CJP ನಾಯಕ ಸೌರವ್ ದಾಸ್ ವಿರುದ್ಧ ‘ಲುಕ್ ಔಟ್ ನೋಟಿಸ್‌’; ದೆಹಲಿ ಹೈಕೋರ್ಟ್‌ಗೆ ಕೇಂದ್ರ ಮಾಹಿತಿ; ಮೋದಿ ವಿರುದ್ಧ ದೀಪ್ಕೆ ವಾಗ್ದಾಳಿ

Date:

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ (LSE) ಉಪನ್ಯಾಸ ನೀಡಲು ಬ್ರಿಟನ್‌ಗೆ ತೆರಳುತ್ತಿದ್ದ ಯುವ ಹೋರಾಟಗಾರ, ಸಿಜೆಪಿ ನಾಯಕ ಸೌರವ್ ದಾಸ್ (27) ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ತಡೆಯಲಾಗಿದೆ. ಅವರ ವಿರುದ್ಧ ‘ಲುಕ್ ಔಟ್ ನೋಟಿಸ್‌’ (LOC) ಜಾರಿಗೊಳಿಸಲಾಗಿದೆ ಎಂದು ದೆಹಲಿ ಹೈಕೋರ್ಟ್‌ನಲ್ಲಿ ಕೇಂದ್ರ ಸರ್ಕಾರ ವಾದಿಸಿದೆ.

- Advertisement -

ತಮ್ಮ ವಿದೇಶ ಪ್ರಯಾಣಕ್ಕೆ ತಡೆಯೊಡ್ಡಿರುವುದನ್ನು ಪ್ರಶ್ನಿಸಿ ಸೌರವ್ ದಾಸ್ ಅವರು ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ವೇಳೆ, ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಸರ್ಕಾರ, “ದಾಸ್ ವಿರುದ್ಧ ಮುಂಬೈ ಪೊಲೀಸರು ಎಲ್‌ಒಸಿ ಜಾರಿಗೊಳಿಸಿದ್ದಾರೆ. ಅಲ್ಲದೆ, ದಾಸ್ ಅವರ ಪಾಸ್‌ಪೋರ್ಟ್‌ನಲ್ಲಿ ಜನ್ಮಸ್ಥಳದ ವಿವರಗಳಲ್ಲಿ ವ್ಯತ್ಯಾಸಗಳು ಕಂಡುಬಂದಿದ್ದು, ಇದು ಅವರ ಭಾರತೀಯ ಪೌರತ್ವದ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆಯಿದೆ” ಎಂದು ಹೇಳಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಂಡವಾಳಶಾಹಿಯ ನಾಲ್ಕು ಕಟ್ಟುಕಥೆಗಳು ಮತ್ತು ನಮ್ಮ ಬದುಕಿನ ಬೆಲೆ

ನಮ್ಮ ಸುತ್ತಮುತ್ತಲಿನ ಪ್ರಪಂಚವನ್ನು ಒಮ್ಮೆ ಗಮನಿಸಿ ನೋಡಿ. ಒಂದು ಕಡೆ, 2025ರ ಒಂದೇ ವರ್ಷದಲ್ಲಿ ಜಗತ್ತಿನ ಅತ್ಯಂತ ಶ್ರೀಮಂತ 500 ವ್ಯಕ್ತಿಗಳ ಸಂಪತ್ತು ಸುಮಾರು 2.2 ಟ್ರಿಲಿಯನ್ ಡಾಲರ್‌ಗಳಷ್ಟು ಹೆಚ್ಚಾಗಿದೆ. ಇನ್ನೊಂದು ಕಡೆ,...

ಸಂವಿಧಾನಕ್ಕೆ 77 – ಈಡೇರದ ಕನಸು…..

ಸಂವಿಧಾನ ದಿನ ಒಂದು ಬಗೆಯ ಲಯವಿದೆ. ಅಂದು ಮುಂಜಾನೆಯಿಂದ ಇರುಳಿನವರೆಗೂ ಸಂವಿಧಾನದ್ದೇ ಸದ್ದು. ಅದರ ಮಹತ್ವ, ಅಗತ್ಯ, ಅನಿವಾರ್ಯತೆ, ಅನುಕೂಲತೆ ಬಗ್ಗೆ ಸ್ಮರಿಸಿಕೊಂಡು ಸಂಭ್ರಮಿಸುತ್ತೇವೆ. ಪ್ರಧಾನಿಯಿಂದ ಗ್ರಾಮ ಪಂಚಾಯಿತಿ ಸದಸ್ಯರವರೆಗೂ ಪ್ರಶ್ನಿಸಲು ಇರುವ "ಅಧಿಕಾರಭಾಗ್ಯ"...

ಸಂವಿಧಾನದ ಆಶಯಗಳ ಅನುಷ್ಠಾನಕ್ಕೆ ಜನಾಂದೋಲನವಾಗಲಿ; ಪ್ರಜಾಪ್ರಭುತ್ವದ ರಕ್ಷಣೆಗೆ ಜನರ...

