ತನಿಖಾಧಿಕಾರಿ ಲಭ್ಯವಿಲ್ಲದ ಹಿನ್ನೆಲೆಯಲ್ಲಿ ಪೋಕ್ಸೊ ಪ್ರಕರಣ ಆರೋಪ ಹೊತ್ತಿರುವ ಹರಿಹರ ಪಂಚಮಸಾಲಿ ಮಠದ ವಚನಾನಂದ ಸ್ವಾಮೀಜಿ ಅವರ ವಿಚಾರಣೆಯನ್ನು ಮುಂದೂಡಿಕೆ ಮಾಡಲಾಗಿದೆ.
ವಚನಾನಂದ ಸ್ವಾಮೀಜಿ ಇಂದು ದಾವಣಗೆರೆ ಜಿಲ್ಲೆಯ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಗೆ ಹಾಜರಾಗಬೇಕಾಗಿತ್ತು. ತನಿಖಾಧಿಕಾರಿ ಹರಿಹರ ಗ್ರಾಮಾಂತರ ಪಿಐ ಸುರೇಶ್ ಸಗರಿ ಅವರು ಬೇರೆ ಪ್ರಕರಣ ಸಂಬಂಧ ಕೇಂದ್ರ ಸ್ಥಾನದಿಂದ ಹೊರ ಹೋಗಿರುವ ಕಾರಣ ವಿಚಾರಣೆ ಮುಂದೂಡಿಕೆಯಾಗಿದೆ.
ಇದನ್ನೂ ಓದಿದ್ದೀರಾ? ಭಟ್ಕಳ | ಮೂರಿನಕಟ್ಟೆ ವಿವಾದ; ಮೂಲ ಕಟ್ಟೆ ಸುರಕ್ಷಿತ ಎಂದು ಎಸ್ಪಿ ಸ್ಪಷ್ಟನೆ, 6 ಮಂದಿ ಬಂಧನ, ನಿಷೇಧಾಜ್ಞೆ ಜಾರಿ
ಈ ಹಿಂದೆ ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿತ್ತು. ವಿಚಾರಣೆಗೆ ಸ್ವಾಮೀಜಿ ಸಹಕರಿಸಬೇಕೆಂದು ಇನ್ಸ್ಪೆಕ್ಟರ್ ಸ್ವಾಮೀಜಿಗೆ ಲಿಖಿತ ಪತ್ರವನ್ನು ರವಾನಿಸಿದ್ದರು. ಇಂದು ಹರಿಹರ ಗ್ರಾಮಾಂತರ ಠಾಣೆಯಲ್ಲಿ ಬೆಳಗ್ಗೆ 10ರಿಂದ ಮೂರನೇ ಬಾರಿ ವಿಚಾರಣೆಗೆ ವಚನಾನಂದ ಸ್ವಾಮೀಜಿ ಹಾಜರಾಗಬೇಕಿತ್ತು.





