ಆಯುಷ್ಮಾನ್ vs ಖಾಸಗಿ ಆಸ್ಪತ್ರೆ: ಕರ್ನಾಟಕದಲ್ಲಿ ಚಿಕಿತ್ಸೆ ನಿರಾಕರಣೆ, ಹರಿಯಾಣದಲ್ಲಿ ಸೇವೆ ಸ್ಥಗಿತದ ಎಚ್ಚರಿಕೆ

Date:

ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಚಿಕಿತ್ಸಾ ವೆಚ್ಚದ ಹೊರೆ ತಪ್ಪಿಸುವ ಉದ್ದೇಶದಿಂದ ಜಾರಿಗೊಂಡಿರುವ ‘ಆಯುಷ್ಮಾನ್ ಭಾರತ್’ ಯೋಜನೆಗೆಯಡಿ ಸರ್ಕಾರವು ಸಕಾಲಕ್ಕೆ ರೋಗಿಗಳ ಆರೋಗ್ಯ ವೆಚ್ಚ ಬಿಡುಗಡೆ ಮಾಡುತ್ತಿಲ್ಲ ಎಂಬ ಆರೋಪ ಖಾಸಗಿ ವೈದ್ಯಕೀಯ ವಲಯದಲ್ಲಿ ತೀವ್ರವಾಗಿದೆ. ಯೋಜನೆ ವಿಚಾರವಾಗಿ ಕರ್ನಾಟಕ ಮತ್ತು ಹರಿಯಾಣದಲ್ಲಿ ಖಾಸಗಿ ಆಸ್ಪತ್ರೆಗಳು ಅಸಮಾಧಾನ ವ್ಯಕ್ತಪಡಿಸಿವೆ. ಕರ್ನಾಟಕದಲ್ಲಿ ಯೋಜನೆಯಡಿ ನೋಂದಾಯಿತ ಕೆಲ ಖಾಸಗಿ ಆಸ್ಪತ್ರೆಗಳು ಫಲಾನುಭವಿಗಳಿಗೆ ಚಿಕಿತ್ಸೆ ನೀಡಲು ಹಿಂದೇಟು ಹಾಕುವುದು, ಯೋಜನೆಯಡಿ ಚಿಕಿತ್ಸೆ ನೀಡಬೇಕಿದ್ದರೂ ನೇರವಾಗಿ ಹಣ ವಸೂಲಿ ಮಾಡುವುದು ಬೆಳಕಿಗೆ ಬಂದಿದೆ. ಅಂತೆಯೇ, ಹರಿಯಾಣದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಿ ಆರು ತಿಂಗಳುಗಳೇ ಕಳೆದಿದ್ದರೂ, ಸರ್ಕಾರದಿಂದ ಹಣ ಬಿಡುಗಡೆ ಮಾಡದಿರುವುದನ್ನು ವಿರೋಧಿಸಿ ಖಾಸಗಿ ಆಸ್ಪತ್ರೆಗಳು ಸೇವೆ ಸ್ಥಗಿತಗೊಳಿಸಲು ಮುಂದಾಗಿವೆ.

