ಸಿಂಧನೂರು | ತಿಡಿಗೋಳದಲ್ಲಿ ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್‌ ಪ್ರತಿಭಟನೆ

Date:

ತಾಲ್ಲೂಕಿನ ತಿಡಿಗೋಳ ಗ್ರಾಮದಲ್ಲಿ ಇತ್ತೀಚೆಗೆ ಜರುಗಿದ ಆಂಜನೇಯ ಜಾತ್ರೋತ್ಸವದಲ್ಲಿ ದಲಿತರ ಮೇಲೆ ಸವರ್ಣೀಯರಿಂದ ನಡೆದ ದೌರ್ಜನ್ಯ, ಸಾಮೂಹಿಕ ಬಹಿಷ್ಕಾರ ಮತ್ತು ಅಸ್ಪೃಶ್ಯತೆ ಆಚರಣೆ ವಿರೋಧಿಸಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಭಾನುವಾರ ಸಿಂಧನೂರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

- Advertisement -

ನಗರದ ಪಿಡಬ್ಲ್ಯೂಡಿ ಕ್ಯಾಂಪ್ ಬಳಿ ಇರುವ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿಯ ಬಳಿ ನೂರಾರು ಪ್ರತಿಭಟನಾಕಾರರು ಜಮಾಯಿಸಿದರು. ತಿಡಿಗೋಳ ಚಲೋ ಕಾರ್ಯಕ್ರಮಕ್ಕೆ ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಚಾಲನೆ ನೀಡಿದರು. ಅಂಬೇಡ್ಕರ್ ವೃತ್ತದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ಹಾಗೂ ಬೈಕ್ ರ್ಯಾಲಿಯು ಬನ್ನೂರ ರಸ್ತೆಯ ಹಳ್ಳ ದಾಟುತ್ತಿದ್ದಂತೆ ಪೊಲೀಸ್ ಅಧಿಕಾರಿಗಳು ಅಡ್ಡ ನಿಂತು ತಿಡಿಗೋಳ ಗ್ರಾಮಕ್ಕೆ ಹೋಗದಂತೆ ತಡೆದರು. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಅವರು ‘ಕಳೆದ ರಾತ್ರಿಯಿಂದಲೇ ನಿಷೇಧಾಜ್ಞೆ ಜಾರಿಯಾಗಿದೆ. ತಮ್ಮ ಬೇಡಿಕೆಗಳನ್ನು ಪ್ರಾಮಾಣಿಕವಾಗಿ ಈಡೇರಿಸುತ್ತೇವೆ’ ಎಂದು ಭರವಸೆ ನೀಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನೋಟು ನಿಷೇಧಕ್ಕೆ 10 ವರ್ಷ: ಮೋದಿ ಸರ್ಕಾರದ ಒಂದು...

ಒಂದು ದಶಕದ ಆರ್ಥಿಕ ಪರಿಣಾಮಗಳು, ಅಧಿಕೃತ ಅಂಕಿಅಂಶಗಳು ಮತ್ತು ತಜ್ಞರ ಸಂಶೋಧನೆಗಳ ಆಧಾರಿತ ಅಧ್ಯಯನ ಬರಹ. 2016ರ ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು ₹500 ಮತ್ತು ₹1,000 ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸುವ...

150 ವರ್ಷ ಹಳೆಯ ಶಿವಮೊಗ್ಗ ತುಂಗಾ ಸೇತುವೆ ಮರುನಿರ್ಮಾಣಕ್ಕೆ...

ಮಲೆನಾಡಿನ ಹೆಬ್ಬಾಗಿಲು ಎಂದೇ ಗುರುತಿಸಿಕೊಂಡಿರುವ ಶಿವಮೊಗ್ಗ ನಗರದ ಹೃದಯಭಾಗದಲ್ಲಿರುವ ಬಿ.ಎಚ್. ರಸ್ತೆಯ ತುಂಗಾ ಸೇತುವೆಗೆ ಕೊನೆಗೂ ಹೊಸ ರೂಪ ನೀಡುವ ಕಾಲ ಸನ್ನಿಹಿತವಾಗಿದೆ. ಶತಮಾನಕ್ಕೂ ಹೆಚ್ಚು ಕಾಲದ ಇತಿಹಾಸ ಹೊಂದಿರುವ ಹಳೆಯ ತುಂಗಾ...

ಟ್ರಂಪ್‌ ತಿರಸ್ಕರಿಸಿದ ಯುವಜನರು; 2029ರಲ್ಲಿ ಭಾರತದ ಯುವ ಮತದಾರರ...

ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ 18–29 ವರ್ಷದ ಯುವ ಮತದಾರರು ರಿಪಬ್ಲಿಕನ್ ಪಕ್ಷದಿಂದ ದೊಡ್ಡ ಪ್ರಮಾಣದಲ್ಲಿ ದೂರ ಸರಿದಿದ್ದಾರೆ. ಉದ್ಯೋಗದ ಅನಿಶ್ಚಿತತೆ, ದುಬಾರಿ ಜೀವನ, ಭವಿಷ್ಯದ ಆತಂಕ ಹಾಗೂ ಸರ್ಕಾರದ ನೀತಿಗಳ ಕುರಿತ ಅಸಮಾಧಾನ...
WhatsApp Image 2026 11 09 at 8.49.59 AM

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಲಿಂಗಾಯತರು ಅಸ್ಪೃಶ್ಯತಾ ಆಚರಣೆಗೆ ವಿರೋಧಿಗಳಾಗಿರಬೇಕು. ಆದರೆ ಅವರೇ ಅಸ್ಪೃಶ್ಯತೆ ಆಚರಣೆ ಮಾಡಿದರೆ ವಿಶ್ವಗುರು ಬಸವಣ್ಣನಿಗೆ ದ್ರೋಹ ಬಗೆದಂತಾಗುತ್ತದೆ. ತಿಡಿಗೋಳ ಗ್ರಾಮದಲ್ಲಿ ತಿಳಿಕೊಳ ಇರಬೇಕು ಎಂದರು.

ದಲಿತ ಸಂಘರ್ಷ ಸಮಿತಿ (ಎನ್. ಮೂರ್ತಿ ಬಣ) ರಾಜ್ಯ ಘಟಕದ ಅಧ್ಯಕ್ಷ ಎನ್.ಮೂರ್ತಿ ಮಾತನಾಡಿ, ‘ರಾಜ್ಯ ಸರ್ಕಾರದಲ್ಲಿ ದಲಿತರೇ ಗೃಹ ಮಂತ್ರಿ, ಸಮಾಜ ಕಲ್ಯಾಣ ಮಂತ್ರಿ ಇದ್ದಾಗ್ಯೂ ದಲಿತರ ಕೊಲೆ, ಅತ್ಯಾಚಾರ, ದೌರ್ಜನ್ಯ ನಡೆಯುತ್ತಿರುವುದು ದುರದೃಷ್ಟಕರ. ತಿಡಿಗೋಳ ಗ್ರಾಮದ ದಲಿತರ ಮೇಲೆ ದೌರ್ಜನ್ಯ ಎಸಗಿದ ಆರೋಪಿಗಳನ್ನು ಬಂಧಿಸಬೇಕು ಮತ್ತು ದಲಿತರ ಮೇಲೆ ಹಾಕಿರುವ ಸುಳ್ಳು ಪ್ರಕರಣಗಳನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿ, ಗೃಹ ಸಚಿವ ಮತ್ತು ಸಮಾಜ ಕಲ್ಯಾಣ ಸಚಿವರ ಮನೆಯ ಮುಂದೆ ಪ್ರತಿಭಟನೆ ಮಾಡುವುದು ಅನಿವಾರ್ಯವಾಗುತ್ತದೆ’ ಎಚ್ಚರಿಸಿದರು. ಎಂದು

ಸಿಪಿಐಎಂಎಲ್ ಲಿಬರೇಶನ್ ರಾಜ್ಯ ಘಟಕದ ಕಾರ್ಯದರ್ಶಿ, ಬೆಂಗಳೂರಿನ ಕ್ಲಿಪ್ಪನ್ ವಕೀಲ ಮಾತನಾಡಿ, ‘ಜಾತಿಯ ಅನಿಷ್ಠತೆ ಆಚರಣೆ ಮಾಡುವವರು ಮಾನಸಿಕ ರೋಗ ಪೀಡಿತರಾಗಿರುತ್ತಾರೆ. ಪ್ಲಾಸ್ಟಿಕ್ ಗ್ಲಾಸ್‌ನಲ್ಲಿ ಚಹಾ ವಿತರಣೆ ಮಾಡುವುದು ಅಸ್ಪಶ್ಯತೆ ಆಚರಣೆಗೆ ಅನುಕೂಲವಾಗಿದೆ. ಕ್ಷೌರ ಮಾಡದಿರುವುದು, ದೇವಸ್ಥಾನಕ್ಕೆ ನಿಷೇಧದಂತಹ ಆಚರಣೆಗಳು ಎಂದೋ ರದ್ದಾಗಬೇಕಾಗಿತ್ತು’ ಎಂದು ಹೇಳಿದರು.

