ಹೈದರಾಬಾದ್ | ಅಂಡಾಣು ದಂಧೆ ಜಾಲ ಭೇದಿಸಿದ ಪೊಲೀಸರು!

Date:

ಹೈದರಾಬಾದ್ ನಗರದ ವಿವಿಧೆಡೆ ದಾಳಿ ನಡೆಸಿದ ಪೊಲೀಸರು, ಬೃಹತ್ ಅಂತರರಾಜ್ಯ ಅಂಡಾಣು ದಾನ ಜಾಲವನ್ನು ಭೇದಿಸಿದ್ದು, 43 ಮಹಿಳೆಯರನ್ನು ರಕ್ಷಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಸೇರಿದಂತೆ 9 ಜನರನ್ನು ಬಂಧಿಸಲಾಗಿದೆ.

- Advertisement -

ವೆಂಕಟೇಶ್ವರ ಕಾಲೋನಿಯ ‘ಶೆಟ್ಟಿ ವರ್ಕಿಂಗ್ ವುಮೆನ್ಸ್ ಹಾಸ್ಟೆಲ್’ನಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಲಭಿಸಿದ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದ್ದರು. ಹಾಸ್ಟೆಲ್ ನಿರ್ವಾಹಕ ಎಮಿರಿ ಶೆಟ್ಟಿ ದುರ್ಗಾ ಪ್ರಸಾದ್ ಎಂಬಾತನೇ ಈ ದಂಧೆಯ ಮುಖ್ಯ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ರಾಮಲೀಲಾ ಮೈದಾನದಲ್ಲಿ ವಿಪಕ್ಷಗಳ ಬಲಪ್ರದರ್ಶನ; ಬೀದಿ ಹೋರಾಟ ಬೇರುಮಟ್ಟದ...

ನವಂಬರ್ 1ರಂದು ದೆಹಲಿಯ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ನಡೆದ ಪ್ರತಿಭಟನಾ ಸಮಾವೇಶವು ಭಾರತೀಯ ರಾಜಕಾರಣದಲ್ಲಿ ಮತ್ತೊಂದು ಮಹತ್ವದ ರಾಜಕೀಯ ಮೈಲಿಗಲ್ಲಾಗಿ ದಾಖಲಾಗಿದೆ. ಚುನಾವಣಾ ಆಕ್ರಮ, ಎಸ್‌ಐಆರ್ ಷಡ್ಯಂತ್ರದ ವಿರುದ್ಧ ಮತ್ತು ಮುಖ್ಯ ಚುನಾವಣಾ...

ಮಣಿಪುರವನ್ನು ಜನಾಂಗೀಯ ಘರ್ಷಣೆಯ ದಳ್ಳುರಿಗೆ ತಳ್ಳಿ ಕೈಚೆಲ್ಲಿದೆ ಮೋ-ಶಾ...

ಮ್ಯಾನ್ಮಾರ್‌ನೊಂದಿಗೆ ಸುಮಾರು 400 ಕಿಲೋಮೀಟರ್ ಗಡಿ ಹಂಚಿಕೊಳ್ಳುವ ಈಶಾನ್ಯ ಭಾರತದ ಗಡಿ ರಾಜ್ಯ ಮಣಿಪುರದಲ್ಲಿ ಶತಮಾನಗಳಿಂದ ಬೆಳೆದು ಬಂದಿದ್ದ ಸೌಹಾರ್ದತೆಯ ಬೇರುಗಳನ್ನು ಸಂಪೂರ್ಣವಾಗಿ ಕೊಳೆತು ಹೋಗಲು ಕೇಂದ್ರ ಸರ್ಕಾರ ಬಿಟ್ಟಂತಿದೆ. 2023ರಿಂದ ನಡೆಯುತ್ತಿರುವ...

ಅಮೆರಿಕ ಮಧ್ಯಂತರ ಚುನಾವಣೆ: ಡೊನಾಲ್ಡ್ ಟ್ರಂಪ್ ಕುರ್ಚಿಗಿಲ್ಲ ಕುತ್ತು;...

ಅಮೆರಿಕದ ಕಾಂಗ್ರೆಸ್‌ಗೆ ನ. 3ರಂದು ನಡೆಯಲಿರುವ 'ಮಧ್ಯಂತರ ಚುನಾವಣೆ' ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ಬಹುದೊಡ್ಡ ಅಗ್ನಿಪರೀಕ್ಷೆ. ಈ ಸಮರದಲ್ಲಿ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷ ಬಹುಮತ ಕಳೆದುಕೊಂಡರೂ ಅವರ ಅಧ್ಯಕ್ಷ ಸ್ಥಾನಕ್ಕೇನೂ ಕುತ್ತಿಲ್ಲ;...

ಈ ಬೆನ್ನಲ್ಲೇ ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು ಸರೂರ್‌ನಗರ, ಪ್ರಕಾಶ್ ನಗರ, ಬೇಗಂಪೇಟೆ, ಎರ್ರಗಡ್ಡ ಮತ್ತು ಗೋಪಾಲಪುರಂ ಸೇರಿದಂತೆ ಹಲವು ಭಾಗಗಳಲ್ಲಿ ಅಕ್ಟೋಬರ್ 30 ರಂದು ಸಾಲು ಸಾಲು ದಾಳಿಗಳನ್ನು ನಡೆಸಿ ಒಟ್ಟು 43 ಮಹಿಳೆಯರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

Advertisements

ಪಶ್ಚಿಮ ಬಂಗಾಳ, ಛತ್ತೀಸ್‌ಗಢ, ದೆಹಲಿ, ಅಸ್ಸಾಂ, ಉತ್ತರ ಪ್ರದೇಶ, ಜಾರ್ಖಂಡ್ ಮತ್ತು ಒಡಿಶಾ ರಾಜ್ಯಗಳಿಂದ ಬಡತನದಲ್ಲಿರುವ ಮಹಿಳೆಯರನ್ನು ಗುರಿಯಾಗಿಸಿಕೊಂಡು ಹೈದರಾಬಾದ್‌ಗೆ ಕರೆತರಲಾಗುತ್ತಿತ್ತು. ಪ್ರತಿಯೊಂದು ಅಂಡಾಣು ದಾನ ಪ್ರಕ್ರಿಯೆಗೆ ₹20,000 ದಿಂದ ₹30,000 ನೀಡುವ ಭರವಸೆ ನೀಡಿ ಇವರನ್ನು ಬಳಸಿಕೊಳ್ಳಲಾಗುತ್ತಿತ್ತು ಎಂದು ಮಲ್ಕಾಜ್‌ಗಿರಿ ಪೊಲೀಸ್ ಕಮಿಷನರ್ ಬಿ. ಸುಮಾತಿ ತಿಳಿಸಿದ್ದಾರೆ.

ದಾಳಿಯ ವೇಳೆ ಸ್ಥಳದಲ್ಲಿದ್ದ ಹಾರ್ಮೋನ್ ಇಂಜೆಕ್ಷನ್‌ಗಳು, ಮಾತ್ರೆಗಳು, ಸಿರಿಂಜ್‌ಗಳು, ಸೂಜಿಗಳು, ದಾಖಲೆಗಳು ಹಾಗೂ ಮೊಬೈಲ್ ಫೋನ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. “ವಶಪಡಿಸಿಕೊಂಡ ಔಷಧಗಳು ಮತ್ತು ಸಿರಿಂಜ್‌ಗಳನ್ನು ಗಾಂಧಿ ಆಸ್ಪತ್ರೆಗೆ ಪರೀಕ್ಷೆಗಾಗಿ ರವಾನಿಸಲಾಗಿದೆ. ವೈದ್ಯಕೀಯ ವರದಿ ಬಂದ ನಂತರ ಈ ಜಾಲದ ಪೂರ್ಣ ಸ್ವರೂಪ ಬೆಳಕಿಗೆ ಬರಲಿದೆ” ಎಂದು ಬೇಗಂಪೇಟೆ ಎಸ್‌ಎಚ್‌ಒ ಸೈದುಲು ಹೇಳಿದ್ದಾರೆ.

ರಕ್ಷಿಸಲ್ಪಟ್ಟ ಮಹಿಳೆಯರಿಗೆ ಹಾರ್ಮೋನ್ ಸ್ಟಿಮ್ಯುಲೇಷನ್ ಹಾಗೂ ಅಂಡಾಣು ಸಂಗ್ರಹಣೆ ಪ್ರಕ್ರಿಯೆಗಳನ್ನು ನಡೆಸಲಾಗಿದೆಯೇ? ಈ ಪ್ರಕ್ರಿಯೆಗಳಲ್ಲಿ ಕಾನೂನುಬದ್ಧ ಸಮ್ಮತಿ ಪಡೆಯಲಾಗಿದೆಯೇ ಮತ್ತು ಸಂಬಂಧಿತ ಐವಿಎಫ್ (IVF) ಕೇಂದ್ರಗಳು ‘ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿ (ART)’ ಕಾಯ್ದೆಯಡಿ ಸೂಕ್ತ ನೋಂದಣಿ ಪಡೆದಿವೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸರೂರ್‌ನಗರ ಪೊಲೀಸ್ ಠಾಣೆಯಲ್ಲಿ ಎರಡು ಮತ್ತು ಬೇಗಂಪೇಟೆ ಠಾಣೆಯಲ್ಲಿ ಒಂದು ಸೇರಿ ಒಟ್ಟು ಮೂರು ಪ್ರಕರಣಗಳು ದಾಖಲಾಗಿವೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿ (ನಿಯಂತ್ರಣ) ಕಾಯ್ದೆ, 2021ರ ಪ್ರಕಾರ ಕಾನೂನು ಕ್ರಮ ಜರುಗಿಸಲಾಗಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹುಮನಾಬಾದ್‌ | ನ.4ರಂದು ಸಿಂಧನಕೇರಾ ಘನತ್ಯಾಜ್ಯ ಸ್ಥಳಾಂತರಕ್ಕೆ ಆಗ್ರಹಿಸಿ ಧರಣಿ

ಹುಮನಾಬಾದ್ ನಗರದಲ್ಲಿ ಸಂಗ್ರಹವಾಗುವ ಕಸ ಹಾಗೂ ಘನತ್ಯಾಜ್ಯವನ್ನು ಸಿಂಧನಕೇರಾ ಗ್ರಾಮದ ವ್ಯಾಪ್ತಿಯಲ್ಲಿ...

ಹೆಸರುಗಳಿಲ್ಲದ ಮತದಾರರು, ಉತ್ತರವಿಲ್ಲದ ವ್ಯವಸ್ಥೆ; ಕರ್ನಾಟಕದ ಎಸ್‌ಐಆರ್ ಹಿಂದಿನ ಪ್ರಶ್ನೆಗಳು

ಕರ್ನಾಟಕದಲ್ಲಿ ಸುಮಾರು ಒಂದು ಕೋಟಿ ಹೆಸರುಗಳ ಇಳಿಕೆಯನ್ನು ಯಾವುದೇ ಸಾಕ್ಷ್ಯವಿಲ್ಲದೆ ಅಕ್ರಮವೆಂದು...

ಬಾಗಲಕೋಟೆ | ಗೆಜೆಟೆಡ್ ಪ್ರೊಬೇಷನರ್ ಪರೀಕ್ಷೆಗೆ ಸಿದ್ಧತೆ; 17 ಕೇಂದ್ರಗಳಲ್ಲಿ 7,362 ಅಭ್ಯರ್ಥಿಗಳು ಭಾಗಿ

ಗೆಜೆಟೆಡ್ ಪ್ರೊಬೇಷನರ್ ಗ್ರೂಪ್‌ ಎ, ಬಿ ವೃಂದದ ಹುದ್ದೆಗಳ ನೇಮಕಾತಿಗಾಗಿ ನವೆಂಬರ್...

‘ಸೋ-ಕಾಲ್ಡ್ PM 3.0 ಸರ್ಕಾರ PM 2.5 ಬಗ್ಗೆ ಗಮನ ಹರಿಸಲಿ’ – ದೆಹಲಿ ವಾಯುಮಾಲಿನ್ಯಕ್ಕೆ ಕೇಂದ್ರದ ವಿರುದ್ಧ ಕಾಂಗ್ರೆಸ್ ಕಿಡಿ

ದೇಶದ ರಾಜಧಾನಿ ದೆಹಲಿ, ಸುತ್ತಮುತ್ತಲಿನ ಉತ್ತರ ಭಾರತ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ...