ಇತಿಹಾಸವು ಮನಮೋಹನ್ ಸಿಂಗ್‌ರನ್ನು ಖಂಡಿತವಾಗಿಯೂ ಗೌರವದಿಂದ ನೆನಪಿಸಿಕೊಳ್ಳಲಿದೆ: ಸೋನಿಯಾ ಗಾಂಧಿ

Date:

“ಡಾ. ಮನಮೋಹನ್ ಸಿಂಗ್ ಅವರ ಪ್ರಾಮಾಣಿಕತೆಯ ಮೇಲಿನ ಆರೋಪಗಳು ಹುಸಿಯಾಗಿವೆ. ಪ್ರಧಾನಿಯಾಗಿ ಅವರ ಆಡಳಿತಾವಧಿಯು ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಪ್ರಗತಿಯ ನಿರ್ಣಾಯಕ ಘಟ್ಟ ಎಂಬುದನ್ನು ಇತಿಹಾಸವು ಇದೀಗ ಹೆಚ್ಚು ಸ್ಪಷ್ಟವಾಗಿ ಗುರುತಿಸುತ್ತಿದೆ” ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯಲ್ಲಿ ಪ್ರಕಟವಾದ ತಮ್ಮ ಲೇಖನದಲ್ಲಿ ತಿಳಿಸಿದ್ದಾರೆ.

- Advertisement -

​ನಮ್ಮ ಇತ್ತೀಚಿನ ರಾಜಕೀಯ ಇತಿಹಾಸದಲ್ಲಿ 2026ರ ಜುಲೈ 29 ಒಂದು ಪ್ರಮುಖವಾದ, ಆದರೆ ಹೆಚ್ಚು ಚರ್ಚೆಯಾಗದ ದಿನವಾಗಿದೆ. ‘ಕಲ್ಲಿದ್ದಲು ಹಗರಣ’ದ ಆರೋಪದಲ್ಲಿ ಡಾ. ಮನಮೋಹನ್ ಸಿಂಗ್ ಅವರಿಗೆ ಸಿಬಿಐ ನೀಡಿದ್ದ ‘ಕ್ಲೀನ್ ಚಿಟ್’ ಅನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಇದಕ್ಕಿಂತಲೂ ಮುಖ್ಯವಾಗಿ, ಯಾವುದೇ ಬಲವಾದ ಕಾರಣಗಳಿಲ್ಲದೆ ಸಿಬಿಐನ ಮುಕ್ತಾಯ ವರದಿಗಳನ್ನು (Closure reports) ತಿರಸ್ಕರಿಸಿ, ಮಾಜಿ ಪ್ರಧಾನಿಯವರ ವಿರುದ್ಧ ವ್ಯತಿರಿಕ್ತ ಷರಾ ಬರೆದಿದ್ದ ವಿಚಾರಣಾ ನ್ಯಾಯಾಲಯವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ ಎಂದು ಅವರು ಲೇಖನದಲ್ಲಿ ವಿವರಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಚುನಾವಣಾ ಆಯುಕ್ತರ ನೇಮಕ, ವಜಾ ಹೇಗೆ? ಈ ಹಿಂದೆ...

ಚುನಾವಣೆಯನ್ನು ನ್ಯಾಯಸಮ್ಮತವಾಗಿ ನಡೆಸಬೇಕಾದ ಚುನಾವಣಾ ಆಯೋಗ, ಚುನಾವಣಾ ಆಯುಕ್ತರು ಸರ್ಕಾರದ ಪ್ರಭಾವದಿಂದ ಮುಕ್ತವಾಗಿರಬೇಕು. ಆದರೆ ಚುನಾವಣೆ ಸ್ಪರ್ಧಿಸುವ ಆಡಳಿತ ಪಕ್ಷವೇ ತನಗೆ ಇಷ್ಟವಾದ ವ್ಯಕ್ತಿಯನ್ನು ಚುನಾವಣಾ ಅಧಿಕಾರಿಯಾಗಿ ನೇಮಕ ಮಾಡಿಕೊಂಡರೆ, ವಿರೋಧ ಪಕ್ಷಗಳಿಗೆ...

