ಸ್ನಾತಕೋತ್ತರ ಇತಿಹಾಸ ಪಠ್ಯದಿಂದ ‘ದೆಹಲಿ ಸುಲ್ತಾನ’ರ ಪಠ್ಯ ಕೈಬಿಟ್ಟ ದೆಹಲಿ ವಿವಿ; ಬೋಧಕರ ಕಳವಳ

Date:

ದೆಹಲಿ ವಿಶ್ವವಿದ್ಯಾಲಯವು (DU) ತನ್ನ ಸ್ನಾತಕೋತ್ತರ (MA) ಇತಿಹಾಸ ವಿಭಾಗದ ಮೂರನೇ ಸೆಮಿಸ್ಟರ್ ಪಠ್ಯಕ್ರಮದಿಂದ ‘ದೆಹಲಿ ಸುಲ್ತಾನ’ರ ಕುರಿತ ಮುಖ್ಯ ಪಠ್ಯ ಸೇರಿದಂತೆ ಹಲವು ದಶಕಗಳಿಂದ ಬೋಧಿಸಲಾಗುತ್ತಿದ್ದ ಪ್ರಮುಖ ವಿಷಯಗಳನ್ನು ಸಂಪೂರ್ಣವಾಗಿ ಕೈಬಿಟ್ಟಿದೆ.

- Advertisement -

ಪಠ್ಯಕ್ರಮದಲ್ಲಿದ್ದ ‘ದೆಹಲಿ ಸುಲ್ತಾನರು: ಉತ್ತರ ಭಾರತದಲ್ಲಿ ಅಧಿಕಾರದ ರಚನೆಗಳು [The Delhi Sultanate: Structures of Authority in Medieval North India] (13-14ನೇ ಶತಮಾನ)’ ಎಂಬ ಪಠ್ಯವು ಮಧ್ಯಕಾಲೀನ ಭಾರತದ ರಾಜಕೀಯ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಗಳನ್ನು ಅಧ್ಯಯನ ಮಾಡಲು ಅತ್ಯಂತ ಪ್ರಮುಖವಾಗಿತ್ತು. ಆದರೆ, ಆಗಸ್ಟ್ 7ರಂದು ವಿಶ್ವವಿದ್ಯಾಲಯವು ಹೊರಡಿಸಿದ ಅಂತಿಮ ಅಧಿಸೂಚನೆಯಲ್ಲಿ ಈ ವಿಷಯವನ್ನು ಹೊರಗಿಡಲಾಗಿದೆ. ಇಷ್ಟೇ ಅಲ್ಲದೆ, ಪ್ರಾಚೀನ ಮತ್ತು ಆಧುನಿಕ ಭಾರತದ ಇತಿಹಾಸಕ್ಕೆ ಸಂಬಂಧಿಸಿದ ಹಲವು ದೀರ್ಘಾವಧಿಯ ಪಠ್ಯಗಳನ್ನೂ ಸಹ ಪಠ್ಯಕ್ರಮದಿಂದ ತೆಗೆದುಹಾಕಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ವಿಶ್ವವಿದ್ಯಾಲಯದ ಇತಿಹಾಸ ವಿಭಾಗವು ಒಟ್ಟು 38 ‘ಡಿಸಿಪ್ಲಿನ್ ಸ್ಪೆಸಿಫಿಕ್ ಎಲೆಕ್ಟಿವ್’ (DSE) ಪಠ್ಯಗಳನ್ನು ಪ್ರಸ್ತಾಪಿಸಿತ್ತು. ಆದರೆ, ಅದರಲ್ಲಿ ಕೇವಲ 16 ವಿಷಯಗಳಿಗೆ ಮಾತ್ರ ಅಂತಿಮ ಅನುಮೋದನೆ ದೊರೆತಿದೆ. ಕೈಬಿಡಲಾದ ಪಠ್ಯಗಳಲ್ಲಿ 1400 ರಿಂದ 1550ರ ಅವಧಿಯ ಉತ್ತರ ಭಾರತದ ಇತಿಹಾಸ, ಪ್ರಾಚೀನ ಭಾರತದಲ್ಲಿ ಲಿಂಗ ಮತ್ತು ಮಹಿಳೆಯರ ಕುರಿತ ಅಧ್ಯಯನ, ಪ್ರಾಚೀನ ಭಾರತದ ರಾಜಕೀಯ ಪ್ರಕ್ರಿಯೆಗಳು ಹಾಗೂ ಧರ್ಮ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ ಪ್ರಮುಖ ಅಧ್ಯಯನ ಪಠ್ಯಗಳು ಸೇರಿವೆ. ಇವುಗಳಲ್ಲಿ ಹಲವು ವಿಷಯಗಳನ್ನು ವಿಶ್ವವಿದ್ಯಾಲಯದ ವಿವಿಧ ಶೈಕ್ಷಣಿಕ ಸಮಿತಿಗಳು ಆರಂಭಿಕ ಹಂತದಲ್ಲಿ ಅಂಗೀಕರಿಸಿದ್ದರೂ, ಅಂತಿಮ ಪಟ್ಟಿಯಲ್ಲಿ ಅವುಗಳಿಗೆ ಜಾಗ ಸಿಕ್ಕಿಲ್ಲ.

