ಗುಡ್‌ಬಾಯ್ ಇಂಡಿಯಾ, ಶೀಘ್ರದಲ್ಲೇ ಚೀನಾದಲ್ಲಿ ಸಿಗೋಣ: ಅರುಣಾಚಲ ಪ್ರದೇಶ ಯುವಕ ಹೀಗೆ ಹೇಳಿದ್ದೇಕೆ?

Date:

ಅರುಣಾಚಲ ಪ್ರದೇಶವನ್ನು ಚೀನಾ ತನ್ನ ‘ಝಂಗ್ನಾನ್’ (ದಕ್ಷಿಣ ಟಿಬೆಟ್) ಎಂದು ಕರೆಯುತ್ತಾ ತನ್ನದೆಂದು ಹಕ್ಕು ಸಾಧಿಸುತ್ತಿದೆ. ಗಡಿಯಲ್ಲಿ ನಿಧಾನವಾಗಿ ನುಸುಳುತ್ತಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮಾತ್ರ ತೆಪ್ಪಗಿದೆ. ಈ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಅರುಣಾಚಲ ಪ್ರದೇಶದ ಯುವಕನೋರ್ವ “ಗುಡ್‌ಬಾಯ್ ಇಂಡಿಯಾ, ಶೀಘ್ರದಲ್ಲೇ ಚೀನಾದಲ್ಲಿ ಸಿಗೋಣ” ಎಂದು ಹೇಳಿದ್ದಾರೆ. ಯುವಕನ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಚೀನಾಕ್ಕೆ ತಕ್ಕ ಉತ್ತರ ನೀಡದ ಕೇಂದ್ರದ ಮೋದಿ ಸರ್ಕಾರದ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಈ ಯುವಕನ ವಿಡಿಯೋವನ್ನು ಹಂಚಿಕೊಂಡಿರುವ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, “ಕ್ಷೇತ್ರ ಪುನರ್ವಿಂಗಡಣೆ ಮಾಡುವುದಲ್ಲ, ಸೀಮೆಗಳ (ದೇಶದ ಗಡಿರೇಖೆ) ಬಗ್ಗೆಯೂ ಚಿಂತೆ ಇರಲಿ. ದೇಶದ ಗಡಿ ಮೊದಲು, ನಂತರ ವಿಧಾನಸಭೆ ಕ್ಷೇತ್ರಗಳು” ಎಂದು ಪೋಸ್ಟ್ ಮಾಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘ಹಾಸ್ಟೆಲ್‌’ ಇಲ್ಲದ ಶಿಕ್ಷಣದ ಸ್ವರೂಪ ಹೇಗಿರಲಿದೆ?

ಸಾಮಾನ್ಯವಾಗಿ ʼಶಿಕ್ಷಣʼ ಎಂದರೆ ʼತರಗತಿ, ಪಠ್ಯಪುಸ್ತಕ ಮತ್ತು ಪರೀಕ್ಷೆಗಳʼ ಸುತ್ತ ಹೆಣೆದುಕೊಂಡಿರುವ ಕಲ್ಪನೆ. ಆದರೆ ಒಬ್ಬ ವಿದ್ಯಾರ್ಥಿ ದಿನದ ಬಹುಪಾಲು ಕಳೆಯುವ ಜಾಗ ʼಹಾಸ್ಟೆಲ್‌ʼ. ಹೆಚ್ಚಾಗಿ ಚರ್ಚೆಗೆ ಬಾರದ ಈ ʼಹಾಸ್ಟೆಲ್‌ʼ ಎಂಬ...

ಬರದ ಬೇಗೆಯಲ್ಲಿ ರಾಜ್ಯ ಬೆಂದರೂ ಅನುದಾನಕ್ಕ ದನಿ ಎತ್ತದ...

ಸದಾ ಕಾಲ 'ಮೋದಿ ಜಪ' ಮಾಡುತ್ತಾ, ಕೇವಲ ರಾಜಕೀಯಕ್ಕಾಗಿ ಮತ್ತು ಪಕ್ಷದ ಅಜೆಂಡಾಗಳಿಗಾಗಿ ರಾಜ್ಯಾದ್ಯಂತ ಸುತ್ತುವ ಈ ಸಂಸದರಿಗೆ, ನಾಡಿನ ಜನತೆ ಬರಗಾಲದ ತೀವ್ರ ಸಂಕಷ್ಟದಲ್ಲಿ ಬೆಂದು ಹೋಗುತ್ತಿರುವಾಗ ಅದೇ ಪ್ರಧಾನಿ ನರೇಂದ್ರ...

