ದಕ್ಷಿಣ ಭಾರತದತ್ತ ಈಶಾನ್ಯ ರಾಜ್ಯಗಳ ಕಾರ್ಮಿಕರು: ಪ್ರತ್ಯೇಕ ‘ವಲಸೆ ಕಾರಿಡಾರ್‌’ಗಳ ಕುರಿತು ಅಧ್ಯಯನ ವರದಿ ಬಹಿರಂಗ

Date:

ಈಶಾನ್ಯ ಭಾರತದ ವಿವಿಧ ಜಿಲ್ಲೆಗಳಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಕೆಲಸದ ಹುಡುಕಾಟದಲ್ಲಿ ಬರುವ ವಲಸೆ ಕಾರ್ಮಿಕರು ಯಾದೃಚ್ಛಿಕವಾಗಿ ಬರುತ್ತಿಲ್ಲ. ಬದಲಾಗಿ ಪ್ರತಿಯೊಂದು ಜಿಲ್ಲೆಯೂ ದಕ್ಷಿಣ ಭಾರತದ ನಿರ್ದಿಷ್ಟ ನಗರ ಅಥವಾ ವಲಯಕ್ಕೆ ತನ್ನದೇ ಆದ ‘ವಿಶೇಷ ವಲಸೆ ಕಾರಿಡಾರ್’ ಅನ್ನು ಹೊಂದಿದೆ ಎಂಬ ವಿಷಯವನ್ನು ಇತ್ತೀಚಿನ ಸಮಗ್ರ ಅಧ್ಯಯನ ವರದಿ ಬಹಿರಂಗಪಡಿಸಿದೆ.

- Advertisement -

ಈ ಸಮೀಕ್ಷೆಯನ್ನು ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ (UNFPA India), ಅಂತಾರಾಷ್ಟ್ರೀಯ ವಲಸೆ ಸಂಸ್ಥೆ (IOM India) ಮತ್ತು ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೈಗ್ರೇಷನ್ ಅಂಡ್ ಡೆವಲಪ್‌ಮೆಂಟ್ (IIMAD) ಸಂಸ್ಥೆಗಳು ಜಂಟಿಯಾಗಿ ನಡೆಸಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸಂಘದ ʼಕಾವಿ ದಲ್ಲಾಳಿʼಗಳ ಬಗ್ಗೆ ಲಿಂಗಾಯತರಲ್ಲಿ ಎಚ್ಚರ ಅಗತ್ಯ

ಕರ್ನಾಟಕ ವಿಧಾನಸಭೆಯ 2028ರ ಚನಾವಣೆಯ ಮೇಲೆ ಕಣ್ಣಿಟ್ಟಿರುವ ನಾಗಪುರದ ಸಂಘಿ ಬ್ರಾಹ್ಮಣರು ಈ ಬಾರಿ ಶತಾಯಗತಾಯ ಗೆಲ್ಲಲೇಬೇಕು ಎಂದು ಎಲ್ಲಾ ನಾಮ ಮಾರ್ಗಗಳನ್ನು ತುಳಿಯುತ್ತಿದ್ದಾರೆ. ಯಡಿಯೂರಪ್ಪ ಕುಟುಂಬವನ್ನು ಹಿನ್ನೆಲೆಗೆ ಸರಿಸಿ, ಲಿಂಗಾಯತ ಪ್ರಾಬಲ್ಯವನ್ನು...

ಕ್ಯಾನ್ವಾದಲ್ಲಿ 1,271 ಉದ್ಯೋಗಿಗಳ ವಜಾ: ಸಾಫ್ಟ್‌ವೇರ್ ಉದ್ಯಮಕ್ಕೆ ‘AI’...

2013ರಲ್ಲಿ ಆರಂಭವಾದ ಕ್ಯಾನ್ವಾ, ವೃತ್ತಿಪರ ಗ್ರಾಫಿಕ್ ವಿನ್ಯಾಸದ ಯಾವುದೇ ತಾಂತ್ರಿಕ ಪರಿಣತಿ ಅಥವಾ ಅನುಭವವಿಲ್ಲದ ಸಾಮಾನ್ಯರಿಗೂ ಪೋಸ್ಟರ್‌ಗಳು, ಪ್ರೆಸೆಂಟೇಷನ್‌ಗಳು, ಸಾಮಾಜಿಕ ಮಾಧ್ಯಮದ ಚಿತ್ರಗಳು, ವೀಡಿಯೊಗಳು ಹಾಗೂ ಜಾಹೀರಾತುಗಳನ್ನು ಅತ್ಯಂತ ಸುಲಭವಾಗಿ ಸೃಷ್ಟಿಸುವ ಅವಕಾಶವನ್ನು...

ಅಕ್ಕಿ ಬೆಲೆ ಏರಿಕೆಯ ಬಿಸಿ: ಗ್ರಾಹಕರ ಕೈ ಸುಡುತ್ತಿದೆ,...

ಅಡುಗೆ ಮನೆಯ ದಿನನಿತ್ಯದ ಅಗತ್ಯವಾಗಿರುವ ಅಕ್ಕಿಯ ಬೆಲೆ ದಿನದಿಂದ ದಿನಕ್ಕೆ ಏರುತ್ತಿದ್ದು, ಸಾಮಾನ್ಯ ಕುಟುಂಬಗಳ ಆರ್ಥಿಕ ಪರಿಸ್ಥಿತಿಯನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆ, ಹಣದುಬ್ಬರ, ಉದ್ಯೋಗ ಮತ್ತು...

ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಾದ ಕರ್ನಾಟಕ, ತಮಿಳುನಾಡು ಮತ್ತು ಕೇರಳದ 33 ಜಿಲ್ಲೆಗಳಲ್ಲಿ ಒಟ್ಟು 1,824 ವಲಸೆ ಕಾರ್ಮಿಕರನ್ನು ನೇರವಾಗಿ ಸಂಪರ್ಕಿಸಿ ನಡೆಸಿದ ಈ ‘ದಕ್ಷಿಣ ಭಾರತ ಅಂತಾರಾಜ್ಯ ವಲಸೆ ಸಮೀಕ್ಷೆ 2026’ (SIIMS) ಈಶಾನ್ಯ ಮತ್ತು ಉತ್ತರ ಭಾರತದಿಂದ ಬರುವ ಕಾರ್ಮಿಕರ ಸಂಪೂರ್ಣ ಚಿತ್ರಣವನ್ನು ಸಮಾಜದ ಮುಂದಿಟ್ಟಿದೆ.

ಇದನ್ನೂ ಓದಿ: ಅದಾನಿ ಭಾರತದ ಆರ್ಥಿಕ ರಾಯಭಾರಿಯೇ?: ʼದಿ ವೈರ್‌ʼ ವರದಿ ಬಹಿರಂಗಪಡಿಸಿದ್ದೇನು?

ಸಮೀಕ್ಷೆಯ ಪ್ರಕಾರ, ಈಶಾನ್ಯ ರಾಜ್ಯಗಳ (ಉದಾಹರಣೆಗೆ ಅಸ್ಸಾಂ, ಮೇಘಾಲಯ, ಮಣಿಪುರ ಮುಂತಾದವು) ನಿರ್ದಿಷ್ಟ ಜಿಲ್ಲೆಗಳಿಂದ ಹೊರಡುವ ಕಾರ್ಮಿಕರು, ತಮಗೆ ಮುಂಚಿತವಾಗಿಯೇ ಪರಿಚಿತವಿರುವ ಅಥವಾ ನೆಂಟರಿಷ್ಟರು ನೆಲೆಸಿರುವ ಸ್ಥಳಗಳನ್ನೇ ಆಯ್ದುಕೊಳ್ಳುತ್ತಾರೆ. ಸಮೀಕ್ಷೆಗೆ ಒಳಪಟ್ಟ ಶೇ. 62.7ಕ್ಕಿಂತ ಹೆಚ್ಚು ಕಾರ್ಮಿಕರು ತಮ್ಮ ಸ್ನೇಹಿತರು, ಸಂಬಂಧಿಕರು ಅಥವಾ ಹಳೆಯ ಗುತ್ತಿಗೆದಾರರ ಮೂಲಕವೇ ದಕ್ಷಿಣಕ್ಕೆ ಉದ್ಯೋಗ ಅರಸಿ ಬಂದಿದ್ದಾರೆ.