ಆದಾಗ್ಯೂ ದಲಿತ ಮುಖಂಡ ಎಸ್.ಮಾರೆಪ್ಪ ವಕೀಲ, ಸಿಪಿಐಎಂಎಲ್ ಮಾಸ್‌ಲೈನ್ ರಾಜ್ಯ ಘಟಕದ ಕಾರ್ಯದರ್ಶಿ ಡಿ.ಎಚ್.ಪೂಜಾರ್ ಅವರು ದಲಿತರ ಮೇಲೆ ಹಾಕಿದ ಎಲ್ಲ ಪ್ರಕರಣಗಳನ್ನು ಸ್ಥಳದಲ್ಲಿಯೇ ಹಿಂಪಡೆಯಬೇಕು. ಇಲ್ಲದಿದ್ದರೆ ತಿಡಿಗೋಳ ಗ್ರಾಮಕ್ಕೆ ತೆರಳಲು ಬಿಡಬೇಕು ಎಂದು ಆಗ್ರಹಿಸಿದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ಸಿಡಿಲು ಬಡಿದು ಮೃತಪಟ್ಟ ರೈತನ ಕುಟುಂಬಕ್ಕೆ ₹5 ಲಕ್ಷ ಪರಿಹಾರ ವಿತರಣೆ

ಚಿತ್ರದುರ್ಗ ಶಿವಶರಣ ಹರಳಯ್ಯ ಗುರುಪೀಠದ ಬಸವ ಹರಳಯ್ಯ ಸ್ವಾಮೀಜಿ, ಕೆಆರ್‌ಎಸ್ ರಾಜ್ಯ ಘಟಕದ ಅಧ್ಯಕ್ಷ ಡಿ.ಎಚ್.ಪೂಜಾರ್, ದಲಿತ ಹೋರಾಟಗಾರರಾದ ಶೇಖರಪ್ಪ ಧುಮತಿ ವಕೀಲ, ಎಸ್.ಮಾರೆಪ್ಪ ವಕೀಲ ರಾಯಚೂರು, ಎಂ.ಆರ್. ಬೇರಿ, ಅಂಬಣ್ಣ ಆರೋಲಿಕರ್, ರವೀಂದ್ರ ಪಟ್ಟಿ, ಹನುಮಂತಪ್ಪ ಮಾನ್ವಿ, ದಾನಪ್ಪ ನಿಲೋಗಲ್, ದೊಡ್ಡಪ್ಪ ಮುರಾರಿ ಇನ್ನಿತರರು ಇದ್ದರು.

WhatsApp Image 2026 11 09 at 8.49.58 AM 1
WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧಾರವಾಡ | ದುಸ್ಥಿತಿಯಲ್ಲಿ ಆರ್.ಎನ್ ಶೆಟ್ಟಿ ಕ್ರೀಡಾಂಗಣದ ವ್ಯಾಯಾಮ ಉಪಕರಣಗಳು

ಧಾರವಾಡ ನಗರದ ಆರ್.ಎನ್. ಶೆಟ್ಟಿ ಕ್ರೀಡಾಂಗಣಕ್ಕೆ ಪ್ರತಿದಿನ ಬೆಳಗಿನ ಜಾವ ಸಾವಿರಾರು...

ದಾವಣಗೆರೆ | ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ಬಾಲಕರ ವಸತಿ ನಿಲಯ ಉದ್ಘಾಟನೆ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಕೊಂಡಜ್ಜಿ ಗ್ರಾಮದ ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ...

ಚಿಕ್ಕಮಗಳೂರು | ಮಹಿಳೆ ಮಗನೊಂದಿಗೆ ನಾಪತ್ತೆ

ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕಾರ್ಮಕ್ಕಿ ಗ್ರಾಮ ಮಹಿಳೆ ಹಾಗೂ ಮೂರು ವರ್ಷದ...

ದಾವಣಗೆರೆ | ವಿದ್ಯಾರ್ಥಿಗಳ, ಸಾರ್ವಜನಿಕರ ಅನುಕೂಲಕ್ಕೆ ನೂತನ ಕೆಎಸ್ಆರ್‌ಟಿಸಿ ಬಸ್ ಸಂಚಾರಕ್ಕೆ ಚಾಲನೆ

ಶಾಲಾ–ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ, ದಾವಣಗೆರೆ ನಗರ...