50% ಸಮಾನ ಹೆಚ್ಚಳ ಷರತ್ತು; ಕೇಂದ್ರದ ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಸುಪ್ರಿಯಾ ಸುಳೆ ಬೆಂಬಲ

Date:

ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಎಲ್ಲ ರಾಜ್ಯಗಳಲ್ಲೂ ಯಾವುದೇ ತಾರತಮ್ಯವಿಲ್ಲದೆ ‘50%ರಷ್ಟು ಸಮಾನ’ವಾಗಿ ಹೆಚ್ಚಿಸುವುದಾದರೆ, ಈ ಹಿಂದೆ ಸಂಸತ್ತಿನಲ್ಲಿ ಸೋಲುಂಡಿದ್ದ ಕೇಂದ್ರ ಸರ್ಕಾರದ ‘ಕ್ಷೇತ್ರ ಮರುವಿಂಗಡಣೆ ಮಸೂದೆ’ಯನ್ನು ಬೆಂಬಲಿಸಲು ತಮ್ಮ ಪಕ್ಷ ಮುಕ್ತವಾಗಿದೆ ಎಂದು ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ (ಶರದ್‌ ಪವಾರ್ ಬಣ) ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಹೇಳಿದ್ದಾರೆ. ಪ್ರಸ್ತುತ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟದ ಭಾಗವಾಗಿರುವ ಸುಪ್ರಿಯಾ ಸುಳೆ ಅವರ ಪಕ್ಷವು, ಬಿಜೆಪಿ ನೇತೃತ್ವದ ಎನ್‌ಡಿಎ ಕೂಟದಲ್ಲಿರುವ ಎನ್‌ಸಿಪಿ (ಅಜಿತ್ ಬಣ)ದ ಜೊತೆ ವಿಲೀನವಾಗಲಿದೆ ಎಂಬ ರಾಜಕೀಯ ವದಂತಿಗಳ ನಡುವೆಯೇ ಸುಳೆ ಅವರು ಈ ಹೇಳಿಕೆ ನೀಡಿದ್ದಾರೆ. ಗಮನಾರ್ಹವಾಗಿ, ಎನ್‌ಸಿಪಿ ಬಣಗಳ ವಿಲೀನದ ವಿಚಾರವನ್ನೂ ಸುಳೆ ತಳ್ಳಿಹಾಕಿದ್ದಾರೆ. “ನನ್ನ ಸಹೋದರ ಅಜಿತ್ ಪವಾರ್ ನಿಧನರಾದ ನಂತರ, ನಮ್ಮ ಕಡೆಯಿಂದ ಈ ವಿಷಯಕ್ಕೆ ಪೂರ್ಣವಿರಾಮ ಹಾಕಿದ್ದೇವೆ” ಎಂದಿದ್ದಾರೆ.

- Advertisement -

ಸುಪ್ರಿಯಾ ಸುಳೆ ಅವರು ಕಳೆದ ಜುಲೈನಲ್ಲಿಯೂ, ಅಂದರೆ ಮುಂಗಾರು ಅಧಿವೇಶನಕ್ಕೂ ಕೆಲವು ದಿನಗಳ ಮೊದಲು ಇಂತಹದ್ದೇ ಸೂತ್ರವನ್ನು ಮುಂದಿಟ್ಟಿದ್ದರು. ಆದರೆ, ಆ ನಂತರ ತಮ್ಮ ಪಕ್ಷ ಮಸೂದೆಯನ್ನು ಬೆಂಬಲಿಸಲು ನಿರ್ಧರಿಸಿದೆ ಎಂಬ ವರದಿಗಳನ್ನು ಅವರು ಸುಳ್ಳು ಎಂದು ತಳ್ಳಿಹಾಕಿದ್ದರು. ಆದಾಗ್ಯೂ, ಅದೇ ಅಧಿವೇಶನದಲ್ಲಿ ಮಸೂದೆ ಕುರಿತು ಕಡೆಯ ಚರ್ಚೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮೌಖಿಕವಾಗಿ ‘50%ರಷ್ಟು ಸಮಾನ ಹೆಚ್ಚಳ’ದ ಭರವಸೆ ನೀಡಿದ್ದರು. ಆದರೆ, ಅದು ಲಿಖಿತ ರೂಪದಲ್ಲಿ ಇರಲಿಲ್ಲ. ಅಲ್ಲದೆ, ಕ್ಷೇತ್ರ ಮರುವಿಂಗಡಣೆಯೊಂದಿಗೆ 33%ರಷ್ಟು ಮಹಿಳಾ ಮೀಸಲಾತಿಯನ್ನು ತಳಕು ಹಾಕಿರುವುದನ್ನು ವಿರೋಧಿಸಿದ್ದ ಸುಳೆ, 2023ರ ಕಾನೂನಿನ ಪ್ರಕಾರ ಈಗಿರುವ 543 ಸ್ಥಾನಗಳಲ್ಲೇ ಮಹಿಳೆಯರಿಗೆ 33%ರಷ್ಟು ಮೀಸಲಾತಿ ಜಾರಿಗೊಳಿಸಬೇಕೆಂದು ಒತ್ತಾಯಿಸಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

