ಮಾಲಿನ್ಯ ಮುಕ್ತ ದೀಪಾವಳಿ ಸಂದೇಶ: ಬಿಜೆಪಿ ಆಕ್ಷೇಪದ ಬೆನ್ನಲ್ಲೇ ನಟಿ ದಿಯಾ ಮಿರ್ಜಾ ವಿಡಿಯೊ ತೆಗೆದ ಬಿಎಂಸಿ

Date:

ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಹಮ್ಮಿಕೊಂಡಿದ್ದ ‘ಪರಿಸರ ಸ್ನೇಹಿ ದೀಪಾವಳಿ’ ಜಾಗೃತಿ ಅಭಿಯಾನ ತೀವ್ರ ವಿವಾದಕ್ಕೆ ಕಾರಣವಾಗಿದೆ. ಬಾಲಿವುಡ್ ನಟಿ ದಿಯಾ ಮಿರ್ಜಾ ಅವರು ಶಬ್ದ ಹಾಗೂ ವಾಯುಮಾಲಿನ್ಯ ಮುಕ್ತ ದೀಪಾವಳಿ ಆಚರಿಸುವಂತೆ ನೀಡಿದ್ದ ವಿಡಿಯೊ ಸಂದೇಶವನ್ನು ಮುಂಬೈ ಬಿಜೆಪಿ ಘಟಕದ ಮುಖ್ಯಸ್ಥ ಅಮಿತ್ ಸಾಟಮ್ ಅವರ ಆಕ್ಷೇಪದ ಹಿನ್ನೆಲೆಯಲ್ಲಿ ಬಿಎಂಸಿ ತನ್ನ ಸಾಮಾಜಿಕ ಜಾಲತಾಣಗಳಿಂದ ಭಾನುವಾರ ಹಿಂದಕ್ಕೆ ಪಡೆದಿದೆ.

- Advertisement -

ಬಿಎಂಸಿಯ ಎಕ್ಸ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಈ ಜಾಗೃತಿ ಅಭಿಯಾನದ ವಿಡಿಯೊಗಳನ್ನು ಪ್ರಕಟಿಸಲಾಗಿತ್ತು. ಆಶ್ಚರ್ಯಕರ ಸಂಗತಿಯೆಂದರೆ, ದಿಯಾ ಮಿರ್ಜಾ ಅವರ ವಿಡಿಯೊವನ್ನು ಮಾತ್ರ ಅಳಿಸಿಹಾಕಿರುವ ಬಿಎಂಸಿ, ನಟಿಯರಾದ ಮಾಧುರಿ ದೀಕ್ಷಿತ್, ನಿಶಿಗಂಧ ವಾಡ್ ಹಾಗೂ ಕ್ರಿಕೆಟಿಗ ಅಜಿಂಕ್ಯ ರಹಾನೆ ಅವರು ಪರಿಸರ ಸಂರಕ್ಷಣೆ ಕುರಿತು ಮಾತನಾಡಿದ್ದ ಜಾಗೃತಿ ವಿಡಿಯೊಗಳನ್ನು ತನ್ನ ಪುಟಗಳಲ್ಲಿ ಹಾಗೆಯೇ ಉಳಿಸಿಕೊಂಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಡತನದ ಮಾಪನ ಮತ್ತು ವಾಸ್ತವ ಚಿತ್ರಣ: ಆಳ ಅಗಲ

ವಿಶ್ವಬ್ಯಾಂಕ್‌ನ ಬಡತನ ಮತ್ತು ಸಮಾನತೆಯ ಇತ್ತೀಚಿನ ವರದಿಯ ಪ್ರಕಾರ 2011ರಿಂದ 2023ರ ಅವಧಿಯಲ್ಲಿ ಭಾರತದಲ್ಲಿ ಅಂದಾಜು 49.6 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಈ ವರದಿಯನ್ನು ಆಧರಿಸಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ...

ಗಾಂಧೀಯ ‘ರಾಮ’-ಮನುವಾದಿಗಳ ‘ಶ್ರೀರಾಮ’ನಲ್ಲ

ಸಮಾನತೆಯ ರಾಮರಾಜ್ಯಕ್ಕೂ, ವರ್ಣಾಶ್ರಮದ ರಾಜಕಾರಣಕ್ಕೂ ಇರುವ ವ್ಯತ್ಯಾಸವೇನು? ಗಾಂಧೀಜಿಯವರ ಪಾಲಿಗೆ ರಾಮ ಎಂದರೆ ಸತ್ಯ, ಅಹಿಂಸೆ, ಪ್ರೀತಿ ಮತ್ತು ಸರ್ವಧರ್ಮ ಸಮಭಾವದ ಸಂಕೇತ; ಅಂಬೇಡ್ಕರ್ ಅವರ ವಿಮರ್ಶೆಯಲ್ಲಿ ಪುರಾಣದ ರಾಮನ ಆಡಳಿತದಲ್ಲಿ ಜಾತಿ...

