ಭಾರೀ ಮಳೆ | ಗುಜರಾತಿನಲ್ಲಿ ಪ್ರವಾಹ, ಕಾನ್ಪುರದಲ್ಲಿ 56 ವರ್ಷಗಳ ದಾಖಲೆ ಮುರಿದ ವರ್ಷಧಾರೆ

Date:

ಮಧ್ಯ ಭಾರತದಲ್ಲಿ ಮುಂಗಾರು ಮಳೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪಶ್ಚಿಮ ಮತ್ತು ಉತ್ತರ ಭಾರತದಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಗುಜರಾತ್‌ನ 172 ತಾಲೂಕುಗಳಲ್ಲಿ ಕಳೆದ 24 ಗಂಟೆಗಳಲ್ಲಿ ಭಾರಿ ಮಳೆ ಸುರಿದಿದ್ದು, ಜುನಾಗಢದ ಮಂಗ್ರೋಲ್‌ನಲ್ಲಿ ಗರಿಷ್ಠ 13 ಇಂಚು ದಾಖಲಾಗಿದೆ. ಮೆಹ್ಸಾನಾದ ಕಾದಿ ಪಟ್ಟಣದಲ್ಲಿ ಕೇವಲ ಎರಡು ಗಂಟೆಗಳಲ್ಲಿ 8-9 ಇಂಚು ಮಳೆ ಸುರಿದ ಪರಿಣಾಮ 25ಕ್ಕೂ ಹೆಚ್ಚು ವಸತಿ ಬಡಾವಣೆಗಳು ಜಲಾವೃತವಾಗಿವೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ಜುಲೈ 3ರಂದು ಸುರಿದ 99.8 ಮಿ.ಮೀ. ಮಳೆಯು ಕಳೆದ 56 ವರ್ಷಗಳ ದಾಖಲೆ ಮುರಿದಿದೆ.

- Advertisement -

ದಕ್ಷಿಣ ಗುಜರಾತ್‌ನ ನವಸಾರಿಯ ಚಿಖ್ಲಿಯಲ್ಲಿ 8 ಇಂಚು, ವಲ್ಸಾದ್‌ನಲ್ಲಿ 6.10 ಇಂಚು ಮಳೆಯಾಗಿದ್ದು, ಪ್ರವಾಹದಂತಹ ಪರಿಸ್ಥಿತಿ ಉಂಟಾಗಿದೆ. ಗಾಂಧೇವಿ-ನವಸಾರಿ ರಾಜ್ಯ ಹೆದ್ದಾರಿ ಮತ್ತು ವನ್ಸಾದ-ಡಾಂಗ್ ರಸ್ತೆಗಳಲ್ಲಿ ಮರಗಳು ಬಿದ್ದ ಪರಿಣಾಮ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಸೂರತ್ ಜಿಲ್ಲೆಯಲ್ಲೂ ಭಾರೀ ಮಳೆಯಾಗಿದ್ದು, ಜಿಲ್ಲಾಧಿಕಾರಿ ತೇಜಸ್ ಪರ್ಮಾರ್ ಅವರು ಯಾವುದೇ ಅಣೆಕಟ್ಟು ಅಪಾಯದ ಮಟ್ಟದಲ್ಲಿಲ್ಲ ಎಂದು ಸ್ಪಷ್ಟಪಡಿಸಿ, ವದಂತಿಗಳನ್ನು ನಂಬದಂತೆ ಮತ್ತು ತುರ್ತು ಸಹಾಯಕ್ಕಾಗಿ 1077 ಸಹಾಯವಾಣಿಯನ್ನು ಸಂಪರ್ಕಿಸಲು ಜನರಿಗೆ ಮನವಿ ಮಾಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...
image 90 1

ಜಮ್‌ಜೋಧ್‌ಪುರದ ಖರಾವಾದ್ ಪ್ರದೇಶದಲ್ಲಿ ಭಾರೀ ಮಳೆಯ ಸಂದರ್ಭದಲ್ಲಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಇಬ್ಬರು ಮಕ್ಕಳನ್ನು ಸ್ಥಳೀಯರು ಸಮಯಪ್ರಜ್ಞೆಯಿಂದ ರಕ್ಷಿಸಿದ್ದಾರೆ. ವಲ್ಸಾದ್‌ನ ಕರಾವಳಿ ತಗ್ಗು ಪ್ರದೇಶಗಳಿಂದ ಸುಮಾರು 500 ನಿವಾಸಿಗಳನ್ನು ಎನ್‌ಡಿಆರ್‌ಎಫ್ ತಂಡಗಳು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿವೆ. ಆರೋಗ್ಯ ಸಚಿವ ಪ್ರಫುಲ್ ಪನ್ಶೇರಿಯಾ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಿದ್ದಾರೆ. ಸೂರತ್‌ನ ಓಲ್ಪಾದ್‌ನಲ್ಲಿ 15.31 ಇಂಚು ಹಾಗೂ ಪಾಲ್ಸಾನಾದಲ್ಲಿ 14.25 ಇಂಚು ಮಳೆಯಾಗಿದ್ದು, ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರವು 24 ಗಂಟೆಗಳ ಕಾಲ ಹೈ ಅಲರ್ಟ್‌ನಲ್ಲಿದೆ.

ಇದನ್ನೂ ಓದಿ: ಬಿಸಿ ಬಿಸಿ ಚಹಾ ಕುಡಿದು ವಿದ್ಯಾರ್ಥಿ ಸಾವು; ನೈತಿಕ ಹೊಣೆಹೊತ್ತು ಪ್ರಾಂಶುಪಾಲ ರಾಜೀನಾಮೆ!

