ಜಾತಿ ಕ್ರೌರ್ಯ: ದಲಿತರ ಚಿತೆಯ ಹೊಗೆಗೂ ಅಂಟಿದ ಅಸ್ಪೃಶ್ಯತೆ

Date:

‘ದಲಿತ ವ್ಯಕ್ತಿಯ ಚಿತೆಯಿಂದ ಬರುತ್ತಿರುವ ಹೊಗೆಯು ಪಕ್ಕದಲ್ಲೇ ಇರುವ ‘ಬ್ರಾಹ್ಮಣರ ಸ್ಮಶಾನ ಭೂಮಿ’ಯ ಕಡೆಗೆ ಹೋಗುತ್ತದೆ. ಇದರಿಂದ ಆ ಜಾಗವು ಅಪವಿತ್ರಗೊಳ್ಳುತ್ತದೆ’ – ಇದು ಜಾತೀಯತೆಯ ಪರಮಾವಧಿ. ಈ ಜಾತಿ ಕ್ರೌರ್ಯವು ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ಘಟಿಸಿದೆ. ಘಟನೆಯು ‘ಬದುಕಿದ್ದಾಗ ಜಾತಿ ನಿಂದನೆ, ಸತ್ತ ಮೇಲೂ ಅಸ್ಪೃಶ್ಯತೆ’ ಎನ್ನುವ ಕಹಿ ಸತ್ಯಕ್ಕೆ ಮಧ್ಯಪ್ರದೇಶದ ಕನ್ನಡಿ ಹಿಡಿದಿದ್ದು, ಸತ್ತ ಮೇಲಾದರೂ ಮನುಷ್ಯನಿಗೆ ಗೌರವ ಸಿಗಬಹುದು ಎಂಬ ಆಶಯವನ್ನು ಹೊಸಕಿಹಾಕಿದೆ.

- Advertisement -

ಇತ್ತೀಚೆಗೆ, ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ನಿಧನರಾಗಿದ್ದ ದಲಿತ ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರವನ್ನು ಸಮುದಾಯದ ಸಂಪ್ರದಾಯದಂತೆ ನೆರವೇರಿಸಲಾಗುತ್ತಿತ್ತು. ಆದರೆ, ಚಿತೆಗೆ ಬೆಂಕಿ ಇಟ್ಟು ದಹನ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ ಅಲ್ಲಿಗೆ ಬಂದ ಪ್ರಬಲ ಜಾತಿಯ (ಬ್ರಾಹ್ಮಣ) ಕೆಲವು ವ್ಯಕ್ತಿಗಳು ಅಂತ್ಯಸಂಸ್ಕಾರವನ್ನು ಅರ್ಧಕ್ಕೆ ನಿಲ್ಲಿಸುವಂತೆ ಒತ್ತಡ ಹೇರಿದ್ದಾರೆ. ‘ದಲಿತರನ್ನು ಸುಟ್ಟರೆ, ಅಲ್ಲಿಂದ ಹೊಮ್ಮುವ ಹೊಗೆ, ತಮ್ಮ ಸ್ಮಶಾನದೆಡೆಗೆ ಬರುತ್ತದೆ. ಆ ಜಾಗ ಅಪವಿತ್ರಗೊಳ್ಳುತ್ತದೆ’ ಎಂದು ಅಮಾನವೀಯ ವಾದ ಮುಂದಿಟ್ಟಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಮೃತ ದಲಿತ ವ್ಯಕ್ತಿಯು ತಾವು ಬದುಕಿದ್ದ ಜೀವಿತಾವಧಿಯುದ್ದಕ್ಕೂ ಜಾತಿಯ ಕಾರಣಕ್ಕಾಗಿ ತಾರತಮ್ಯ, ದ್ವೇಷ, ಅವಮಾನ ಹಾಗೂ ಅಸ್ಪೃಶ್ಯತೆಯ ಕಹಿಯನ್ನು ಉಂಡಿದ್ದರು. ಆದರೆ, ಮರಣದ ನಂತರವೂ ಅವರಿಗೆ ಕನಿಷ್ಠ ಗೌರವ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಬದುಕಿದ್ದಾಗ ಮುಟ್ಟಿಸಿಕೊಳ್ಳದ ಸಮಾಜ, ಸತ್ತ ಮೇಲೆ ಅವರ ದೇಹದಿಂದ ಹೊರಬರುವ ಹೊಗೆಯನ್ನೂ ‘ಅಸ್ಪೃಶ್ಯ’ ಎಂದು ಪರಿಗಣಿಸಿದೆ. ಮೃತನ ಹೊಗೆ ತಗುಲಿದರೆ ಸತ್ತ ಹಿರಿಯರೂ ಅಪವಿತ್ರರಾಗುತ್ತಾರೆ ಎಂಬ ಮೂಢ ಹಾಗೂ ಜಾತಿವಾದಿ ನಂಬಿಕೆಯು ‘ಮಾನವೀಯತೆಯ ಶವದ ಮೇಲೆ ಬ್ರಾಹ್ಮಣ್ಯ ಮೆರೆಯುತ್ತಿದೆ’ ಎಂಬುದನ್ನು ತೋರಿಸಿದೆ.

ಈ ಇಡೀ ಘಟನೆಯಲ್ಲಿ ಅತ್ಯಂತ ನಾಚಿಕೆಗೇಡಿನ ಸಂಗತಿಯೆಂದರೆ, ಸಂತ್ರಸ್ತ ದಲಿತ ಕುಟುಂಬಕ್ಕೆ ರಕ್ಷಣೆ ನೀಡಬೇಕಾಗಿದ್ದ ಕಾನೂನು ಸುವ್ಯವಸ್ಥೆ ಮತ್ತು ಪೊಲೀಸ್ ಇಲಾಖೆಯೇ ಜಾತೀಯತೆಯ ಜಾಲದಲ್ಲಿ ಸಿಲುಕಿರುವುದು. ಘಟನಾ ಸ್ಥಳಕ್ಕೆ ಬಂದ ಪೊಲೀಸರು ನೊಂದ ಕುಟುಂಬದ ಪರವಾಗಿ ನಿಲ್ಲುವ ಬದಲು, ಮೇಲ್ವರ್ಗದವರ ಒತ್ತಡಕ್ಕೆ ಮಣಿದು ದಲಿತ ಕುಟುಂಬದ ಮೇಲೆಯೇ ದಬ್ಬಾಳಿಕೆ ನಡೆಸಿದ್ದಾರೆ. ಇಡೀ ಪೊಲೀಸ್ ಆಡಳಿತ ವ್ಯವಸ್ಥೆಯು ಒಳಗಿನಿಂದ ಜಾತಿವಾದಿ ಮನಸ್ಥಿತಿಯಿಂದ ಕೊಳೆತುಹೋಗಿರುವುದಕ್ಕೆ ಇದು ಸಾಕ್ಷಿಯಾಗಿದೆ. ಸಂತ್ರಸ್ತರನ್ನು ಅಸಹಾಯಕರನ್ನಾಗಿ ಮಾಡಿದೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ನೊಂದ ದಲಿತ ಕುಟುಂಬಕ್ಕೆ ನ್ಯಾಯ ಸಿಗಬೇಕೆಂದು ಮತ್ತು ಜಾತೀಯತೆ ಪ್ರದರ್ಶಿಸಿದ ಪೊಲೀಸರು ಮತ್ತು ಬ್ರಾಹ್ಮಣ ಸಮುದಾಯದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂಬ ಆಗ್ರಹ ಭುಗಿಲೆದ್ದಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯತ್ನಾಳ್ ವಿರುದ್ಧ ಹೊರ್ತಿ ವಾಗ್ದಾಳಿ; ಅರ್ಜಿ ವಾಪಸ್ ಪಡೆದ ಹಿಂದಿನ ಸತ್ಯ ಬಹಿರಂಗಪಡಿಸಲು ಸವಾಲು

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬರೆದಿರುವ...

ಲೈಂಗಿಕ ಕಿರುಕುಳ ಆರೋಪ; ಪ್ರಾಧ್ಯಾಪಕ ಹುದ್ದೆಯಿಂದ ಕಾಂಗ್ರೆಸ್ ಸಂಸದ ಬಿಮೋಲ್ ವಜಾ

11 ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳ ಹಾಗೂ ಅನುಚಿತ ವರ್ತನೆಯ ಆರೋಪದಡಿ ದೂರು...

ಬೀದರ್‌ | ಕಾನ್ಶಿರಾಂ ಹೋರಾಟ ಬಹುಜನರ ರಾಜಕೀಯ ಜಾಗೃತಿಗೆ ದಾರಿದೀಪ

ಬೀದರ್ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ವಿವಿಧ ಬಹುಜನ ಸಂಘಟನೆಗಳ...

ವಿಜಯನಗರ | ಎಸ್‌ಐಆರ್ ರದ್ದತಿಗೆ ಆಗ್ರಹಿಸಿ ವಿದ್ಯಾರ್ಥಿ-ಯುವಜನ ಸಂಘಟನೆಗಳ ಬೃಹತ್ ಪ್ರತಿಭಟನೆ

ಜನವಿರೋಧಿ ಎಸ್‌ಐಆರ್ (SIR) ರದ್ದುಪಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್...