- Advertisement -

ಕರ್ನಾಟಕದಲ್ಲಿ ‘ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ’ ಯೋಜನೆಯಡಿ ಚಿಕಿತ್ಸೆ ನೀಡಲು ನೋಂದಾಯಿಸಿರುವ ಕೆಲವು ಖಾಸಗಿ ಆಸ್ಪತ್ರೆಗಳು ಪ್ಯಾಕೇಜ್ ದರ ಕಡಿಮೆ ಎಂಬ ಕಾರಣ ಸೇರಿದಂತೆ ಹಲವು ನೆಪಗಳನ್ನು ಮುಂದಿಟ್ಟು ರೋಗಿಗಳನ್ನು ದಾಖಲಿಸಿಕೊಳ್ಳಲು ನಿರಾಸಕ್ತಿ ತೋರುತ್ತಿವೆ. ಕೆಲ ಆಸ್ಪತ್ರೆಗಳು ರೋಗಿಗಳನ್ನು ದಾಖಲಿಸಿಕೊಂಡರೂ ಯೋಜನೆಯಡಿ ನಗದುರಹಿತ ಚಿಕಿತ್ಸೆ ನೀಡದೆ ರೋಗಿಗಳಿಂದಲೇ ಹಣ ಪಾವತಿಸಿಸಿಕೊಂಡಿರುವುದು ಆರೋಗ್ಯ ಇಲಾಖೆಯ ಗಮನಕ್ಕೆ ಬಂದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಈ ಹಿನ್ನೆಲೆಯಲ್ಲಿ ಇಲಾಖೆ ಹಲವು ಆಸ್ಪತ್ರೆಗಳಿಗೆ ನೋಟಿಸ್ ನೀಡಿದ್ದು, ಕೆಲವು ಸಂಸ್ಥೆಗಳ ವಿರುದ್ಧ ದಂಡಾತ್ಮಕ ಕ್ರಮ ಕೈಗೊಂಡಿದೆ. ರೋಗಿಗಳಿಂದ ಹೆಚ್ಚುವರಿಯಾಗಿ ವಸೂಲಿ ಮಾಡಲಾದ ಹಣವನ್ನು ಮರುಪಾವತಿಸುವಂತೆ ಸೂಚಿಸಲಾಗಿದ್ದು, ಕನಿಷ್ಠ 17 ಆಸ್ಪತ್ರೆಗಳಿಂದ ರೋಗಿಗಳಿಗೆ ಹಣ ವಾಪಸ್ ಕೊಡಿಸಲಾಗಿದೆ.

ಆರೋಗ್ಯ ಇಲಾಖೆಯ ಮಾಹಿತಿಯ ಪ್ರಕಾರ, ಮೈಸೂರಿನ ಅಪೊಲೊ ಬಿಜಿಎಸ್ ಆಸ್ಪತ್ರೆ 6.73 ಲಕ್ಷ ರೂ., ಬೆಂಗಳೂರಿನ ನಾರಾಯಣ ಹೃದಯಾಲಯ 4.31 ಲಕ್ಷ ರೂ., ಮೈಸೂರಿನ ಭಾನವಿ ಆಸ್ಪತ್ರೆ 4.14 ಲಕ್ಷ ರೂ., ಬೆಳಗಾವಿಯ ಲೇಕ್‌ವ್ಯೂ ಹಾರ್ಟ್ ಅಂಡ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ 2.70 ಲಕ್ಷ ರೂ., ಮೈಸೂರಿನ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ 2.14 ಲಕ್ಷ ರೂ., ಬೆಂಗಳೂರಿನ ಸಾಗರ್ ಆಸ್ಪತ್ರೆ 1.63 ಲಕ್ಷ ರೂ. ಹಾಗೂ ವೈದೇಹಿ ಆಸ್ಪತ್ರೆ 1.28 ಲಕ್ಷ ರೂ.ಗಳನ್ನು ಸಂಬಂಧಿಸಿದ ರೋಗಿಗಳಿಗೆ ಹಿಂದಿರುಗಿಸಿವೆ.

ಕರ್ನಾಟಕದಲ್ಲಿ 2018ರಿಂದ ಜಾರಿಯಲ್ಲಿರುವ ಆಯುಷ್ಮಾನ್ ಯೋಜನೆಯಡಿ ಬಿಪಿಎಲ್ ಕುಟುಂಬಗಳಿಗೆ ವರ್ಷಕ್ಕೆ 5 ಲಕ್ಷ ರೂ. ವರೆಗೆ ಆರೋಗ್ಯ ಚಿಕಿತ್ಸಾ ನೆರವು ಲಭ್ಯವಿದೆ. ರಾಜ್ಯದ ಒಂದು ಕೋಟಿಗೂ ಹೆಚ್ಚು ಬಿಪಿಎಲ್ ಕುಟುಂಬಗಳು ಯೋಜನೆಯ ವ್ಯಾಪ್ತಿಯಲ್ಲಿವೆ. 20 ಲಕ್ಷಕ್ಕೂ ಹೆಚ್ಚು ಎಪಿಎಲ್ ಕುಟುಂಬಗಳನ್ನೂ ‘ಆರೋಗ್ಯ ಕರ್ನಾಟಕ’ ಯೋಜನೆಯಡಿ ಒಳಗೊಳ್ಳಲಾಗಿದೆ. ಎಪಿಎಲ್ ಕುಟುಂಬಗಳಿಗೆ ಗರಿಷ್ಠ 1.50 ಲಕ್ಷ ರೂ. ಚಿಕಿತ್ಸಾ ವೆಚ್ಚದಲ್ಲಿ 30%ರಷ್ಟು ನೆರವು ನೀಡಲಾಗುತ್ತದೆ.

