‘ನಿಮ್ಮನ್ನು ನೀವು ಪ್ರಭು ಎಂದುಕೊಂಡಿದ್ದೀರಾ?’ ಐಎಎಸ್ ಅಧಿಕಾರಿ ತುಕಾರಾಮ್ ಮುಂಡೆಗೆ ಬಾಂಬೆ ಹೈಕೋರ್ಟ್ ತರಾಟೆ

Date:

ಕಾಯ್ದೆ-ನಿಯಮಗಳನ್ನು ಸರಿಯಾಗಿ ವಿಶ್ಲೇಷಿಸದೆ, ಕಾನೂನುಬಾಹಿರವಾಗಿ ಮತ್ತು ‘ಅತಿಯಾದ ಅವಸರ’ದಿಂದ ಆದೇಶ ಹೊರಡಿಸುತ್ತಿರುವ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ ಮಂಡಳಿಯನ್ನು (FDA) ಬಾಂಬೆ ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ. ಖಡಕ್ ಐಎಎಸ್ ಅಧಿಕಾರಿ ತುಕಾರಾಮ್ ಮುಂಡೆ ನೇತೃತ್ವದ ಎಫ್‌ಡಿಎ ತೆಗೆದುಕೊಂಡಿದ್ದ ಎರಡು ಬೃಹತ್ ಕ್ರಮಗಳನ್ನು ಕೋರ್ಟ್ ಟೀಕಿಸಿದೆ. ಈ ಬೆನ್ನಲ್ಲೇ, ಇಲಾಖೆಯು ತನ್ನ ಆದೇಶಗಳನ್ನು ಹಿಂಪಡೆದುಕೊಂಡಿದೆ.

- Advertisement -

ಸಿಪ್ಲಾ ಸಂಸ್ಥೆಯ ಪರವಾನಗಿ ರದ್ದು ಮತ್ತು ಮುಂಬೈ ಕ್ರಿಕೆಟ್ ಅಸೋಸಿಯೇಷನ್ (MCA) ಆವರಣದ ರೆಸ್ಟೋರೆಂಟ್‌ಗಳ ಕಾರ್ಯಾಚರಣೆ ಅಮಾನತುಗೊಳಿಸುವ ಎಫ್‌ಡಿಎ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಯ ವಿಚಾರಣೆ ನಡೆಸಿರುವ ಪ್ರಭಾರ ಮುಖ್ಯ ನ್ಯಾಯಮೂರ್ತಿ ರವೀಂದ್ರ ಘುಗೆ ಮತ್ತು ನ್ಯಾಯಮೂರ್ತಿ ಗೌತಮ್ ಅಂಕಡ್ ಅವರಿದ್ದ ಪೀಠವು ಎಫ್‌ಡಿಎ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

“ನೈಸರ್ಗಿಕ ನ್ಯಾಯ ತತ್ವಗಳನ್ನು ಗಾಳಿಗೆ ತೂರಿ ಎಫ್‌ಡಿಎ ಅಧಿಕಾರಿಗಳು ವರ್ತಿಸುತ್ತಿದ್ದಾರೆ. ನೀವೇನು ನಿಮ್ಮನ್ನು ಪ್ರಭುಗಳು ಅಂದುಕೊಂಡಿದ್ದೀರಾ? ನೀವು ಏನು ಬೇಕಾದರೂ ಮಾಡಬಹುದೇ?” ಎಂದು ಪೀಠ ಕಿಡಿಕಾರಿದೆ.

ಪುಣೆಯಲ್ಲಿರುವ ಪ್ರಖ್ಯಾತ ಔಷಧ ತಯಾರಿಕಾ ಸಂಸ್ಥೆ ‘ಸಿಪ್ಲಾ’ ಘಟಕದ ಪರವಾನಗಿಯನ್ನು ಎಫ್‌ಡಿಎ ರದ್ದುಗೊಳಿಸಿತ್ತು. ಆದರೆ, ಸರ್ಕಾರದ ಸಾರ್ವಜನಿಕ ರಜಾದಿನದಂದು ಸಂಸ್ಥೆಯ ಪ್ರತಿನಿಧಿಗೆ ಇ-ಮೇಲ್ ಕಳುಹಿಸಿ ವಿಚಾರಣೆಗೆ ಕರೆದು, ಏಕಪಕ್ಷೀಯವಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಸಿಪ್ಲಾ ಆರೋಪಿಸಿದೆ. ಈ ವಿಚಾರವಾಗಿ ಎಫ್‌ಡಿಎ ನಡೆಯನ್ನು ಹೈಕೋರ್ಟ್ ಕಟು ಶಬ್ದಗಳಿಂದ ಟೀಕಿಸಿದೆ. ಇಲಾಖೆಯು ನಿಯಮಬಾಹಿರವಾಗಿ ವರ್ತಿಸಿದೆ ಎಂದು ನ್ಯಾಯಪೀಠ ಕರೆದಿದೆ. ಈ ಬಳಿಕ, ಎಫ್‌ಡಿಎ ತನ್ನ ಪರವಾನಗಿ ರದ್ದತಿ ಆದೇಶವನ್ನು ವಾಪಸ್ ಪಡೆದಿದೆ.

ಅಂತೆಯೇ, ಮುಂಬೈ ಕ್ರಿಕೆಟ್ ಅಸೋಸಿಯೇಷನ್ (MCA) ಆವರಣದಲ್ಲಿದ್ದ 5 ಪ್ರಮುಖ ರೆಸ್ಟೋರೆಂಟ್‌ಗಳ ಕಾರ್ಯಾಚರಣೆಯನ್ನು ಎಫ್‌ಡಿಎ ಅಮಾನತುಗೊಳಿಸಿತ್ತು. ಆದರೆ, ಇತ್ತೀಚಿನ ತಪಾಸಣೆಯಲ್ಲಿ ಈ ರೆಸ್ಟೋರೆಂಟ್‌ಗಳು 88% ರಷ್ಟು ಆಹಾರ ಭದ್ರತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವುದು ಕಂಡುಬಂದಿದೆ ಎಂಬುದನ್ನು ನ್ಯಾಯಾಲಯ ಗಮನಿಸಿದ್ದು, ನಿಯಮ ಪಾಲನೆಯಾಗಿದ್ದರೂ, ಪರವಾನಗಿ ಎಮ್‌ಸಿಎ ಹೆಸರಲ್ಲಿದ್ದರೂ, ರೆಸ್ಟೋರೆಂಟ್ ನಡೆಸುತ್ತಿರುವುದು ಬೇರೆ ಸಂಸ್ಥೆ ಎಂಬ ಕ್ಷುಲ್ಲಕ ತಾಂತ್ರಿಕ ಕಾರಣ ನೀಡಿ ಅಮಾನತು ಆದೇಶ ನೀಡಿದ್ದನ್ನು ಹೈಕೋರ್ಟ್‌ ಖಂಡಿಸಿದೆ.

ಈ ಎರಡೂ ಪ್ರಕರಣಗಳಲ್ಲಿ ಎಫ್‌ಡಿಎಗೆ ಎಚ್ಚರಿಕೆ ನೀಡಿರುವ ಹೈಕೋರ್ಟ್‌, “ಪರಿಸ್ಥಿತಿಯನ್ನು ಪ್ರಾಯೋಗಿಕವಾಗಿ ನೋಡಬೇಕೆಂದು ನಾವು ಎಷ್ಟೇ ಹೇಳಿದರೂ, ಅಧಿಕಾರಿಗಳು ಹಟಮಾರಿತನದಿಂದ ಆದೇಶ ಹೊರಡಿಸುತ್ತಿದ್ದಾರೆ. ಸೊಳ್ಳೆಯನ್ನು ಕೊಲ್ಲಲು ಕತ್ತಿ ಬಳಸುವ ಅಗತ್ಯವೇನಿತ್ತು? ಪದೇ ಪದೇ ಇಲಾಖೆಗೆ ಬುದ್ಧಿ ಹೇಳಿ ನಮಗೂ ಸಾಕಾಗಿದೆ, ಈಗ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಜರುಗಿಸಿ ಜೈಲಿಗೆ ಕಳುಹಿಸುವ ಸಮಯ ಬಂದಿದೆ” ಎಂದು ಹೈಕೋರ್ಟ್ ಕಠುವಾಗಿ ಹೇಳಿದೆ.

