ಗಂಗಾ ನದಿಯಲ್ಲಿ ಮಾಂಸದೂಟ: ಸಂಘಿಗಳಿಗೆ ತಕ್ಷಣ ಜಾಮೀನು, ಮುಸ್ಲಿಮರಿಗೆ ತಿಂಗಳ ಜೈಲುವಾಸ

Date:

ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಕೋಮು ರಾಜಕಾರಣ ಹಾಗೂ ಮುಸ್ಲಿಮರ ಮೇಲಿನ ತಾರತಮ್ಯದ ನೀತಿಯು ಮತ್ತೊಮ್ಮೆ ಜಗಜ್ಜಾಹೀರಾಗಿದೆ. ಪವಿತ್ರ ಗಂಗಾ ನದಿಯ ವಿಹಾರ ದೋಣಿಯಲ್ಲಿ ಮಾಂಸ ಸೇವನೆ ಮಾಡಿದ ಒಂದೇ ಸ್ವರೂಪದ ಕೃತ್ಯಕ್ಕೆ ಆಡಳಿತ ವ್ಯವಸ್ಥೆ ಎರಡು ಭಿನ್ನ ನ್ಯಾಯ ಒದಗಿಸಿದೆ. ಅನ್ಯ ಕೋಮಿನ ಯುವಕರಿಗೆ ಕೇವಲ 24 ತಾಸುಗಳಲ್ಲಿ ಜಾಮೀನು ದೊರೆತಿದ್ದರೆ, ಇದೇ ಕೃತ್ಯವೆಸಗಿದ್ದ ಮುಸ್ಲಿಂ ಯುವಕರು ಬರೋಬ್ಬರಿ 59 ದಿನಗಳ ಕಾಲ ಜೈಲುವಾಸ ಅನುಭವಿಸುವ ಮೂಲಕ ತಾರತಮ್ಯದ ಸ್ಪಷ್ಟ ದರ್ಶನವಾಗಿದೆ.

- Advertisement -

ಇತ್ತೀಚೆಗೆ ಪ್ರಯಾಗ್‌ರಾಜ್‌ನಲ್ಲಿ ಗಂಗಾ ನದಿಯ ನಾವೆಯಲ್ಲಿ ಮದ್ಯಪಾನ ಮತ್ತು ಕೋಳಿ ಮಾಂಸ ಸೇವನೆ ಮಾಡಿದ ಆರೋಪದ ಮೇಲೆ ಐವರನ್ನು ಪೊಲೀಸರು ಬಂಧಿಸಿದ್ದರು. ದೀಪಕ್ ಕುಮಾರ್, ಅಜಯ್ ಸಾಹ್ನಿ, ಅರುಣ್ ಕುಮಾರ್ ಸಾಹ್ನಿ, ಅನುರಾಗ್ ನಿಷಾದ್ ಹಾಗೂ ರಾಹುಲ್ ಸಾಹ್ನಿ ಬಂಧಿತರಾದವರು. ಇವರು ದೋಣಿಯಲ್ಲಿ ಕುಳಿತು ಮದ್ಯಪಾನ ಮಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ನದಿಯ ಪಾವಿತ್ರ್ಯತೆಗೆ ಧಕ್ಕೆ ತಂದ ಈ ಕೃತ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘ಹಾಸ್ಟೆಲ್‌’ ಇಲ್ಲದ ಶಿಕ್ಷಣದ ಸ್ವರೂಪ ಹೇಗಿರಲಿದೆ?

ಸಾಮಾನ್ಯವಾಗಿ ʼಶಿಕ್ಷಣʼ ಎಂದರೆ ʼತರಗತಿ, ಪಠ್ಯಪುಸ್ತಕ ಮತ್ತು ಪರೀಕ್ಷೆಗಳʼ ಸುತ್ತ ಹೆಣೆದುಕೊಂಡಿರುವ ಕಲ್ಪನೆ. ಆದರೆ ಒಬ್ಬ ವಿದ್ಯಾರ್ಥಿ ದಿನದ ಬಹುಪಾಲು ಕಳೆಯುವ ಜಾಗ ʼಹಾಸ್ಟೆಲ್‌ʼ. ಹೆಚ್ಚಾಗಿ ಚರ್ಚೆಗೆ ಬಾರದ ಈ ʼಹಾಸ್ಟೆಲ್‌ʼ ಎಂಬ...

ಬರದ ಬೇಗೆಯಲ್ಲಿ ರಾಜ್ಯ ಬೆಂದರೂ ಅನುದಾನಕ್ಕ ದನಿ ಎತ್ತದ...