ರಾಹುಲ್‌ ಗಾಂಧಿ ಲಿಸ್ಟ್‌ನಲ್ಲಿರುವ ʼಸಂವಿಧಾನದ ವಿಧ್ವಂಸಕರುʼ ಇವರೇನಾ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರದಲ್ಲಿ ಚುನಾವಣಾ ಆಯೋಗದ ವಿರುದ್ಧ ಎದ್ದಿರುವ ಅನುಮಾನಗಳಿಂದ ರಾಜಕೀಯ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಈ ಬೆನ್ನಲ್ಲೇ, ಕಾಂಗ್ರೆಸ್‌ ನಾಯಕ ಹಾಗೂ ಲೋಕಸಭೆ ವಿರೋಧ ಪಕ್ಷದ...

ತೆಲಂಗಾಣ ಬೆಳೆ ರಕ್ಷಣೆಗೆ 3 ಟಿಎಂಸಿ ನೀರು: ಅಚ್ಚುಕಟ್ಟು...

ಕೃಷ್ಣಾ ನದಿಯ ನೀರು ಮತ್ತೊಮ್ಮೆ ಕರ್ನಾಟಕ–ತೆಲಂಗಾಣದ ನಡುವಿನ ಪ್ರಮುಖ ವಿಚಾರವಾಗಿ ಮುನ್ನೆಲೆಗೆ ಬಂದಿದೆ. ತೆಲಂಗಾಣದ ಕೃಷಿ ಪ್ರದೇಶದಲ್ಲಿನ ನಿಂತಿರುವ ಬೆಳೆಗಳನ್ನು ರಕ್ಷಿಸಲು ಕರ್ನಾಟಕದಿಂದ ಕೃಷ್ಣಾ ನೀರು ಬಿಡುಗಡೆ ಮಾಡುವಂತೆ ಆ ರಾಜ್ಯದ ಸಚಿವರು...

​ಈ ತೀರ್ಪು ನಮ್ಮ ಸಾರ್ವಜನಿಕ ಚರ್ಚೆಯ ಅತ್ಯಂತ ದುರಂತ ಅಧ್ಯಾಯವೊಂದಕ್ಕೆ ತೆರೆ ಎಳೆದಿದೆ. ಅತ್ಯಂತ ಪ್ರಾಮಾಣಿಕ ಮತ್ತು ನಿಷ್ಠಾವಂತ ನಾಯಕರಾಗಿದ್ದ ಡಾ. ಸಿಂಗ್ ಅವರ ವಿರುದ್ಧ ನಡೆದ ವ್ಯವಸ್ಥಿತ ಪಿತೂರಿ ಮತ್ತು ಬೇಟೆಯಾಡುವ ಯತ್ನ ಇದೀಗ ಅಂತ್ಯಗೊಂಡಿದೆ. ಅಧಿಕಾರಿ ವರ್ಗದಿಂದ ಹಿಡಿದು ಮಾಧ್ಯಮಗಳು, ನಾಗರಿಕ ಸಮಾಜ ಮತ್ತು ಖಂಡಿತವಾಗಿಯೂ ಆರೆಸ್ಸೆಸ್ (RSS) ಹಾಗೂ ಬಿಜೆಪಿ ನಾಯಕರು ಈ ವ್ಯವಸ್ಥಿತ ಲಾಬಿಯಲ್ಲಿದ್ದರು. ಇಂದು ಅವರ ಈ ನಕಲಿ ಹೋರಾಟ ಶೂನ್ಯಕ್ಕೆ ಬಂದು ನಿಂತಿದೆ. ಡಾ. ಸಿಂಗ್ ಅವರು ಪ್ರತಿಯೊಂದು ಹಂತದಲ್ಲೂ ದೋಷಮುಕ್ತರಾಗಿ ಹೊರಹೊಮ್ಮಿದ್ದಾರೆ.

