ಭಾರತದ ಗ್ರಂಥಾಲಯ ವಿಜ್ಞಾನದ ಪಿತಾಮಹ ಪದ್ಮಶ್ರೀ ಡಾ.ಎಸ್.ಆರ್.ರಂಗನಾಥನ್ ಅವರ ಜಯಂತಿಯನ್ನು ಬೀದರ್ ನಗರದ ನೌಬಾದ್‌ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಾಲಯ ವಿಭಾಗದ ವತಿಯಿಂದ ಸಂಭ್ರಮದಿಂದ ಆಚರಿಸಲಾಯಿತು.
ಡಾ.ನಾಗರಾಜ ಕುಲಕರ್ಣಿ ಮಾತನಾಡಿ, “ಡಾ. ಎಸ್.ಆರ್.ರಂಗನಾಥನ್ ಅವರು 1931ರಲ್ಲಿ ರೂಪಿಸಿದ ಗ್ರಂಥಾಲಯ ವಿಜ್ಞಾನದ ಐದು ಕಾನೂನುಗಳು, ಕೋಲನ್ ವರ್ಗೀಕರಣ ಪದ್ಧತಿ ಹಾಗೂ ಭಾರತದಲ್ಲಿ ಸಾರ್ವಜನಿಕ ಗ್ರಂಥಾಲಯ ಕಾಯ್ದೆ ಜಾರಿಗೊಳಿಸುವಲ್ಲಿ ನೀಡಿದ ಕೊಡುಗೆ ಅಪಾರವಾಗಿದೆ. ಗ್ರಂಥಾಲಯ ಕ್ಷೇತ್ರಕ್ಕೆ ಅವರು ನೀಡಿದ ಅಮೂಲ್ಯ ಸೇವೆಯಿಂದಾಗಿ ಅವರಿಗೆ ‘ಗ್ರಂಥಾಲಯ ವಿಜ್ಞಾನದ ಪಿತಾಮಹ’ ಎಂಬ ಗೌರವ ದೊರೆತಿದೆ” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಡಾಕ್ಟರೇಟ್ ಪದವಿ ಪಡೆದಿರುವ ಡಾ ಪ್ರೇಮಲತಾ ಮನೋಳಿ ಅವರನ್ನು ಗ್ರಂಥಾಲಯ ವಿಭಾಗದ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶಂಕರ ಗಣಗೊಂಡ, ಗ್ರಂಥಾಲಯ ವಿಭಾಗದ ಮುಖ್ಯಸ್ಥ ಡಾ.ಪ್ರಕಾಶ ವಾಘಮಾರೆ ಹಾಗೂ ಗ್ರಂಥಾಲಯ ಸಹಾಯಕ ಸಂತೋಷಕುಮಾರ ನಿರಂಜನ್, ಪ್ರಾಧ್ಯಾಪಕರಾದ ಡಾ.ರಾಜಕುಮಾರ ಅಲ್ಲೂರೆ, ಡಾ.ಚನ್ನಕೇಶವ ಮೂರ್ತಿ, ಡಾ. ಸಂಜೀವಕುಮಾರ, ಡಾ.ಸಂಗಶೆಟ್ಟಿ ಶೆಟಕಾರ, ಪ್ರೊ. ಶಿವಕುಮಾರ, ಡಾ. ಸುಚಿತಾನಂದ, ವೆಂಕಟೇಶ್ ಹಿಬಾರೆ, ಎಲಿಶಾ, ಡಾ. ರೂತಾ, ಸಪನಾ ಮಾನಕಾರಿ, ಡಾ. ಭಾರತಿ, ನಗ್ಮಾ ಸೋನಾ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ : ಬೀದರ್ | ಹೊಲದಲ್ಲಿ ಮೇಕೆ ಮೇಯಿಸಿದಕ್ಕೆ ದಲಿತ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ; ಸಾವು