ಆದರೆ, ಖಾಸಗಿ ಆಸ್ಪತ್ರೆಗಳ ಪ್ರಮುಖ ಅಸಮಾಧಾನ ‘ಚಿಕಿತ್ಸಾ ಪ್ಯಾಕೇಜ್ ದರ’ ಕುರಿತಾಗಿದೆ. ಯೋಜನೆಯ ವ್ಯಾಪ್ತಿಯಲ್ಲಿ ಸುಮಾರು 1,650 ಚಿಕಿತ್ಸಾ ಪ್ಯಾಕೇಜ್‌ಗಳಿದ್ದು, ಪ್ರತಿಯೊಂದು ಚಿಕಿತ್ಸೆಗೆ ಸರ್ಕಾರ ನಿರ್ದಿಷ್ಟ ದರ ನಿಗದಿಪಡಿಸಿದೆ. 2018ರಿಂದ ಹಲವು ಪ್ಯಾಕೇಜ್ ದರಗಳು ಸಮರ್ಪಕವಾಗಿ ಪರಿಷ್ಕೃತವಾಗಿಲ್ಲ ಎಂದು ಆಸ್ಪತ್ರೆಗಳು ವಾದಿಸಿವೆ. ಔಷಧಿ, ವೈದ್ಯಕೀಯ ಉಪಕರಣ, ಸಿಬ್ಬಂದಿ ವೇತನ ಹಾಗೂ ಆಸ್ಪತ್ರೆಗಳ ನಿರ್ವಹಣಾ ವೆಚ್ಚಗಳು ಹೆಚ್ಚಾಗಿದ್ದರೂ ಸರ್ಕಾರದ ದರಗಳು ಅದಕ್ಕೆ ಅನುಗುಣವಾಗಿ ಏರಿಕೆಯಾಗಿಲ್ಲ ಎಂದು ಖಾಸಗಿ ಆಸ್ಪತ್ರೆಗಳು ಹೇಳುತ್ತಿವೆ.

ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರ ಮುಖ್ಯಸ್ಥರು, “ಸರ್ಕಾರ ನಿಗದಿಪಡಿಸಿರುವ ದರ ಮತ್ತು ಈಗ ಆಸ್ಪತ್ರೆಗಳು ಹೊರುತ್ತಿರುವ ವಾಸ್ತವ ಚಿಕಿತ್ಸಾ ವೆಚ್ಚದ ನಡುವೆ ದೊಡ್ಡ ಅಂತರವಿದೆ. ಕನಿಷ್ಠ 60ರಿಂದ 70%ರಷ್ಟು ವಾಸ್ತವ ವೆಚ್ಚಕ್ಕೆ ಹೊಂದುವ ದರ ನಿಗದಿಪಡಿಸಿದರೆ ಹೆಚ್ಚಿನ ಆಸ್ಪತ್ರೆಗಳು ಯೋಜನೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಮುಂದೆ ಬರುತ್ತವೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಆದಾಗ್ಯೂ, ಯೋಜನೆಯಡಿ ನೋಂದಾಯಿಸಿಕೊಂಡ ನಂತರ ರೋಗಿಗೆ ಚಿಕಿತ್ಸೆ ನಿರಾಕರಿಸುವುದು ಅಥವಾ ಯೋಜನೆಯ ಸೌಲಭ್ಯ ನೀಡದೆ ಹಣ ವಸೂಲಿ ಮಾಡುವುದನ್ನು ಸರ್ಕಾರ ಸಹಿಸುವುದಿಲ್ಲ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಸ್ಪಷ್ಟಪಡಿಸಿದ್ದಾರೆ.

“ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ ನಿರಾಕರಿಸುವ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ತುರ್ತು ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ರೋಗಿಯನ್ನು ಹಿಂತಿರುಗಿಸಬಾರದು; ತಕ್ಷಣ ಚಿಕಿತ್ಸೆ ನೀಡಬೇಕು” ಎಂದು ಖಾದರ್ ಹೇಳಿದ್ದಾರೆ.

ಈ ಲೇಖನ ಓದಿದ್ದೀರಾ?: ಸಂವಿಧಾನದ ಕರಡು ಸಮಿತಿ ರಚನೆಯಾದ ದಿನವಿದು: ಏಳು ಮಂದಿಯ ಪೈಕಿ ಅಂಬೇಡ್ಕರ್ ಅಧ್ಯಕ್ಷರಾದದ್ದು ಹೇಗೆ?

ಕರ್ನಾಟಕದಲ್ಲಿ ಪ್ಯಾಕೇಜ್ ದರದ ಸಮಸ್ಯೆ ಮುಖ್ಯವಾಗಿದ್ದರೆ, ಹರಿಯಾಣದಲ್ಲಿ ‘ಪಾವತಿ ವಿಳಂಬ’ ಸಮಸ್ಯೆ ಇದೆ ಎಂದು ಅಲ್ಲಿನ ಆಸ್ಪತ್ರೆಗಳು ಹೇಳುತ್ತಿವೆ. ಆಯುಷ್ಮಾನ್ ಯೋಜನೆಯಡಿ ನೋಂದಾಯಿತ ಖಾಸಗಿ ಆಸ್ಪತ್ರೆಗಳು ‘ಕ್ಲೈಮ್‌’ಗಾಗಿ ಸಲ್ಲಿಸುವ ಅರ್ಜಿಗಳು ಆರು ತಿಂಗಳಿಗೂ ಹೆಚ್ಚು ಕಾಲ ಬಾಕಿ ಉಳಿದಿವೆ ಎಂದು ‘ಇಂಡಿಯನ್ ಮೆಡಿಕಲ್ ಅಸೋಸಿಯೇಷನ್‌’ನ ಹರಿಯಾಣ ಘಟಕ ಆರೋಪಿಸಿದೆ.

ಇದನ್ನು ವಿರೋಧಿಸಿ ಹರಿಯಾಣದ ನೋಂದಾಯಿತ ಖಾಸಗಿ ಆಸ್ಪತ್ರೆಗಳು ಸೆಪ್ಟೆಂಬರ್ 1ರಂದು 24 ಗಂಟೆಗಳ ಕಾಲ ಆಯುಷ್ಮಾನ್ ಸೇವೆಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿವೆ. ಇದು ಸಾಂಕೇತಿಕ ಪ್ರತಿಭಟನೆ ಎಂದು IMA ಹೇಳಿದರೂ, ಪಾವತಿ ಪರಿಸ್ಥಿತಿ ತ್ವರಿತವಾಗಿ ಸುಧಾರಿಸದಿದ್ದರೆ ಸೆಪ್ಟೆಂಬರ್ 16ರಿಂದ ಯೋಜನೆಯಿಂದ ಸಂಪೂರ್ಣ ಹಿಂದೆ ಸರಿಯಲಾಗುತ್ತದೆ ಎಂದು ಎಚ್ಚರಿಸಿದೆ.

IMA ಹರಿಯಾಣ ಘಟಕವು ಆಯುಷ್ಮಾನ್ ಭಾರತ್ ಹೆಲ್ತ್ ಪ್ರೊಟೆಕ್ಷನ್ ಅಥಾರಿಟಿಯ ಸಿಇಒಗೆ ಆಗಸ್ಟ್ 27ರಂದು ಪತ್ರ ಬರೆದಿದ್ದು, ಆಸ್ಪತ್ರೆಗಳ ಮಾನ್ಯ ಅರ್ಜಿಗಳು ಒಪ್ಪಂದದ ಪ್ರಕಾರ 15 ದಿನಗಳೊಳಗೆ ಪಾವತಿಯಾಗಬೇಕಿದ್ದರೂ ಆರು ತಿಂಗಳಿಗೂ ಹೆಚ್ಚು ಕಾಲ ಬಾಕಿ ಉಳಿದಿವೆ ಎಂದು ಹೇಳಿದೆ.