25ರ ಹರೆಯದಲ್ಲೇ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸಿಂಹಸ್ವಪ್ನವಾದ ಆದಿವಾಸಿ ಕ್ರಾಂತಿಕಾರಿ...

ಕೇವಲ 25 ವರ್ಷಗಳ ಬದುಕಿನಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿ ಆಡಳಿತಕ್ಕೆ ಸವಾಲು ಹಾಕಿ, ಸಾವಿರಾರು ಆದಿವಾಸಿಗಳನ್ನು ಸಂಘಟಿಸಿ, ಭೂಮಿಯ ಹಕ್ಕು ಮತ್ತು ಸ್ವಯಂ ಆಡಳಿತಕ್ಕಾಗಿ ಬೃಹತ್ ಚಳವಳಿಯನ್ನು ಕಟ್ಟಿದ ಬಿರ್ಸಾ ಮುಂಡಾ ಅವರು ಕೇವಲ...

ನಾರ್ವೆಯ ಪತ್ರಕರ್ತೆ ಹೆಲ್ಲೆ ಲಿಂಗ್ ವೀಸಾ ರದ್ದತಿ ಪ್ರಕರಣ:...

ನಿರಂತರ ಹೋರಾಟದ ಮೂಲಕ ಗಳಿಸಿದ ಸ್ವಾತಂತ್ರ್ಯ, 'ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು' ಸಿದ್ಧಾಂತದ ಸಂವಿಧಾನದ ಮೂಲಕ ಸ್ಥಾಪಿಸಿದ ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಅವುಗಳನ್ನು ಕಾಪಾಡುವಲ್ಲಿ ಆಡಳಿತದ ಹೊಣೆಗಾರಿಕೆ ಭಾರತದ ಜಾಗತಿಕ ಪ್ರತಿಷ್ಠೆಯ ಮೂಲಾಧಾರಗಳಾಗಿವೆ. ನಾರ್ವೆಯ...

ವಿಜ್ಞಾನ ಜಗತ್ತಿನ ಅಮೂಲ್ಯ ವಿಜ್ಞಾನಿ- ಪ್ರೊ. ಅಮೂಲ್ಯ ಕುಮಾರ್...

ಭಾರತೀಯ ವಿಜ್ಞಾನದ ಆಸಕ್ತರಿಗೆ ಪರಿಚಯ ಇರಲೇಬೇಕಾದ ಹಾಗೂ ವಿಜ್ಞಾನವನ್ನು ಪ್ರಯೋಗಾಲಯದಿಂದ ಆಚೆ ಸಮಾಜದ ನಡುವೆ ಕೊಂಡೊಯ್ದ ಪ್ರಮುಖರಲ್ಲಿ ಒಬ್ಬರಾದ ಪ್ರೊ. ಅಮೂಲ್ಯ ಕುಮಾರ್ ನಿಜ ಅರ್ಥದ ಜೀನಿಯಸ್. ವಿಜ್ಞಾನದ ಜೊತೆಗೆ ಗ್ರಾಮೀಣ ಅಭಿವೃದ್ಧಿ,...

