ಬಿಹಾರ ಚುನಾವಣೆ | ಕುಸಿದು ಬಿದ್ದ ಮತ್ತೊಂದು ಸೇತುವೆ; ಮತದಾನಕ್ಕೂ ಮುನ್ನ NDAಗೆ ಮುಖಭಂಗ

Date:

ಬಿಹಾರ ಚುನಾವಣೆಯಲ್ಲಿ ಮೊದಲ ಹಂತದ ಮತದಾನಕ್ಕೆ (ನ.6) ಮೂರು ದಿನಗಳು ಬಾಕಿ ಇರುವಾಗ, ಸೋಮವಾರ ಮತ್ತೊಂದು ಸೇತುವೆ ಕುಸಿದು ಬಿದ್ದಿದೆ. ನಿರ್ಮಾಣಗೊಂಡ ಕೇವಲ 5 ವರ್ಷಗಳಲ್ಲಿ ಸೇತುವೆ ಕುಸಿದು ಬಿದ್ದಿದೆ. ಇದು ಚುನಾವಣೆಗೂ ಮುನ್ನ ಎನ್‌ಡಿಎ ಸರ್ಕಾರದ ಭ್ರಷ್ಟಾಚಾರಕ್ಕೆ ಕನ್ನಡಿ ಹಿಡಿದಿದೆ ಎಂದು ವಿಪಕ್ಷಗಳು ಮತ್ತು ನೆಟ್ಟಿಗರು ಆರೋಪಿಸಿದ್ದಾರೆ.

- Advertisement -

ಬಿಹಾರದ ಅರಾರಿಯಾ ಜಿಲ್ಲೆಯ ಕೆಲ್ವಾಶಿ ಗ್ರಾಮದ ಬಳಿ ಪರ್ಮೈನ್ ನದಿಗೆ ಅಡ್ಡಲಾಗಿ 2019ರಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡಲಾಗಿತ್ತು. ಸೇತುವೆಯು ಪಟೇಗ್ನಾ ಮತ್ತು ಫೋರ್ಬ್ಸ್‌ಗಂಜ್ ಪ್ರದೇಶಗಳ ಸಂಪರ್ಕಕೊಂಡಿಯಾಗಿತ್ತು. ಇದೀಗ, ಸೇತುವೆ ಕುಸಿದಿದ್ದು, ಸೇತುವೆಯ ಭಾಗವು ನದಿಯಲ್ಲಿ ಮುಳುಗಿದೆ. ಫೋರ್ಬ್ಸ್‌ಗಂಜ್ ಮತ್ತು ಪಟೇಗ್ನಾ ನಡುವಿನ ಪ್ರಮುಖ ಸಂಪರ್ಕವನ್ನು ಮುರಿದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ಸೇತುವೆ ಕುಸಿತ ವಿಚಾರವಾಗಿ ಆಡಳಿತಾರೂಢ ಬಿಜೆಪಿ-ಜೆಡಿಯು ನೇತೃತ್ವದ ಎನ್‌ಡಿಎ ಮೈತ್ರಿಕೂಟದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುರಭಿ ಎಂಬವವರು, “ಈ ಸೇತುವೆಯನ್ನು 2022ರಲ್ಲಿ ಬಿಹಾರದ ಅರಾರಿಯಾದಲ್ಲಿ ನಿರ್ಮಿಸಲಾಗಿತ್ತು. ಈಗ ಈ ಸೇತುವೆ ಕುಸಿದಿದೆ. ಅಂತೆಯೇ, 2024ರ ಜೂನ್ 18 ಅರಾರಿಯಾ: ಪರಾರಿಯಾ ಗ್ರಾಮದಲ್ಲಿ ಬಕ್ರಾ ನದಿಗೆ ಹೊಸದಾಗಿ ನಿರ್ಮಿಸಲಾದ ಸೇತುವೆ ಕುಸಿಯಿತು. 2024ರ ಜೂನ್ 22 – ಸಿವಾನ್: ಗಂಡಕಿ ನದಿಯ ಮೇಲೆ ದಶಕಗಳಷ್ಟು ಹಳೆಯದಾದ ಸೇತುವೆ ಕುಸಿಯಿತು. 2024ರ ಜೂನ್ 23 – ಪೂರ್ವ ಚಂಪಾರಣ್: ಘೋಡಸಹನ್ ಬ್ಲಾಕ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿಯಿತು 2024ರ ಜೂನ್ 27–30 – ಕಿಶನ್‌ಗಂಜ್: ಎರಡು ಸೇತುವೆಗಳು ಕುಸಿದವು. ಅವುಗಳಲ್ಲಿ, ಒಂದನ್ನು 2007–08 ರಲ್ಲಿ MPLAD ನಿಧಿಯಿಂದ ನಿರ್ಮಿಸಲಾಗಿತ್ತು, ಇನ್ನೊಂದು 2011 ರಲ್ಲಿ ನಿರ್ಮಾಣಗೊಂಡಿತ್ತು. ಅಲ್ಲದೆ, 2024ರ ಜೂನ್–ಜುಲೈ – ಕಿಶನ್‌ಗಂಜ್, ಅರಾರಿಯಾ, ಮಧುಬನಿ, ಸರನ್, ಸಿವಾನ್ ಜಿಲ್ಲೆಗಳಲ್ಲಿ ಹಲವು ಸೇತುವೆಗಳು ಕುಸಿದುಬಿದ್ದವು. ನೋಡಿ, ಬಿಹಾರದಲ್ಲಿನ ಭ್ರಷ್ಟಾಚಾರವನ್ನು ಊಹಿಸಿ” ಎಂದಿದ್ದಾರೆ.