SIR ಅಕ್ರಮ | ಗ್ಯಾನೇಶ್‌ ಕುಮಾರ್ ‘ಅಪರಾಧಿ’ಯಾದ್ರೆ, ಮೋದಿ-ಅಮಿತ್...

ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯವೊಂದು ಈಗ ಜಗಜ್ಜಾಹೀರಾಗಿದೆ. ಪ್ರತಿಯೊಬ್ಬ ನಾಗರಿಕನ ಅತಿ ದೊಡ್ಡ ರಾಜಕೀಯ ಶಕ್ತಿಯಾಗಿರುವ 'ಮತದಾನದ ಹಕ್ಕು' ಮತ್ತು ಅದನ್ನು ಕಾಯಬೇಕಾದ ಸಾಂವಿಧಾನಿಕ ಸಂಸ್ಥೆಯನ್ನೇ ಆಡಳಿತಾರೂಢ ಮೋದಿ-ಅಮಿತ್ ಶಾ...

ಇದನ್ನೂ ಓದಿ: ಚೀನಾದ ಹೊಸ ನಕ್ಷೆಯಲ್ಲಿ ಅರುಣಾಚಲ ಪ್ರದೇಶ ಸೇರ್ಪಡೆ: ಭಾರತ ಆಕ್ರೋಶ

ವಿಡಿಯೋದಲ್ಲಿ ಯುವಕ, “ಗುಡ್‌ ಬಾಯ್ ಇಂಡಿಯಾ, ಶೀಘ್ರದಲ್ಲೇ ನೀವು ನನ್ನನ್ನು ಚೀನಾದಲ್ಲಿ ನೋಡುತ್ತೀರಿ. ನನ್ನನ್ನು ಮಾತ್ರವಲ್ಲ ಇಡೀ ಅರುಣಾಚಲ ಪ್ರದೇಶದವರನ್ನು ನೀವು ಚೀನಾದಲ್ಲಿ ನೋಡಬೇಕಾಗುತ್ತದೆ. ನಿಧಾನವಾಗಿ ಚೀನಾ ಅರುಣಾಚಲದೊಳಕ್ಕೆ ನುಗ್ಗುತ್ತಿದೆ. ಇಲ್ಲಿನ ಭೂಮಿಯನ್ನು ಕಬಳಿಸುತ್ತಿದೆ. ಈ ನಿಟ್ಟಿನಲ್ಲಿ ಚೀನಾದ ವಿರುದ್ಧ ಕ್ರಮಕೈಗೊಳ್ಳುವಂತೆ ಇಲ್ಲಿನ ಜನರು ಸರ್ಕಾರಕ್ಕೆ ಪದೇ ಪದೇ ಹೇಳುತ್ತಲೇ ಇದ್ದಾರೆ. ಆದರೆ ಸರ್ಕಾರ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾನೆ.

ಹಾಗೆಯೇ, “ಸರ್ಕಾರ ಬರೀ ಸುಳ್ಳು ಹೇಳುತ್ತಲೇ ಇದೆ. ಹೀಗೆಯೇ ಆದರೆ ತುಂಬ ಸಮಯ ಬೇಕಾಗಿಲ್ಲ, ಕೆಲವೇ ವರ್ಷದಲ್ಲಿ ಚೀನಾ ಅರುಣಾಚಲವನ್ನು ಸಂಪೂರ್ಣವಾಗಿ ತನ್ನ ವಶಕ್ಕೆ ಪಡೆದುಕೊಳ್ಳುತ್ತದೆ. ನೀವೆಲ್ಲರೂ ನಮ್ಮನ್ನು ಅಂದರೆ ಅರುಣಾಚಲ ವಾಸಿಗಳನ್ನು ಚೀನಾದಲ್ಲಿ ನೋಡಬೇಕಾಗುತ್ತದೆ. ಅದಕ್ಕಾಗಿ ನಾನು ಈಗಲೇ ಗುಡ್‌ ಬಾಯ್ ಹೇಳುತ್ತೇನೆ. ಸರ್ಕಾರ ಯಾವುದೇ ಕ್ರಮಕೈಗೊಳ್ಳ. ನಾವೂ ಏನೂ ಮಾಡೋಕೆ ಆಗಲ್ಲ. ಈಗ ಚೀನಾದೊಂದಿಗೆಯೇ ಹೋಗಬೇಕಾಗುತ್ತದೆ. ಭವಿಷ್ಯದಲ್ಲಿ ಚೀನಾದಲ್ಲಿ ಸಿಗೋಣ” ಎಂದಿದ್ದಾನೆ.

ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆ

“ಈ ವಿಚಾರವನ್ನು ನಾವು ಸರಳವಾಗಿ ತೆಗೆದುಕೊಳ್ಳುವಂತಿಲ್ಲ. ಇದು ಗಂಭೀರವಾದ ವಿಚಾರ. ಸ್ಥಳೀಯ ಸಂಸ್ಥೆಗಳು, ಸ್ಥಳೀಯ ಜನರು ಚೀನಾ ಅರುಣಾಚಲ ಪ್ರದೇಶದ ಗಡಿಯನ್ನು ಆಕ್ರಮಿಸುತ್ತಿದೆ ಎಂದು ನಿರಂತರವಾಗಿ ಹೇಳುತ್ತಲೇ ಇದ್ದಾರೆ. ಆದರೆ ಭಾರತೀಯ ಸೇನೆ, ರಾಜ್ಯ ಸರ್ಕಾರ ಚೀನಾ ಆಕ್ರಮಣ ಮಾಡುತ್ತಿಲ್ಲ ಎಂದು ಹೇಳಿಕೊಳ್ಳುತ್ತಿದೆ. ಇಲ್ಲಿ ನಡೆಯುತ್ತಿರುವುದಾದರೂ ಏನು” ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

“ಈಗ ಸರ್ಕಾರವನ್ನು ಆಳುತ್ತಿರುವುವವರು ಎಲ್ಲವನ್ನು ಮುಚ್ಚಿಹಾಕುತ್ತಿರಬಹುದು. ಆದರೆ ಸತ್ಯ ಒಂದಲ್ಲ ಒಂದು ದಿನ ಹೊರ ಬಂದೇ ಬರುತ್ತದೆ. ನೀವು ಹಣದಿಂದ ಎಲ್ಲವನ್ನೂ ಖರೀದಿಸಬಹುದು, ಆದರೆ ಸತ್ಯವನ್ನಲ್ಲ” ಎಂದೂ ಕೆಲವು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಅಷ್ಟಕ್ಕೂ ಪ್ರಧಾನಿ ನರೇಂದ್ರ ಮೋದಿ ಚೀನಾಕ್ಕೆ ಉತ್ತರಿಸಲು ಭಯಪಡುವುದೇಕೆ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾವೇರಿ ವಿವಾದ: 20 ಟಿಎಂಸಿ ಕೊರತೆ ಎಂದ ತಮಿಳುನಾಡು, ತೀವ್ರ ಬರಗಾಲದ ಸಂಕಷ್ಟ ಬಿಚ್ಚಿಟ್ಟ ಕರ್ನಾಟಕ

ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಗುರುವಾರ...

ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ ಹರಾಜು ರದ್ದು, ಲೀಸ್‌ಗೆ ನೀಡಲು ಸಿಎಂ ಭರವಸೆ : ಶ್ರೀಮಂತ ಬಿರಾದರ್

ಬೀದರ್ ಜಿಲ್ಲೆಯ ರೈತರು‌, ಕಾರ್ಮಿಕರ ಜೀವನಾಡಿಯಾಗಿರುವ ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ...

‘ದೇವರೇ ಈ ದೇಶವನ್ನು ಕಾಪಾಡಬೇಕು’: ರೈಲು ಪ್ರಯಾಣದ ಗದ್ದಲಕ್ಕೆ ಬೇಸತ್ತ ತೇಜಸ್ವಿ ಸೂರ್ಯ ಪತ್ನಿ

ರೈಲು ಪ್ರಯಾಣದ ವೇಳೆ ಸಹಪ್ರಯಾಣಿಕರ ಗದ್ದಲದಿಂದ ತೀವ್ರ ಕಿರಿಕಿರಿ ಅನುಭವಿಸಿರುವುದಾಗಿ ಬಿಜೆಪಿ...