ವಲಯ ಆಧಾರಿತ ಕಾರಿಡಾರ್ ನೋಡಿದಾಗ, ಉದಾಹರಣೆಗೆ, ಅಸ್ಸಾಂನಿಂದ ಕೇರಳಕ್ಕೆ ಬರುವ ಕಾರ್ಮಿಕರು ಹೆಚ್ಚಾಗಿ ಆತಿಥ್ಯ ರಂಗ ಮತ್ತು ಸೇವಾ ವಲಯದಲ್ಲಿ ನೆಲೆ ಕಂಡುಕೊಂಡಿದ್ದಾರೆ. ತಮಿಳುನಾಡಿನತ್ತ ಸಾಗುವ ಕಾರಿಡಾರ್‌ಗಳು ಹೆಚ್ಚಾಗಿ ಜವಳಿ ಮತ್ತು ಉತ್ಪಾದನಾ ವಲಯದ ಕಡೆಗೆ ಕೇಂದ್ರೀಕೃತವಾಗಿವೆ. ಕರ್ನಾಟಕ (ವಿಶೇಷವಾಗಿ ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು) ನಿರ್ಮಾಣ ರಂಗ, ತ್ಯಾಜ್ಯ ಸಂಗ್ರಹಣೆ ಮತ್ತು ದಿನಗೂಲಿ ಕೆಲಸಗಾರರನ್ನು ದೊಡ್ಡ ಪ್ರಮಾಣದಲ್ಲಿ ಆಕರ್ಷಿಸುತ್ತಿದೆ ಎಂದು ಸಮೀಕ್ಷೆ ಹೇಳುತ್ತದೆ.

ವಲಸೆಯಿಂದ ಕಾರ್ಮಿಕರ ಜೀವನಮಟ್ಟದಲ್ಲಿ ಸುಧಾರಣೆಯಾಗಿದೆಯೇ ಎಂಬ ಪ್ರಶ್ನೆಗೆ, ಶೇ. 71.8 ರಷ್ಟು ವಲಸೆ ಕಾರ್ಮಿಕರು ದಕ್ಷಿಣ ಭಾರತಕ್ಕೆ ಬಂದ ನಂತರ ತಮ್ಮ ಜೀವನಮಟ್ಟ ಮತ್ತು ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸ್ವಂತ ಊರುಗಳಲ್ಲಿ ಸೂಕ್ತ ಕೆಲಸದ ಅಭಾವ, ಕಡಿಮೆ ಕೂಲಿ, ಸಾಲದ ಸುಳಿ ಮತ್ತು ಜೀವನೋಪಾಯದ ಭದ್ರತೆ ಇಲ್ಲದಿರುವುದೇ ಇವರು ದಕ್ಷಿಣಕ್ಕೆ ವಲಸೆ ಬರಲು ಮುಖ್ಯ ಕಾರಣ ಎಂದಿದ್ದಾರೆ.

ಆದಾಗ್ಯೂ, ಈ ವಲಸೆ ಕಾರಿಡಾರ್‌ಗಳ ಮೂಲಕ ಬರುವ ಕಾರ್ಮಿಕರು ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಸಮೀಕ್ಷೆಗೆ ಒಳಪಟ್ಟ ಶೇ. 86.4ರಷ್ಟು ಕಾರ್ಮಿಕರಿಗೆ ಯಾವುದೇ ಲಿಖಿತ ಉದ್ಯೋಗ ಒಪ್ಪಂದ ಇರಲಿಲ್ಲ. ಶೇ. 1 ರಷ್ಟು ಕಾರ್ಮಿಕರಿಗೆ ಮಾತ್ರ ಅಪಘಾತ ವಿಮೆ ಸೌಲಭ್ಯವಿದೆ. ಶೇ. 69.2 ಕಾರ್ಮಿಕರು ಸ್ಥಳೀಯವಾಗಿ ಆರೋಗ್ಯ ಸೇವೆ ಮತ್ತು ಶೇ. 73.3 ರಷ್ಟು ಜನರು ಸರ್ಕಾರಿ ಪಡಿತರ ಅಥವಾ ಕಲ್ಯಾಣ ಯೋಜನೆಗಳನ್ನು ಪಡೆಯಲು ಕಷ್ಟಪಡುತ್ತಿದ್ದಾರೆ. ಶೇ. 81.3 ಕ್ಕೂ ಹೆಚ್ಚು ಕಾರ್ಮಿಕರು ಭಾಷೆಯ ತೊಡಕಿನಿಂದಾಗಿ ಕೆಲಸದ ಸ್ಥಳಗಳಲ್ಲಿ ಮತ್ತುಸ ಸರ್ಕಾರಿ ಸೌಲಭ್ಯಗಳನ್ನು ಪಡೆಯುವಾಗ ತೊಂದರೆ ಅನುಭವಿಸುತ್ತಿರುವುದಾಗಿ ಸಮೀಕ್ಷೆ ವೇಳೆ ತಿಳಿಸಿದ್ದಾರೆ.

ದಕ್ಷಿಣದ ರಾಜ್ಯಗಳು ಮತ್ತು ಈಶಾನ್ಯದ ತವರು ರಾಜ್ಯಗಳು ಜಂಟಿಯಾಗಿ ಈ ‘ವಲಸೆ ಕಾರಿಡಾರ್’ಗಳನ್ನು ಗುರುತಿಸಿ ಕಾರ್ಮಿಕರ ಹಿತರಕ್ಷಣೆ ಮಾಡಬೇಕಿದೆ ಎಂದು UNFPA, IOM ಸಂಸ್ಥೆಗಳು ಪ್ರತಿಪಾದಿಸಿವೆ. ವಲಸೆ ಹೋದ ರಾಜ್ಯಗಳಲ್ಲೂ ಆಹಾರ ಭದ್ರತೆ ಸಿಗುವಂತೆ ವ್ಯವಸ್ಥೆ ಬಲಪಡಿಸಬೇಕು, ಈಶಾನ್ಯ ರಾಜ್ಯಗಳ ಭಾಷೆಗಳನ್ನು ಒಳಗೊಂಡ ಸಹಾಯವಾಣಿ ಮತ್ತು ಮಾಹಿತಿ ಕೇಂದ್ರಗಳನ್ನು ದಕ್ಷಿಣದ ರಾಜ್ಯಗಳ ಪ್ರಮುಖ ನಗರಗಳಲ್ಲಿ ಸ್ಥಾಪಿಸಬೇಕು, ಮೂಲ ರಾಜ್ಯ ಮತ್ತು ತಲುಪುವ ರಾಜ್ಯಗಳ ಕಾರ್ಮಿಕ ಇಲಾಖೆಗಳು ಆನ್‌ಲೈನ್ ಡಿಜಿಟಲ್ ಡಾಟಾಬೇಸ್ ಮೂಲಕ ಕಾರ್ಮಿಕರಿಗೆ ತುರ್ತು ಸಂದರ್ಭಗಳಲ್ಲಿ ನೆರವಾಗಬೇಕು ಎಂದು ಸಮೀಕ್ಷೆ ಶಿಫಾರಸು ಮಾಡಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಪ್ರಥಮ ದಲಿತ ಬಂಡಾಯ ಸಮ್ಮೇಳನ ಸರ್ವಾಧ್ಯಕ್ಷರಿಗೆ ಆಹ್ವಾನ

ಬೀದರ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ...

ಕಾರ್ಮಿಕರನ್ನು ಮರೆತ ಡೆಮಾಕ್ರಟ್ ಪಾರ್ಟಿ: ಮೂಲಭೂತ ಬದಲಾವಣೆಗೆ ಬರ್ನಿ ಸ್ಯಾಂಡರ್ಸ್ ಖಡಕ್ ತಾಕೀತು

ಅಮೆರಿಕದ ಮಧ್ಯಂತರ ಚುನಾವಣೆಗಳಲ್ಲಿ ಡೆಮಾಕ್ರಟ್ ಪಕ್ಷ ಭಾರೀ ಜಯ ಗಳಿಸಿದೆಯಾದರೂ ಆತ್ಮನಿರೀಕ್ಷಣೆ...

ಕಸ್ಟಡಿ ಹೆಸರಿನಲ್ಲಿ ಕಾಲಹರಣಕ್ಕಿಲ್ಲ ಅವಕಾಶ: ಸುಪ್ರೀಂ ಮಹತ್ವದ ತೀರ್ಪು

ಪೊಲೀಸ್ ಅಥವಾ ತನಿಖಾ ಸಂಸ್ಥೆಗಳು ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದ ಕ್ಷಣದಿಂದಲೇ...

ಈ ದಿನ ಸಂಪಾದಕೀಯ | ಖಾಸಗಿ ಕ್ಷೇತ್ರದಲ್ಲಿ ಕನ್ನಡಿಗರಿಗೆ ಉದ್ಯೋಗ, ಕಾರ್ಯಸಾಧ್ಯವೇ?

ಇಲ್ಲಿ, ಸರೋಜಿನಿ ಮಹಿಷಿ ವರದಿಯೂ ಜಾರಿಯಾಗಲಿಲ್ಲ, ಕನ್ನಡ ಭಾಷೆ ಅನ್ನದ ಭಾಷೆಯೂ...