ಅಮರ್ ಸಿಂಗ್ ಚೌತಾನ್ ಎಂಬವರು, “2022ರಲ್ಲಿ ಅರಾರಿಯಾದಲ್ಲಿ ನಿರ್ಮಿಸಲಾದ ಸೇತುವೆ 2025ರಲ್ಲಿ ಕುಸಿದಿದೆ. ಡಬಲ್ ಎಂಜಿನ್ ಸರ್ಕಾರದ ಡಬಲ್ ಅಭಿವೃದ್ಧಿ ಎಂದರೆ ಇದೆಯೇ? ಆಗ ಹಣವನ್ನು ಯಾರು ಜೇಬಿಗೆ ಹಾಕಿಕೊಂಡರು? ಈಗ ಯಾರು ಜವಾಬ್ದಾರಿ ತೆಗೆದುಕೊಳ್ಳುತ್ತಾರೆ? ಬಿಹಾರಕ್ಕೆ ರಸ್ತೆಗಳು ಮತ್ತು ಪ್ರಾಮಾಣಿಕತೆ ಬೇಕು – ಫೋಟೋ ಶೂಟ್‌ಗಳು ಮತ್ತು ನಕಲಿ ಭರವಸೆಗಳಲ್ಲ!” ಎಂದು ಕಿಡಿಕಾರಿದ್ದಾರೆ.

ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | ಜಾತಿ ರಾಜಕೀಯಕ್ಕಿಲ್ಲ ನೆಲೆ; ಉದ್ಯೋಗಕ್ಕೆ ಮಾತ್ರವೇ ಬೆಲೆ!

ಸೇತುವೆಯ ವಿಡಿಯೋವನ್ನು ಹಂಚಿಕೊಂಡು ಎನ್‌ಡಿಎ ವಿರುದ್ಧ ಬಿಆರ್‌ಎಸ್‌ ಪಕ್ಷವು ವಾಗ್ದಾಳಿ ನಡೆಸಿದೆ. “ಬಿಹಾರದ ಅರಾರಿಯಾದಲ್ಲಿ 2022ರಲ್ಲಿ ನಿರ್ಮಿಸಲಾದ ಸೇತುವೆ 2025ರ ವೇಳೆಗೆ ಕುಸಿದಿದೆ. ಎನ್‌ಡಿಎಸ್‌ಎಯಂತಹ ಯಾವುದೇ ಕೇಂದ್ರ ಸಂಸ್ಥೆ ಎನ್‌ಡಿಎ ಆಡಳಿತವಿರುವ ರಾಜ್ಯಕ್ಕೆ ಭೇಟಿ ನೀಡುತ್ತದೆಯೇ ಅಥವಾ ವಿರೋಧ ಪಕ್ಷಗಳು ಬಿಜೆಪಿ ವಿರುದ್ಧ ಧ್ವನಿ ಎತ್ತಿದಾಗ ಮಾತ್ರ ಅದು ಕಾರ್ಯನಿರ್ವಹಿಸುತ್ತದೆಯೇ?” ಎಂದು ಕಿಡಿಕಾರಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಇಸಿ ಗ್ಯಾನೇಶ್‌ ಕುಮಾರ್‌ ವಿರುದ್ಧ ದೇಶವ್ಯಾಪಿ ಪ್ರತಿಭಟನೆ; ಹೈದರಾಬಾದ್‌ನಲ್ಲಿ ‘ಸಿಜೆಪಿ’ ಮಹತ್ವದ ಸಭೆ

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ...

ಜಮ್ಮು-ಕಾಶ್ಮೀರಕ್ಕೆ ಪೂರ್ಣ ರಾಜ್ಯ ಸ್ಥಾನಮಾನದ ನಿರ್ಣಯ ಅಂಗೀಕಾರ; ಸದನದಲ್ಲಿ ಬಿಜೆಪಿ ಗದ್ದಲ

ಜಮ್ಮು-ಕಾಶ್ಮೀರಕ್ಕೆ ತುರ್ತಾಗಿ ಪೂರ್ಣ ರಾಜ್ಯದ ಸ್ಥಾನಮಾನವನ್ನು ಮರುಸ್ಥಾಪಿಸಬೇಕು ಎಂದು ಆಗ್ರಹಿಸುವ ನಿರ್ಣಯವನ್ನು...

ಅಕ್ಟೋಬರ್ 8ರೊಳಗೆ ಪಶ್ಚಿಮ ಬಂಗಾಳ ಶಾಸಕರ ಅನರ್ಹತೆ ಅರ್ಜಿಗಳ ವಿಲೇವಾರಿಗೆ ಸ್ಪೀಕರ್​ಗೆ ಸುಪ್ರೀಂ ಸೂಚನೆ

ಪಕ್ಷಾಂತರ ನಿಷೇಧ ಕಾಯ್ದೆ ಹಾಗೂ ಸಂವಿಧಾನದ ಹತ್ತನೇ ಶೆಡ್ಯೂಲ್‌ನ ಅಡಿಯಲ್ಲಿ, ರಿತಬ್ರತಾ...

ಮೋದಿ ಸರ್ಕಾರ ECಗೆ ಇಮ್ಯೂನಿಟಿ ನೀಡಿದ್ದರೂ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲಾಗಲ್ಲ: ಕಪಿಲ್ ಸಿಬಲ್

ಮುಖ್ಯ ಚುನಾವಣಾ ಆಯುಕ್ತರಿಗೆ (CEC) ಕ್ರಿಮಿನಲ್ ಪ್ರಕರಣಗಳಿಂದ ಕಾನೂನು ರಕ್ಷಣೆ ನೀಡಲಾಗಿದೆ...