ನವೆಂಬರ್ 26ರ ಸಂವಿಧಾನ ದಿನಾಚರಣೆಯಿಂದ ನವೆಂಬರ್ 26, 2027ರವರೆಗೆ ಐಕ್ಯ ಹೋರಾಟ ಸಮಿತಿಯ ಒಂದು ವರ್ಷದ ಅಭಿಯಾನ; ಅಂಬೇಡ್ಕರ್ ಕನಸಿನ ಪ್ರಬುದ್ಧ ಭಾರತ ನಿರ್ಮಾಣಕ್ಕೆ ಹೊಸ ಸಂಕಲ್ಪ ನಮಗೆ ಸ್ವಾತಂತ್ರ್ಯ ಬಂದು ಏಳು ದಶಕಗಳಿಗೂ...

ಕೇಂದ್ರದ ವಾದವನ್ನು ತಳ್ಳಿಹಾಕಿದ ದಾಸ್ ಪರ ವಕೀಲರು, “ತಮ್ಮ ಕಕ್ಷಿದಾರರಿಗೆ ಯಾವುದೇ ಎಲ್‌ಒಸಿ ಜಾರಿಯಾಗಿರುವ ಬಗ್ಗೆ ಈವರೆಗೆ ಮಾಹಿತಿಯನ್ನೇ ನೀಡಿಲ್ಲ” ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.

ಅಂದಹಾಗೆ, ನವೆಂಬರ್ 27ರಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ‘ಸಿಜೆಪಿ ಚಳವಳಿ’ ಕುರಿತು ಮಾತನಾಡಲು ಸೌರವ್ ದಾಸ್ ಲಂಡನ್‌ಗೆ ತೆರಳುತ್ತಿದ್ದರು. ಸೋಮವಾರ ರಾತ್ರಿ ದೆಹಲಿ ವಿಮಾನ ನಿಲ್ದಾಣದ ವಲಸೆ (ಇಮಿಗ್ರೇಷನ್) ಕೌಂಟರ್‌ನಲ್ಲಿ ಅಧಿಕಾರಿಗಳು ಅವರನ್ನು ತಡೆದು ವಿಮಾನ ಏರಲು ಅವಕಾಶ ನಿರಾಕರಿಸಿದ್ದರು. ವಿದೇಶಿ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳನ್ನು ಉದ್ದೇಶಿಸಿ ತಾವು ಮಾತನಾಡುವುದನ್ನು ತಡೆಯುವ ಉದ್ದೇಶದಿಂದಲೇ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ದಾಸ್ ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿದ್ದರು.

ಇನ್ನು, ಇದೇ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ, “ಬ್ರಿಟನ್ ಪ್ರವಾಸಕ್ಕೆ ನನಗೆ, ಸೌರವ್ ದಾಸ್ ಹಾಗೂ ಸಹ-ಸಂಚಾಲಕ ಅಶುತೋಷ್ ರಾಂಕಾ ಅವರಿಗೆ ಆಹ್ವಾನ ಬಂದಿತ್ತು; ಆದರೆ, ಮಹಾರಾಷ್ಟ್ರದಲ್ಲಿ ಬರಪರಿಸ್ಥಿತಿ ಇರುವುದರಿಂದ ನಾನು ಮತ್ತು ರಾಂಕಾ ರೈತರನ್ನು ಭೇಟಿ ಮಾಡಲು ನಿರ್ಧರಿಸಿ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಸಂಘಟನೆಯನ್ನು ಪ್ರತಿನಿಧಿಸಲು ದಾಸ್ ಅವರನ್ನು ಕಳುಹಿಸಲು ತೀರ್ಮಾನಿಸಲಾಗಿತ್ತು” ಎಂದು ಹೇಳಿದ್ದಾರೆ.

ಮುಂದುವರೆದು, “ದಾಸ್ ಅವರಿಗೆ ಸಿಕ್ಕಿರುವ ಅಂತಾರಾಷ್ಟ್ರೀಯ ಮನ್ನಣೆ ಅಧಿಕಾರದಲ್ಲಿರುವವರಿಗೆ ಅಭದ್ರತೆ ಮೂಡಿಸಿದೆ. ನಮ್ಮ ದೇಶದಲ್ಲಿ ಒಬ್ಬರಿದ್ದಾರೆ, ಕೇವಲ ತಾವೊಬ್ಬರೇ ವಿಶ್ವ ಪ್ರವಾಸ ಮಾಡಬೇಕೆಂದು ಅವರು ಭಾವಿಸುತ್ತಾರೆ. 27 ವರ್ಷದ ಯುವಕನೊಬ್ಬನಿಗೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಆಹ್ವಾನ ಬಂದಿರುವುದಕ್ಕೆ ಅವರಿಗೆ ಸ್ವಲ್ಪ ಅಸೂಯೆಯಾದಂತಿದೆ. ದೇಶ ಮಾತ್ರವಲ್ಲದೆ ಇಡೀ ಜಗತ್ತೇ ತಮ್ಮ ಸುತ್ತ ತಿರುಗಬೇಕೆಂದು ಭಾವಿಸುವ ದೊಡ್ಡ ಸ್ವಾರ್ಥಿಗಳು ನಮ್ಮ ದೇಶದಲ್ಲಿದ್ದಾರೆ” ಎಂದು ಪರೀಕ್ಷವಾಗಿ ಪ್ರಧಾನಿ ಮೋದಿ ಅವರನ್ನುದ್ದೇಶಿಸಿ ವ್ಯಂಗ್ಯವಾಡಿದ್ದಾರೆ.

“ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿಯವರ ಆದರ್ಶಗಳೊಂದಿಗೆ ಜಂತರ್ ಮಂತರ್‌ನಲ್ಲಿ ಆರಂಭವಾದ ಸಿಜೆಪಿ ಚಳವಳಿಯು ಯುವಜನರಲ್ಲಿ ಜನಪ್ರಿಯತೆ ಗಳಿಸುತ್ತಿರುವುದನ್ನು ಸರ್ಕಾರಕ್ಕೆ ಸಹಿಸಲಾಗುತ್ತಿಲ್ಲ. ಸರ್ಕಾರವು ತನ್ನ ವಿರುದ್ಧದ ಧ್ವನಿಗಳನ್ನು ಹತ್ತಿಕ್ಕಲು ನಾನಾ ಮಾರ್ಗಗಳನ್ನು ಅನುಸರಿಸುತ್ತಿದೆ” ಎಂದು ದಿಪ್ಕೆ ಆರೋಪಿಸಿದ್ದಾರೆ.

“ಈ ಹಿಂದೆ ತ್ರಿವರ್ಣ ಧ್ವಜ ಬೀಸಿದ ಆರೋಪದ ಮೇಲೆ ಅಶುತೋಷ್ ರಾಂಕಾ ಎಂಟು ದಿನ ತಿಹಾರ್ ಜೈಲಿನಲ್ಲಿದ್ದರು. ನನ್ನನ್ನೂ ಒಂದು ದಿನ ಬಂಧನದಲ್ಲಿಡಲಾಗಿತ್ತು. ಅಧಿಕಾರ ನಿಮ್ಮದಾಗಿರಬಹುದು, ಆದರೆ ಸಂವಿಧಾನ ನಮ್ಮದು. ಈ ಸಂವಿಧಾನ 140 ಕೋಟಿ ಜನರಿಗೆ ಸೇರಿದ್ದು. ಅಧಿಕಾರದಲ್ಲಿರುವ ಸರ್ವಾಧಿಕಾರಿಗಳು ಜನರ ಹಕ್ಕುಗಳನ್ನು ಕಸಿದುಕೊಳ್ಳಲು ಯತ್ನಿಸಿದಾಗಲೆಲ್ಲ ಬಾಬಾಸಾಹೇಬರ ಈ ಸಂವಿಧಾನವೇ ಜನರನ್ನು ರಕ್ಷಿಸುತ್ತದೆ. ಸಂವಿಧಾನ ಉಳಿಯದಿದ್ದರೆ ಭಾರತವೂ ಉಳಿಯುವುದಿಲ್ಲ” ಎಂದು ದಿಪ್ಕೆ ಗುಡುಗಿದ್ದಾರೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಂಡವಾಳಶಾಹಿಯ ನಾಲ್ಕು ಕಟ್ಟುಕಥೆಗಳು ಮತ್ತು ನಮ್ಮ ಬದುಕಿನ ಬೆಲೆ

ನಮ್ಮ ಸುತ್ತಮುತ್ತಲಿನ ಪ್ರಪಂಚವನ್ನು ಒಮ್ಮೆ ಗಮನಿಸಿ ನೋಡಿ. ಒಂದು ಕಡೆ, 2025ರ...

ಬಾಲಿವುಡ್‌ನಲ್ಲಿ ಮತ್ತೊಂದು ಕ್ರಿಕೆಟ್ ಹಬ್ಬಕ್ಕೆ ವೇದಿಕೆ ಸಿದ್ಧ; ‘ಲಗಾನ್’ ಬಳಿಕ ಮತ್ತೆ ಕೈಜೋಡಿಸಿದ ಆಮೀರ್-ಆಶುತೋಷ್!

ದೇಶದ ಚಿತ್ರರಂಗದ ಇತಿಹಾಸದಲ್ಲಿ ಮೈಲಿಗಲ್ಲು ಸೃಷ್ಟಿಸಿದ್ದ 'ಲಗಾನ್' ಸಿನೆಮಾದ ಯಶಸ್ವಿ ಜೋಡಿಯಾದ...

ಉತ್ತರಾಖಂಡದಲ್ಲಿ ಬಿಜೆಪಿ ಈವರೆಗೆ ಗೆಲ್ಲದಿರುವ ಆ 5 ಸೀಟುಗಳು ಯಾವುವು? ಕಾಂಗ್ರೆಸ್, ಬಿಎಸ್ಪಿ, ಪಕ್ಷೇತರರೇ ಇಲ್ಲಿ ಪ್ರಾಬಲ್ಯ

2027ರ ಉತ್ತರಾಖಂಡ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಜನಾದೇಶ ಪಡೆಯುವ ಗುರಿಯೊಂದಿಗೆ ಬಿಜೆಪಿ...