ಅಕ್ರಮ ಹಣ ವರ್ಗಾವಣೆ ಪ್ರಕರಣ: ಪಂಜಾಬ್ ಸಚಿವ ಸಂಜೀವ್ ಅರೋರಾ ಬಂಧನ

Date:

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಕೈಗಾರಿಕಾ ಸಚಿವ ಸಂಜೀವ್ ಅರೋರಾ ಮತ್ತು ಅವರೊಂದಿಗೆ ಸಂಪರ್ಕ ಹೊಂದಿದ್ದಾರೆ ಎನ್ನಲಾದ ಇತರ ಕೆಲವರ ನಿವಾಸ, ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಶನಿವಾರ ದಾಳಿ ನಡೆಸಿದೆ. ಬಳಿಕ ಸಂಜೀವ್ ಅರೋರಾ ಅವರನ್ನು ಬಂಧಿಸಿದೆ.

- Advertisement -

ಸುಮಾರು ₹157 ಕೋಟಿ ಮೌಲ್ಯದ ನಕಲಿ ಹಣಕಾಸು ವ್ಯವಹಾರಗಳು, ಶೆಲ್ ಕಂಪನಿಗಳ ಬಳಕೆ ಮತ್ತು ಫೆಮಾ (FEMA) ನಿಯಮಗಳ ಉಲ್ಲಂಘನೆಯ ಆರೋಪಗಳು ಅರೋರಾ ಮೇಲಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಮೆರಿಕ | ಡೆಮೊಕ್ರಟಿಕ್ ಪಕ್ಷದ ತೆಕ್ಕೆಯಲ್ಲಿ ಮತ್ತೊಂದು ಸೆನೆಟ್...

ಒಟ್ಟು 435 ಸೀಟುಗಳ ಸಂಖ್ಯಾಬಲವಿರುವ ಕೆಳಮನೆ “ಹೌಸ್ ಆಫ್ ರೆಪ್ರೆಸೆಂಟಿಟಿವ್ಸ್”ನಲ್ಲಿ ಇನ್ನೂ 22 ಸೀಟುಗಳ ಮತ ಎಣಿಕೆ ನಡೆಯುತ್ತಿದ್ದು ಇಲ್ಲಿಯವರೆಗೂ 254 ಡೆಮೊಕ್ರಟಿಕ್ ಅಭ್ಯರ್ಥಿಗಳು ಮತ್ತು 169 ರಿಪಬ್ಲಿಕನ್ ಅಭ್ಯರ್ಥಿಗಳು ಚುನಾಯಿತರಾಗಿದ್ದಾರೆ. ಸಮೀಕ್ಷೆಗಳ...

ಎಸ್‌ಐಆರ್‌ | ಪ್ರಜಾಪ್ರಭುತ್ವದ ಕಾವಲುಗಾರನಿಗೆ ʼಕನ್ನಡಕʼ ಬೇಕಿದೆ…

ತನ್ನ ನಿಷ್ಪಕ್ಷಪಾತ ಧೋರಣೆಯಿಂದಾಗಿ ಅತ್ಯುನ್ನತ ಗೌರವಕ್ಕೆ ಪಾತ್ರವಾಗಿದ್ದ ಚುನಾವಣೆ ಅಯೋಗ ಇಂದು ತನ್ನ ನಿಷ್ಪಕ್ಷಪಾತತೆಯನ್ನೇ ಜನ ಪರೀಕ್ಷೆಗೆ ಒಡ್ಡಿಕೊಂಡಿದೆ. ಆಯೋಗದ ನಿರ್ಣಯಗಳನ್ನು ಅನುಮಾನಿಸಿ ಬೀದಿ ಹೋರಾಟಗಳು, ಹರತಾಳಗಳು ಭುಗಿಲೆದ್ದಿವೆ. ಇಷ್ಟಕ್ಕೆ, ನಿಲ್ಲದೆ ಮುಖ್ಯ...

ಟ್ರಂಪ್‌ಗೆ ಮುಖಭಂಗ, ಯುರೋಪಿನಲ್ಲಿ ಆತಂಕ; ಜಗತ್ತಿನಲ್ಲಿ ಬದಲಾಗುತ್ತಿರುವ ಬಲಪಂಥೀಯ...

2026ರ ಅಮೆರಿಕ ಮತ್ತು ಬ್ರೆಜಿಲ್‌ನ ಚುನಾವಣಾ ಫಲಿತಾಂಶಗಳು ಜಾಗತಿಕ ಮಟ್ಟದಲ್ಲಿ ರಾಜಕೀಯ ಒಲವಿನ ಬದಲಾವಣೆಯನ್ನು ದೃಢಪಡಿಸಿವೆ. ಡೆಮಾಕ್ರಟರು ಸಾಧಿಸಿದ 255 ಹೌಸ್ ಮತ್ತು 54 ಸೆನೆಟ್ ಸ್ಥಾನಗಳ ಜಯ, ಹಾಗೂ ಬ್ರೆಜಿಲ್‌ನಲ್ಲಿನ ಅಧಿಕಾರ...

ಇದನ್ನು ಓದಿದ್ದೀರಾ? ಪಂಜಾಬ್ ಸಚಿವ ಸಂಜೀವ್ ಅರೋರಾ ನಿವಾಸದ ಮೇಲೆ ಮತ್ತೆ ಇಡಿ ದಾಳಿ

ಚಂಡೀಗಢದಲ್ಲಿರುವ ಅರೋರಾ ಅವರ ಅಧಿಕೃತ ನಿವಾಸ ಮತ್ತು ಗುರುಗ್ರಾಮದಲ್ಲಿರುವ (ಹರಿಯಾಣ) ರಿಯಲ್ ಎಸ್ಟೇಟ್ ಕಂಪನಿ ಸೇರಿದಂತೆ ಐದು ಸ್ಥಳಗಳಲ್ಲಿ ದಾಳಿ ನಡೆಸಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಕ್ರಿಮಿನಲ್ ವಿಭಾಗಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏಪ್ರಿಲ್‌ನಲ್ಲಿ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ (ಫೆಮಾ) ನಾಗರಿಕ ನಿಬಂಧನೆಗಳ ಅಡಿಯಲ್ಲಿ ಇಡಿ ಅರೋರಾ ಮತ್ತು ಅವರೊಂದಿಗೆ ಸಂಪರ್ಕ ಹೊಂದಿದ ಸಂಸ್ಥೆಗಳ ಮೇಲೆ ದಾಳಿ ನಡೆಸಿತ್ತು.

ವಸತಿ ಯೋಜನೆಗಳಿಗಾಗಿ ಕೈಗಾರಿಕಾ ಭೂಮಿಯನ್ನು ದುರುಪಯೋಗಪಡಿಸಿಕೊಂಡ ಆರೋಪದ ಹಣ ವರ್ಗಾವಣೆ ಪ್ರಕರಣದಲ್ಲಿ 2024ರಲ್ಲಿಯೂ ಇಡಿ ಲುಧಿಯಾನ ಪಶ್ಚಿಮದ ಶಾಸಕರ ಮೇಲೆ ದಾಳಿ ನಡೆಸಿತ್ತು. ಆಗ ಅರೋರಾ ಆಗ ರಾಜ್ಯಸಭಾ ಸಂಸದರಾಗಿದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುಂಬೈ | ಕಿರುಕುಳ ಪ್ರಶ್ನಿಸಿದ್ದಕ್ಕೆ ರೈಲಿನಿಂದ ತಳ್ಳಿದ ಕಿಡಿಗೇಡಿ; ಯುವತಿಯ ಎಡಗೈ ತುಂಡು

ಮುಂಬೈ ಜೀವನಾಡಿಯಾಗಿರುವ ಲೋಕಲ್ ರೈಲುಗಳಲ್ಲಿ ಮಹಿಳೆಯರ ಸುರಕ್ಷತೆಯ ಕುರಿತು ಮತ್ತೊಮ್ಮೆ ಗಂಭೀರ...

ದಕ್ಷಿಣ ಕನ್ನಡ | ಸೌಜನ್ಯ ಕೊಲೆ ಪ್ರಕರಣ : ಎಸ್‌ಐಟಿ ಮುಂದೆ ಹಾಜರಾದ ಡಾ. ಮಹಾಬಲ ಶೆಟ್ಟಿ

ಮಂಗಳೂರು: ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೂತನ ವಿಶೇಷ ತನಿಖಾ ತಂಡದಿಂದ...

ಉತ್ತರ ಕರ್ನಾಟಕದ ಬಡವರ ಜೀವನಾಡಿ: ಸಾರ್ವಕಾಲಿಕ ದಾಖಲೆ ದರ ದಾಟಿದ ಜೋಳ

​ಉತ್ತರ ಕರ್ನಾಟಕದ ಜನತೆಯ ಜೀವನಾಡಿ ಹಾಗೂ ದೈನಂದಿನ ಪ್ರಧಾನ ಆಹಾರವಾಗಿರುವ ಜೋಳದ...

ಏರ್‌ ಇಂಡಿಯಾ ವಿಮಾನಕ್ಕೆ ಹುಸಿ ಹೈಜಾಕ್ ಬೆದರಿಕೆ: ಪ್ರಯಾಣಿಕನ ಬಂಧನ

ಕೋಲ್ಕತ್ತಾದಿಂದ ಮುಂಬೈಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ (AI 2772) ಹುಸಿ...