗವೇ ಮದ್ದು: ಚಂದ್ರಕಾಂತ ಗಂಗಶೆಟ್ಟಿ

ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಸಮತೋಲನ ಕಾಪಾಡುವಲ್ಲಿ ಯೋಗಾಭ್ಯಾಸ ಮಹತ್ವದ...

‘ಕದನ ವಿರಾಮ ಎಂಬುದು ಬರಿ ಕಣ್ಣೊರೆಸುವ ತಂತ್ರ’; ಇಸ್ರೇಲ್ ವಿರುದ್ಧ ವಿಶ್ವಸಂಸ್ಥೆ ಆಕ್ರೋಶ

ಆಕ್ರಮಿತ ಪ್ಯಾಲೆಸ್ತೀನ್ ಪ್ರದೇಶದಲ್ಲಿ ಇಸ್ರೇಲ್ ಪಡೆಗಳು ನಡೆಸುತ್ತಿರುವ ಹಿಂಸಾಚಾರ ಮತ್ತು ಮಾನವಹಕ್ಕುಗಳ...

ಸೋಮನಾಥ ದೇಗುಲದ ಸುತ್ತ ಮಾಂಸಾಹಾರ ನಿಷೇಧ ಮುಂದುವರಿಕೆ; ಏಕಸದಸ್ಯ ಪೀಠದ ಆದೇಶಕ್ಕೆ ಗುಜರಾತ್ ಹೈಕೋರ್ಟ್ ತಡೆ

ಗುಜರಾತ್‌ನ ಪ್ರಸಿದ್ಧ ಸೋಮನಾಥ ದೇವಾಲಯದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾಂಸಾಹಾರ ತಯಾರಿಕೆ, ಮಾರಾಟ...