ರಾಷ್ಟ್ರೀಯ ಶಿಕ್ಷಣ ನೀತಿ (NEP 2020) ಜಾರಿಗೆ ಬಂದ ನಂತರ ದೆಹಲಿ ವಿಶ್ವವಿದ್ಯಾಲಯವು ತನ್ನ ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣದ ಪಠ್ಯಕ್ರಮಗಳನ್ನು ಪುನರ್ರಚಿಸುತ್ತಿದೆ. ಪಠ್ಯಕ್ರಮಗಳಲ್ಲಿ ಹಲವು ಬದಲಾವಣೆಗಳನ್ನು ಮಾಡುತ್ತದೆ. ಪಠ್ಯಕ್ರಮವನ್ನು ಭಾರತದ ವಿವಿಧ ಪ್ರದೇಶಗಳು ಮತ್ತು ಕಾಲಘಟ್ಟಗಳಿಗೆ ಹೆಚ್ಚು ಪ್ರಾತಿನಿಧ್ಯ ನೀಡುವಂತೆ ಮಾಡುವುದು ಈ ಪರಿಶೀಲನೆಯ ಉದ್ದೇಶವೆಂದು ಪಠ್ಯ ಪರಿಷ್ಕರಣೆ ಸಮಿತಿ ತಿಳಿಸಿದೆ.

ಪಠ್ಯಕ್ರಮಗಳ ಕೈಬಿಡುವಿಕೆ ಕುರಿತು ಸ್ಪಷ್ಟನೆ ನೀಡಿರುವ ವಿಶ್ವವಿದ್ಯಾಲಯದ ಶೈಕ್ಷಣಿಕ ವ್ಯವಹಾರಗಳ ಡೀನ್ ಕೆ. ರತ್ನಬಾಲಿ, “ವಿಶ್ವವಿದ್ಯಾಲಯವು ಅನುಮೋದಿತ ಪಠ್ಯಗಳಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಿದ್ದರಿಂದ ಗೊಂದಲ ಉಂಟಾಗಿತ್ತು. ಈ ಗೊಂದಲ ಪರಿಹರಿಸಲು ಉಪಕುಲಪತಿಗಳು ಮೂವರು ಬಾಹ್ಯ ತಜ್ಞರನ್ನೊಳಗೊಂಡ ಸಮಿತಿಯನ್ನು ರಚಿಸಿದ್ದು, ಈ ಸಮಿತಿಯು ಪಠ್ಯವನ್ನು ಪರಿಶೀಲಿಸಿ ಪರಿಷ್ಕೃತ ಪಟ್ಟಿಯನ್ನು ಅನುಮೋದಿಸಿದೆ” ಎಂದು ಅವರು ತಿಳಿಸಿದ್ದಾರೆ.