ಇದೀಗ, ಕ್ಷೇತ್ರ ಮರುವಿಂಗಣೆ ಮಸೂದೆ ಬಗ್ಗೆ ಮಾತನಾಡಿರುವ ಸುಳೆ, “ಕ್ಷೇತ್ರಗಳ ಗಾತ್ರ ಚಿಕ್ಕದಾದರೆ ಸಂಸದರು ಮತದಾರರೊಂದಿಗೆ ಹೆಚ್ಚು ನಿಕಟ ಸಂಪರ್ಕದಲ್ಲಿರಲು ಸಾಧ್ಯವಾಗುತ್ತದೆ. ನಮ್ಮದೇ ಬಾರಾಮತಿ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಮತದಾರರ ಸಂಖ್ಯೆ ಸುಮಾರು 10-12 ಲಕ್ಷದಿಂದ 20-22 ಲಕ್ಷಕ್ಕೆ ಏರಿಕೆಯಾಗಿದೆ. ಇಷ್ಟು ದೊಡ್ಡ ಕ್ಷೇತ್ರದ ಪ್ರತಿಯೊಂದು ಹಳ್ಳಿಗೂ ಸಂಸದರು ಭೇಟಿ ನೀಡುವುದು ಮತ್ತು ಸಮಾನ ಅಭಿವೃದ್ಧಿಯನ್ನು ಖಚಿತಪಡಿಸುವುದು ಪ್ರಾಯೋಗಿಕವಾಗಿ ಅಸಾಧ್ಯವಾಗಿದೆ. ಅಲ್ಲದೆ, ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ (MPLAD) ವರ್ಷಕ್ಕೆ ಸಿಗುವ 5 ಕೋಟಿ ರೂಪಾಯಿ ಇಷ್ಟು ದೊಡ್ಡ ಜನಸಂಖ್ಯೆಗೆ ಏನಕ್ಕೂ ಸಾಲುವುದಿಲ್ಲ. ಹೀಗಾಗಿ ಉತ್ತಮ ಪ್ರಾತಿನಿಧ್ಯ ಮತ್ತು ಅಭಿವೃದ್ಧಿಗಾಗಿ ಕ್ಷೇತ್ರಗಳನ್ನು ವಿಭಜಿಸುವುದು ಅನಿವಾರ್ಯವಾಗಿದೆ” ಎಂದು ಪ್ರತಿಪಾದಿಸಿದ್ದಾರೆ.

ಈ ಲೇಖನ ಓದಿದ್ದೀರಾ?: ಒಬಿಸಿ ಮೀಸಲಾತಿ ಮತ್ತು ಕೆನೆಪದರ: ಸುಪ್ರೀಂನ ಮಾರ್ಚ್ ತೀರ್ಪಿನ ಹಿನ್ನೆಲೆಯೇನು? ಪ್ರಸ್ತುತ ಮಹತ್ವವೇನು?

ಇದೆಲ್ಲದರ ನಡುವೆ, ಅಮಿತ್ ಶಾ ಮತ್ತು ಮೋದಿ ಸರ್ಕಾರವು ಕ್ಷೇತ್ರ ಮರುವಿಂಗಡಣೆಯಲ್ಲಿ ಎಲ್ಲ ರಾಜ್ಯಗಳಿಗೂ ಸಮಾನವಾಗಿ 50% ಸ್ಥಾನಗಳನ್ನು ಹೆಚ್ಚಿಸುತ್ತೇವೆಂದು ಭರವಸೆ ನೀಡುತ್ತಿದ್ದಾರೆ. ಆದರೆ, ಇದನ್ನು ಸಂವಿಧಾನದಲ್ಲಿ ಖಾತರಿ ಪಡಿಸುವ ಕುರಿತು ಅವರು ಮಾತನಾಡುತ್ತಿಲ್ಲ. ಬದಲಾಗಿ, ಸರಳ ಕಾಯ್ದೆಯಾಗಿ ತರುವ ಇರಾದೆ ಹೊಂದಿದ್ದಾರೆ.