ಮಂಡೇಲ ನೇತೃತ್ವದಲ್ಲಿ ಗುಲಾಮಗಿರಿ – ವರ್ಣಭೇದ ನೀತಿ ವಿರುದ್ಧ...

ನೆಲ್ಸನ್ ಮಂಡೇಲಾ ಅವರಂತಹ ಮಹಾನ್ ನಾಯಕರು ಕಟ್ಟಿದ್ದ ಈ ಪಕ್ಷ ದಾರಿ ತಪ್ಪಿದ್ದಾದರೂ ಹೇಗೆ ಎಂಬ ಪ್ರಶ್ನೆಗೆ ರಾಜಕೀಯ ತಜ್ಞರು ಸ್ಪಷ್ಟ ಕಾರಣಗಳನ್ನು ನೀಡಿದ್ದಾರೆ. ಆಡಳಿತಶಾಹಿಯ ಭ್ರಷ್ಟಾಚಾರ, ಮಿತಿಮೀರಿದ ಬಡತನ, ನಿರುದ್ಯೋಗ, ಮತ್ತು...

ದಿಯಾ ಮಿರ್ಜಾ ಅವರ ಸಂದೇಶಕ್ಕೆ ಎಕ್ಸ್ ಖಾತೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದ ಬಿಜೆಪಿ ನಾಯಕ ಅಮಿತ್ ಸಾಟಮ್, ‘ದೀಪಾವಳಿ ಹಬ್ಬವನ್ನು ಹೇಗೆ ಆಚರಿಸಬೇಕು ಎಂಬುದರ ಕುರಿತು ದಿಯಾ ಮಿರ್ಜಾ ಅವರಿಂದ ನಮಗೆ ಪಾಠ ಕಲಿಯುವ ಅಗತ್ಯವಿಲ್ಲ. ನಮ್ಮ ಸಂಪ್ರದಾಯಗಳು ನಮ್ಮ ಸಂಸ್ಕೃತಿಯಲ್ಲಿ ಅತ್ಯಂತ ಆಳವಾಗಿ ಬೇರೂರಿವೆ’ ಎಂದು ಬಿಎಂಸಿ ಅಧಿಕೃತ ಖಾತೆಯನ್ನು ಟ್ಯಾಗ್ ಮಾಡಿ ಅಸಮಾಧಾನ ಹೊರಹಾಕಿದ್ದರು. ಈ ಕಾಮೆಂಟ್ ಬಂದ ಕೆಲವೇ ಗಂಟೆಗಳಲ್ಲಿ ಪಾಲಿಕೆ ಆಯುಕ್ತೆ ಅಶ್ವಿನಿ ಭಿಡೆ ನೇತೃತ್ವದ ಬಿಎಂಸಿ ವಿಡಿಯೊವನ್ನು ತೆಗೆದುಹಾಕಿದೆ.

ಮುಂಬೈ ಮಹಾನಗರದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯವನ್ನು ನಿಯಂತ್ರಿಸುವ ಉದ್ದೇಶದಿಂದ ಸಾರ್ವಜನಿಕ ರಸ್ತೆಗಳು, ಬೀದಿಗಳು ಮತ್ತು ಪಾದಚಾರಿ ಮಾರ್ಗಗಳಲ್ಲಿ ಪಟಾಕಿ ಸಿಡಿಸುವುದನ್ನು ಬಾಂಬೆ ಹೈಕೋರ್ಟ್ ಕಟ್ಟುನಿಟ್ಟಾಗಿ ನಿಷೇಧಿಸಿದೆ. ನ್ಯಾಯಾಲಯದ ಈ ನಿರ್ದೇಶನದ ಮೇರೆಗೆ, ಬಿಎಂಸಿ ಇದೇ ಮೊದಲ ಬಾರಿಗೆ ಚಲನಚಿತ್ರ ತಾರೆಯರು ಹಾಗೂ ಕ್ರೀಡಾಪಟುಗಳನ್ನು ಬಳಸಿಕೊಂಡು ಪರಿಸರ ಸ್ನೇಹಿ ದೀಪಾವಳಿ ಆಚರಣೆಯ ಜಾಗೃತಿ ಅಭಿಯಾನವನ್ನು ರೂಪಿಸಿತ್ತು.

ದಿಯಾ ಮಿರ್ಜಾ ವಿಡಿಯೊ ಅಳಿಸಿರುವ ಬಿಎಂಸಿ ಕ್ರಮವನ್ನು ಪ್ರತಿಪಕ್ಷಗಳ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ವಿಜಯ್ ವಾಡೆಟ್ಟಿವಾರ್, ‘ನಟಿ ದಿಯಾ ಮಿರ್ಜಾ ಅವರು ಯಾವುದೇ ತಪ್ಪು ಮಾಡಿಲ್ಲ. ಅವರ ವಿಡಿಯೊವನ್ನು ಉದ್ದೇಶಪೂರ್ವಕವಾಗಿ ತೆಗೆದುಹಾಕಿರುವುದು ದೇಶದ ಐಕ್ಯತೆಯನ್ನು ಕದಡುವ ವಿಕೃತ ಮನಸ್ಥಿತಿಯನ್ನು ಪ್ರತಿಫಲಿಸುತ್ತದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.

ಎಐಎಂಐಎಂ ನಾಯಕ ವಾರಿಸ್ ಪಠಾಣ್ ಕೂಡ ನಟಿಯ ಬೆಂಬಲಕ್ಕೆ ನಿಂತು ಸರ್ಕಾರದ ಆಯ್ದ ಆಕ್ರೋಶವನ್ನು ಪ್ರಶ್ನಿಸಿದ್ದಾರೆ. ‘ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ ದಿಯಾ ಮಿರ್ಜಾ ಸೇರಿದಂತೆ ಹಲವು ಗಣ್ಯರು ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಪರಿಸರ ಸ್ನೇಹಿ ಆಚರಣೆಗೆ ಮನವಿ ಮಾಡಿದ್ದರು. ಆದರೆ, ಕೇವಲ ದಿಯಾ ಮಿರ್ಜಾ ಅವರ ವಿಚಾರದಲ್ಲಿ ಮಾತ್ರ ಈ ರೀತಿಯ ಆಕ್ರೋಶ ಏಕೆ? ಇದೊಂದು ಬೂಟಾಟಿಕೆಯಲ್ಲವೇ? ವಿರೋಧಿಸುವುದೇ ಆಗಿದ್ದರೆ ಎಲ್ಲರನ್ನೂ ವಿರೋಧಿಸಬೇಕಿತ್ತು’ ಎಂದು ಅವರು ಆಡಳಿತ ಪಕ್ಷದ ವಿರುದ್ಧ ಕಿಡಿಕಾರಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ತಾಂತ್ರಿಕ ಸಮಿತಿಗೆ ವಿನಯಕುಮಾರ್ ಮಾಳಗೆ ನಾಮನಿರ್ದೇಶನ

ಕರ್ನಾಟಕದ ಹುಲಿ ಸಂರಕ್ಷಿತ ಪ್ರದೇಶಗಳ ಗಡಿ ವೈಜ್ಞಾನಿಕ ಪುನರ್‌ಪರಿಶೀಲನೆ ಮತ್ತು ಪುನರ್‌ನಿರ್ಧಾರ...

ಯುಪಿ ಚುನಾವಣೆಗೆ ಹೊಸ ತಿರುವು: ಓವೈಸಿ- ಚಂದ್ರಶೇಖರ್ ಮೈತ್ರಿ ಘೋಷಣೆ; ಆಜಾದ್ ಸಿಎಂ ಅಭ್ಯರ್ಥಿ

ಮುಂಬರುವ 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ರಾಜ್ಯ ರಾಜಕಾರಣದಲ್ಲಿ...

ಬೀದರ್‌ | ಕಬ್ಬಿನ ದರ ನಿಗದಿಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ‌ ಆರಂಭ

ಪ್ರಸಕ್ತ ವರ್ಷದ ಹಂಗಾಮಿನ ಪ್ರತಿ ಟನ್ ಕಬ್ಬಿಗೆ ₹5,500 ಬೆಲೆ ನಿಗದಿಪಡಿಸಿ,...

‘ಬುಲ್ಡೋಜರ್’ ಈಗ ಬ್ರ್ಯಾಂಡ್ ಎಂದ ಸಿಎಂ ಯೋಗಿ; ಪರ-ವಿರೋಧದ ಚರ್ಚೆ!

ಬುಲ್ಡೋಜರ್‌ಗಳು ಇಂದು ಉತ್ತರ ಪ್ರದೇಶದೊಂದಿಗೆ ತಳುಕು ಹಾಕಿಕೊಂಡಿರುವ ಒಂದು ಬ್ರ್ಯಾಂಡ್ ಆಗಿ...