ಕಳೆದ ಮೂರು ವರ್ಷಗಳಿಂದ ಹಲವು ಬಾರಿ ಭರವಸೆ ನೀಡಲಾಗಿದ್ದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಸಂಘಟನೆ ಆರೋಪಿಸಿದೆ. ಪಾವತಿ ವಿಳಂಬದಿಂದ ಆಸ್ಪತ್ರೆಗಳು ತೀವ್ರ ಹಣಕಾಸು ಸಂಕಷ್ಟಕ್ಕೆ ಸಿಲುಕಿದ್ದು, ಸಿಬ್ಬಂದಿ ವೇತನ, ಔಷಧಿ ಖರೀದಿ, ವೈದ್ಯಕೀಯ ಸಾಮಗ್ರಿ ಹಾಗೂ ದಿನನಿತ್ಯದ ನಿರ್ವಹಣಾ ವೆಚ್ಚಗಳನ್ನು ಭರಿಸುವುದೇ ಕಷ್ಟವಾಗಿದೆ ಎಂದು IMA ಹೇಳಿದೆ. ಈ ಆರ್ಥಿಕ ಒತ್ತಡದಿಂದ ಒಂದು ಆಸ್ಪತ್ರೆ ಮುಚ್ಚುವ ಪರಿಸ್ಥಿತಿಯೂ ಎದುರಾಗಿದೆ ಎಂದು ಹೇಳಿಕೊಂಡಿದೆ.

ಹರಿಯಾಣದ ಆಸ್ಪತ್ರೆಗಳ ಪ್ರಕಾರ, ಬಾಕಿ ಪಾವತಿ ಸಮಸ್ಯೆ ಕೇವಲ ಆಸ್ಪತ್ರೆಗಳ ಹಣಕಾಸಿನ ಪ್ರಶ್ನೆಯಲ್ಲ; ಇದರ ಪರಿಣಾಮ ನೇರವಾಗಿ ಫಲಾನುಭವಿಗಳ ಮೇಲೂ ಬೀಳುತ್ತಿದೆ. ಆಸ್ಪತ್ರೆಗಳಿಗೆ ಹಣ ಸಿಗದಿದ್ದರೆ, ಅವು ಯೋಜನೆಯಡಿ ಚಿಕಿತ್ಸೆ ನೀಡುವುದನ್ನೇ ಕಡಿಮೆ ಮಾಡಬಹುದು ಅಥವಾ ನಿಲ್ಲಿಸಬಹುದು. ಅಂತಿಮವಾಗಿ ಇದರ ಹೊರೆ ಬಡ ರೋಗಿಗಳ ಮೇಲೇ ಬೀಳುತ್ತದೆ ಎಂದಿವೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಡಿಬಿಐ ಬ್ಯಾಂಕ್ ಮಾರಾಟಕ್ಕೆ ಕೇಂದ್ರ ಸಂಪುಟ ಅಸ್ತು: ₹52,878 ಕೋಟಿಗೆ ಫೇರ್‌ಫ್ಯಾಕ್ಸ್ ತೆಕ್ಕೆಗೆ

ಐಡಿಬಿಐ (IDBI) ಬ್ಯಾಂಕ್‌ನ ‘ಕಾರ್ಯತಂತ್ರದ ಪುನರ್‌ರಚನೆ’ಗೆ (Strategic Restructuring) ಕೇಂದ್ರ ಸಚಿವ...

ಬೀದರ್‌ | ಜಿಪಂ, ತಾಪಂ ಚುನಾವಣೆ: ಸಾಮಾಜಿಕ ಜಾಲತಾಣದಲ್ಲಿ ಆಕಾಂಕ್ಷಿಗಳ ಪ್ರಚಾರ ಜೋರು!

ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರವಾರು ಮೀಸಲಾತಿ ಪ್ರಕಟವಾಗುತ್ತಿದ್ದಂತೆ, ಬೀದರ್‌...

ಸಿಜೆಪಿ ನಾಯಕರ ಬಂಧನಕ್ಕೆ ತೀವ್ರ ಖಂಡನೆ: ತಕ್ಷಣ ರಾಂಕಾ, ಸೌರವ್ ಬಿಡುಗಡೆಗೆ ವಿಪಕ್ಷಗಳ ಆಗ್ರಹ

ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್...

ಪತಿಯನ್ನು ಕೊಂದು ಕಾಂಕ್ರೀಟ್ ಡ್ರಮ್‌ನಲ್ಲಿ ಹೂತಿಟ್ಟ ಪ್ರಕರಣ: ಪತ್ನಿ, ಪ್ರಿಯಕರನಿಗೆ ಗಲ್ಲು ಶಿಕ್ಷೆ

ಮರ್ಚೆಂಟ್ ನೇವಿ ಅಧಿಕಾರಿ ಸೌರಭ್ ರಜಪೂತ್ ಅವರನ್ನು ಬರ್ಬರವಾಗಿ ಹತ್ಯೆಗೈದು, ಮೃತದೇಹವನ್ನು...