ಒಂದು ವೇಳೆ, 50% ಹೆಚ್ಚಳದ ನಿಯಮವನ್ನು ಸಾಮಾನ್ಯ ಕಾಯ್ದೆಯಲ್ಲಿ ಮಾತ್ರ ಇರಿಸಿ, ಸಂವಿಧಾನದಲ್ಲಿರುವ ಪ್ರಾತಿನಿಧ್ಯದ ರಕ್ಷಣೆಯನ್ನು ದುರ್ಬಲಗೊಳಿಸಿದರೆ, ಭವಿಷ್ಯದ ಸರ್ಕಾರವು ಕಾನೂನನ್ನು ಬದಲಾಯಿಸುವ ಅವಕಾಶ ಹೊಂದಿರುತ್ತದೆ. ಈ ಸಾಮಾನ್ಯ ಕಾಯ್ದೆಯನ್ನು ಸರ್ಕಾರವು ಸರಳ ಬಹುಮತದೊಂದಿಗೂ ಬದಲಾಯಿಸಿಕೊಳ್ಳಬಹುದು. ಹಾಗೆ ಆದಲ್ಲಿ, ಸರ್ಕಾರವು ಮತ್ತೆ ಜನಸಂಖ್ಯಾ ಆಧಾರದಲ್ಲಿಯೇ ಕ್ಷೇತ್ರಮರುವಿಂಗಡಣೆ ಮಾಡುವ ‘ಡಿಲಿಮಿಟೇಷನ್ ಮಸೂದೆ’ಯನ್ನು ನಿರಾಯಾಸವಾಗಿ ಅಂಗೀಕರಿಸಿ, ಮರುವಿಂಗಡಣೆ ಮಾಡಿಬಿಡಬಹುದು.

ಆದ್ದರಿಂದ, ಎಲ್ಲ ರಾಜ್ಯಗಳಿಗೂ 50% ಸಮಾನ ಅನುಪಾತದಲ್ಲಿ ಸ್ಥಾನಗಳನ್ನು ಹೆಚ್ಚಿಸುವ ತತ್ವವನ್ನು ಸಂವಿಧಾನದಲ್ಲೇ ಸೇರಿಬೇಕು. ಸಮಾನ ಹಂಚಿಕೆಯನ್ನು ಸಂವಿಧಾನದ 81 ಮತ್ತು 82ನೇ ವಿಧಿಗಳಲ್ಲಿಯೇ ಸೇರಿಸಲ್ಪಟ್ಟರೆ, ರಾಜ್ಯಗಳ ಸಮಾನ ಪ್ರಾತಿನಿಧ್ಯಕ್ಕೂ ರಕ್ಷಣೆ ದೊರೆಯುತ್ತದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ |ವಿದ್ಯುತ್ ಕಿಡಿಗೆ ಸುಟ್ಟುಕರಕಲಾದ 10 ಎಕರೆ ಕಬ್ಬು

ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ತಿಂಗಳುಗಟ್ಟಲೆ ಬೆವರು ಸುರಿಸಿ ಬೆಳೆದಿದ್ದ...

ಬಳ್ಳಾರಿ | ₹15 ಸಾವಿರ ಸಂಬಳದ ಯುವಕನ ಹೆಸರಿನಲ್ಲಿ ₹350 ಕೋಟಿಗೂ ಅಧಿಕ ಜಿಎಸ್‌ಟಿ ವಂಚನೆ!

ಸಾಮಾನ್ಯ ಕುಟುಂಬದ ಯುವಕನೊಬ್ಬನ ವೈಯಕ್ತಿಕ ದಾಖಲೆಗಳನ್ನು ದುರುಪಯೋಗಪಡಿಸಿಕೊಂಡು, ಆತನ ಹೆಸರಿನಲ್ಲಿ ಬರೋಬ್ಬರಿ...

ಬೀದರ್‌ | ಬಿಸಿಯೂಟ ಯೋಜನೆಯ ಜವಾಬ್ದಾರಿ ಅಡುಗೆ ನೌಕರರಿಗೆ ವಹಿಸಿ: ಸಿಐಟಿಯು ಆಗ್ರಹ

ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಬಿಸಿಯೂಟ ಯೋಜನೆಯ ನಿರ್ವಹಣೆಯ ಜವಾಬ್ದಾರಿಯನ್ನು ಶಿಕ್ಷಕರ ಬದಲಿಗೆ...

ಔರಾದ್‌ | ಅನುಭವ ಮಂಟಪ ಪಬ್ಲಿಕ್‌ ಶಾಲೆಯಲ್ಲಿ ಸಂಭ್ರಮದ ಮಕ್ಕಳ ದಿನಾಚರಣೆ

ಔರಾದ್‌: ತಾಲ್ಲೂಕಿನ ಸಂತಪೂರ ಗ್ರಾಮದ ಅನುಭವ ಮಂಟಪ ಗುರುಕುಲ ಪಬ್ಲಿಕ್‌ ಶಾಲೆಯಲ್ಲಿ...