ಸದಾ ಕಾಲ 'ಮೋದಿ ಜಪ' ಮಾಡುತ್ತಾ, ಕೇವಲ ರಾಜಕೀಯಕ್ಕಾಗಿ ಮತ್ತು ಪಕ್ಷದ ಅಜೆಂಡಾಗಳಿಗಾಗಿ ರಾಜ್ಯಾದ್ಯಂತ ಸುತ್ತುವ ಈ ಸಂಸದರಿಗೆ, ನಾಡಿನ ಜನತೆ ಬರಗಾಲದ ತೀವ್ರ ಸಂಕಷ್ಟದಲ್ಲಿ ಬೆಂದು ಹೋಗುತ್ತಿರುವಾಗ ಅದೇ ಪ್ರಧಾನಿ ನರೇಂದ್ರ...

SIR ಅಕ್ರಮ | ಗ್ಯಾನೇಶ್‌ ಕುಮಾರ್ ‘ಅಪರಾಧಿ’ಯಾದ್ರೆ, ಮೋದಿ-ಅಮಿತ್...

ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯವೊಂದು ಈಗ ಜಗಜ್ಜಾಹೀರಾಗಿದೆ. ಪ್ರತಿಯೊಬ್ಬ ನಾಗರಿಕನ ಅತಿ ದೊಡ್ಡ ರಾಜಕೀಯ ಶಕ್ತಿಯಾಗಿರುವ 'ಮತದಾನದ ಹಕ್ಕು' ಮತ್ತು ಅದನ್ನು ಕಾಯಬೇಕಾದ ಸಾಂವಿಧಾನಿಕ ಸಂಸ್ಥೆಯನ್ನೇ ಆಡಳಿತಾರೂಢ ಮೋದಿ-ಅಮಿತ್ ಶಾ...

ವಿಡಿಯೊ ವೈರಲ್ ಆದ ಕೂಡಲೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ಈ ಐವರ ವಿರುದ್ಧ ಪ್ರಕರಣ ದಾಖಲಿಸಲಾಯಿತು. ಆದರೆ, ಆಡಳಿತ ಯಂತ್ರದ ಮೃದು ಧೋರಣೆಯಿಂದಾಗಿ ಬಂಧನದ ನಂತರದ ನ್ಯಾಯಾಲಯದ ಪ್ರಕ್ರಿಯೆಗಳು ಅತ್ಯಂತ ತ್ವರಿತಗತಿಯಲ್ಲಿ ಮುಗಿದವು. ಪರಿಣಾಮವಾಗಿ, ಈ ಎಲ್ಲ ಐವರು ಆರೋಪಿಗಳು ಕೇವಲ ಒಂದು ದಿನದ ಅವಧಿಯಲ್ಲಿ, ಅಂದರೆ 24 ತಾಸುಗಳಲ್ಲೇ ತ್ವರಿತವಾಗಿ ಜಾಮೀನು ಪಡೆದು ಜೈಲಿನಿಂದ ಹೊರಬರುವಲ್ಲಿ ಯಶಸ್ವಿಯಾಗಿದ್ದಾರೆ.

ಈ ತ್ವರಿತ ಜಾಮೀನು ಪ್ರಕ್ರಿಯೆಯು ಮಾರ್ಚ್ 2026ರಲ್ಲಿ ವಾರಾಣಸಿಯ ಗಂಗಾ ನದಿಯಲ್ಲಿ ನಡೆದಿದ್ದ ಇದೇ ರೀತಿಯ ಪ್ರಕರಣದಲ್ಲಿ ಮುಸ್ಲಿಮರ ವಿರುದ್ಧ ನಡೆದ ತಾರತಮ್ಯವನ್ನು ನೆನಪಿಸಿದೆ. ನಾವೆಯಲ್ಲಿ ಇಫ್ತಾರ್ ಕೂಟ ಆಯೋಜಿಸಿ ಕೋಳಿ ಮಾಂಸ ತಿಂದಿದ್ದ 14 ಮುಸ್ಲಿಂ ಯುವಕರನ್ನು ಬಿಜೆಪಿ ಯುವ ಮೋರ್ಚಾ ಮುಖಂಡರ ದೂರಿನ ಮೇರೆಗೆ ಪೊಲೀಸರು ಬಂಧಿಸಿದ್ದರು. ಮಾಂಸದ ತ್ಯಾಜ್ಯವನ್ನು ನದಿಗೆ ಎಸೆದರು ಎಂಬ ಆರೋಪ ಹೊರಿಸಿ, ಮುಸ್ಲಿಮರ ವಿರುದ್ಧ ಕಠಿಣ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿತ್ತು.