ಡಾ. ಸಿಂಗ್ ಅವರ ಪ್ರಾಮಾಣಿಕತೆ ಮತ್ತು ಉತ್ತರದಾಯಿತ್ವವು ನರೇಂದ್ರ ಮೋದಿ ಸರ್ಕಾರದ ಕಾರ್ಯವೈಖರಿಗೆ ಸಂಪೂರ್ಣ ತದ್ವಿರುದ್ಧವಾಗಿದೆ. ಇಂದಿನ ಸರ್ಕಾರ ಇಡಿ (ED) ಮತ್ತು ಸಿಬಿಐ (CBI) ನಂತಹ ತನಿಖಾ ಸಂಸ್ಥೆಗಳನ್ನು ರಾಜಕೀಯ ನಾಯಕರನ್ನು ಹತ್ತಿಕ್ಕಲು ಮತ್ತು ಬೆದರಿಸಲು ದುರ್ಬಳಕೆ ಮಾಡಿಕೊಳ್ಳುತ್ತಿದೆ. ನಾಯಕರನ್ನು ಬಲವಂತವಾಗಿ ಮೌನಗೊಳಿಸಲಾಗುತ್ತಿದೆ ಅಥವಾ ಬಿಜೆಪಿಗೆ ಸೇರ್ಪಡೆಗೊಳಿಸಿಕೊಳ್ಳಲಾಗುತ್ತಿದೆ; ಇನ್ನು ಕೆಲವು ಪ್ರಕರಣಗಳಲ್ಲಂತೂ ಹಾಗೆ ಪಕ್ಷಾಂತರ ಮಾಡಿದವರಿಗೆ ಸಚಿವ ಸ್ಥಾನದ ಬಹುಮಾನವೂ ಸಿಕ್ಕಿದೆ. ವಿರೋಧ ಪಕ್ಷದಲ್ಲಿದ್ದಾಗ ಭ್ರಷ್ಟರಾಗಿದ್ದವರು, ಪಕ್ಷ ಬದಲಿಸಿದ ತಕ್ಷಣ ದಿಢೀರನೆ ಪವಿತ್ರರಾಗುತ್ತಾರೆ.

​ಡಾ. ಸಿಂಗ್ ವಿರುದ್ಧದ ವಾಗ್ದಾಳಿಯಲ್ಲಿ ಸ್ವತಃ ಪ್ರಧಾನಿಯವರೇ ಮುಂಚೂಣಿಯಲ್ಲಿದ್ದರು ಎಂಬುದು ಕಾಕತಾಳೀಯವಲ್ಲ. 2017ರ ಫೆಬ್ರವರಿ 8ರಂದು ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿಯವರು ಮಾಡಿದ ‘ರೇನ್‌ಕೋಟ್ ಧರಿಸಿ ಸ್ನಾನ ಮಾಡುವ ಕಲೆ ಡಾ. ಸಿಂಗ್ ಅವರಿಗೆ ಮಾತ್ರ ಗೊತ್ತು’ ಎಂಬ ಟೀಕೆಯು ನಮ್ಮ ಸಂಸದೀಯ ಇತಿಹಾಸದ ಅತ್ಯಂತ ಕೀಳು ಮಟ್ಟದ ಹೇಳಿಕೆಯಾಗಿ ದಾಖಲಾಗಲಿದೆ. ಮೋದಿಯವರು ಇತ್ತೀಚೆಗೆ ತಮ್ಮನ್ನು ಟೀಕಿಸಿದ ವಿದ್ಯಾರ್ಥಿಗಳನ್ನು ‘ಕ್ಷಮಿಸುತ್ತಿರುವ’ ಹಾದಿಯಲ್ಲಿದ್ದಾರೆ. ಅದೇ ರೀತಿ, ಡಾ. ಸಿಂಗ್ ವಿರುದ್ಧ ತಾವು ಮಾಡಿದ್ದ ಕೀಳುಮಟ್ಟದ ನಿಂದನೆಗಾಗಿ ಅವರು ತಮ್ಮನ್ನು ತಾವೇ ಕ್ಷಮಿಸಿಕೊಳ್ಳಲು ಇದೊಂದು ಸದವಕಾಶವಾಗಿದೆ. ಡಾ. ಸಿಂಗ್ ಅವರ ಅತ್ಯುತ್ತಮ ಆಡಳಿತದ ದಾಖಲೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ಹತಾಶ ಪ್ರಯತ್ನದಿಂದಲೇ ಇಂತಹ ದಾಳಿಗಳನ್ನು ಮಾಡಲಾಗಿತ್ತು.

ಡಾ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವು ಅಭೂತಪೂರ್ವ ಆರ್ಥಿಕ ಬೆಳವಣಿಗೆಯ ಮೂಲಕ ದೇಶದಲ್ಲಿ ಆಳವಾದ ಬದಲಾವಣೆಗಳನ್ನು ತಂದಿತು. 2008ರ ಜಾಗತಿಕ ಆರ್ಥಿಕ ಹಿಂಜರಿತದ ಸಂದರ್ಭದಲ್ಲೂ ಭಾರತದ ಆರ್ಥಿಕತೆಯನ್ನು ಸುಭದ್ರವಾಗಿರಿಸಿತ್ತು. ಅವರ ಅಧಿಕಾರಾವಧಿಯಲ್ಲಿ ಲಕ್ಷಾಂತರ ಯುವಕರು ಹೆಚ್ಚಿನ ಉತ್ಪಾದಕತೆಯ ಉದ್ಯೋಗಗಳತ್ತ ಮುಖ ಮಾಡಿದರು. ಆದರೆ ಕಳೆದ ದಶಕದಲ್ಲಿ ಈ ಪ್ರಗತಿ ಹಿಂದಕ್ಕೆ ಸರಿದಿದೆ. ಜಿಡಿಪಿ ಲೆಕ್ಕಾಚಾರದ ವಿಧಾನವನ್ನು ಬದಲಾಯಿಸಿದರೂ, ಕಳೆದ 12 ವರ್ಷಗಳಿಗಿಂತ ಯುಪಿಎ ಸರ್ಕಾರದ 10 ವರ್ಷಗಳ ಅವಧಿಯಲ್ಲೇ ಆರ್ಥಿಕ ಬೆಳವಣಿಗೆ ದರವು ಅಧಿಕವಾಗಿತ್ತು ಮತ್ತು ಕೋಟ್ಯಂತರ ಜನರು ಬಡತನ ರೇಖೆಯಿಂದ ಮೇಲೆ ಬಂದಿದ್ದರು.

​ಸಾಮಾಜಿಕವಾಗಿ, ಸಿಂಗ್ ಅವರ ಸರ್ಕಾರವು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಹಕ್ಕುಗಳನ್ನು ನೀಡುವ ಮೂಲಕ ಕ್ರಾಂತಿಯನ್ನೇ ಸೃಷ್ಟಿಸಿತು. ಶಿಕ್ಷಣದ ಹಕ್ಕು (RTE), ಐಐಟಿ, ಐಐಎಂಗಳಂತಹ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಒಬಿಸಿ ಮೀಸಲಾತಿ, ಆದಿವಾಸಿಗಳಿಗೆ ಅರಣ್ಯ ಹಕ್ಕು ಕಾಯ್ದೆ ಮತ್ತು ಜಗತ್ತಿನ ಅತಿ ದೊಡ್ಡ ಸಾಮಾಜಿಕ ಭದ್ರತಾ ಯೋಜನೆಯಾದ ‘ನರೇಗಾ’ (MGNREGA) ಜಾರಿಗೆ ತಂದಿತು. ಇತ್ತೀಚೆಗೆ ಮೋದಿ ಸರ್ಕಾರದಿಂದ ಕಡೆಗಣನೆಗೆ ಒಳಗಾಗಿರುವ ಈ ನರೇಗಾ ಯೋಜನೆಯೇ ಕೋವಿಡ್ ಸಾಂಕ್ರಾಮಿಕದ ಕರಾಳ ದಿನಗಳಲ್ಲಿ ಬಡವರ ಜೀವನಾಡಿಯಾಗಿತ್ತು. ಹಾಗೆಯೇ 2013ರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯು ಕೋಟ್ಯಂತರ ಕುಟುಂಬಗಳಿಗೆ ಮೂಲಭೂತ ಆಹಾರದ ಹಕ್ಕನ್ನು ಖಾತರಿಪಡಿಸಿತು.

ರಾಜಕೀಯವಾಗಿ, ಡಾ. ಸಿಂಗ್ ಅವರ ದಶಕದ ಆಡಳಿತವು ಪ್ರಜಾಸತ್ತಾತ್ಮಕ ಸಂಸ್ಥೆಗಳ ಬಲವರ್ಧನೆಗೆ ಸಾಕ್ಷಿಯಾಗಿತ್ತು. ಮಾಹಿತಿ ಹಕ್ಕು ಕಾಯ್ದೆ (RTI) ಮೂಲಕ ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆ ತಂದರು. ಇಂದು ಅದೇ ಆರ್‌ಟಿಐ ಅನ್ನು ಸಂಪೂರ್ಣವಾಗಿ ದುರ್ಬಲಗೊಳಿಸಲಾಗಿದೆ. ಅವರ ಕಾಲದಲ್ಲಿ ಮಾಧ್ಯಮಗಳು ನಿರ್ಭೀತವಾಗಿ ಕಾರ್ಯನಿರ್ವಹಿಸುತ್ತಿದ್ದವು, ಆದರೆ ಇಂದಿನ ಮಾಧ್ಯಮಗಳ ದುಸ್ಥಿತಿಗೆ ಹೋಲಿಸಿದರೆ ಅಂದಿನ ಸ್ವಾತಂತ್ರ್ಯ ಅಚ್ಚರಿ ಮೂಡಿಸುತ್ತದೆ. ಅಂದು ವಿದ್ಯಾರ್ಥಿಗಳು ಪ್ರಧಾನಿ ಹಾಗೂ ಸರ್ಕಾರದ ವಿರುದ್ಧ ಯಾವುದೇ ಗುಂಡೇಟು ಅಥವಾ ಎಕೆ-47 ಭೀತಿಯಿಲ್ಲದೆ ಮುಕ್ತವಾಗಿ ಪ್ರತಿಭಟಿಸುವ ಸ್ವಾತಂತ್ರ್ಯ ಹೊಂದಿದ್ದರು. ನೂರಕ್ಕೂ ಹೆಚ್ಚು ಬಾರಿ ಯಾವುದೇ ಪೂರ್ವನಿಯೋಜಿತ ಸ್ಕ್ರಿಪ್ಟ್ (Unscripted) ಇಲ್ಲದೆ ಪತ್ರಿಕಾಗೋಷ್ಠಿಗಳನ್ನು ಎದುರಿಸುವ ಮೂಲಕ ಪ್ರಧಾನಿ ಡಾ. ಸಿಂಗ್ ಉತ್ತರದಾಯಿತ್ವ ಮೆರೆದಿದ್ದರು. ದಶಕಗಳ ಪರಮಾಣು ತಾರತಮ್ಯವನ್ನು ಹೋಗಲಾಡಿಸಿ ಭಾರತವನ್ನು ಜಾಗತಿಕ ಮಟ್ಟದಲ್ಲಿ ಎತ್ತಿಹಿಡಿದ ‘ಇಂಡೋ-ಯುಎಸ್ ಪರಮಾಣು ಒಪ್ಪಂದ’ವು ಅವರ ರಾಜಕೀಯ ಇಚ್ಛಾಶಕ್ತಿಗೆ ಕೈಗನ್ನಡಿಯಾಗಿದೆ.

​ಭಾರತದ ಆರ್ಥಿಕ ಸಾಮರ್ಥ್ಯದ ಮೇಲಿನ ಅವರ ನಂಬಿಕೆ, ಕಟ್ಟಕಡೆಯ ಪ್ರಜೆಗೂ ನ್ಯಾಯ ಒದಗಿಸುವ ಹಂಬಲ ಹಾಗೂ ಪ್ರಜಾಪ್ರಭುತ್ವದ ಮೇಲಿನ ವಿಶ್ವಾಸ ಅವರ ಆಡಳಿತದ ತಳಹದಿಯಾಗಿತ್ತು. ಇಂದಿನ ಸಂಘರ್ಷಮಯ ರಾಜಕಾರಣದಲ್ಲಿ ಅವರ ಮುತ್ಸದ್ದಿತನ, ಪಾಂಡಿತ್ಯ ಮತ್ತು ಮೂಲಭೂತ ಸಭ್ಯತೆಯ ಕೊರತೆ ಎದ್ದು ಕಾಣುತ್ತಿದೆ. ತಮ್ಮ ಮೇಲಿನ ಆರೋಪಗಳು ಸುಳ್ಳೆಂದು ಸಾಬೀತಾಗಿರುವ ಈ ಶುಭದಿನವನ್ನು ನೋಡಲು ಮತ್ತು ತಮ್ಮ ಮಾರ್ಗದರ್ಶನ ನೀಡಲು ಇಂದು ಅವರು ನಮ್ಮೊಂದಿಗಿಲ್ಲ ಎಂಬುದು ನಮಗೆಲ್ಲರಿಗೂ ಖಂಡಿತವಾಗಿಯೂ ಬೇಸರದ ಸಂಗತಿಯಾಗಿದೆ. ಆದರೆ, 2014ರ ಜನವರಿಯಲ್ಲಿ ಅವರು ನುಡಿದಿದ್ದ ಭವಿಷ್ಯವು ದಿನೇ ದಿನೇ ಹೆಚ್ಚು ಸ್ಪಷ್ಟವಾಗಿ ನಿಜವಾಗುತ್ತಿರುವುದು ನಮಗೆ ಸಮಾಧಾನ ತಂದಿದೆ. ಇತಿಹಾಸವು ಅವರನ್ನು ಓರ್ವ ಮಿತಭಾಷಿ, ಸೌಮ್ಯ ಹಾಗೂ ಅತ್ಯಂತ ಪ್ರಭಾವಶಾಲಿ ಪ್ರಧಾನಿಯನ್ನಾಗಿ ಖಂಡಿತವಾಗಿಯೂ ಗೌರವದಿಂದ ನೆನಪಿಸಿಕೊಳ್ಳಲಿದೆ ಎಂದು ಸೋನಿಯಾ ಗಾಂಧಿ ತಮ್ಮ ಲೇಖನವನ್ನು ಮುಕ್ತಾಯಗೊಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಹುಲ್‌ ಗಾಂಧಿ ಲಿಸ್ಟ್‌ನಲ್ಲಿರುವ ʼಸಂವಿಧಾನದ ವಿಧ್ವಂಸಕರುʼ ಇವರೇನಾ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರದಲ್ಲಿ ಚುನಾವಣಾ ಆಯೋಗದ...

ಬೀದರ್‌ | ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮ

2026-27ನೇ ಸಾಲಿನ ಜಿಲ್ಲಾ ಮಟ್ಟದ ಯುವಜನೋತ್ಸವವನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ...

ತೆಲಂಗಾಣ ಬೆಳೆ ರಕ್ಷಣೆಗೆ 3 ಟಿಎಂಸಿ ನೀರು: ಅಚ್ಚುಕಟ್ಟು ಪ್ರದೇಶದ ರೈತರ ಭವಿಷ್ಯವೇನು?

ಕೃಷ್ಣಾ ನದಿಯ ನೀರು ಮತ್ತೊಮ್ಮೆ ಕರ್ನಾಟಕ–ತೆಲಂಗಾಣದ ನಡುವಿನ ಪ್ರಮುಖ ವಿಚಾರವಾಗಿ ಮುನ್ನೆಲೆಗೆ...

ಬೀದರ್‌ | ಸ್ಮಶಾನ ಭೂಮಿ ಸಮಸ್ಯೆ ಬಗೆಹರಿಸದಿದ್ದರೆ ಡಿಸಿ ಕಚೇರಿ ಮುತ್ತಿಗೆ

ಬೀದರ್‌ ತಾಲೂಕಿನ ಅಮಲ್ಲಾಪುರ ಗ್ರಾಮದ ಸರ್ವೇ ನಂ.71ರ ಜಾಗವನ್ನು ದಲಿತ ಸಮುದಾಯದ...