ಸಂಸತ್ತಿಗೆ ಬನ್ನಿ, ವಿಶೇಷ ಅಧಿವೇಶನಕ್ಕೆ ಸಿದ್ಧ: ರಾಹುಲ್ ಬಹಿರಂಗ ಸವಾಲು ಸ್ವೀಕರಿಸಿದ ಅಮಿತ್ ಶಾ

Date:

ಕೇಂದ್ರ ಸರ್ಕಾರದ ವಿರುದ್ಧವಾಗಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಅಕ್ರಮ ಆರೋಪಗಳ ಸಂಬಂಧವಾಗಿ ಚರ್ಚೆಗೆ ಕೊನೆಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಒಪ್ಪಿದ್ದಾರೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ‘ಇಂಡಿಯಾ’ ಒಕ್ಕೂಟದ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿರುವ ನಡುವೆ ರಾಹುಲ್ ಬಹಿರಂಗ ಸವಾಲನ್ನು ಸ್ವೀಕರಿಸಿದ್ದಾರೆ. ಸಂಸತ್ತಿಗೆ ಬನ್ನಿ, ವಿಶೇಷ ಅಧಿವೇಶನಕ್ಕೆ ಸಿದ್ಧನಾಗಿದ್ದೇನೆ ಎಂದು ತಿಳಿಸಿದ್ದಾರೆ.

- Advertisement -

“ನಿಮಗೆ ಧೈರ್ಯವಿದ್ದರೆ ಬೀದಿಗಳಲ್ಲಿ ಗದ್ದಲ ಸೃಷ್ಟಿಸುವುದನ್ನು ಬಿಟ್ಟು ಸಂಸತ್ತಿಗೆ ಬನ್ನಿ; ಈ ಕುರಿತು ಚರ್ಚಿಸಲು ಸಂಸತ್ತಿನ ವಿಶೇಷ ಅಧಿವೇಶನ ಕರೆಯಲು ನಾವು ಸಂಪೂರ್ಣ ಸಿದ್ಧರಿದ್ದೇವೆ” ಎಂದು ಅಮಿತ್ ಶಾ ಹೇಳಿದ್ದಾರೆ. ಹಾಗೆಯೇ, “ವಿಪಕ್ಷಗಳ ನಾಯಕರು ಕೇವಲ ಸಾರ್ವಜನಿಕ ವೇದಿಕೆಗಳಲ್ಲಿ ಮತ್ತು ರಸ್ತೆಗಳಲ್ಲಿ ಸರ್ಕಾರದ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಹೊರತು, ಗಂಭೀರ ಚರ್ಚೆಗೆ ಸಂಸತ್ತಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಇತ್ತ ಬೆಲೆ ಏರಿಕೆಯ ‘ಬರೆ’, ಅತ್ತ 1 ಟ್ರಿಲಿಯನ್‌...

ಒಂದೆಡೆ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿ ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳುತ್ತಿದ್ದರೆ, ಇನ್ನೊಂದೆಡೆ ರಾಜ್ಯ ಕಾಂಗ್ರೆಸ್‌ ಸರ್ಕಾರ "ಟ್ರಿಲಿಯನ್ ಡಾಲರ್ ಆರ್ಥಿಕತೆ"ಯ ಭವ್ಯ ಚಿತ್ರಣವನ್ನು ಸಾರ್ವಜನಿಕರ ಮುಂದಿಡುತ್ತಿವೆ. ಸದ್ಯ ಕರ್ನಾಟಕದಲ್ಲಿ ಕಂಡುಬರುತ್ತಿರುವ...

ಮಧ್ಯಂತರ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗರ್ವಭಂಗ: ಸೊಕ್ಕು ಮುರಿದ...

ಈ ಚುನಾವಣಾ ಫಲಿತಾಂಶದಿಂದ ಟ್ರಂಪ್ ಅವರು ತಮ್ಮ ಅಧ್ಯಕ್ಷ ಸ್ಥಾನವನ್ನು ಕಳೆದುಕೊಳ್ಳುವುದಿಲ್ಲ. ಆದರೆ, ಮುಂದಿನ ಜನವರಿ 3ರಂದು ಹೊಸ ಕಾಂಗ್ರೆಸ್ (ಸಂಸತ್ತು) ಅಸ್ತಿತ್ವಕ್ಕೆ ಬಂದ ಬಳಿಕ ಅವರ ಆಡಳಿತದ ಹಾದಿ ಅತ್ಯಂತ ದುರ್ಗಮವಾಗಲಿದೆ....