ಒಂದೇ ಸ್ವರೂಪದ ಕೃತ್ಯವಾದರೂ ಮುಸ್ಲಿಂ ಯುವಕರಿಗೆ ಜಾಮೀನು ಪಡೆಯಲು ಬರೋಬ್ಬರಿ 59 ದಿನಗಳು ಬೇಕಾದವು. ಸೆಷನ್ಸ್ ನ್ಯಾಯಾಲಯವು ಜಾಮೀನು ನಿರಾಕರಿಸಿದ ಬಳಿಕ, ಮೇ 15ರಂದು ಅಲಹಾಬಾದ್ ಹೈಕೋರ್ಟ್ 14 ಮಂದಿಯ ಪೈಕಿ ಕೇವಲ 8 ಯುವಕರಿಗೆ ಮಾತ್ರ ಜಾಮೀನು ಮಂಜೂರು ಮಾಡಿದೆ. ಉಳಿದ 6 ಮುಸ್ಲಿಂ ಯುವಕರ ಜಾಮೀನು ಅರ್ಜಿಗಳು ಇನ್ನೂ ವಿಚಾರಣೆಯ ಹಂತದಲ್ಲೇ ಬಾಕಿ ಉಳಿದಿದ್ದು, ನ್ಯಾಯಾಂಗ ಪ್ರಕ್ರಿಯೆಯಲ್ಲಿನ ಈ ವಿಳಂಬವು ತೀವ್ರ ಕಳವಳಕಾರಿಯಾಗಿದೆ.

ಒಂದೇ ಕೃತ್ಯಕ್ಕೆ ಧರ್ಮದ ಆಧಾರದ ಮೇಲೆ ಕಾನೂನು ಪ್ರಯೋಗಿಸುವ ಮೂಲಕ ಬಿಜೆಪಿ ಸರ್ಕಾರವು ತನ್ನ ಕೋಮು ರಾಜಕಾರಣದ ಅಜೆಂಡಾವನ್ನು ಸಾಬೀತುಪಡಿಸಿದೆ. ಹಿಂದೂ ಯುವಕರಿಗೆ ಒಂದು ದಿನದಲ್ಲೇ ರಿಲೀಫ್ ನೀಡುವ ವ್ಯವಸ್ಥೆ, ಅಲ್ಪಸಂಖ್ಯಾತರಿಗೆ ಕನಿಷ್ಠ ಜಾಮೀನು ನೀಡಲೂ ಎರಡು ತಿಂಗಳು ಸತಾಯಿಸಿರುವುದು ಸಂವಿಧಾನದ ಸಮಾನತೆಯ ಆಶಯಕ್ಕೆ ವಿರುದ್ಧವಾಗಿದೆ. ಆಡಳಿತ ಯಂತ್ರವನ್ನು ಬಳಸಿಕೊಂಡು ಮುಸ್ಲಿಮರ ವಿರುದ್ಧ ಎಸಗುತ್ತಿರುವ ಈ ಬಹಿರಂಗ ತಾರತಮ್ಯವು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಬಹುದೊಡ್ಡ ಹೊಡೆತ ನೀಡಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ ಹರಾಜು ರದ್ದು, ಲೀಸ್‌ಗೆ ನೀಡಲು ಸಿಎಂ ಭರವಸೆ : ಶ್ರೀಮಂತ ಬಿರಾದರ್

ಬೀದರ್ ಜಿಲ್ಲೆಯ ರೈತರು‌, ಕಾರ್ಮಿಕರ ಜೀವನಾಡಿಯಾಗಿರುವ ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ...

‘ದೇವರೇ ಈ ದೇಶವನ್ನು ಕಾಪಾಡಬೇಕು’: ರೈಲು ಪ್ರಯಾಣದ ಗದ್ದಲಕ್ಕೆ ಬೇಸತ್ತ ತೇಜಸ್ವಿ ಸೂರ್ಯ ಪತ್ನಿ

ರೈಲು ಪ್ರಯಾಣದ ವೇಳೆ ಸಹಪ್ರಯಾಣಿಕರ ಗದ್ದಲದಿಂದ ತೀವ್ರ ಕಿರಿಕಿರಿ ಅನುಭವಿಸಿರುವುದಾಗಿ ಬಿಜೆಪಿ...

ಬೀದರ್ | ಬರ ಪರಿಸ್ಥಿತಿ : ವಿಶೇಷ ಪ್ಯಾಕೇಜ್ ಘೋಷಿಸಲು ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿದ್ದು, ಬೆಳೆ...