ಇತ್ತ ಉತ್ತರ ಪ್ರದೇಶದ ಕಾನ್ಪುರದ ಡ್ರೈನೇಜ್ ವ್ಯವಸ್ಥೆಯ ವೈಫಲ್ಯದಿಂದಾಗಿ ಮಲ್ಲಿ ರೋಡ್, ಬಾರಾ ಚೌರಾಹ ಮತ್ತು ಸಕೇತ್ ನಗರ ಸೇರಿದಂತೆ ಪ್ರಮುಖ ಭಾಗಗಳು ಜಲಾವೃತವಾಗಿವೆ. ಲಾಲಾ ಲಜಪತ್ ರಾಯ್ ಮತ್ತು ಉರ್ಸುಲಾ ಹೋರ್ಸ್‌ಮನ್ ಮೆಮೋರಿಯಲ್ ಆಸ್ಪತ್ರೆಗಳ ಆವರಣಕ್ಕೆ ನೀರು ನುಗ್ಗಿ ರೋಗಿಗಳು ಪರದಾಡುವಂತಾಗಿದೆ. ಕಾಕದೇವೊ ಪ್ರದೇಶದಲ್ಲಿ ಕಟ್ಟಡವೊಂದು ಭಾಗಶಃ ಕುಸಿದಿದೆ. ಆದರೂ 50 ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ನಗರದಾದ್ಯಂತ ಹಲವು ಕಡೆ ಗೋಡೆ ಕುಸಿತದ ಘಟನೆಗಳೂ ವರದಿಯಾಗಿವೆ.

ಈ ಅವಾಂತರಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಶಾಸಕ ಸುರೇಂದ್ರ ಮೈಥಾನಿ ಅವರು, ಕಳಪೆ ಡ್ರೈನೇಜ್ ನಿರ್ವಹಣೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮೆಟ್ರೋ ಕಾಮಗಾರಿಯಿಂದ ಚರಂಡಿಗಳು ಬ್ಲಾಕ್ ಆಗಿವೆ ಎಂದು ಆರೋಪಿಸಿ, ಏಳು ದಿನಗಳ ಒಳಗೆ ಸಮಸ್ಯೆ ಬಗೆಹರಿಸದಿದ್ದರೆ ಮೆಟ್ರೋ ಸ್ಟ್ರಕ್ಚರ್ ಅನ್ನು ಬುಡಮೇಲು ಮಾಡುವುದಾಗಿ ಎಚ್ಚರಿಸಿದ್ದಾರೆ. ಗಡಾರಿಯನ್ ಪುರ್ವಾದಲ್ಲಿ ಪೈಪ್‌ಲೈನ್ ಇಲ್ಲದಿರುವುದು ಅಧಿಕಾರಿಗಳ ನೇರ ನಿರ್ಲಕ್ಷ್ಯ ಎಂದು ದೂರಿ, ಕೂಡಲೇ ಕಾಮಗಾರಿ ಆರಂಭಿಸಲು ಆದೇಶಿಸಿದ್ದಾರೆ.

ಗುಜರಾತ್‌ನಲ್ಲಿ ಪ್ರವಾಹ ಮತ್ತು ಉತ್ತರ ಭಾರತದಲ್ಲಿ ಮೂಲಸೌಕರ್ಯದ ವೈಫಲ್ಯದಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಆಡಳಿತ ಯಂತ್ರವು ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಹರಸಾಹಸ ಪಡುತ್ತಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹುಲಸೂರ | ಗಡಿಭಾಗದ ಸರ್ಕಾರಿ ಶಾಲೆಗಳಿಗೆ ಕನ್ನಡ ಶಿಕ್ಷಕರ ನೇಮಕಕ್ಕೆ ಕಸಾಪ ಮನವಿ

ಮಹಾರಾಷ್ಟ್ರದ ಗಡಿಯೊಂದಿಗೆ ಹೊಂದಿಕೊಂಡಿರುವ ಬೀದರ್ ಜಿಲ್ಲೆಯ ಹುಲಸೂರ ತಾಲೂಕಿನ ಉರ್ದು ಹಾಗೂ...

ಬೀದರ್‌ | ಅ.24ರಿಂದ ಕಲ್ಯಾಣ ಪರ್ವ: ಭಿತ್ತಿ ಪತ್ರ ಬಿಡುಗಡೆ

ಬಸವಕಲ್ಯಾಣದ ಮಹಾ ಮಠದ ಮಹಾಮನೆ ಆವರಣದಲ್ಲಿ ಬಸವ ಧರ್ಮ ಪೀಠದ ವತಿಯಿಂದ...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್ ದೀಪ್ಕೆ ಕುರಿತು ನಡೆದಿದೆ ಚರ್ಚೆ!

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ...

ಅಸ್ಸಾಂ ಉಪಚುನಾವಣೆ ಅಖಾಡ: ಸಿಎಂ ಶರ್ಮಾ ಮತ್ತು ಕಾಂಗ್ರೆಸ್ ಸಂಸದರ ನಡುವೆ ‘ಬಿರಿಯಾನಿ vs ರಸ್ಕ್’ ವಾಕ್ಸಮರ!

ಅಸ್ಸಾಂನ ನಗಾಂವ್ ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯ ಪ್ರಚಾರ ಕಣದಲ್ಲಿ ರಾಜಕೀಯ...