ಇನ್ನೊಂದೆಡೆ, ಶೈಕ್ಷಣಿಕ ವರ್ಷ ಜುಲೈ 28 ರಂದೇ ಆರಂಭವಾಗಿದ್ದರೂ, ಪಠ್ಯಕ್ರಮದ ಅಧಿಕೃತ ಅಧಿಸೂಚನೆ ತಡವಾಗಿ ಬಂದಿದ್ದರಿಂದ ವಿದ್ಯಾರ್ಥಿಗಳಿಗೆ ತಮ್ಮ ಐಚ್ಛಿಕ ವಿಷಯಗಳನ್ನು ಆಯ್ಕೆ ಮಾಡಲು ಕಷ್ಟವಾಗಿತ್ತು ಎಂದು ಬೋಧಕರು ಕಳವಳ ವ್ಯಕ್ತಪಡಿಸಿದ್ದಾರೆ.

ದಶಕಗಳಿಂದ ಬೋಧಿಸುತ್ತಿದ್ದ ದೆಹಲಿ ಸುಲ್ತಾನರಿಗೆ ಸಂಬಂಧಿಸಿದ ಪಠ್ಯ ಸೇರಿದಂತೆ ಹಲವು ಪಠ್ಯಗಳನ್ನು ಹಠಾತ್ತಾಗಿ ಕೈಬಿಟ್ಟಿರುವುದು ಇತಿಹಾಸ ವಿಭಾಗದ ಶಿಕ್ಷಕರಲ್ಲಿ ಹಾಗೂ ಶೈಕ್ಷಣಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. NEP 2020 ಜಾರಿಯಾದಾಗಿನಿಂದ ಸಾಮಾಜಿಕ ವಿಜ್ಞಾನ ವಿಭಾಗಗಳಲ್ಲಿ ಪ್ರಮುಖ ವಿಷಯಗಳನ್ನು ಪಠ್ಯದಿಂದ ಹೊರಗಿಡುವ ಪ್ರವೃತ್ತಿ ಹೆಚ್ಚಾಗುತ್ತಿದೆ ಎಂದು ಕೆಲ ಬೋಧಕರು ಆರೋಪಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಅರ್ಹ ಮತದಾರರ ಹಕ್ಕು ಕಸಿಯಲು ಬಿಡುವುದಿಲ್ಲ: ಎಂ ಬಿ ಪಾಟೀಲ

ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಸಂದರ್ಭದಲ್ಲಿ ಬಬಲೇಶ್ವರ ವಿಧಾನಸಭಾ ಕ್ಷೇತ್ರ...

ಮೈಸೂರು | ಅ.13ರಂದು ಯುವ ದಸರಾ ಉದ್ಘಾಟಿಸಲಿರುವ ನಟ ಪ್ರಭುದೇವ್‌

2026ರ ಯುವ ದಸರಾ ಕಾರ್ಯಕ್ರಮವನ್ನು ಅಕ್ಟೋಬರ್ 13ರಂದು ಖ್ಯಾತ ನೃತ್ಯ ನಿರ್ದೇಶಕ...

ಯಾದಗಿರಿ–ಶಹಾಪುರ ಬೈಪಾಸ್‌ ರೈಲ್ವೆ ಮೇಲ್ಸೇತುವೆ, ಭೀಮಾ ನದಿ ಬ್ರಿಡ್ಜ್ ದುರಸ್ತಿಗೆ ಉಮೇಶ ಕೆ. ಮುದ್ನಾಳ ಆಗ್ರಹ

ಯಾದಗಿರಿ ನಗರದ ಗುರುಶಿಣಗಿ ಮೂಲಕ ಶಹಾಪುರಕ್ಕೆ ಸಂಪರ್ಕ ಕಲ್ಪಿಸುವ ಯಾದಗಿರಿ–ಶಹಾಪುರ ಬೈಪಾಸ್...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ...