SIR | ಫಾರ್ಮ್-6 ಹೆಚ್ಚುವರಿ ನಿಯಮ ಹಿಂಪಡೆದ ಚುನಾವಣಾ ಆಯೋಗ; ಆದರೆ, ಪೂರ್ಣ ವಿನಾಯಿತಿಯಲ್ಲ

Date:

ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಹೊಸ ಮತದಾರರ ನೋಂದಣಿ ಪ್ರಕ್ರಿಯೆಯಲ್ಲಿ ಸಂಕೀರ್ಣ ಕಾಗದಪತ್ರಗಳ ಕಟ್ಟುನಿಟ್ಟಿನ ನಿಯಮಗಳನ್ನು ಚುನಾವಣಾ ಆಯೋಗ ಹೇರಿತ್ತು. ಪರಿಣಾಮ, ಅರ್ಹ ನಾಗರಿಕರನ್ನು ಮತದಾನದ ಹಕ್ಕಿನಿಂದ ವಂಚಿಸಲಾಗುತ್ತಿದೆ ಎಂಬ ತೀವ್ರ ಆಕ್ಷೇಪ ಕೇಳಿಬಂದಿತ್ತು. ಈ ಬೆನ್ನಲ್ಲೇ, ಆಯೋಗವು ತನ್ನ ನಿಯಮದಿಂದ ಭಾಗಶಃ ಹಿಂದೆ ಸರಿದಿದೆ. ‘ಫಾರ್ಮ್-6’ ಅರ್ಜಿಯೊಂದಿಗೆ ಕಡ್ಡಾಯಗೊಳಿಸಲಾಗಿದ್ದ ‘ಹೆಚ್ಚುವರಿ ಘೋಷಣಾಪತ್ರ’ (ಡಿಕ್ಲರೇಷನ್) ನಿಯಮವನ್ನು ಆಯೋಗವು ಹಿಂಪಡೆದಿದೆ. ಪೋಷಕರು ಮತ್ತು ವಂಶಾವಳಿಯ ವಿವರಗಳನ್ನು ಕೇಳುವ ಕಾಲಮ್‌ಗಳನ್ನು ಸದ್ದಿಲ್ಲದೆ ತೆಗೆದುಹಾಕಿದೆ.

- Advertisement -

ನಿಯಮಾವಳಿಗಳ ಪ್ರಕಾರ, 1960ರ ಮತದಾರರ ನೋಂದಣಿ ನಿಯಮಗಳಿಗೆ ತಿದ್ದುಪಡಿ ತರುವ ಶಾಸನಬದ್ಧ ಅಧಿಕಾರ ಇರುವುದು ಕೇವಲ ಕೇಂದ್ರ ಸರ್ಕಾರಕ್ಕೆ ಮಾತ್ರ. ಸಂಸತ್ತಿನ ಪರಾಮರ್ಶೆಯಾಗಲಿ ಅಥವಾ ಕೇಂದ್ರ ಸರ್ಕಾರದ ಅಧಿಕೃತ ಅಧಿಸೂಚನೆಯಾಗಲಿ ಇಲ್ಲದೆಯೇ, ಆಯೋಗವು ತನ್ನ ‘ಇಸಿಐ-ನೆಟ್’ ತಂತ್ರಾಂಶದ ಮೂಲಕ ‘ಫಾರ್ಮ್ 6’ ಅರ್ಜಿಯೊಂದಿಗೆ ಪೋಷಕರ ಅಥವಾ ಅಜ್ಜ-ಅಜ್ಜಿಯರ ಹಳೆಯ ಮತದಾರರ ವಿವರಗಳ ಮ್ಯಾಪಿಂಗ್ ಅನ್ನು ಏಕಪಕ್ಷೀಯವಾಗಿ ಸೇರ್ಪಡೆಗೊಳಿಸಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬರ: ಪರಿಹಾರ ಮತ್ತು ಪರ್ಯಾಯ ಮಾರ್ಗಗಳತ್ತ ಒಂದು ನೋಟ