ಸಂಘದ ʼಕಾವಿ ದಲ್ಲಾಳಿʼಗಳ ಬಗ್ಗೆ ಲಿಂಗಾಯತರಲ್ಲಿ ಎಚ್ಚರ ಅಗತ್ಯ

ಕರ್ನಾಟಕ ವಿಧಾನಸಭೆಯ 2028ರ ಚನಾವಣೆಯ ಮೇಲೆ ಕಣ್ಣಿಟ್ಟಿರುವ ನಾಗಪುರದ ಸಂಘಿ ಬ್ರಾಹ್ಮಣರು ಈ ಬಾರಿ ಶತಾಯಗತಾಯ ಗೆಲ್ಲಲೇಬೇಕು ಎಂದು ಎಲ್ಲಾ ನಾಮ ಮಾರ್ಗಗಳನ್ನು ತುಳಿಯುತ್ತಿದ್ದಾರೆ. ಯಡಿಯೂರಪ್ಪ ಕುಟುಂಬವನ್ನು ಹಿನ್ನೆಲೆಗೆ ಸರಿಸಿ, ಲಿಂಗಾಯತ ಪ್ರಾಬಲ್ಯವನ್ನು...

ಇದನ್ನೂ ಓದಿ: ಒಡೆದ ಬಲೂನಿನಲ್ಲಿ ಗಾಳಿ ತುಂಬಲ್ಲ, ಅಮಿತ್ ಶಾಗೆ ಸಂಸತ್ತಿಗೆ ಬರುವ ದಮ್ಮಿಲ್ಲ: ರಾಹುಲ್ ಗಾಂಧಿ

ಈ ಹಿಂದೆ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಬಹಿರಂಗ ಚರ್ಚೆಗೆ ಬರುವಂತೆ ಸವಾಲು ಹಾಕಿದ್ದರು. ವಿದೇಶಿ ಸಂಪರ್ಕ, ಆರ್ಥಿಕ ವ್ಯವಸ್ಥೆ ಮತ್ತು ವಿವಿಧ ಪ್ರಮುಖ ವಿಚಾರಗಳ ಕುರಿತು ಎಲ್ಲಿ ಬೇಕಾದರೂ, ಯಾರ ಮಧ್ಯಸ್ಥಿಕೆಯಲ್ಲಿ ಬೇಕಾದರೂ ಚರ್ಚೆಗೆ ಸಿದ್ಧವಿರುವುದಾಗಿ ರಾಹುಲ್ ಗಾಂಧಿ ಬಹಿರಂಗವಾಗಿ ಸವಾಸೆದಿದ್ದರು. ಈ ಹಿಂದೆ ಸಿಇಸಿ ಗ್ಯಾನೇಶ್ ಕುಮಾರ್ ವಿಚಾರದಲ್ಲಿಯೂ ಚರ್ಚೆಗೆ ರಾಹುಲ್ ಸವಾಲು ಹಾಕಿದ್ದರು. ಆದರೆ ಅಮಿತ್ ಶಾ ಮಾತ್ರ ಸಂಸತ್ತಿನಲ್ಲಿ ಕಾಣಿಸಿಕೊಂಡಿರಲಿಲ್ಲ ಎಂದು ವಿಪಕ್ಷಗಳು ಟೀಕಿಸಿದೆ.

ಇದೀಗ ರಾಹುಲ್ ಗಾಂಧಿ ಸವಾಲಿಗೆ ಕೇಂದ್ರ ಸರ್ಕಾರದ ಪರವಾಗಿ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಅಮಿತ್ ಶಾ, ಸಂಸತ್ತಿನ ಒಳಗಡೆ ಈ ಎಲ್ಲ ವಿಷಯಗಳ ಬಗ್ಗೆಯೂ ಚರ್ಚಿಸಲು ವಿಶೇಷ ಅಧಿವೇಶನಕ್ಕೆ ಸಿದ್ಧ ಎಂದು ಘೋಷಿಸಿದ್ದಾರೆ. ಸರ್ಕಾರಕ್ಕೆ ಯಾವುದೇ ವಿಷಯವನ್ನು ಮುಚ್ಚಿಡಲು ಅಥವಾ ಹೆಳಲು ಏನೂ ಇಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಂಘದ ʼಕಾವಿ ದಲ್ಲಾಳಿʼಗಳ ಬಗ್ಗೆ ಲಿಂಗಾಯತರಲ್ಲಿ ಎಚ್ಚರ ಅಗತ್ಯ

ಕರ್ನಾಟಕ ವಿಧಾನಸಭೆಯ 2028ರ ಚನಾವಣೆಯ ಮೇಲೆ ಕಣ್ಣಿಟ್ಟಿರುವ ನಾಗಪುರದ ಸಂಘಿ ಬ್ರಾಹ್ಮಣರು...

ಬೀದರ್ | ಎಸ್ಐಆರ್ ವಿರುದ್ಧ ʼಇಂಡಿಯಾʼ ಒಕ್ಕೂಟ ಪ್ರತಿಭಟನೆ

ಮತದಾರರ ಪಟ್ಟಿಯ ಸಮಗ್ರ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರೋಧಿಸಿ ಕೇಂದ್ರ ಬಿಜೆಪಿ...

ಶಿವಮೊಗ್ಗ | ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಹೊಸ ಆಧಾರ್ ಸೇವಾ ಕೇಂದ್ರ ಲೋಕಾರ್ಪಣೆ

ಶಿವಮೊಗ್ಗದ ಸಾರ್ವಜನಿಕರಿಗೆ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಸೇವೆಗಳನ್ನು ಸುಲಭವಾಗಿ ಮತ್ತು...