ನ್ಯಾಯಾಲಯದ ತೀವ್ರ ಆಕ್ಷೇಪದ ನಂತರ ಎಫ್‌ಡಿಎ ತನ್ನ ಆದೇಶವನ್ನು ಹಿಂಪಡೆದಿದೆ. ರೆಸ್ಟೋರೆಂಟ್‌ಗಳಿಗೆ ಮತ್ತೆ ಸೇವೆಯನ್ನು ಆರಂಭಿಸಲು ಹೈಕೋರ್ಟ್ ಅನುಮತಿ ನೀಡಿದೆ. ಇಲಾಖೆಗೆ ನಿಯಮಗಳ ಜಾರಿ ಮುಖ್ಯವೇ ಹೊರತು ಕಾನೂನನ್ನು ಮೀರಿ ವರ್ತಿಸುವುದಲ್ಲ ಎಂದು ಪೀಠವು ಸ್ಪಷ್ಟವಾಗಿ ಹೇಳಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಡಿಬಿಐ ಬ್ಯಾಂಕ್ ಮಾರಾಟಕ್ಕೆ ಕೇಂದ್ರ ಸಂಪುಟ ಅಸ್ತು: ₹52,878 ಕೋಟಿಗೆ ಫೇರ್‌ಫ್ಯಾಕ್ಸ್ ತೆಕ್ಕೆಗೆ

ಐಡಿಬಿಐ (IDBI) ಬ್ಯಾಂಕ್‌ನ ‘ಕಾರ್ಯತಂತ್ರದ ಪುನರ್‌ರಚನೆ’ಗೆ (Strategic Restructuring) ಕೇಂದ್ರ ಸಚಿವ...

ಬೀದರ್‌ | ಜಿಪಂ, ತಾಪಂ ಚುನಾವಣೆ: ಸಾಮಾಜಿಕ ಜಾಲತಾಣದಲ್ಲಿ ಆಕಾಂಕ್ಷಿಗಳ ಪ್ರಚಾರ ಜೋರು!

ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರವಾರು ಮೀಸಲಾತಿ ಪ್ರಕಟವಾಗುತ್ತಿದ್ದಂತೆ, ಬೀದರ್‌...

ಸಿಜೆಪಿ ನಾಯಕರ ಬಂಧನಕ್ಕೆ ತೀವ್ರ ಖಂಡನೆ: ತಕ್ಷಣ ರಾಂಕಾ, ಸೌರವ್ ಬಿಡುಗಡೆಗೆ ವಿಪಕ್ಷಗಳ ಆಗ್ರಹ

ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್...

ಪತಿಯನ್ನು ಕೊಂದು ಕಾಂಕ್ರೀಟ್ ಡ್ರಮ್‌ನಲ್ಲಿ ಹೂತಿಟ್ಟ ಪ್ರಕರಣ: ಪತ್ನಿ, ಪ್ರಿಯಕರನಿಗೆ ಗಲ್ಲು ಶಿಕ್ಷೆ

ಮರ್ಚೆಂಟ್ ನೇವಿ ಅಧಿಕಾರಿ ಸೌರಭ್ ರಜಪೂತ್ ಅವರನ್ನು ಬರ್ಬರವಾಗಿ ಹತ್ಯೆಗೈದು, ಮೃತದೇಹವನ್ನು...