ಬರ ಸಮಸ್ಯೆಯನ್ನು ನಿಭಾಯಿಸುವಲ್ಲಿ ಮಹಾರಾಷ್ಟ್ರವು ಮಾದರಿ ಕಾರ್ಯಾಚರಣೆ ಕೈಗೊಂಡಿದೆ. ಮತ್ತು ಅದರಲ್ಲಿ ಅದು ಬಹುಪಾಲು ಯಶಸ್ಸನ್ನೂ ಸಾಧಿಸಿದೆ. ಬೃಹತ್ ನೀರಾವರಿ ಯೋಜನೆಗಳಿಗೆ ಕೊಡುವ ಆದ್ಯತೆ ಮತ್ತು ಮಹತ್ವವನ್ನು ಸಣ್ಣ ನೀರಾವರಿ ಯೋಜನೆಗಳಿಗೂ ನೀಡಬೇಕೆನ್ನುವುದೇ...

ಹಮ್ ಔರತೇಂ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

ಈ ನಿಯಮವು, ಹೊಸದಾಗಿ ಮತದಾನದ ಹಕ್ಕು ಪಡೆಯಲು ಬಯಸಿದ್ದ ಯುವಜನರು, ಗ್ರಾಮೀಣ ಭಾಗದ ಜನರು, ವಲಸೆ ಕಾರ್ಮಿಕರು ಹಾಗೂ ಸಮಾಜದ ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳಿಗೆ ಬಹುದೊಡ್ಡ ತಡೆಗೋಡೆಯಾಗಿ ಪರಿಣಮಿಸಿತ್ತು. ಆಯೋಗದ ಈ ಅನಗತ್ಯ ಮತ್ತು ಕಾನೂನುಬಾಹಿರ ತಾಂತ್ರಿಕ ನಿರ್ಬಂಧಗಳ ವಿರುದ್ಧ ಸ್ವತಃ ಚುನಾವಣಾ ಆಯುಕ್ತರಾದ ಡಾ. ಸುಖ್‌ಬೀರ್ ಸಿಂಗ್ ಸಂಧು ಮತ್ತು ಡಾ. ವಿವೇಕ್ ಜೋಶಿ ಅವರೇ ಆಂತರಿಕವಾಗಿ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು. ಇಂತಹ ಏಕಪಕ್ಷೀಯ ಹಾಗೂ ಕೇಂದ್ರೀಕೃತ ನಿರ್ಧಾರಗಳು ಚುನಾವಣಾ ಆಯೋಗದಂತಹ ಸ್ವಾಯತ್ತ ಸಂಸ್ಥೆಯ ವಿಶ್ವಾಸಾರ್ಹತೆಗೇ ಧಕ್ಕೆ ತರುತ್ತವೆ ಎಂದು ತಜ್ಞರೂ ಕಳವಳ ವ್ಯಕ್ತಪಡಿಸಿದ್ದರು. ಕಾನೂನಿನ ಸ್ಪಷ್ಟ ಚೌಕಟ್ಟನ್ನು ಮೀರಿ ತಂತ್ರಾಂಶದ ನೆಪದಲ್ಲಿ ಈ ನಿಯಮವನ್ನು ಜಾರಿಗೆ ತಂದಿರುವುದು ಸಾಂಸ್ಥಿಕ ಅಧಿಕಾರ ಹರಣ ಎಂದೂ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಈ ಲೇಖನ ಓದಿದ್ದೀರಾ?: ಮತ ಕಳ್ಳತನ | ಪ್ರಜಾಪ್ರಭುತ್ವದ ಕೊಲೆಗಡುಕರಿಗೆ ‘ಫಾರ್ಮ್-7’ ಮಾರಕ ಅಸ್ತ್ರ!

ಇದೀಗ, ಈ ನಿಯಮವನ್ನು ಆಯೋಗ ಹಿಂಪಡೆದುಕೊಂಡಿದೆ. ಆದರೆ, ಪೂರ್ಣ ಪ್ರಮಾಣದಲ್ಲಿ ಹಿಂಪಡೆಯಲಾಗಿಲ್ಲ. ಪ್ರಸ್ತುತ ಎಸ್‌ಐಆರ್ ನಡೆಯದೇ ಇರುವ ರಾಜ್ಯಗಳಿಗೆ ಮಾತ್ರ ಈ ಸಡಿಲಿಕೆ ಅನ್ವಯವಾಗಲಿದ್ದು, ಎಸ್‌ಐಆರ್ ಪ್ರಕ್ರಿಯೆ ಚಾಲ್ತಿಯಲ್ಲಿರುವ ರಾಜ್ಯಗಳಲ್ಲಿ ಇಂದಿಗೂ ಈ ಹೆಚ್ಚುವರಿ ಕಾಗದಪತ್ರಗಳ ಕಡ್ಡಾಯ ನಿಯಮ ಜಾರಿಯಲ್ಲೇ ಇದೆ.

ಪರಿಣಾಮವಾಗಿ, ಎಸ್‌ಐಆರ್ ಪ್ರಕ್ರಿಯೆ ನಡೆಯುತ್ತಿರುವ ರಾಜ್ಯಗಳ ಅರ್ಹ ನಾಗರಿಕರು ಇಂದಿಗೂ ಅದೇ ತಾಂತ್ರಿಕ ಕಿರುಕುಳ ಅನುಭವಿಸುತ್ತಿದ್ದಾರೆ. ತಮ್ಮ ಮತದಾನದ ಹಕ್ಕಿನಿಂದ ವಂಚಿತರಾಗುವ ಆತಂಕ ಎದುರಿಸುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬರ: ಪರಿಹಾರ ಮತ್ತು ಪರ್ಯಾಯ ಮಾರ್ಗಗಳತ್ತ ಒಂದು ನೋಟ

ಬರ ಸಮಸ್ಯೆಯನ್ನು ನಿಭಾಯಿಸುವಲ್ಲಿ ಮಹಾರಾಷ್ಟ್ರವು ಮಾದರಿ ಕಾರ್ಯಾಚರಣೆ ಕೈಗೊಂಡಿದೆ. ಮತ್ತು ಅದರಲ್ಲಿ...

ಮಾಯಾವತೀಜಿ, ಯುಪಿ ಚುನಾವಣೆಗೆ ಒಟ್ಟಾಗಿ ಸ್ಪರ್ಧಿಸೋಣ: ಸಂಸದ ಚಂದ್ರಶೇಖರ್ ಆಜಾದ್

ಉತ್ತರ ಪ್ರದೇಶದ 2027ರ ವಿಧಾನಸಭಾ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷದ (BSP)...

ಕರ್ನಾಟಕ ಮತ್ತೊಂದು ಬೆಂಗಾಲ್ ಆಗಲು ಬಿಡುವುದಿಲ್ಲ; SIR ರದ್ದಾಗಲೇಬೇಕು: ಪ್ರಕಾಶ್ ರಾಜ್

ಕರ್ನಾಟಕ ಮತ್ತೊಂದು ಪಶ್ಚಿಮ ಬಂಗಾಳವಾಗಲು ಬಿಡುವುದಿಲ್ಲ. SIR ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು. ಮತದಾರರ...

ಉಡುಪಿ | ಈಜಲು ತೆರಳಿದ ಯುವಕರು ನೀರುಪಾಲು; ಬೈಂದೂರಿನಲ್ಲಿ ಕೊಲೆ ಯತ್ನ ಆರೋಪಿಗಳ ಆತ್ಮಹತ್ಯೆ

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಹೆರ್ಮುಂಡೆಯಲ್ಲಿ ಸ್ನೇಹಿತರೊಂದಿಗೆ ಈಜಲು...