ಬಿಹಾರ | ಗಂಗಾ ನದಿಯಲ್ಲಿ ದೋಣಿ ಪಲ್ಟಿ: 11ಕ್ಕೂ ಅಧಿಕ ಅಪ್ರಾಪ್ತರ ದಾರುಣ ಸಾವು

Date:

ದೋಣಿ ಪಲ್ಟಿಯಾಗಿ ಕನಿಷ್ಠ 11ಕ್ಕೂ ಹೆಚ್ಚು ಅಪ್ರಾಪ್ತರು ಗಂಗಾ ನದಿಯಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಬಿಹಾರದ ವೈಶಾಲಿ ಜಿಲ್ಲೆಯ ರಾಗೋಪುರ ದಿಯಾರಾ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.

- Advertisement -

ಸಮೀಪದ ಹಳ್ಳಿಯೊಂದರಲ್ಲಿ ಏರ್ಪಡಿಸಲಾಗಿದ್ದ ಔಟಣಕೂಟಕ್ಕೆ (ಊಟದ ಸಮಾರಂಭ) ತೆರಳಲು ಸುಮಾರು 15 ರಿಂದ 20 ಮಂದಿ (ಹೆಚ್ಚಾಗಿ ಮಕ್ಕಳು) ದೋಣಿಯೊಂದರಲ್ಲಿ ಪ್ರಯಾಣಿಸುತ್ತಿದ್ದರು. ರಾತ್ರಿ ವೇಳೆ ನದಿ ಮಧ್ಯಭಾಗದಲ್ಲಿ ದೋಣಿ ಸಮತೋಲನ ತಪ್ಪಿ ಪಲ್ಟಿಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸುಪ್ತ ಆಯಾಸದ ಹಿಂದೆ ಅಡಗಿರುವ ರಕ್ತಹೀನತೆ: ಕರ್ನಾಟಕದ ಅರ್ಧದಷ್ಟು...

ದೈನಂದಿನ ಒತ್ತಡ, ನಿದ್ರೆಯ ಕೊರತೆ ಅಥವಾ ಬಿಡುವಿಲ್ಲದ ಜೀವನಶೈಲಿಯೆಂದು ನಿರ್ಲಕ್ಷಿಸುವ ಆಯಾಸದ ಹಿಂದೆ ರಕ್ತಹೀನತೆ ಅಡಗಿರಬಹುದು. ಕರ್ನಾಟಕದಲ್ಲಿ ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರಲ್ಲಿ ಶೇ. 50ಕ್ಕಿಂತ ಹೆಚ್ಚು ಮಂದಿ ರಕ್ತಹೀನತೆಯಿಂದ ಬಳಲುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ದೈನಂದಿನ...

20 ಬಂಡುಕೋರ ಟಿಎಂಸಿ ಸಂಸದರು ಮತ ಚಲಾಯಿಸಬಹುದೇ; ಮುಂದೆ...

ಡಿಲಿಮಿಟೇಷನ್ ಹಾಗೂ ಮಹಿಳಾ ಮೀಸಲಾತಿ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮುಂದಿನ ವಾರ ಸಂಸತ್ತಿನಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಸಜ್ಜಾಗಿರುವ ಹೊತ್ತಿನಲ್ಲಿ, ಲೋಕಸಭಾ ಸ್ಪೀಕರ್ ಮುಂದೆ ಅನರ್ಹತೆ ವಿಚಾರಣೆ ಎದುರಿಸುತ್ತಿರುವ 20 ಬಂಡುಕೋರ ಟಿಎಂಸಿ...

ಸಿನಿಮಾ ಪ್ರಶಸ್ತಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯ ಏಳು ಸುತ್ತಿನ...

ಪ್ರಶಸ್ತಿಗೆ ಮತ್ತು ಸಬ್ಸಿಡಿಗೆ ಅರ್ಜಿ ಸಲ್ಲಿಸಲು ನಿರ್ಮಾಪಕರು, ನಿರ್ದೇಶಕರು ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಅದಕ್ಕೆ ಮುಖ್ಯ ಕಾರಣ, ನಮ್ಮ ಚಿತ್ರರಂಗದಲ್ಲಿ ಪೂರ್ಣ ಪ್ರಮಾಣದ ನಿರ್ಮಾಣ ಸಂಸ್ಥೆಗಳಿರುವುದು ಕೇವಲ ಬೆರಳೆಣಿಕೆಯಷ್ಟು, ಉಳಿದಂತೆ ಬಹುತೇಕ ನಿರ್ಮಾಣ...

ಇದನ್ನೂ ಓದಿ: ಅಸ್ಸಾಂ, ಬಿಹಾರ ಕತ್ತಲಲ್ಲಿ ಮುಳುಗಿದಾಗ ಮೋದಿಗೆ ‘ಆಶೀರ್ವಾದ್ ಕಾ ದಿಯಾ’ ಅರ್ಪಣೆ!

ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳೀಯ ನಿವಾಸಿಗಳು, ಈಜುಗಾರರು ರಕ್ಷಣೆಗೆ ಧಾವಿಸಿದ್ದಾರೆ. ಕೆಲವರನ್ನು ರಕ್ಷಿಸಿ ಪಟನಾದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ರಾಜ್ಯ ವಿಪತ್ತು ಶಮನ ಪಡೆ (ಎಸ್‌ಡಿಆರ್‌ಎಫ್) ಮತ್ತು ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಇನ್ನು ಈ ದುರಂತಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಬಿಹಾರ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ, ಮೃತರ ಕುಟುಂಬಕ್ಕೆ ತಲಾ ₹4 ಲಕ್ಷ ಪರಿಹಾರ ಮತ್ತು ಗಾಯಗೊಂಡವರಿಗೆ ಅಗತ್ಯ ವೈದ್ಯಕೀಯ ನೆರವು ನೀಡಲಾಗುವುದು ಎಂದು ಘೋಷಿಸಿದ್ದಾರೆ. ರಾತ್ರಿ ವೇಳೆ ದೋಣಿ ಸಂಚಾರದ ಮೇಲಿನ ನಿಯಮಗಳನ್ನು ಉಲ್ಲಂಘಿಸಿರುವ ಕುರಿತು ಆಡಳಿತ ತನಿಖೆ ಪ್ರಾರಂಭಿಸಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜನನುಡಿ 2026 | ಇತಿಹಾಸ ಸುಮ್ಮನಿರುವವರನ್ನು ಕ್ಷಮಿಸುವುದಿಲ್ಲ: ಪ್ರಕಾಶ್ ರಾಜ್

ಇತಿಹಾಸ ತಪ್ಪು ಮಾಡಿದವರನ್ನು ಕ್ಷಮಿಸುತ್ತದೆ. ಆದರೆ ಸುಮ್ಮನಿರುವವರನ್ನು ಯಾವತ್ತೂ ಕ್ಷಮಿಸುವುದಿಲ್ಲ ಎಂದು...

ಉತ್ತರ ಕನ್ನಡ |ಮಂಗನ ಕಾಯಿಲೆ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಹರ್ಷಲ್ ಬೊಯರ್

ಜಿಲ್ಲೆಯಲ್ಲಿ ಮಂಗನ ಕಾಯಿಲೆ (ಕೆಎಫ್‌ಡಿ) ನಿಯಂತ್ರಣಕ್ಕೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು,...

ಸಮಾನತೆ, ಕಾಯಕ-ದಾಸೋಹದ ತತ್ವಗಳಿಗೆ ಸಾಕ್ಷಿಯಾದ ನೆಲ ಬಸವಕಲ್ಯಾಣ

ಬಸವಕಲ್ಯಾಣ ಸಮಾನತೆ, ಕಾಯಕ ಮತ್ತು ದಾಸೋಹದ ತತ್ವಗಳನ್ನು ಸಾರುವ ಪವಿತ್ರ ಭೂಮಿಯಾಗಿದ್ದು,...

ಕಾರವಾರ |ಅರಣ್ಯದಲ್ಲಿ ಅಕ್ರಮ ಮದ್ಯ ಸಾಗಾಟ : 64 ಸಾವಿರ ಮೌಲ್ಯದ ಮದ್ಯ ಜಪ್ತಿ

ಮೈಂಗಿಣಿ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಗೋವಾ ರಾಜ್ಯದ ಮದ್ಯ ಸಾಗಾಟ ಮಾಡುತ್ತಿದ್ದ...